spot_img
spot_img

ಕೋವಿಡ್‍ನಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಸನ್ಮಾನ

Must Read

spot_img
- Advertisement -

ಸವದತ್ತಿಃ ತಾಲೂಕಿನ ಉಗರಗೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣಾ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಕೋವಿಡ್ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ ಆರೋಗ್ಯ ಸಿಬ್ಬಂದಿಗಳಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

ವೈದ್ಯಾಧಿಕಾರಿ ರಿಯಾಜ ಮೆಣಸಿನಕಾಯಿ ಮಾತನಾಡಿ, ಜಗತ್ತೇ ಕೋವಿಡ್ ವಿರುದ್ದ ತತ್ತರಿಸಿದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಕಾರ್ಯಕರ್ತರು ತಮ್ಮ ಜೀವಗಳ ಹಂಗೂ ತೊರೆದು ಸಾರ್ವಜನಿಕರ ಹಿತರಕ್ಷಣೆ ಮಾಡಿದ್ದಾರೆ. ಆ ಸೇವೆಯನ್ನು ಗಮನಿಸಿ ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣಾ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಮಿತಿ ವತಿಯಿಂದ ಸಂಘದಿಂದ ಸ್ವಾತಂತ್ರ್ಯೋತ್ಸವದ ದಿನದಂದು ಸನ್ಮಾನಿಸಿರುವುದು ಖುಷಿ ತಂದಿದೆ. ಈ ಪ್ರೋತ್ಸಾಹ ನಮ್ಮನ್ನು ಇನ್ನು ಹೆಚ್ಚಿನ ಸೇವೆ ಮಾಡುವಂತೆ ಪ್ರೇರೆಪಿಸಿದೆ ಎಂದರು.

ಈ ವೇಳೆ ಆಯುಷ ವೈದ್ಯೆ ಜ್ಯೋತಿ ಬಸರಿ, ಡಾ|| ಕೃಷ್ಣಾ ಹನಸಿ, ಸರಕಾರಿ ನೌಕಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಆನಂದ ಮೂಗಬಸವ, ನಿಂಗಪ್ಪ ಪೂಜೇರ, ಎ.ಕೆ. ಮುಲ್ಲಾ, ಪಾತೀಮಾ ಶೇಖ್, ಈರಯ್ಯ ದಿಗಂಬರಮಠ, ಡಿ.ಎಸ್.ಕೊಪ್ಪದ, ಶಶಿಧರ ಅಂಗಡಿ, ಸಚಿನ್ ಚೋಪ್ರಾ, ಹುಸೇನ ನದಾಫ್, ಮೀರಾಸಾಬ ಬೇವಿನಗಿಡದ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group