ನೀನೊಂದು ಸಂಪಿಗೆಮರ
ನಿನ್ನ ಹಿತವಚನದ ಕಂಪಿನಲ್ಲಿ
ಜೀವನಾರ್ಥ ತುಂಬಿದೆ.
ನನ್ನ ಹೃದಯದ ಚಿನ್ನದ ಕಿರೀಟ
ತ್ಯಾಗಕ್ಕೆ ಪರ್ಯಾಯ ಪದವಾದೆ ನೀ
ಜೀವ-ಜೀವದ ಚೇತನ....
ನೀನೊಂದು ಅಮೃತಕಲಶ
ಹೆಕ್ಕಿದಷ್ಟು ಜೇನಸಿಹಿ
ನಿನ್ನ ಸಮ ದೇವರಿಲ್ಲ
ನೀನಿಲ್ಲದ ಅವನೂ ಅನಾಥನೇ...
ಬುದ್ಧನಾಗಿರುವೆ ನಾ
ನಿನ್ನ ಮಮತೆಯ ವೃಕ್ಷದಡಿಯಲಿ
ಸರಿರಾತ್ರಿಯಲ್ಲೂ ನಿನ್ನ ಮಡಿಲ
ಸುಖವನರಸಿ ಬರುವ ಕೂಸು ನಾ...
ನಿನ್ನ ಮಾತು-ಮುತ್ತುಗಳೆಲ್ಲ
ಸುಂದರ ಹೂ ದಳಗಳಂತೆ
ತಾವರೆಯ ಅರಸಿ ಬಂದ ಸೂರ್ಯನಂತೆ
ನಿನ್ನಪ್ರೀತಿಯೊ ಪ್ರಕಾಶಮಾನ...
ಹಗಲು- ಇರುಳಗಳ ಕಿರುಬೆರಳ ನೀಡಿ
ಕನಸ ಪೋಣಿಸಿ ಲಾಲಿ ಹಾಡಿದವಳು...
ಅಂಜಿದಾಗ...
ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ: ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು:ಖಭಾಗ್ ಭವೇತ್ |
ಜಗತ್ತಿನ ಸರ್ವ ಜನರೂ ಸುಖದಿಂದ ಇರಬೇಕು ಎಂಬ ಆಶಯದೊಂದಿಗೆ ಸನ್ ರಲ್ಲಿ 1948 ಸ್ಥಾಪನೆಗೊಂಡ ' ರೆಡ್ ಕ್ರಾಸ್' ಸಂಸ್ಥೆಯ ಸ್ಥಾಪನಾ ದಿನವನ್ನು ಇಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ.
ವಿಶ್ವವನ್ನು ಕೊರೋನಾ ಎಂಬ ಮಹಾಮಾರಿ ಸಾವಿನ ಕೂಪದಲ್ಲಿ ತಳ್ಳುತ್ತಿರುವಾಗ...
Times of ಕರ್ನಾಟಕ ಎಂಬ ವೆಬ್ ಪತ್ರಿಕೆ ಮಾಡಬೇಕೆಂಬ ಯೋಚನೆ ಬಂದಾಗ ಮೊದಲು ಅನ್ನಿಸಿದ್ದೇ ಇದು ಕನ್ನಡದ ಕಾಲ ಎಂಬ ಅನಿಸಿಕೆ. ಕನ್ನಡಕ್ಕೊಂದು ಕಾಲವೆಂಬುದಿಲ್ಲ. ಅದು ಪುರಾತನ ಭಾಷೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು. ಒಂದು ವೈಭವಯುತ ಸಾಂಪ್ರದಾಯಿಕ ಪರಂಪರೆಯನ್ನೇ ಹೊಂದಿದೆ. ಅನೇಕ ಜಗದ್ವಿಖ್ಯಾತ ಕವಿಗಳು ಕನ್ನಡದ ದೀಪವನ್ನು ಪ್ರಾಚೀನ ಕಾಲದಿಂದಲೂ ಬೆಳಗಿಸುತ್ತ ಬಂದಿದ್ದು...