Times of ಕರ್ನಾಟಕ

ಜೂನ್ 5 :ವಿಶ್ವ ಪರಿಸರ ದಿನ

World environment day United Nation Environment Programme ಸಂಸ್ಥೆ 1973 ಜೂನ್ 5 ರಂದು ವಿಶ್ವ ಪರಿಸರ ದಿನ ಆಚರಿಸಲು ಕರೆ ನೀಡಿತು. ಸಾಮಾನ್ಯವಾಗಿ ನಾವೆಲ್ಲರು ಅಭಿವೃದ್ದಿ ನೆಪದಲ್ಲಿ ,ಅತಿಯಾದ ಜನಸಂಖ್ಯೆ ಹೆಚ್ಚಳ,ಕೈಗಾರಿಕೆಗಳ ಹೆಚ್ಚಳ, ಜಲ ಮಾಲಿನ್ಯ, ವಾಯು, ಧ್ವನಿ ಮಾಲಿನ್ಯ, ಕಾಡು ನಾಶ...ಹೀಗೆ ಹತ್ತು ಹಲವಾರು ಕಾರಣಗಳಿಂದ ಪರಿಸರ ಮಾಲಿನ್ಯ ಮುಂದುವರೆದಿದೆ ಜಲಮಾಲಿನ್ಯ,ಭೂ ಮಾಲಿನ್ಯ ,ವಾಯುಮಾಲಿನ್ಯ,...

ಮಾತನಾಡುವ ಮುನ್ನ ಎಚ್ಚರವಿರಲಿ

*ಮಾತೇ ಜ್ಯೋತಿರ್ಲಿಂಗ* ಮಾತು ಎನ್ನುವುದು ಮನುಜನಿಗೆ ದೇವನಿತ್ತ ಅಮೂಲ್ಯವಾದ ವರ. ಎಲ್ಲ ಜೀವಿಗಳಿಗಿಂತ ಭಿನ್ನ ಎನಿಸಿಕೊಂಡಿದ್ದು ಈ ಕಾರಣಕ್ಕೆ. ಮನುಜಕುಲದ ಹುಟ್ಟಿನೊಂದಿಗೆ ಮಾತು ಹುಟ್ಟಲಿಲ್ಲ, ಪ್ರಕೃತಿಯ ಮಡಿಲಲ್ಲಿ ಮನುಜಕುಲದ ಬೆಳವಣಿಗೆಯೊಂದಿಗೆ ಮಾನವನ ಬುದ್ಧಿಮಟ್ಟ ವೃದ್ಧಿಸಿದಂತೆ, ಮನುಷ್ಯ ಹಲವು ರೀತಿಯಲ್ಲಿ ಬೆಳೆಯತೊಡಗಿದ. ಹಕ್ಕಿಗಳ ಕೂಗು, ನದಿ ತೊರೆಗಳ ಶಬ್ದ, ಗಾಳಿಯ ಝೇಂಕಾರ ಮುಂತಾದ ಧ್ವನಿಗಳನ್ನು ಕೇಳುತ್ತಾ ಅವುಗಳಿಗೆ...

ಕವನಗಳು

ರೈತ ಮಳೆ ಗಾಳಿ ಬಿಸಿಲನು ನೋಡದ ಬಂಡೆಗಲ್ಲು ನನ್ನ ರೈತ ಅವನೇ ನಮಗೆ ಅನ್ನದಾತ. ಬೆವರು ಸುರಿಸಿ ದುಡಿದು ತಾನು ಜಗಕೆ ಅನ್ನ ನೀಡುತಿರುವ ಅನ್ನದಾತನು ಕೋಟಿ ವಿದ್ಯೆಯಲ್ಲಿ ಮೇಟಿವಿದ್ಯೆ ಮೇಲು ಎಂದು ತೋರಿಸಿದಾತನು. ಭೂಮಿತಾಯಿ ಒಡಲು ತುಂಬಿ ಭೂಮಿತಾಯಿ ಮಗನು ಆಗಿ ಮಣ್ಣಿನಲ್ಲಿ ಮಾಣಿಕ್ಯ ತೆಗೆದು ರತ್ನಕಂಬಳಿಯಲ್ಲಿ ಮೆರೆಯುತಿರುವನು. ಬಸವ ಸೇವೆ ಮಾಡುತ ನೀನು ಜಗಮೆಚ್ಚಿದ ಮಗನು ನೀನು ನಿನ್ನ ಋಣವ ತೀರಿಸಲು ನಾವು ಏಳು ಜನ್ಮ ಬೇಕು ನಮಗೆ. ರೈತ ನಿನ್ನ ದುಡಿಮೆಗೆ ಭೂಮಿತಾಯಿ ಒಲಿದು...

ದಿನದ ವಿಶೇಷ: ವಿಶ್ವ ಹಾಲು ದಿನ (ಜೂನ್ 1)

ವಿಶ್ವ ಹಾಲು ದಿನವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ೨೦೦೧ರಿಂದ ಪ್ರತಿವರ್ಷ ಒಂದರಂದು ಆಚರಿಸುತ್ತಿದೆ. ಇದರ ಉದ್ದೇಶ ಹಾಲು ಮತ್ತು ಹೈನುಗಾರಿಕೆಯನ್ನು, ಆದರ ಮಹತ್ವವನ್ನು ವಿಶ್ವದಲ್ಲೆಡೆ ಪಸರಿಸುವುದೇ ಆಗಿದೆ. ♦️ಇತಿಹಾಸ ವಿಶ್ವ ಆಹಾರ ದಿನವನ್ನು ಮೊದಲ ಬಾರಿಗೆ ೨೦೦೧ರಲ್ಲಿ ಆಚರಿಸಲಾಯಿತು. ಹೈನುಗಾರಿಕೆಯಿಂದ ವಿಶ್ವದಲ್ಲೆಡೆ ನೂರು ಕೋಟಿ ಮಂದಿ ಬದುಕು ಸಾಗಿಸುತ್ತಿದ್ದಾರೆ ಎಂದೂ ಮತ್ತು ಹಾಲನ್ನು ದಿನವಹಿ...

ಮುದ್ದು ಕೃಷ್ಣ…

ಬಾರೋ ನನ್ನ ಬಾಳ ಕುಸುಮ ಮಡಿಲ ತುಂಬೋ ಮುದ್ದು ಕೃಷ್ಣ// ನಿನ್ನ ನಡೆಯಾ, ತೊದಲು ನುಡಿಯಾ ಮುಗುಳು ನಗೆಯಾ, ಮುಗ್ಧ ಅಳುವಾ ನೋಡುತಿರಲು ಮನವೇ ಮರುಳ// ನಿನ್ನ ಕೆನ್ನೆಯಂದ ಮುಂಗುರುಳ ಚೆಂದ ಹವಳದುಟಿಗಳ ಮೂಕ ಬಂಧ ಮುತ್ತನಿಟ್ಟರೆ ಮೈಮನಗಳು ಹದುಳ// ಕರುಳ ಬಳ್ಳಿ ನೀ ಚೆಲುವ ಚೆಂದುಳ್ಳಿ ಕೆನ್ನೆಗುಳಿಯು ಪದ್ಮನಾಭನಂತೆ ಪವಡಿಸುವ ಕಂದ ನಾ ಪರವಶಳು// ಕೃಷ್ಣನಾಟ ,ಶಿವನ ನೋಟ, ಭರತನ ಕೂಟ ಸೃಷ್ಟಿಕರ್ತನ ಬೆಡಗ ನೋಡುತಿರೆ ಮುಚ್ಚಲೆಂಗ ನನ್ನ ಕಣ್ಣುಗಳ// ಮಗ್ಗುಲು ಮಲ್ಲಿಗೆ,...

ಕೆಲವು ‘ಟಂಕಾ’ ಗಳು

*ಹೂವು* ಹಸಿರೆಲೆಯೇ ಗಣ್ಣಿಗೊಂದು ಮೊಗ್ಗಲ್ಲೇ ಮೊಗ್ಗೆಲ್ಲೇ ಹಿಗ್ಗೇ... ಹೂವಾಗಿ ಅರಳಲೇ ಆನಂದದ ಬುಗ್ಗೆಯೇ. *ಪ್ರೀತಿ* ಎದೆಯಾಳದಿ ಇಣುಕಿ ನೋಡಲು ನಾ ನಿನ್ನದೇ ರೂಪ ತುಟಿಯಂಚಿನಾ ನಗು ನೀ ಮುಡಿಸಿದಾ ದೀಪ *ಅವ್ವ* ಸೆರಗಿನಲಿ ಮಿನುಗಿವೆ ನಕ್ಷತ್ರ ಸವಕಳಿಯ ಸೀರೆ ನೆರೆ ಕೂದಲ ಚಂದ್ರ, ಕಾಮನಬಿಲ್ಲು *ರೈತ* ತಟ್ಟೆಯಲಿಹ ಮಲ್ಲಿಗೆಯರಳೆಲ್ಲ ಬೆವರ ಹನಿ ಘಮ ಬೀರಿವೆಯಲ್ಲ ಭತ್ತದಾ ಮೊಗ್ಗರಳಿ. *ಶ್ರೀಮತಿ ಇಂದಿರಾ ಮೋಟೆಬೆನ್ನೂರ.* --------------------------------- 1.ಒಗ್ಗಟ್ಟು ಕಷ್ಟ ಸಮಯ ಬಂದಿತು ಜನರೆಲ್ಲ ಒಗ್ಗೂಡಿದರು ಗುದ್ದಿ ಕೆಡವಿದರು ಒದ್ದು ಓಡಾಡಿದರೂ. 2.ಸುಗಂಧ ಹೃದಯಸುಮ ಅರಳಿ ಸಂತಸದ ಸುಗಂಧ ಸೂಸಿ ಧನ್ಯತೆಯ ಭಾವಮೂಡಿ ಬದುಕಿದೆ ಸಾರ್ಥಕ. 3.ಸಹಾಯ ಜಪದಲ್ಲಿಲ್ಲ ಬರಿ ಪೂಜೆಯಲ್ಲಿಲ್ಲ ದೇವರಿರುವ ಸಹಾಯ ಮಾಡುವುದ ಮನಸುಳ್ಳವರಲ್ಲಿ. 4.ಬೇನೆ ಟಂಕಾ ರುಬಾಯಿ ಬರೆದೆ ನಾ ಪ್ರವೀಣೆ ಹಾಯ್ಕ ತರಿಸ್ತು ತುಸು ತಲೆ ಬೇನೆಯ ಹುಡ್ಕಿ ಅಕ್ಷರಮಾಲೆ ಮೇಘಾ ಪಾಟೀಲ

ಸಾವರ್ಕರ್ ‘ ವೀರ ‘ ಹೇಗಾದರು ?

ಭಾರತದ ಸ್ವಾತಂತ್ರ್ಯ ಹೋರಾಟದ ಸಾವಿರಾರು ಕೆಚ್ಚಿನ ಕಲಿಗಳಲ್ಲಿ ' ವೀರ ' ಸಾವರ್ಕರ್ ಒಬ್ಬರು. ವಿನಾಯಕ ದಾಮೋದರ ಸಾವರ್ಕರ್ ಎಂಬುದು ಅವರ ನಿಜ ನಾಮಧೇಯ. ಮೊದಲಿಗೆ ಸಾವರ್ಕರ್ ಹೆಸರಿನ ಹಿಂದೆ ' ವೀರ ' ಇರಲಿಲ್ಲ. ಅದು ಆಮೇಲೆ ಬಂದಿದ್ದು. ವಿನಾಯಕ ಸಾವರ್ಕರ್, ವೀರ ಸಾವರ್ಕರ್ ಆಗಿರುವುದರ ಹಿಂದೆ ಒಂದು ರೋಚಕ ಕಥೆಯಿದೆ. ವೀರ ಎಂಬ ಉಪಾಧಿಯನ್ನು...

ಕವನಗಳು

ನಂಬಿಕೆ 'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ'ದಾಸವಾಣಿಯಂತೆ ನಂಬಿಕೆ ಬಲು ನಾಜೂಕಾಗಿದೆ ನಾಶವಾಗದಿರಲಿ ನಂಬಿಕೆ ನಂಬುವಂತಿರಲಿ ನಾಟುವಂತಿರಲಿ ನಂಬಿದವರು ನೂರುಕಾಲ ನೆಲೆಗೊಳ್ಳುವಂತಿರಲಿ ನಂಬಿಕೆ ನಡೆ-ನುಡಿಯಿಂದ ಕೂಡಿರಲಿ ನಂಬಿಕೆ ನಯ-ವಿನಯದಿಂದ ಕೂಡಿರಲಿ ನಂಬಿಕೆ ನಂಬಿಕೆದ್ರೋಹವಾಗದಿರಲಿ ನಂಬಿಕೆ ನಾರದಂತಿರಲಿ ನಂಬಿಕೆ ನೀರುಪಾಲಾಗದೆ ಆಗಸದ ನಕ್ಷತ್ರದಂತಿರಲಿ ನಂಬಿಕೆ ನನಗಾಗಿ ಅಲ್ಲ,ನಮ್ಮವರಿಗಾಗಿರಲಿ ನಂಬಿಕೆ ಜಿಪುಣನಾಗದೆ ಜೇನುಗೂಡಿನಂತಿರಲಿ ನಂಬಿಕೆ ನಗ-ನಾಣ್ಯದಿಂದ ಬರುವಂತದಲ್ಲ ನಂಬಿಕೆಯ ನಟ್ಟು ಹರಿಯದಂತಿರಲಿ ನಂಬಿಕೆಯೇ ಸುಖಜೀವನದ ಸೂತ್ರವಾಗಿಹುದು ನಂಬಿಕೆಯ ಕಂಬಗಳು ಅಲುಗಾಡದಿರಲಿ ನಂಬಿಕೆಯಲಿ ನಾನು ಎಂಬುದು ನಶ್ವರವಾಗಿ ನಂಬಿಕೆ ಸದಾ ನಂದಾದೀಪವಾಗಿರಲಿ 🖋ಬಿ ಡಿ ರಾಜಗೋಳಿ ಚಿಕ್ಕೋಡಿ ----------------------------------------------------------------- *ಕೊರೋನಾ ಪಾಠ* (ಹವ್ಯಕ ಭಾಷೆಯ...

“ಟಂಕಾ”ಗಳು

ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ. ನಿಯಮಗಳು:- ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ. 1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು...

ಇಂದು ವಿಶ್ವ ಸಹೋದರರ ದಿನ !

ಅಪ್ಪ, ಅಮ್ಮಂದಿರಿಗಾಗಿ ಒಂದು ವಿಶೇಷ ದಿನವಿರುವಂತೆ ಸಹೋದರರಿಗಾಗಿಯೂ ಇರುವುದೇ ಇಂದಿನ ದಿನ ಮೇ 24. ಅಣ್ಣ ತಮ್ಮ ಪರಸ್ಪರ ಸಹಬಾಳ್ವೆಯಿಂದ, ಪ್ರೀತಿಯನ್ನು ಹಂಚಿಕೊಂಡು ಬದುಕಬೇಕೆನ್ನುವುದು ಇಂದಿನ ದಿನದ ಸಂದೇಶ. ಅಲಾಬಾಮಾದ ಸಿ. ಡೇನಿಯಲ್ಲ ರೋಡ್ಸ್ ಎಂಬಾತ ಈ ' ಬ್ರದರ್ಸ್ ಡೇ ' ಕಂಡುಹಿಡಿದಿದ್ದು ನಮಗೆ ಒಬ್ಬರಿರಲಿ ಇಬ್ಬರಿರಲಿ ಅಥವಾ ಸಹೋದರರು ಇಲ್ಲದೇ ಇರಲಿ ಎಲ್ಲರಲ್ಲಿ...

About Me

9533 POSTS
1 COMMENTS
- Advertisement -spot_img

Latest News

ಕೃತಿ ಪರಿಚಯ : ತೌಲನಿಕ ಧರ್ಮ ದರ್ಶನ

ಭಾವೈಕ್ಯ ಭಾರತ ನಿರ್ಮಾಣಕ್ಕೆ ದಾರಿ ತೋರುವ ಮಹಾನ್ ಗ್ರಂಥ ಪುಸ್ತಕದ ಹೆಸರು : ತೌಲನಿಕ ಧರ್ಮ ದರ್ಶನ ಮೂಲ ಲೇಖಕರು : ಪ್ರೊ. ಯಾಕೂಬ್ ಮಸೀಹ್ ಕನ್ನಡಾನುವಾದ : ಡಾ....
- Advertisement -spot_img
close
error: Content is protected !!
Join WhatsApp Group