ಮೂಡಲಗಿ: ಭಗೀರಥ ಮಹರ್ಷಿಯವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲದೆ ಕರ್ಮ, ತತ್ವದ ಮೂಲಕ ಇಡೀ ಮನುಕುಲದ ಸಕಲ ಜೀವರಾಶಿಗಳಿಗೂ ಅನುಕೂಲ ಮಾಡಿಕೊಟ್ಟ ಮಹಾಪುರುಷರಾಗಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಭಗೀರಥ ಮಹರ್ಷಿ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಂಸದ ಕಡಾಡಿ ಅವರು, ಗಂಗೆಯನ್ನು ಭೂಮಿಗೆ ಇಳಿಸಿದ ಭಗೀರಥ ಮಹರ್ಷಿ ಅವರು ಗಂಗೆ ಕೇವಲ ನೀರಲ್ಲ, ಅದು ಪ್ರಜ್ಞೆಯ ಪ್ರವಾಹ.
ಇವತ್ತಿನ ದಿನ ನಾವು ನೀರನ್ನು ಹಣಕೊಟ್ಟು ಕುಡಿಯುವಂತಹ ಪರಿಸ್ಥಿತಿಗೆ ಬಂದಿದೆ, ನಾವೆಲ್ಲರೂ ಭಗೀರಥ ಮಹರ್ಷಿ ಅವರಂತೆ ನಮ್ಮ ಮುಂದಿನ ಪೀಳಿಗೆಗೋಸ್ಕರ ನೀರನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಬಸವರಾಜ ಕಡಾಡಿ, ಪ್ರಕಾಶ ಮಾದರ, ಪುಂಡಲಿಕ ಅರಭಾಂವಿ, ಡಾ. ಬಿ.ಎಂ. ಪಾಲಭಾಂವಿ, ಈರಪ್ಪ ಢವಳೇಶ್ವರ, ಸುರೇಶ ಮಠಪತಿ, ಮಹಾದೇವ ಮಸರಗುಪ್ಪಿ, ಸುನೀಲ ಈರೇಶನವರ, ಮಲ್ಲಪ್ಪ ನೇಮಗೌಡರ, ಬಸವರಾಜ ಗಾಡವಿ, ಪ್ರಭು ಕಡಾಡಿ, ಹಣಮಂತ ಸಂಗಟಿ, ಈರಣ್ಣ ಮುನ್ನೋಳಿಮಠ, ಈಶ್ವರ ಗಾಡವಿ, ಅಡಿವೆಪ್ಪ ಕುರಬೇಟ, ಹಣಮಂತ ಕೌಜಲಗಿ, ಗಿರಮಲ್ಲಪ್ಪ ಸಂಸುದ್ದಿ, ಶಿವಲಿಂಗ ಕುಂಬಾರ, ಶ್ರೀಕಾಂತ ಕೌಜಲಗಿ, ಶಿವಪ್ಪ ಬಿ.ಪಾಟೀಲ, ಗೂಳಪ್ಪ ವಿಜಯನಗರ, ಶ್ರೀಶೈಲ ತುಪ್ಪದ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.