ಸಿಂದಗಿ: ಸಹಕಾರಿ ಸಂಘದ ಕಾಯ್ದೆ ಮತು ಕಾನೂನು ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳಿಗೆ ಸಹಕಾರಿ ರಂಗದ ಕಾನೂನು ವ್ಯವಹಾರ ಹಾಗೂ ಕಾರ್ಯ ಚಟುವಟಿಕೆ ಸಂಘಗಳ ನಡವಳಿಕೆ ಮತ್ತು ಆಡಳಿತ ಮಂಡಳಿ ನಡೆದುಕೊಳ್ಳುವ ಕಾರ್ಯವೈಖರಿ ಮತ್ತು ಕಾಯ್ದೆ ಕಾನೂನು ತಿದ್ದುಪಡಿಗಳ ಬಗ್ಗೆ ಮುಖ್ಯ ನಿರ್ವಾಹಣಾಧಿಕಾರಿ ಸವಿತಾ ಬಿಸನಾಳರವರು ತರಬೇತಿ ನೀಡಿದರು.
ಪಟ್ಟಣದಲ್ಲಿ ಶ್ರೀ ಹಡಪದ ಅಪ್ಪಣ್ಣ ವಿವಿಧೋದ್ಧೇಶಗಳ ಸಹಕಾರಿ ಸಂಘದ ಅಡಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಂಡಳ ನಿ,. ಬೆಂಗಳೂರು. ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್ ನಿ,. ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸದಸ್ಯರ ಶಿಕ್ಷಣ ಕ್ಲಸ್ಟರ್ (ಕಾರ್ಯಗಾರ) ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಶಿವಾನಂದ ಹಡಪದ ಮಾತನಾಡಿ, ಈ ತರಬೇತಿಯನ್ನು ಉದ್ದೇಶಿಸಿ ಇಂತಹ ತರಬೇತಿಗಳನ್ನು ಎಲ್ಲಾ ಸಹಕಾರಿ ಸಂಘಗಳಿಗೂ ಸಿಗಬೇಕು ಇಂತಹ ತರಬೇತಿ ಯಿಂದ ಸಂಘ ಸಂಸ್ಥೆಗಳು ಮೇಲಮಟ್ಟಕ್ಕೆ ಏರಲು ಯಾವುದೆ ಸಂಶಯವಿಲ್ಲ ಹಾಗೂ ಯಾರು ತಪ್ಪುಗಳು ಮಾಡುವುದಿಲ್ಲವೆಂದು ಹೇಳಿದರು.
ಈ ತರಬೇತಿ ನೀಡಿದ ತರಬೇತುದಾರರಿಗೆ ಈ ಕಾರ್ಯಗಾರ ಮಾಡಿದ್ದು ನಮ್ಮ ಆಡಳಿತ ಮಂಡಳಿ ಮತ್ತು ಸದಸ್ಯರಿಗೂ ಸಹಕಾರ ಕಾನೂನು ಸಲಹೆ ಮಾಹಿತಿ ನೀಡಿದಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿ,. ಕಾಶಿಬಾಯಿ ಪಾರಗೊಂಡ, ಸಂಘದ ಉಪಾಧ್ಯಕ್ಷೆ ನಾಗಮ್ಮ ಪಿ ಕಾಶೆ, ನಿರ್ದೇಶರುಗಳಾದ ಕಂಠೆಪ್ಪ ಹಡಪದ, ಚಿದಾನಂದ ಹಡಪದ, ಸುಭಾಶ ದೇವರನಾವದಗಿ, ಮಂಜುನಾಥ ಹಡಪದ, ಸುರೇಶ ಸಿಂಧೆ, ಪರಶುರಾಮ ಕಾಶೆ ಹಾಗೂ ಸಂಘದ ಸಿಬ್ಬಂದಿಗಳಾದ ವಿದ್ಯಾ ನಾವಿ, ಪ್ರವೀಣ ಹಡಪದ, ಭಾಗಣ್ಣ ಹಡಪದ, ಶಿವಶರಣ ಸಿಂದಗಿ, ರಾಹುಲ ಹಿಂಚಗೇರಿ, ಕಾಶಿನಾಥ ನಾವಿ, ಗೌಡಪ್ಪಗೌಡ ಪಾಟೀಲ, ಶಿವಾನಂದ ವಾಲಿಕಾರ, ಮಹ್ಮದ ಯುನುಸ್ ಮದರಖಾನ, ಶರಣು ಕುಕುನೂರ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಮ್, ಎಮ್, ಹಡಪದ(ಹಳಿಮನಿ) ಅವರು ನಿರೂಪಿಸಿ ವಂದಿಸಿದರು.