spot_img
spot_img

ಪ್ರಬಂಧ ಸ್ಫರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ

Must Read

- Advertisement -

ಸಿಂದಗಿ: ಕಳೆದ 2 ವರ್ಷಗಳಿಂದ ಇಡೀ ರಾಜ್ಯಕ್ಕೆ ಮಹಾಮಾರಿ ಕರೋನಾ ಆವರಿಸಿ ಮಕ್ಕಳ ಬುದ್ಧಿಮಟ್ಟದ ಮೇಲೆ ಮಂಜು ಕವಿದಂತಾಗಿದೆ. ಇದರಿಂದ ಚೇತರಿಸಿಕೊಳ್ಳಲು ಮತ್ತು ಸಾಮರ್ಥ್ಯವನ್ನು ಅಳೆಯಲು ಜಲಿಯನ್ ವಾಲಾಬಾಗ ಹತ್ಯಾಕಾಂಡದ ಕೆಲ ಮಜಲುಗಳನ್ನು ತಿಳಿದುಕೊಂಡು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದು ಮುಖ್ಯಾಧಿಕಾರಿ ಪ್ರಕಾಶ ಮುಧೋಳಕರ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯ ಹಾಗೂ ಚೆನ್ನವೀರ ಸ್ವಾಮೀಜಿ ಪ್ರೌಢಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯಕ್ತ ಜಲಿಯನ ವಾಲಾಬಾಗ್ ಹತ್ಯಾಕಾಂಡ ಕುರಿತು ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿ, 75ನೇ ಸ್ವತಂತ್ರ ದಿನಾಚರಣೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೋವಿಡ್-19 ನಿಯಮದಂತೆ ಸೂಕ್ತ ಸುರಕ್ಷಾ ಕ್ರಮಗಳನ್ನು ಪಾಲಿಸಲು ಸಲಹೆ ಸೂಚನೆ ನೀಡಲು ಹಾಗೂ ವಿದ್ಯಾರ್ಥಿಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.

- Advertisement -

ಶ್ರೀ ಚೆನ್ನವೀರ ಸ್ವಾಮೀಜಿ ಪ್ರೌಡಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ಬಿ. ಪಟ್ಟಣಶೆಟ್ಟಿ ಮಾತನಾಡಿದರು.

ಈ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿನಾಯಕ ಬಂಟನೂರ, ಎರಡನೇ ಸ್ಥಾನ ದೇವರಾಜ ಬಡಿಗೇರ, ತೃತೀಯ ಸ್ಥಾನ ರಾಧಿಕಾ ನಾಗಯ್ಯ ಪಡೆದುಕೊಂಡಿದ್ದಾರೆ.

ಶಿಕ್ಷಕರಾದ ಬಿ.ಎಸ್.ಕುಲಕರ್ಣಿ, ಎಸ್.ಎಸ್.ಬಿರಾದಾರ, ಪುರಸಭೆ ಸೆನೆಟರಿ ಅಧಿಕಾರಿಗಳಾದ ನಬೀರಸೂಲ ಉಸ್ತಾದ, ಇಂದುಮತಿ ಮಣ್ಣೂರ ಸಿಬ್ಬಂದಿ ಸಂಜು ಬಾಳಮಕರ, ವಿಜಯಕುಮಾರ ಕಡಕೋಳ, ಅಜೀತ ಹಳಿಂಗಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ವಾಹನ ಸವಾರರಿಗೆ ಬೆಲೆ ಏರಿಕೆ ಬರೆ – ಈರಣ್ಣ ಕಡಾಡಿ

ಮೂಡಲಗಿ:ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಏರಿಸುವ ಮೂಲಕ ಗ್ಯಾರಂಟಿ ಬರೆ ನೀಡಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group