ಕವನ

ಕವನ: ಕನ್ನಡದ ನವಪೀಳಿಗೆ ಏಳಿ, ಎದ್ದೇಳಿ

ನವತರುಣ ತರುಣಿಯರೇ, ಏಳಿ ಎದ್ದೇಳಿ ಕನ್ನಡಕಾಗಿ ಹೋರಾಡಿ ಕನ್ನಡ ಭಾಷೆ ಮಾತಾಡಿ ಕನ್ನಡದಲೇ ಉಸಿರಾಡಿ ಕನ್ನಡ ತಾಯಿಗೆ ಪ್ರಾಣ ನೀಡಿರಿ ಜಗಜ್ಯೋತಿ ಬಸವಣ್ಣ ವಿಶ್ವಗುರು,ಅಲ್ಲಮಪ್ರಭು ಅಕ್ಕಮಹಾದೇವಿ, ಗುಡ್ಡಾಪುರದ ದಾನಮ್ಮ ಇತಿಹಾಸದ ಮಹಾಸಾಧಕರಂತಾಗಿರಿ. ಪಂಪ ರನ್ನ ರಾಘವಾಂಕ ಹರಿಹರ ಕುಮಾರವ್ಯಾಸರು ಕನ್ನಡದ ಕವಿ ರತ್ನಗಳoತಾಗಿರಿ ಕುವೆಂಪು ಬೇಂದ್ರೆ ವಿ. ಕೃ ಗೋಕಾಕರು ಮಾಸ್ತಿ ಕಾರಂತರು ಕನ್ನಡದ ಸರಸ್ವತಿ ಪುತ್ರ ಇವರು ಇವರoತಾಗಿರಿ...

ಕವನಗಳು

ಕನ್ನಡಕಾಗಿ ಹೋರಾಡು ಕನ್ನಡಕಾಗಿ ಹೋರಾಡು ಕನ್ನಡ ಭಾಷೆಯ ಮಾತಾಡು, ಕನ್ನಡದಲೇ ಉಸಿರಾಡು, ಕನ್ನಡ ತಾಯಿಗೆ ಪ್ರಾಣ ನೀಡು.. ಪಂಪ,ರನ್ನ,ರಾಘವಾಂಕ,ಹರಿಹರ, ಕುಮಾರವ್ಯಾಸರು ಕನ್ನಡದ ಪಂಚಕಿರೀಟಗಳು, ಬೇಂದ್ರೆ,ಕುವೆಂಪು, ಮಾಸ್ತಿ,ಕಾರಂತ, ವಿ.ಕೃ.ಗೋಕಾಕರು ಕನ್ನಡದ ಪಂಚ ಕಳಸಗಳು...... ಕಾವೇರಿ,ಕೃಷ್ಣೆ,ತುಂಗೆ,ಹೇಮಾವತಿ, ಶರಾವತಿ ನಾಡ ಕಾಮಧೇನುಗಳು, ಮೈಸೂರು, ಬೆಂಗಳೂರು,ಬೆಳಗಾವಿ,ಕಲ್ಬುರ್ಗಿ, ಹುಬ್ಬಳ್ಳಿ-ಧಾರವಾಡಗಳು ಕನ್ನಡದ ಕೆಚ್ಚೆದೆಯ ಕೇಂದ್ರಗಳು..... ಹಂಪೆ,ಬಾದಾಮಿ-ಐಹೊಳೆ,ಮೇಲುಕೋಟೆ, ಬೇಲೂರು-ಹಳೇಬೀಡು,ಶ್ರವಣಬೆಳಗೊಳಗಳು ಕನ್ನಡದ ಶಿಲ್ಪಕೇಂದ್ರಗಳು, ರಾಜ್,ವಿಷ್ಣು,ಅಂಬಿ,ಅನಂತ್ನಾಗ್,ಅಶ್ವತ್ಥ್ ಕನ್ನಡನಾಡಿನ ನಟನಾ ರತ್ನಗಳು.... ಕಿತ್ತೂರು ಚೆನ್ನಮ್ಮ,ಕೆಳದಿ ಚೆನ್ನಮ್ಮ,ಒನಕೆ ಓಬವ್ವ,ಬೆಳವಡಿ ಮಲ್ಲಮ್ಮ,,ರಾಣಿ ಅಬ್ಬಕ್ಕ ಕನ್ನಡನಾಡಿನ ಪಂಚ ಹೋರಾಟಗಾರ್ತಿಯರು, ಚಾಮುಂಡಿಬೆಟ್ಟ,ಮಹದೇಶ್ವರ ಬೆಟ್ಟ,ಅಂಜನಾದ್ರಿ ಬೆಟ್ಟ,ಬಾಬಾ ಬುಡನ್ ಗಿರಿ, ಮಧುಗಿರಿ ಬೆಟ್ಟ...

ಡಾ. ಶಶಿಕಾಂತ ಪಟ್ಟಣರ ಕವಿತೆಗಳು

ಕೈಲಾಗದವರು ನಾವು ಕೈಲಾಗದವರು ನಾವು . ಬಸವಣ್ಣ ಕೈಲಾಗದವರು. ನಿನ್ನ ಹೆಸರು ಹೇಳಿ ಕೋಟಿ ಗಳಿಸಿದವರ ಜೀತದಾಳುಗಳು ನಾವು ಕೈಲಾಗದವರು ಬಸವಣ್ಣ . ಲಿಂಗ ಜಂಗಮ ಹರಾಜು ಹಾಕಿ ಕಾಯಕ ದಾಸೋಹವ ಮರೆತು ಮಾರಿಕೊಂಡಿದ್ದೇವೆ ನಿನ್ನನ್ನು ಬಸವಣ್ಣ ಕೈಲಾಗದವರು ನಾವು. ಅಕ್ಕ ಮಾತೆ ಸ್ವಾಮಿಗಳು ಸಾಕಿದ ಬೆಕ್ಕು ನಾಯಿಗಳು ನಾವು . ಬಸವಣ್ಣ ಕೈಲಾಗದವರು ನಾವು. ಜಾತ್ರೆ ಮೇಳ ಉತ್ಸವದಲ್ಲಿ ಕಾಲ ಕಳೆಯುವ ಮುಖವಿಲ್ಲದವರು. ನಾವು ಕೈಲಾಗದವರು ಬಸವಣ್ಣ . ಕಾಯಕವೇ ಕೈಲಾಸ ದಯವೇ ಧರ್ಮದ ಮೂಲ ವಚನಗಳ ಮಾತು ಗುನುಗುತ್ತೇವೆ. ಕಾವಿಗಳಿಗೆ...

ಗಝಲ್ ಲಹರಿ: ದೀಪಿಕಾ ಚಾಟೆಯವರ ಸುಂದರ ಗಝಲ್ ಗಳು

೧ ಅರಸುತ ಹೊಸತು ಬಯಸುತ ಒಳಿತು ಕವಿತೆ ಬರೆವೆಯಾ ನೀನು ಹೊರಸುತ ಭಾರವ ಕನಸ ಕಂಬಳಿಯನು ಹೊದಿಸುತ ಕರೆವೆಯಾ ನೀನು ಮೇಘಗಳ ಮಾಲೆಯಲಿ ಅಡಗಿಹ ಚಂದಿರನ ಕಾಣದೇ ಮನಸೋತಿದೆ ಹಸಿರಿನಾ ತೋರಣವು ಎದೆಯಲ್ಲಿ ನೆನಪಿನ ಸಾಲುಗಳ ಮರೆವೆಯಾ ನೀನು ಮನದಾಳದ ಭಾವದೋಕುಳಿಗೆ ಕಾವ್ಯ ಕನ್ನಿಕೆಯು ಮೂಡಿಹಳೇ ಕಣಕಣದಲೂ ಒಲುಮೆಯಂದದಿ ಮೈಮರೆಯುತ ಸೆಳೆವೆಯಾ ನೀನು ಆಗಸದೆತ್ತರಕೂ ಅಂಬುಧಿಯ ತೆರೆಗಳು ಚುಮ್ಮಿ ಮುಗಿಲನು ಚುಂಬಿಸುತಿವೆಯೇ ಅರಸನಾದರೂ ಅರಿಷಡ್ವರ್ಗಗಳು ಹೃದಯದಿ...

ಪ್ರೊ. ವಿಜಯಲಕ್ಷ್ಮಿ ಪುಟ್ಟಿಯವರ ಕವನಗಳು

ಕವನ ಬರೆಯಬೇಕೆಂದಾಗ ಗೆಳೆಯರೇ ಇದೆ ಮೊದಲಲ್ಲ ನಾನು ಕವನ ಬರೆಯಬೇಕೆಂದಿರುವುದು ನಾನು ಕವನ ಬರೆಯುವದು ಸರಳ ಸಹಜ ನಾನು ಬಿದ್ದು ಅತ್ತಾಗ ಅಮ್ಮ ಅಪ್ಪಿ ಸಂತೈಸಿದಾಗ ಒಳಗೊಳಗಿನ ದುಖ ಕಳಚಿ ನಗೆಯ ಅಲೆಯು ಹೊಮ್ಮಿದಾಗ ಕವನ ಬರೆಯಬೇಕೆಂದಿದ್ದೆ. ಹುಟ್ಟು ಹಬ್ಬಕೆ ಹೊಸಬಟ್ಟೆ ಕೊಟ್ಟು ಅಪ್ಪ ಹಣೆಗೆ ಮುತ್ತಿಟ್ಟಾಗ ಅಣ್ಣ ತಮ್ಮ ಕೀಟಲೆ ಮಾಡಿ ಮತ್ತೆ ಸಮಾಧಾನ ಹೇಳಿದಾಗ ಶಾಲೆಯಲಿ ಸನ್ಮಾನ ಹೆಚ್ಚು ಅಂಕ ಗುಣಗಾನ ಎಲ್ಲೆಡೆ ಪ್ರಶ೦ಸೆ ಪಡೆದಾಗ ಕವನ ಬರೆಯ ಬೇಕೆಂದಿದ್ದೆ ಬಾಲ್ಯ ಯೌವನಕೆ ತಿರುಗಿ ಹಸಿ ಕನಸುಗಳ ಭೇಟೆಯಾಡಿ ಮೊಟ್ಟ ಮೊದಲು ಪ್ರೇಮ ಪತ್ರ ಸಿಕ್ಕಾಗ ರೆಕ್ಕೆ...

ಕವನ: ಮಗನಿಗೊಂದು ಪತ್ರ (WhatsApp)

ಯಪ್ಪಾ (ಮಗನೇ, ಹಡದಪ್ಪ, ನನ್ನಪ್ಪ.....ಅಂದರೂ ಒಂದೇ !) ಧಿಢೀರನೇ ನೀ ನಿನ್ನ ಕಾಲೇಜಿನ ಊರಿಗೆ ಹೊಂಟ ನಿಂತಾಗ ನನ್ನ ಧಾವಂತ ಹೆಚ್ಚಾತು. ಬೇಗ ಎಬ್ಸು ಅಂತ ನಿಮ್ಮಪ್ಪನಿಗೆ ಮೆಸೇಜು ಮಾಡಿದ್ಯಂತ ದಿನಾ ೫ ಕ್ಕ ಏಳುವ ಅವರು ಇಂದ್ಯಾಕೋ ಸ್ವಲ್ಪ ಹುಷಾರಿ ಇಲ್ದಂಗನ್ನಿಸಿ ತಡವಾಗಿ ಎದ್ದರು. ನಾ ಹೇಳಿದಾಗ ಹಳಹಳಿಸಿದರು ಬಿಡು. ಅಂತೂ ನೀ ಲಗೂನ ಎದ್ದು ಲಗುಬಗೆಯಿಂದ ತಯಾರಾಗಿ ಅರ್ಧ ಮರ್ಧ ನಾಷ್ಟಾ ಮಾಡಿ, ಬೆನ್ನಿಗಿ ಬ್ಯಾಗ್ ಹಾಕೊಂಡು 'ಯವ್ವಾ ನಾ...

ಕವನ: ನನ್ನೂರು

ಚಿಕ್ಕತನದಲಿ ಇಲಿಯನ್ನೇ ಹೋಲುತ್ತದೆ ನನ್ನೂರು ಆದರೆ, ವಿಶಾಲ ಬಾನುವಿನ ಕೆಳಗೆ ತೆಪ್ಪಗೆ ಮಲಗಿದ್ದರೂ - ಅಲ್ಲಿ ದಿಲ್ಲಿಯ ಚಿತ್ರಗಳು ಮಿಸುಗಾಡುತ್ತವೆ ಹಾಳು ಮಣ್ಣೇ ಮನೆಗಳ ಮೈ ಆದರೂ ಮನ ಮನಗಳಲ್ಲಿ - ಜೇನ ಸಿಹಿ ಜಿನುಗುತ್ತದೆ. ಪಾಳು ಬಿದ್ದ ಗುಡಿ ಮೈ ಕಳೆದುಕೊಂಡ ಮಠ ನನ್ನೂರ ಆಸ್ತಿ ಬೆಳಿಗ್ಗೆ ಅವ್ವ ಮಡಿ ಪಡಕಿ ಉಟ್ಟು ಹಣೆಗೆ ವಿಭೂತಿ ಇಟ್ಟು; ಆ ದಿನ್ನೇ ಕಲ್ಲ ಬಸವನ ನೆತ್ತಿಗೆ ಎಣ್ಣೆ ಎಳೆ ಇಳಿಯುವಲ್ಲಿ ಸಿದ್ಧಾರೂಢನ ಸುಪ್ರಭಾತಗಳು ಏಳುತ್ತವೆ. ಚಿಕ್ಕದಿದ್ದರೂ...

ದಸರಾ ಕವನಗಳು ( ಸುಮಾ ಗಾಜರೆ, ರತ್ನಾ ಅಂಗಡಿ )

"ನವ ಆರಾಧನೆ " ಹಿಂದೂ ಧರ್ಮದ ಸುಂದರ ಸಂಸ್ಕೃತಿ ನಾಡಿನ ಹೆಮ್ಮೆಯ ನವರಾತ್ರಿ ಮೈಸೂರು ದಸರೆಯ ಉನ್ನತ ಕೀರುತಿ ತಾಯಿ ಚಾಮುಂಡೇಶ್ವರಿಗೆ ಹೊನ್ನಿನಾರುತಿll ವಿಜಯದಶಮಿಯ ಭವ್ಯ ದಸರ ನಾಡಿನೆಲ್ಲೆಡೆ ಸಡಗರ ಸುಂದರ ನವ ದಿನವೂ ಸಂತಸ ಸಂಭ್ರಮ ವಿಶಿಷ್ಟ ವೈಭವ ಅನನ್ಯ ಅನುಪಮll ದುರ್ಗಾ ಶೈಲಪುತ್ರಿ ಬ್ರಹ್ಮಚಾರಿಣಿ ಚಂದ್ರಕಾಂತ ಕೂಷ್ಮಾಂಡ ಕಾತ್ಯಾಯಿನಿ ಸ್ಕಂದಮಾತಾ ಮಹಾಗೌರಿ ಸಿದ್ಧಿದಾತ್ರಿ ನವ ರೂಪಗಳ ತಾಯಿ ಕಾಳರಾತ್ರಿ ll ತಾಮಸಿಕ ಅಸುರ ಗುಣಗಳ ದಮನ ಅಭಯ ಹಸ್ತ ನೀಡುವ ಮಾತೆಗೆ...

ಶರಣಪ್ಪ ಮೇಟ್ರಿ ಕವನಗಳು

ಏನು ಕಣ್ಣು ಏನು ಕಣ್ಣು ಏನು ಕಣ್ಣು ಏನು ಕಣ್ಣು ನಿನ್ನವು ಚಿನ್ನದೊಡವೆಯಲ್ಲಿ ಸೇರಿ ಮಿನುಗುತಿರುವ ರನ್ನವು ! ಮನವ ಸೆಳೆಯುವಂಥ ಹಣ್ಣು ಕಪ್ಪುನೇರಳೆನ್ನಲೆ ಮಾಗಿದಂಥ ಕರ್ರಗಿರುವ ಕವಳಿಹಣ್ಣು ಕೇಳೆಲೆ ! ವದನಕೊಳದೊಳೀಜುವಂಥ ಮೀನು ಕಣ್ಣು ನಿನ್ನವು ಗಗನಮೊಗದಿ ಮಿನುಗುವಂಥ ಚುಕ್ಕಿ ಕಣ್ಣು ಚೆಂದವು ! ಕಮಲಮುಖದಿ ಕೂತುಕೊಂಡು ಜೇನನುಂಬ ತುಂಬಿಯು ಶಿರದ ಗರ್ಭಗುಡಿಯಲಿದ್ದು ಬೆಳಗುತಿರುವ ಹಣತೆಯು ! ಮಾರ ಹುಬ್ಬವಿಲ್ಲ ಹಿಡಿದು ಬಿಟ್ಟ ಪುಷ್ಪಬಾಣವು ಕಾಮ ಬಂದು ಕಾಯದಲ್ಲಿ ನೆಲೆಸಿದಂಥ ತಾಣವು ! ಏನು ಕಣ್ಣು ಏನು ಕಣ್ಣು ಏನು ಕಣ್ಣು ತೋರೆಲೆ ಕಣ್ಣಿನಲ್ಲಿ ಕಣ್ಣ...

ಪುಟಾಣಿ ಪ್ರಾಸಗಳು

೧ ಬೆಕ್ಕಿನ ಮರಿ ಬೆಕ್ಕಿನ ಮರಿ ಮಿಯಾವ್ ಮಿಯಾವ್ ಮಿಯಾವ್ ಕುರಿ ಹಾಲು ಕುಡ್ದು ಬಿಟ್ರೆ ಗುರ್ರ್ ಗುರ್ರ್ ಗುರ್ರ್... !! ೨ ಮಳಿ ಬಂತು ಮಳಿ ರಪ್ ರಪ್ ಮಳಿ ಹೊಲ್ದಾಗೆಲ್ಲಾ ಬೆಳಿ ತಿನ್ನೊಕಾಯ್ತು ಬ್ಯಾಳಿ..!! ೩ ಗೋಡೆ ಮೇಲೆ ಗಡಿಯಾರ ಟಿಕ್ ಟಿಕ್ ಗಡಿಯಾರ ರಜೆ ಇಲ್ಲ ರವಿವಾರ ಆಗಂಗಿಲ್ಲ ಬ್ಯಾಸರ..!! ೪ ನಮ್ಮೂರ ರಸ್ತೆ ಏನು ನಿನ್ನ ಅವಸ್ಥೆ ಮಳೆ ಬಂದರೆ ಗಟಾರು ಕುಣಿಯುತ್ತೆ ಮೋಟಾರು..!! ೫ ರೆಲಾ ರೆಲಾ ರೈಲು ಚುಕುಬುಕು ರೈಲು ಮನೆ ಬಂತು ಕೇಳು ಸಾಕು ಇಲ್ಲೇ ನಿಲ್ಲು..!! ೬ ರಾಯರ ನೆಂಟ ಊರಿನ...
- Advertisement -

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -
close
error: Content is protected !!
Join WhatsApp Group