ಮೂಡಲಗಿ: ಸುಣಧೋಳಿ ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ನಾನಾ ಯೋಜನೆಗಳಲ್ಲಿ ಅನುದಾನ ನೀಡಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಇಂತಹ ಶಾಸಕರನ್ನು ಪಡೆದಿರುವುದು ಪುಣ್ಯ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಶಿವಾನಂದ ಸ್ವಾಮೀಜಿಗಳು ಹೇಳಿದರು.
ಅವರು ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಸುಣಧೋಳಿ ಕ್ರಾಸ್‌ದಿಂದ ಸುಣಧೋಳಿ ಗ್ರಾಮದವರಿಗೆ ಸುಮಾರು ಮೂರು ಕಿ.ಮಿ ರಸ್ತೆಯನ್ನು ಲೋಕೊಪಯೋಗಿ ಇಲಾಖೆಯ ೪.೮೦ ಕೋಟಿ ರೂಪಾಯಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ, ಮೂಡಲಗಿ ತಾಲುಕು ಮತ್ತು ಅರಭಾವಿ ಕ್ಷೇತ್ರದಲ್ಲಿ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳೊಂದಿಗೆ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅರಭಾವಿ ಕ್ಷೇತ್ರದಲ್ಲಿ ಮೂಡಲಗಿ, ಕುಲಗೋಡ, ಖಾನಟ್ಟಿ, ಬೆಟಗೇರಿ ಗ್ರಾಮಗಳಲ್ಲಿ ಹೊಸ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿದ್ದಾರೆ ಎಂದರು
ಈ ಸಂದರ್ಭದಲ್ಲಿ ಸುಣಧೋಳಿಯ ಸೊಗಲ ಮಠದ ಶ್ರೀ ಚಿದಾನಂದ ಶರಣರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತಸಹಾಯಕಾರದ ನಾಗಪ್ಪ ಶೇಖರಗೋಳ, ಮಲ್ಲಿಕಾರ್ಜುನ ಯಕ್ಷಂಬಿ ಮತ್ತು ಸುಣಧೋಳಿ ಗ್ರಾಮದ ಗಣ್ಯರಾದ ವೀರಭದ್ರ ವಾಲಿ, ಸದಾಶಿವ ದೇವನಗೋಳ, ಶಿವಾನಂದ ವಾಲಿ, ಭೀಮಪ್ಪ ಹುವನ್ನವರ, ಗ್ರಾ.ಪಂ ಸದಸ್ಯರಾದ ಶ್ರೀಕಾಂತ ದೇವರಮನಿ, ಗದಿಗೆಪ್ಪ ಅಮಣಿ, ಸಿದ್ಧಾರೂಢ ಪಾಶಿ, ಮುಖಂಡರಾದ ಈಶ್ವರ ಅಮಣಿ, ಅಮೀತ ಹಿರೇಮಠ, ಸುರೇಶ ಮಹಾಲಿಂಗಪೂರ, ಬಸವರಾಜ ಗೌಡ್ರ, ಸಿದ್ಲಿಂಗಪ್ಪ ಅಜ್ಜಪ್ಪನವರ, ಬಸವರಾಜ ಪಾಶಿ, ಸಿದ್ದಾರೂಢ ಕಮತಿ, ಸಿದ್ದಾರೂಡ ದೇವನಗೋಳ, ಉದ್ದಪ್ಪ ಮಾದರ, ಸುರೇಶ ಕಂಕಣವಾಡಿ, ಸಿದ್ದಾರೂಢ ಕಮತಿ, ರವೀಂದ್ರ ಹಟ್ಟಿಹೋಳಿ, ರಾಮಣ್ಣ ಬೇಣ್ಣಿ, ನವೀನ ಕಮತಿ, ಶಂಕರ ಪಾಟೀಲ, ಬಾಳಪ್ಪ ಕಮತಿ, ಮುತ್ತೆಪ್ಪ ಜಿಡ್ಡಿಮನಿ, ಪರಶುರಾಮ ಭಜಂತ್ರಿ, ಜಗದೀಶ ಕಮತಿ, ಭೀಮಪ್ಪ ಕಮತಿ, ಶಶಿಕಾಂತ ಬೆಣ್ಣಿ, ಪ್ರಮೋದ ನುಗ್ಗಾನಟ್ಟಿ, ಇಮಾಮ ಮೋಮಿನ, ಬಾಲಚಂದ್ರ ಪಾಟೀಲ, ರೇವಪ್ಪ ನಾಯಿಕ ಮತ್ತಿತರು ಇದ್ದರು.