spot_img
spot_img

ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಪದಾಧಿಕಾರಿಗಳ ಸಭೆ

Must Read

ಬೆಳಗಾವಿ – ದಿನಾಂಕ 29 ರಂದು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ವಿಜಯ ನಗರ ಕಾರ್ಯಾಲಯದಲ್ಲಿ ಮಂಡಲ ಪದಾಧಿಕಾರಿಗಳ ಸಭೆಯನ್ನು ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮವನ್ನು ಪ್ರಮುಖರಿಂದ ದೀಪಪ್ರಜ್ವಲನೆ ಹಾಗೂ ಪುಷ್ಪಾರ್ಚಣೆ ಮಾಡಿ ಪ್ರಾರಂಭಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣ ಪ್ರಮುಖರಾದ ನಿತಿನ ಚೌಗುಲೆ ಅವರು ಅನುಭವ ಹಂಚಿಕೊಂಡರು. ಜಿಲ್ಲೆಯ ಮಾಧ್ಯಮ ಪ್ರಮುಖರಾದ ಎಫ಼. ಎಸ್. ಸಿದ್ಧನಗೌಡರ ಪದಾಧಿಕಾರಿ ಗಳಿಗೆ ಮಾರ್ಗದರ್ಶನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಕಾರ್ಯಕ್ರಮವನ್ನು ಉದ್ದೆಶಿಸಿ ಮಾತನಾಡಿ, ಬರುವ ಚುನಾವಣೆ ಎದುರಿಸಲು ಹೇಗೆ ತಯಾರಿಯನ್ನು ಮಾಡಬೇಕೆಂದು ಹೇಳಿದರು. ವೇದಿಕೆಯ ಮೇಲೆ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ವೀರಭದ್ರಯ್ಯಾ ಪುಜಾರಿ, ಜಿಲ್ಲಾ ಕೋಶಾಧ್ಯಕ್ಷರು ಮಲ್ಲಿಕಾರ್ಜುನ ಮಾದ್ದನ್ನವರ, ಜಿಲ್ಲಾ ಎಸ್ .ಟಿ ಮೋರ್ಚಾ ಅಧ್ಯಕ್ಷರು ಯಲ್ಲೇಶ ಕೋಲಕಾರ, ಜಿಲ್ಲಾ ಒ.ಬಿ.ಸಿ ಮೋರ್ಚಾ ಅಧ್ಯಕ್ಷರು ಉಮೇಶ ಪೂರಿ, ರಾಜು ದೇಸಾಯಿ ಉಪಸ್ಥಿತರಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಂಡಲ ಪ್ರಧಾನ ಕಾರ್ಯದರ್ಶಿ ಪಂಕಜ ಘಾಡಿ ನೆರವೇರಿಸಿದರು ಹಾಗೂ ಇತರ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದರು.

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!