spot_img
spot_img

ಶಾಂತತೆ, ಸಮಚಿತ್ತತೆ ; ನಮಗೆ ನಾವೇ ಕೊಟ್ಟುಕೊಳ್ಳಬೇಕಾದ ಕಾಣಿಕೆ

Must Read

- Advertisement -

ಮನುಷ್ಯನು (ಜೀವಿಯು) ಭೂ ಲೋಕಕ್ಕೆ ಏಕಾಂಗಿಯಾಗಿ ಬರುತ್ತಾನೆ. ಮರಣಾನಂತರ ಪರಲೋಕಕ್ಕೂ ಏಕಾಂಗಿಯಾಗಿ ಹೊರಡುತ್ತಾನೆ. ತಾನು ಮಾಡಿದ ಪುಣ್ಯ, ಪಾಪಕರ್ಮದ ಫಲವನ್ನು ತಾನೊಬ್ಬನೇ ಅನುಭವಿಸುತ್ತಾನೆ. ತಂದೆ, ತಾಯಿ, ಹೆಂಡತಿ, ಮಕ್ಕಳು, ಬಂಧುಗಳು,ಸ್ನೇಹಿತರು ಇವರೆಲ್ಲ ಸಂಸಾರದಲ್ಲಿ ಕೆಲವು ಕಾಲ ಮಾತ್ರ ಜೊತೆಗಿರುವವರು ಅಷ್ಟೆ. ಇವರು ಯಾರೂ ಜೀವಿಯು ಬರುವಾಗ,ಹೋಗುವಾಗ ಜೊತೆಗೆ ಬರುವುದಿಲ್ಲ.

( ಶ್ರೀಮದ್ಭಾಗವತದಿಂದ )


“ನಮಗೆ ನಾವು ಕೊಟ್ಟುಕೊಳ್ಳಬಹುದಾದ ದೊಡ್ಡ ಕಾಣಿಕೆಯೆಂದರೆ ಶಾಂತ ಹಾಗೂ ಸಮಚಿತ್ತತೆ.ಬಹುತೇಕ ಸಂದರ್ಭದಲ್ಲಿ ಅನಗತ್ಯವಾಗಿ ನಮಗೆ ನಾವೇ ಹಿಂಸೆ ಕೊಟ್ಟುಕೊಳ್ಳುತ್ತೇವೆ. ಶಾಂತಚಿತ್ತತೆಯನ್ನು ನೆಲೆಸುವಂತೆ ಮಾಡುವುದು ಅಗತ್ಯ !!”

- Advertisement -

ಯಾರಿಗೂ ತನ್ನ ಜೀವನದ ಕೊನೆ ದಿನ, ಕ್ಷಣದ ಅರಿವಿರುವುದಿಲ್ಲ. ಹೀಗಾಗಿ ಇದ್ದಾಗಲೆ ಬೇರೆಯವರ ಕೊನೆದಿನ ಕ್ಷಣದ ಸ್ಥಿತಿಗತಿಗೆ ಅವರ ಮೊದಲ ದಿನಗಳಲ್ಲಿ ಮಾಡಿದ ಕಾರ್ಯವೇ  ಕಾರಣವಾಗಿರುವ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಎಷ್ಟೇ ಉತ್ತಮ ಕಾರ್ಯ ನಡೆಸಿದ್ದರೂ ಕೆಟ್ಟ ಜನರು ಕೊನೆಯಲ್ಲಿ ಹೇಳುವುದು ಕೆಟ್ಟದ್ದನ್ನೇ, ಹಾಗೆ ಒಳ್ಳೆಯ ಜನರಿಗೆ ಒಳ್ಳೆಯದು ಕಾಣಿಸುತ್ತದೆ.

ಸಾವನ್ನು ಪ್ರೀತಿಸುವ ಜ್ಞಾನವಿರುವುದು ಕೇವಲ ಮಹಾತ್ಮರಿಗಷ್ಟೆ. ಇದನ್ನು ಮುಕ್ತಿ ಎಂದಿದ್ದಾರೆ. ಒಳ್ಳೆಯದನ್ನು ಮಾಡುತ್ತಾ ಮುಂದೆ ನಡೆದಂತೆಲ್ಲಾ ಒಳ್ಳೆಯ ಕ್ಷಣದಲ್ಲಿ ಜೀವ ಹೋಗಬಹುದು. ಪರಮಾತ್ಮನ ಒಳಗಿದ್ದರೂ ಪರಮಾತ್ಮನೆ ಬೇರೆ ಎಂದುಕೊಂಡು ಅಧರ್ಮದಲ್ಲಿರುವ ಜೀವಕ್ಕೆ ಕೊನೆಗೆ ಪರಮಾತ್ಮನ ಸಾನ್ನಿಧ್ಯ ಸಿಗೋದಿಲ್ಲವೆನ್ನುವುದಾದರೆ, ಧರ್ಮದ ಪ್ರಕಾರ ನಡೆದವರೆಲ್ಲರಿಗೂ ಸಿಗುವುದಾದರೆ ನಮ್ಮ ನಮ್ಮ ಮೂಲ ಧರ್ಮ ಕರ್ಮಕ್ಕೆ ತಕ್ಕಂತೆ ಜೀವನ ನಡೆಸಲು ಸರ್ಕಾರದ ಅಗತ್ಯವಿಲ್ಲ. ಕೊನೆಕ್ಷಣದವರೆಗೆ ಸರ್ಕಾರ ಇರದು.

ಈಗಲೇ ನಮ್ಮ ನಮ್ಮ ಕಾಲುಬುಡದಲ್ಲಿರುವ ಕೆಸರಿನಿಂದ ಹೊರಬಂದು ಸ್ವಚ್ಚಮಾಡಿಕೊಂಡರೆ ಕೊನೆಕ್ಷಣದಲ್ಲಾದರೂ ನೆಮ್ಮದಿ, ತೃಪ್ತಿ, ಮುಕ್ತಿ ಪಡೆಯಬಹುದು. ಇಲ್ಲಿ ನಾವೇ ಹಾಕಿ ಕೊಂಡಿರುವ ಭ್ರಷ್ಟಾಚಾರದ ಬೇಲಿಯಲ್ಲಿ ನಾವೇ ನರಳಿದರೆ ಕೊನೆಗಾಲದಲ್ಲಿ ಹೊರಬರಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲದ್ದಕ್ಕೂ ಸಹಕಾರ ನೀಡಿರುವ ಪ್ರಜೆಗಳೆ ಪರಿಸ್ಥಿತಿಗೆ ಕಾರಣವಾದಾಗ ಸ್ಥಿತಪ್ರಜ್ಞ ರಾಗದೆ, ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದರೆ ಕೊನೆಗಾಲ ಯಾರಿಗೂ ತಪ್ಪಿದ್ದಲ್ಲ. ಕೊನೆಪಕ್ಷ ನಮ್ಮ ಹತ್ತಿರದ ಕೆಟ್ಟ ಶಕ್ತಿಯಿಂದ ದೂರವಾಗೋ ಪ್ರಯತ್ನ ಪಟ್ಟರೆ ಉತ್ತಮ.

- Advertisement -

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

  ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮ ಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವ ತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು...
- Advertisement -

More Articles Like This

- Advertisement -
close
error: Content is protected !!
Join WhatsApp Group