ಯಾದವಾಡ – ದಾಲ್ಮಿಯಾ (ಭಾರತ) ಸಿಮೆಂಟ್ ಕಾರ್ಖಾನೆಯ ದಾಲ್ಮಿಯಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ದಾಲ್ಮಿಯಾ ದೀಕ್ಷಾ ಕೌಶಲ್ಯ ಕೇಂದ್ರ ಬೆಳಗಾವಿಯಲ್ಲಿ ಅಸಿಸ್ಟೆಂಟ್ ಬ್ಯೂಟಿ ತೆರಪಿಸ್ಟ್ ಕಸ್ಟಮರ್ ಎಕ್ಸಿಕ್ಯೂಟಿವ್ ಮತ್ತು ಅಸಿಸ್ಟೆಂಟ್ ಎಲೆಕ್ಟ್ರಿಷಿಯನ್ ತರಬೇತಿಗಳನ್ನು ಕರೂರ್ ವೈಶ್ಯ ಬ್ಯಾಂಕ್ ನೆರವಿನೊಂದಿಗೆ ಆರಂಭಿಸಲಾಯಿತು.
ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸತೀಶ್ ಖಾನ್ ಗೌಡರ್ ವ್ಯವಸ್ಥಾಪಕರು ಕೆರೂರ್ ವೈಶ್ಯ ಬ್ಯಾಂಕ್, ಬೆಳಗಾವಿ, ಡಾ| ಎಂ ಕೃಷ್ಣರಾಜು, ಕೆ.ಎ.ಎಸ್ ಯೋಜನಾ ನಿರ್ದೇಶಕರು ಡಿ.ಆರ್.ಡಿ.ಎಸ್ ಕೋಶ, ಜಿಲ್ಲಾ ಪಂಚಾಯತ್, ಬೆಳಗಾವಿ ಮತ್ತು ಡ್ಯಾಪೋಡಲ್ಸ್ ಲೇಡೀಸ್ ಬ್ಯೂಟಿ ಸಲೋನ್‌ನ ಮುಖ್ಯಸ್ಥರಾದ ಶ್ರೀಮತಿ ಪದ್ಮಜಾರವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ| ಎಂ ಕೃಷ್ಣ ರಾಜು ಕೆ.ಎ.ಎಸ್ ರವರು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಹಣಕಾಸಿನ ಸಂಸ್ಥೆಗಳು ಕೌಶಲ್ಯ ಅಭಿವೃದ್ಧಿ ಒತ್ತು ನೀಡಿ ಯುವಕರ ಯುವಕರ ಸಬಲೀಕರಣ ಮತ್ತು ಸ್ವಾವಲಂಬಿ ಜೀವನಕ್ಕೆ ಬೇಕಾಗುವಂತ ಎಲ್ಲ ರೀತಿಯ ಅನುಕೂಲಗಳನ್ನು ಮಾಡಿಕೊಡುತ್ತಿವೆ ಅವುಗಳನ್ನು ಬಳಸಿಕೊಂಡು ಜೀವನದಲ್ಲಿ ಮುಂದೆ ಬನ್ನಿ ಎಂದು ಭಾಗವಹಿಸಿದ ಶಿಬಿರಾರ್ಥಿಗಳಿಗೆ ತಿಳಿ ಹೇಳಿದರು.
ಶ್ರೀಮತಿ ಪದ್ಮಜಾ ರವರು ಎಲ್ಲ ಹೆಣ್ಣುಮಕ್ಕಳು ಸ್ವತಂತ್ರವಾಗಿ ಜೀವನ ನಡೆಸಲು ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಲು ತಮ್ಮ ಆದ್ಯತಾ ಕ್ಷೇತ್ರದಲ್ಲಿ ತರಬೇತಿಯನ್ನು ಪಡೆದು ಉದ್ಯೋಗಶೀಲರಾಗಲು ಮನವಿ ಮಾಡಿಕೊಂಡರು. ದಾಲ್ಮಿಯಾ ದೀಕ್ಷಾ ಕೌಶಲ್ಯ ಕೇಂದ್ರದ ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು ಶಿಬಿರಾರ್ಥಿಗಳೊಂದಿಗೆ. ದಾಲ್ಮಿಯಾ ಸಿಮೆಂಟ್ ನ ಬೆಳಗಾವಿ ಸಿ. ಎಸ್. ಆರ್. ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.