Times of ಕರ್ನಾಟಕ
ಕವನ
ಚುಟುಕುಗಳು
ಸ್ಮರಣೆ
ಬಾವುಟ ಹಾರಿಸಿದ
ಮಂತ್ರಿಗಳು ಮಾಡಿದರು
'ಗಾಂಧಿ ಸ್ಮರಣೆ '
ಎದುರು ರಸ್ತೆಯ ಬಾರೊಂದರಲಿ
ನಡೆದಿತ್ತು...
ಭರ್ಜರಿ ಸೇಂದಿ ಸ್ಮರಣೆ...
ಹುಚ್ಚ
ಬಟ್ಟೆ ಗಂಟುಗಳ
ಹಿಮಾಲಯ ಪರ್ವತ
ಮೆದುಳ ತುಂಬಾ
ಥಕ ದಿಂ-ಥಕ ದಿಂ
ಭಾವಗಳ ಭರತನಾಟ್ಯ,
ಶೃತಿಯಿಲ್ಲದ ಗಾನ
ಹಾಡುವ ಆತ ದಿನವೂ
ರಸ್ತೆಯ ಅಂಚಿನಲ್ಲಿ
ಹುಡುಕುತ್ತಿದ್ದಾನೆ
ಬೆಂಕಿ ಅಪಘಾತದಲ್ಲಿ
ಭಸ್ಮವಾದ...
ತನ್ನ ಹೆಂಡತಿ-ಮಕ್ಕಳನ್ನು!!!
ರಾತ್ರಿ-ಹಗಲೆನ್ನದೆ
ಮಳೆ-ಚಳಿ-ಗಾಳಿಗಳ ಮಧ್ಯೆ...
ಅಚ್ಚರಿ..ಅಚ್ಚರಿ
ಯುವಶಕ್ತಿ ಸಿಡಿದೇಳಬೇಕು
ಎಂಬ ಕರೆ ಕೇಳಿ
ನಮ್ಮೂರ ಯುವಕರು ಸಿಡಿದೆದ್ದು,
ಬಾರಿಗೆ ನುಗ್ಗಿ 'ಗುಂಡು'ಹಾಕಿ
ಊರೊಳಗೆ ನುಗ್ಗಿ
ರಾತ್ರೋರಾತ್ರಿ
ಹಲವರ ತೆಂಗು-,ಮಾವು
ತೋಟಗಳಿಗೆ ನುಗ್ಗಿ,
ಮರಗಳಿಗೆ ಲಗ್ಗೆ ಹಾಕಿ
ರಸದೌತಣ ಮಾಡಿದರು...
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583
63631 72368
ಆರೋಗ್ಯ
ಕೊರೋನಾ ಬಂದರೆ ಆಸ್ಪತ್ರೆಗೆ ಹೋಗಲೇಬೇಕಾಗಿಲ್ಲ : ಮನೆಯಲ್ಲೇ ಉಪಚಾರ ಮಾಡಿಕೊಳ್ಳಬಹುದು
ಬೆಂಗಳೂರು: ಸಣ್ಣದಾಗಿ ನೆಗಡಿ, ಕೆಮ್ಮಿನಿಂದ ಶುರುವಾದದ್ದು ಸತತ ಐದಾರು ದಿನ ಇದ್ದರೆ ಮೊದಲು ಫ್ಲೂ ಅಥವಾ ಟೈಫಾಯಿಡ್ ಅಂತಿದ್ದರು. ಕೆಲವೊಮ್ಮೆ ತಿಂಗಳಗಟ್ಟಲೇ ಹಾಸಿಗೆ ಹಿಡಿದಿದ್ದೂ ಉಂಟು. ಆದರೂ ಅಪಾಯದಿಂದ ಪಾರಾಗಿ ಬರುತ್ತಿದ್ದರು. ಈಗ ಸ್ವಲ್ಪ ಜ್ವರ ಬಂದರೂ ಅದಕ್ಕೆ ಕೊರೋನಾ ಎಂಬ ಹೆಸರು.
ಅದನ್ನು ಕೇಳಿದ ತಕ್ಷಣವೇ ರೋಗಿ ಅರ್ಧ ಸತ್ತೇ ಹೋಗಿರುತ್ತಾನೆ. ಅದರ ಪ್ರಯೋಜನ...
ಲೇಖನ
ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ : ಒಂದು ಅವಲೋಕನ
"ಅಂದಿನ ಯುವಕರಿಗೆ ಮುಂದೆ ಗುರಿಯಿತ್ತು
ಹಿಂದೆ ಗುರುವಿದ್ದ
ಮುಂದೆ ನುಗ್ಗುತ್ತಿತ್ತು ರಣಧೀರರ ದಂಡು
ಇಂದಿನ ಯುವಕರಿಗೆ ಮುಂದೆ ಗುರಿಯಿಲ್ಲ
ಹಿಂದೆ ಗುರುವಿಲ್ಲ, ಓಡುತ್ತಿದೆ ನೋಡು ಕುರಿಗಳ ಹಿಂಡು"
ಎಂಬ ಕವಿವಾಣಿ ವಾಸ್ತವತೆಯನ್ನು ಬಿಚ್ಚಿಟ್ಟಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ದೊರೆತರೆ, ಯುವಕರಾದಾಗ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು. ಯುವಜನತೆ ಬೇಜವಾಬ್ದಾರಿಯಿಂದ ವರ್ತಿಸಿದಾಗ ಶಿಕ್ಷಕರು ಮತ್ತು ಪಾಲಕರು ಪರಸ್ಪರ ಆರೋಪಿಸುವುದು ಸಾಮಾನ್ಯವಾಗಿಬಿಟ್ಟಿದೆ. ಪ್ರಾಚೀನ...
ಜೋತಿಷ್ಯ
ಜ್ಯೋತಿಷ್ಯ: ಗುರು ಚಂಡಾಲ ಯೋಗ
ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಅಂಮಗಳ ಯೋಗವಿದ್ದರೆ, ಹಿಡಿದ ಕಾರ್ಯಗಳು ಕೈಗೂಡದೇ ಹೋಗುತ್ತವೆ, ಅವರ ಜೀವನದಿಂದ ಸಂತೋಷ ಮತ್ತು ಶಾಂತಿ ನಾಶವಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ತೊಂದರೆ ಮುಂದುವರಿಯುತ್ತದೆ. ಜನರೊಂದಿಗಿನ ಸಂಬಂಧ ಹದಗೆಡುತ್ತದೆ ಮತ್ತು ವ್ಯಕ್ತಿಯು ಅಲೆದಾಡಬೇಕಾಗುತ್ತದೆ. ಶಾಂತಿಯೆಂಬುದು ಮಾಯವಾದರೆ ಗೊತ್ತಲ್ಲ, ಮಾನಸಿಕ ಒತ್ತಡ ಆರಂಭವಾಗಿತ್ತದೆ. ಅದು ಬೇರೆ ಬೇರೆ ರೀತಿಯ ತೊಂದರೆಗಳಿಗೆ ದಾರಿ...
ಕಥೆ
ಕಿವಿಯ ಕಥೆ-ವ್ಯಥೆ!
( ಕಿವಿಯ ಕಥೆ ಓದಿ ಕಿವಿಗೆ ಅರ್ಥವಾಗದಿರುವುದು ವ್ಯಥೆ )
ನಾನು ಕಿವಿ. ನಾವಿಬ್ಬರಿದ್ದೇವೆ. ನಾವು ಅವಳಿಜವಳಿ!
ಆದರೆ ನಮ್ಮ ದುರದೃಷ್ಟವೆಂದರೆ ಈ ತನಕ ನಾವು ಪರಸ್ಪರ ನೋಡಲಿಲ್ಲ!
ಅದೇನು ಶಾಪವೋ ಗೊತ್ತಿಲ್ಲ, ನಮ್ಮಿಬ್ಬರನ್ನೂ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿ ತಲೆಗೆ ಅಂಟಿಸಿದ್ದಾನೆ ಅ ಸೃಷ್ಟಿಕರ್ತ!
ನಮ್ಮ ದುಃಖ ಇಷ್ಟೇ ಆದರೆ ತೊಂದರೆ ಇರಲಿಲ್ಲ.
ನಮ್ಮ ಕರ್ತವ್ಯ ಬರೇ ಕೇಳುವುದು...
ಕಥೆ
ವಿನೋದ ರಾ. ಪಾಟೀಲರ ಎರಡು ನೀತಿ ಕಥೆಗಳು
ಬಣ್ಣ ಮುಖ್ಯವಲ್ಲ ಗುಣ ಮುಖ್ಯ
ಸದಾ ಮಳೆಬಿಳುವ ಕಾಡಂಚಿನ ಊರು ಅರೆಹೊಳೆ.ಅಲ್ಲಿ ಸದಾ ಹಸಿರು ಹೊದ್ದಿರುವ ಕಾರಣ ಎಂತವರಿಗೂ ಇಷ್ಟವಾಗದೆ ಇರದು. ಹಳ್ಳ ,ಕೊಳ್ಳ ಝರಿಗಳಿಂದ ಕೂಡಿದ ಊರು.ನೇರಳೆ,ಹಲಸು, ಹೀಗೆ ಕಾಡಿನ ಸಿಹಿಯಾದ ಹಣ್ಣುಗಳು ಹೇರಳವಾಗಿದ್ದ ಕಾರಣ ಆ ಊರಿನಲ್ಲಿ ಆಹಾರಕ್ಕೆ ಕೊರತೆಯಿರಲಿಲ್ಲ.ಇಂತಹ ಊರಿನಲ್ಲಿ ಕೆಂಪಿರುವೆ ಮತ್ತು ಕಪ್ಪಿರುವೆ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದವು. ಆ ಹಣ್ಣಿನ...
ಕವನ
ಮಕ್ಕಳ ಕಥನ ಕಾವ್ಯ
ಮಕ್ಕಳ ಕಥನ ಕಾವ್ಯ
ಮಾಡಿದ ತಪ್ಪನು ನೆನೆದು
ಆವಾಗ ನಾನು ಚಿಕ್ಕವ
ಮಳೆ ಚಳಿ ಲೆಕ್ಕಿಸದೆ
ಹೊಳೆ ಹಳ್ಳ ಈಜಾಡಿ
ಆಡು ಪಾಡುವ ಜೀವ
ಗುಡ್ಡ ಗವಾರ ತಿರುಗಿದವ
ಗಿಡ ಗಂಟೆ ಏರಿದವ
ಜೇನ ರುಚಿ ಸವಿದವ
ಬಾಲ ಲೋಕದಲಿ
ನನ್ನ ನಾನೇ ಮರೆತವ
ಹುಂಬ ಭಾವ
ಹಲವು ನಿಲುವ
ಮನಸು ಹರಿದಡೆ
ಹೂಗನಸು ಕಾಣೋ ಜೀವ
ಆವಾಗ ನಾನು ಚಿಕ್ಕವ
ಹುಚ್ಚುಚ್ಚು ಭಾಷೆಯಲಿ
ಬಗರಿ ಗಿಚ್ಚಾಡುತ
ವಿಕಾರದಿ ನಗುತಲಿ
ಹಸಿವು ತವಕ ನೀಗುತ
ಹುಸಿಯ ಬಯಕೆ ತೇಲುತ
ಮೃದು ಮಾತಿನಲಿ
ಅಪ್ಪನು ಕರೆದನಂದು
ಎತ್ತುಗಳ ಮೇಯಿಸಲು
ಸರದಿಯು...
ಕವನ
ಸ್ವಾತಂತ್ರ್ಯೋತ್ಸವ ಕವನ
ಹೇಳೋಣ ನನ್ನ ಭಾರತ ಮಹಾನ್
ಕಟ್ಟೋಣ ಇಲ್ಲೇ ಕಾಡನ್ನು ಕಡಿದು
ದೊಡ್ಡ ದೊಡ್ಡ ನಿವೇಶನಗಳಲ್ಲಿ
ಶಾಪಿಂಗ್ ಮಾಲ್ ಗಳನ್ನ
ಕಿತ್ತೆಸೆಯೋಣ ಗುಡಿಸಲುಗಳನ್ನ
ಗೇಣು ಹೊಟ್ಟೆ ತುಂಬಿಸಲು ಹೆಣಗುವ ಮಾನವ ಗೂಡುಗಳನ್ನ
ನಿಮೂ೯ಲ ಮಾಡುತ್ತ ವನಸಿರಿಯನ್ನ
ನಿಮಿ೯ಸೋಣ ಜಲ್ಲಿ ಕಾಂಕ್ರೀಟ್ ಕಾಡುಗಳನ್ನ
ನೀರಿಲ್ಲವೆ ?
ಚಿಂತೆ ಇಲ್ಲ ತರಿಸೋಣ ಬಿಸಲೆರಿ
ಬಾಟಲ್ ಗಳನ್ನ ವಿದೇಶದಿಂದ !
ನಿಮಿ೯ ಸೋಣ ಒಂದು ಹೊಸ ವಿಶ್ವ ವಿಶ್ವಕಮ೯ ನಿಗೂ ಮಾಡಲಾಗದಂಥಾದ್ದು
ನೀತಿ ನೈತಿಕತೆಯನ್ನು ಗಂಟು ಕಟ್ಟಿ
ಬೀಸಾಡೋಣ...
ಲೇಖನ
ನಾಡ ಪ್ರಭು ಕೆಂಪೇಗೌಡರು
ಬೆಂಗಳೂರು ನಗರವನ್ನು ಸ್ಥಾಪಿಸಿದವರು ಕೆಂಪೇಗೌಡರು. ಒಂದಾನೊಂದು ಕಾಲದಲ್ಲಿ ಈ ಪ್ರದೇಶವು ಜನವಸತಿ ಇಲ್ಲದಿದ್ದಾಗ ಹೊಯ್ಸಳರ ರಾಜ ಎರಡನೇ ವೀರಬಲ್ಲಾಳನು ಇಲ್ಲಿಗೆ ಬಂದಿದ್ದರು. ಅಲ್ಲಿ ಕೇವಲ ಒಂದು ಗುಡಿಸಲು ಆ ಗುಡಿಸಿಲಿನಲ್ಲಿ ಮುದುಕಿಯೊಬ್ಬಳು ವಾಸವಾಗಿದ್ದಳು. ಇವನಿಗೆ ಹಸಿವೆ. ಏನಾದರೂ ತಿನ್ನಲು ಕೊಡು ಎಂದಾಗ ಅವಳು ಅವನಿಗೆ ಬೆಂದಿದ್ದ ಕಾಳನ್ನು ಕೊಟ್ಟಳು. ಈ ಕಾರಣದಿಂದಲೇ ಆ ಸ್ಥಳಕ್ಕೆ...
ಸುದ್ದಿಗಳು
ರಾಹುಕಾಲ ತಿಳಿಯುವ ಸುಲಭ ಪಂಚಾಂಗ
ಸಾಮಾನ್ಯವಾಗಿ ಯಾವುದೇ ಕೆಲಸ ಕಾರ್ಯ ಮಾಡಬೇಕಾದರೆ ರಾಹುಕಾಲ ನೋಡುವುದು ರೂಢಿಯಲ್ಲಿ ಇದೆ. ಪ್ರತಿದಿನ ರಾಹು ಕಾಲದ ಘಳಿಗೆ ಬೇರೆ ಇರುತ್ತದೆ. ಅದನ್ನು ತಿಳಿಯಬೇಕಾದರೆ ಈ ಒಂದು ಕೋಷ್ಟಕವನ್ನು ನಾವು ತಿಳಿದುಕೊಳ್ಳಬೇಕು.
ಈ ಸರಳ ಕೋಷ್ಟಕದಲ್ಲಿ ಮೊದಲಿನ ಸಾಲು ವಾರಗಳಿಗೆ ಮೀಸಲು. ಎರಡನೇ ಸಾಲು ಮೇಲಿನ ಇಂಗ್ಲೀಷ ಸಾಲಿನ ಎಲ್ಲ ಪದಗಳ ಮೊದಲ ಅಕ್ಷರಗಳು ಇವೆ. ಅವುಗಳಿಗೆ...
About Me
7355 POSTS
1 COMMENTS
Latest News
ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ
ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...