ಉಗರಗೋಳ : 75ನೇ ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜನ್ಮದಿನದ ನಿಮಿತ್ತ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾಜದ ಮುಖಂಡ ರುದ್ರಪ್ಪ ಸಿದ್ದಕ್ಕನವರ ಧ್ವಜಾರೋಹಣ ನೆರೆವೇರಿಸಿದರು.
ಮನಸೂರ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ಮಾತನಾಡಿ, ಅನೇಕ ವರ್ಷಗಳ ಹೋರಾಟದ ಫಲವಾಗಿ ಇತ್ತೀಚಿನ ಸರಕಾರ ಸಂಗೊಳ್ಳಿ ರಾಯಣ್ಣನ ಜನ್ಮ ದಿನವನ್ನು ಎಲ್ಲ ಸರಕಾರಿ ಮತ್ತು ಸಂಘ ಸಂಸ್ಥೆಗಳ ಕಚೇರಿಯಲ್ಲಿ ಕಡ್ಡಾಯವಾಗಿ ಆಚರಣೆ ಮಾಡಬೇಕೆಂದು ಕಟ್ಟಪ್ಪಣೆ ಹೊರಡಿಸಿದೆ. ಇದು ಸ್ವಾಗತಾರ್ಹ. ರಾಯಣ್ಣನಂತಹ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಬಲಿದಾನದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಅಂತಹ ಮಹನೀಯರ ಜನ್ಮದಿನದ ಆಚರಣೆ ಮಾಡುವುದು ಅವಶ್ಯಕ. ಈ ಮೂಲಕ ಸ್ವಾತಂತ್ಯಕ್ಕಾಗಿ ಮಡಿದ ಮಹಾನ್ ನಾಯಕರನ್ನು ಸ್ಮರಿಸಿಕೊಳ್ಳಲು ಸಹಕಾರಿಯಾಗಲಿದೆ. ರಾಯಣ್ಣನ ಕೀರ್ತಿ ವಿಶ್ವದೆಲ್ಲೆಡೆ ಹರಡಿ ಪ್ರತಿ ಮನೆಗೊಬ್ಬ ರಾಯಣ್ಣ ಹುಟ್ಟಲೆಂದು ಹರಸಿದರು.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ರಾಯಣ್ಣನ ಜನ್ಮದಿನದ ನಿಮಿತ್ತ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಗ್ರಾ.ಪಂ ವತಿಯಿಂದ ಸಸಿ ನಡೆಲಾಯಿತು. ಈ ವೇಳೆ ಪಿಡಿಓ ಮಹೇಶ ತೆಲಗಾರ, ಗ್ರಾ.ಪಂ ಅಧ್ಯಕ್ಷೆ ಜುಬೇದಾ ಬಾರಿಗಿಡದ, ಉಪಾಧ್ಯಕ್ಷ ಶಿವನಗೌಡ ಗಡಾದಗೌಡ್ರ, ಬಸಪ್ಪ ಸಿದ್ದಕ್ಕನವರ, ವಿಠ್ಠಲ ಗುಡೆನ್ನವರ, ಮಲ್ಲಪ್ಪ ಸಿದ್ದಕ್ಕನವರ, ಈರಪ್ಪ ಹೂಲಿ, ಸಿದ್ದಪ್ಪ ಗುಡೆನ್ನವರ, ನಂದಕುಮಾರ ಚಂದರಗಿ, ಅಜ್ಜಪ್ಪ ಪೋಲೇಶಿ, ತಲಾಟಿ ವಿ.ಎಚ್.ಪಿಂಜಾರ, ಶಂಕ್ರವ್ವ ಹೂಲಿ, ಭೀಮಾಂಬಿಕಾ ಭಜಂತ್ರಿ, ನೀಲಪ್ಪ ಸಿದ್ದಕ್ಕನವರ, ಶಿವಕ್ಕ ಗೊರವನಕೊಳ್ಳ, ರೋಷನ್‍ಬೇಗ್ ಹೂಲಿ, ಸಂಗವ್ವ ಹೀರೆಮಠ, ಅಭಿಷೇಕ ತಿಪರಾಶಿ, ಮಾರುತಿ ಪಡಸುಣಗಿ, ನಿಂಗಪ್ಪ ಸಿದ್ದಕ್ಕನವರ, ಸಂತೋಷ ಕಲಾಲ ಸೇರಿದಂತೆ ಇತತರು ಇದ್ದರು.
ಇತರೆಡೆ ಧ್ವಜಾರೋಹಣ: ಗ್ರಾ.ಪಂ ಕಾರ್ಯಾಲಯ, ಬಸವಜ್ಯೋತಿ ಪ್ರಾಥಮಿಕ ಶಾಲೆ, ಎಸ್.ಆರ್.ಡಿ ಹೈಸ್ಕೂಲ, ಸರಕಾರಿ ಶಾಲೆ, ಕಸ್ತೂರಿ ಬಾ ಗಾಂಧಿ ವಸತಿ ಶಾಲೆ, ಶಾರದಾ ಶಾಲೆ, ಕೃಷಿ ಪತ್ತಿನ ಸಂಘಗಳು ಸೇರಿದಂತೆ ಇತರೆಡೆ 75ನೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ನೆರೆವೇರಿತು.