spot_img
spot_img

Kuvempu Birthday: ರಸ ಋಷಿಗೆ ಜನ್ಮದಿನದ ಶುಭಾಶಯ ಕವಿತೆಗಳು

Must Read

- Advertisement -

( ಡಾ. ಎಸ್.ಪುಟ್ಟಪ್ಪ, ಡಾ. ಜಯಾನಂದ ಧನವಂತ, ಶ್ರೀಕಾಂತೈಯ್ಯ ಮಠ, ಎಂ. ಸಂಗಪ್ಪ, ಕೆ. ಶಶಿಕಾಂತ ಲಿಂಗಸುಗೂರು )

ನನ್ನ ಜೇನುಗೂಡು ಕೃತಿಯಲ್ಲಿ ರಚಿಸಲಾಗಿರುವ ಕವಿತೆ. 

ಕುವೆಂಪು 

ಕನ್ನಡ ನಾಡಿನ ಸುಕುಮಾರ

- Advertisement -

ಕುವೆಂಪು ಎಂಬ ಕತೆಗಾರ 

ಸಾಹಿತ್ಯ ಲೋಕದ ಹರಿಕಾರ

ಜ್ಞಾನಪೀಠದ ಗರಿಕಾರ 

- Advertisement -

ಕವಿಗಳ ಬಳಗದ ಸರದಾರ

ಕರ್ನಾಟಕ ರತ್ನ ಭಾಜನಗಾರ 

ವಿಶ್ವ ಮಾನವನ ಝೇಂಕಾರ 

ಕಾವ್ಯ ಶಾಸ್ತ್ರದ ಅಲಂಕಾರ 

ಶತಮಾನ ಕಂಡ ಕವಿಶೂರ 

ಅಸಂಖ್ಯಾತ ಕಥೆಗಳ ನಾಟಕಕಾರ  

ಜಾತ್ಯತೀತದ ನೇತಾರ 

ರಾಮಾಯಣ ದರ್ಶನ ಕೃಷಿಕಾರ. 

ಡಾ. ಎಸ್ ಪುಟ್ಟಪ್ಪ ಮುಡಿಗುಂಡ.


ಕುವೆಂಪು

ಕನ್ನಡದ ಕುಹೂ

ಕುಹೂ ಕೋಗಿಲೆ

ಕುವೆಂಪು!

ಕನ್ನಡದ ಡಿಂಡಿಮ

ಬಾರಿಸಿ

ಸತ್ತoತಿಹರನು

ಎಚ್ಚರಿಸಿ

ನಿಸರ್ಗದ ಔತಣವನು

ಕಾವ್ಯರಸದಲಿ ಉಣಬಡಿಸಿ

ಕನ್ನಡದ ಕಂಪನು ಹರಡಿಸಿ

ಕುಹೂ ಕುಹೂ ಇಂಪನ್ನು

ಅದಕೆ ಬೆರಸಿ

ಏನಾದರೂ ನೀನಾಗು

ಆದರೆ ಮೊದಲು ಮನುಜನಾಗು

ಎಂದು ಎಲ್ಲರಿಗೂ

ಮಾನವೀಯತೆಯ ಧರ್ಮವನ್ನು

ಪ್ರವಚಿಸಿ ಜ್ಞಾನಪೀಠ

ಪ್ರಶಸ್ತಿಯನು ಕರುನಾಡಿಗೆ

ತಂದು ಕೊಟ್ಟ ರಾಷ್ಟ್ರೀಯ

ಕವಿ ಕುವೆಂಪುರವರಿಗೆ

ಕೋಟಿ ಕೋಟಿ ನಮನ 🌹

ಡಾ. ಜಯಾನಂದ. ಧನವಂತ


ನಮ್ಮ ಕುವೆಂಪು

ನಮ್ಮ ಕನ್ನಡದ ಇಂಪು

ಕನ್ನಡದ ನೆಲದಲ್ಲಿ

ಕುವೆಂಪು ರಾಜ ನೀವು

ಕನ್ನಡ ಭಾಷೆಯಲ್ಲಿ ಜ್ಞಾನಪೀಠ ತಂದವರು ನೀವು

ಕನ್ನಡದ ಭಾಗದಲ್ಲಿ ಕವಿರಾಜ ನೀವು

ಕನ್ನಡದ ಕಣ್ಣುಗಳಲ್ಲಿ ರಾಷ್ಟ್ರಕವಿ ಆದವರು ನೀವು

ಹಸಿರು ತಪ್ಪಲಿನ ತಂಪಿನಲ್ಲಿ ಮಲೆನಾಡಿನ ಮಗನು ನೀವು

ಬರೆದ ಮಲೆ ಮಗಳಿನ ಜನಕ ನೀವು

ಸಾಧನೆಯ ದರುಶನದಲ್ಲಿ ಸಾಂಸ್ಕೃತಿಕ ಹೆಜ್ಜೆಯ ಗುರುತು ಕೊಟ್ಟವರು ನೀವು

ಕನ್ನಡ ಎನೆ ಕುಣಿದಾಡುವದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು

ಎಂಬುದ ಸಾರಿದವರು ನೀವು

ಹಾಲಂತೆ ಮನಸ್ಸುಳ್ಳ ಬೆಳಕಂತೆ ಬರಹವೆಲ್ಲ ಎನ್ನುವ ನಾವು ಕವಿ ಶಾಲೆಯ ಮಕ್ಕಳು ಧನ್ಯರು ನಾವು

ಶ್ರೀಕಾಂತಯ್ಯ ಮಠ


ಕುವೆಂಪು

ಬರೆದರು ಬರೆದರು

ಕಾವ್ಯಗಳನು ಬರೆದರು

ಕನ್ನಡದ ಬಟ್ಟಲಿಗೆ

ಅಕ್ಷರಗಳ ಸುರಿದರು

ತುಂಬಿ ತುಳುಕಿ ಅಕ್ಷರಗಳು

ಜೀವ ತುಂಬಿಕೊಂಡವು

ಕವನ ಕಥೆ ಗೀತೆಯಾಗಿ

ರೂಪ ಪಡೆದುಕೊಂಡವು

ಕನ್ನಡಕೆ ಜ್ಞಾನ ಪೀಠ

ಹಿರಿಮೆ ತಂದು ಕೊಟ್ಟವು

ಕುವೆಂಪುರೇ ನಮ್ಮ ತಿದ್ದಿ

ಜೀವ ಕೊಟ್ಟರೆಂದವು

ರಾಷ್ಟ್ರಕವಿ ಎಂಬ ಖ್ಯಾತಿ

ಇವರ ಪಾಲಾಯಿತು

ಇವರ ಶ್ರಮದಿ ಕನ್ನಡ

ನಾಡು ನುಡಿ ಬೆಳಗಿತು

ಸಾಹಿತ್ಯ ಸಾಮ್ರಾಜ್ಯವು

ಬಹು ಎತ್ತರಕ್ಕೇರಿತು

ವಿಶ್ವ ಮಾನವ ಕುಲವು

ಧನ್ಯತೆಯ ಸವಿಯಿತು

ಎಂ.ಸಂಗಪ್ಪ

ಲಿಂಗಸುಗೂರು


ಪುಟ್ಟಪ್ಪ 

ಇಟ್ಟರು ಹೆಸರು ಪುಟ್ಟಪ್ಪರೆಂದು

ಜಗಕೆ ತೋರಲು ಬೆಟ್ಟಪ್ಪರೆಂದು

ಎಳವೆಯೊಳೆ ಒರೆದ ನುಡಿಯು 

ಕಲ್ಲಿನೊಳು ಕೆತ್ತಿದ ಪರಿಯು 

ಗುರುವಿನಾಣತಿಯಂತೆ ನಡೆದು 

ಬಿಡದೆ ಕನ್ನಡದಿ ಬರೆದು ಬರೆದು 

ಅಕ್ಕರದಿ ತುಂಬಿತು ಮಲೆನಾಡ ಹಸಿರು 

ಸಹ್ಯಾದ್ರಿಗೂ ಅದು ಮಿಗಿಲು ಮುಗಿಲು 

ಕಾನೂರು ರಾಣಿ,ಮದುಮಗಳ ವಾಣಿ 

ಅನುರಣಿಸಿತು ಮಲೆಮಲೆಯ ಮೀರಿ 

ಆರಿಗೂ ಸಿಗದು ಆಳ ಎತ್ತರ 

ಅಗಮ್ಯವಿಹುದಿಲ್ಲಿ ಅನುಭವದ ಬಿತ್ತರ 

ತಲೆಯೆತ್ತಲು ಬಾಳು ಸಲ್ಲದಿಲ್ಲಿ 

ಕೈಮುಗಿದು ಬಾಗುವುದೀ ಗುಡಿಯಲ್ಲಿ 

ಸಿಡಿಲಾದರೇನು ಶಾಸ್ತ್ರದ ದನಿಯು 

ಎದೆಯ ದನಿಯು ಅದಕೂ ಮಿಗಿಲು

ಸುರಿಯಿತಿಲ್ಲಿ ರಾಮಾಯಣದ ಸುಧೆಯು 

ಸವಿದು ಕುಣಿದ ವಾಲ್ಮೀಕಿ ಋಷಿಯು 

ಕನ್ನಡಿಯೊಳು ಕಂಡಂತೆ ಕರಿಯು 

ಕವಿಶೈಲದೊಳಿರ್ಪನೀ ಕವಿಯು 

ಎಂಥ ಪೆಂಪು ಎಂಥ ಕಂಪು 

ನಾಡಗುಡಿಯ ಸಿರಿಯ ಸೊಂಪು 

ಹಾ ಕುವೆಂಪು ಹಾ ಕುವೆಂಪು 

ತಾಯಿ ದೇವಿಯ ಸಿರಿಗಂಪು 

ನಮ್ಮೆಲ್ಲರೊಳು ಹರಿದು ಬಂತು 

ಕುಣಿಸುತಿದೆ ಚೇತನವಾಗಿ ನಿಂತು


ಕೆ.ಶಶಿಕಾಂತ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group