ಹೆಸರೇ ಸೂಚಿಸುವಂತೆ ಪಾಷಾಣ ಎಂದರೆ ಕಲ್ಲು ಭೇದ ಅಂದ್ರೆ ಭೇದಿಸುವುದು ಅಥವಾ ಒಡೆಯುವುದು.
ಇದು ಅಳಿವಿನಂಚಿನಲ್ಲಿರುವ ಉತ್ತಮ ಔಷಧೀಯ ಸಸ್ಯ.
ಇದರ ಎಲೆ ಮತ್ತು ಬೇರು ಔಷಧೀಯ ಗುಣವನ್ನು ಹೊಂದಿದೆ.
1) ಇದರ ಎಲೆಯನ್ನು ಅರೆದು ಹಸಿಯಾಗಿ ಹಚ್ಚುವುದರಿಂದ ಉರಿ ಮತ್ತು ಊತ ಗುಣವಾಗುತ್ತದೆ.
2) ಎಲೆಗಳನ್ನು ಅರೆದು ವಸಡಿಗೆ ಹಚ್ಚುವುದರಿಂದ ಮಕ್ಕಳಲ್ಲಿ ಹಲ್ಲು ಹುಟ್ಟುವ ಸಮಯದಲ್ಲಿ ಆಗುವ ನೋವು ವಸಡಿನ ರಕ್ತಸ್ರಾವ ಇವುಗಳನ್ನು ಗುಣಪಡಿಸುತ್ತದೆ.
3) ಆಪೀಮು ಮುಂತಾದ ಮತ್ತು ಬರುವ ವಿಷ ನೆತ್ತಿಗೇರಿದಾಗ ಸೊಪ್ಪಿನ ರಸ ಕುಡಿಸುವುದರಿಂದ ಮತ್ತು ನಿವಾರಣೆ ಆಗುತ್ತದೆ.
4) ಇದರ ಕಷಾಯ ಉರಿಮೂತ್ರ ಬಿಸಿಮೂತ್ರ ಮುಂತಾದ ಮೂತ್ರಕೋಶದ ಸಮಸ್ಯೆಗಳನ್ನು ಗುಣಪಡಿಸುತ್ತದೆ.
5) ಹೊಟ್ಟೆಯ ಕರುಳಿನ ಹುಣ್ಣನ್ನು ಇದರ ಸೊಪ್ಪಿನ ರಸ ಗುಣ ಪಡಿಸುತ್ತದೆ.
6) ಗಾಯ ಮತ್ತು ಗುಣವಾಗದ ಚರ್ಮರೋಗಕ್ಕೆ ಇದರ ಸೊಪ್ಪಿನ ರಸ ಹಚ್ಚುವುದರಿಂದ ಗುಣವಾಗುತ್ತದೆ.
7) ಆಗತಾನೆ ಆದ ಗಾಯದ ರಕ್ತವನ್ನು ನಿಲ್ಲಿಸಲು ಕೊಬ್ಬರಿ ಎಣ್ಣೆ ಜೊತೆಯಲ್ಲಿ ಸೊಪ್ಪಿನ ರಸ ಹಚ್ಚುವುದರಿಂದ ಆದಷ್ಟು ಬೇಗನೆ ರಕ್ತ ನಿಲ್ಲುತ್ತದೆ.
8) ತುಪ್ಪ ಅಥವಾ ಬೆಣ್ಣೆ ಸೇರಿಸಿ ಸೊಪ್ಪನ್ನು ಚೆನ್ನಾಗಿ ಅರೆದು ಪ್ರತಿದಿನ ಸೇವಿಸುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ.
9) ಗಿಡದ ಪಂಚಾಂಗವನ್ನು ಸಾಸುವೆ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಕುದಿಸಿ ಸ್ವಲ್ಪ ಬೆಚ್ಚಗಿರುವಾಗ ಬಾವು ಅಥವಾ ನೋವು ಇರುವ ಜಾಗದಲ್ಲಿ ಹಚ್ಚಿದರೆ ಗುಣವಾಗುತ್ತದೆ.
10) ಪ್ರತಿ ದಿನ ನಿಯಮಿತವಾಗಿ ಸೊಪ್ಪಿನ ರಸ ಸೇವಿಸುವುದರಿಂದ ಸಣ್ಣ ಪ್ರಮಾಣದ ಮೂತ್ರದ ಕಲ್ಲು ಗುಣವಾಗುತ್ತದೆ.
11) ಸೊಪ್ಪಿನ ರಸಕ್ಕೆ ಉಪ್ಪು ಸೇರಿಸಿ ಹಚ್ಚುವುದರಿಂದ ಚೇಳಿನ ವಿಷ ಗುಣವಾಗುತ್ತದೆ.
ಸುಮನಾ, ಪಾರಂಪರಿಕ ವೈದ್ಯೆ, ಮಳಲಗದ್ದೆ .9980182883.