ಕವನ
ಪಹಲ್ಗಾಮ್ ಪ್ರವಾಸ
ಪಹಲ್ಗಾಮ್
ಹಸಿರು ಕಾನನದೊಳಗೆ
ನುಸುಳಿದ ಸಿಪಾಯಿ
ಬಂದೂಕುದಾರಿಗಳು
ಸಿಡಿಸಿದ ಗುಂಡಿಗೆ
ಎದೆ ಕೊಟ್ಟು ನಿಂತ ಪ್ರವಾಸಿಗರು
ಹಸಿರು ಹುಲ್ಲಿನ ಮೇಲೆ
ಬರೆದ ರಕ್ತದ ಕಲೆ
ಆರಿ ಹೋದವು ಹಗಲು ದೀಪ
ಹೆಗಲಿಗೆ ಹೆಗಲು ಆಗಲಿಲ್ಲ ಮಗ
ಹಸೆ ಮನೆಯ ಹುಡುಗಿಗೆ
ಹೆಸರಾಗಲಿಲ್ಲ ಗಂಡ
ಕಳೆದುಕೊಂಡ ತಾಳಿ
ಕಸಿದುಕೊಂಡ ಕುಂಕುಮ
ಮುಕ್ಕಿ ನಿಂತವು ಸುತ್ತುವರೆದು
ಹೌಹಾರಿದ ಕುದುರೆ ಸವಾರ
ಕಿತ್ತು ಕೊಂಡನು ಕೋವಿ
ಚೆಲ್ಲಿತು ರಕ್ತ
ಕೆಂಪಾದವು ಹಸುರೆಲೆ
ಕೂಗಿದರೂ ಧ್ವನಿ ಕೇಳದ ಜನ
ಮೂಕ ವಿಸ್ಮಿತ ಆಕ್ರೋಶ
ನಲುಗಿದ ಎದೆಗೆ
ಗುಡುಗಿದ ಸಿಡಿ ಮದ್ದು
ಹಿಂದೂ...
ಕವನ
ನಮ್ಮ ದೇಶವ ಕಟ್ಟುವಾಬೇಡ ನಮಗೆ
ಜಾತಿ ಧರ್ಮ
ಭವ್ಯ ಭಾರತ
ಕಟ್ಟುವ
ಸತ್ಯ ಸಮತೆ
ಶಾಂತಿ ಪ್ರೀತಿ
ಬುದ್ಧ ಬಸವರ
ನೆನೆಯುವಪಂಥ ಬೇಡ
ಪೂಜೆ ಬೇಡ
ಗಟ್ಟಿ ರಾಷ್ಟ್ರವ
ಕಟ್ಟುವಾ
ಅಚ್ಚ ಹಸುರಿನ
ವಿಂಧ್ಯ ಪರ್ವತ
ಹಿಮಾಲಯ
ಮೆರೆಯುವಕಾಡು ಕಣಿವೆ
ಹಳ್ಳ ಕೊಳ್ಳ
ನದಿಯ ನೀರು
ಮತ್ತೆ ಶುದ್ಧಗೊಳಿಸುವ
ಉಚ್ಚ ನೀಚ
ಭೇದ ಬೇಡ
ನಾವು ಭಾರತಿಯರು
ನಮ್ಮ ದೇಶವ ಕಟ್ಟುವಾ
________________________ಡಾ ಶಶಿಕಾಂತ ಪಟ್ಟಣ ಪುಣೆ
ಕವನ
ಕವನ : ಪೆಹಲ್ಗಾಮ್ ನಿಂದ ಕುದಿವ ರಕ್ತದವರೆಗೆ
ಪೆಹಲ್ಗಾಮ್ ನಿಂದ ಕುದಿವ ರಕ್ತದವರೆಗೆ
ಒಂದೊಮ್ಮೆ ನಾನು ಕಾಶ್ಮೀರಕ್ಕೆ ಹೋಗಿದ್ದರೆ
ಬಂದೂಕು ಹಿಡಿದು ಬಂದ ಸೈತಾನರು ನನ್ನ ಧರ್ಮ ಕೇಳಿದರೆ ಅವರಿಗೆ ಏನೆಂದು ಹೇಳಲಿ.?ಧರ್ಮದ ಹೆಸರಲ್ಲೇ ನಮ್ಮನ್ನು ಒಡೆದು ಆಳಲು ಹೊರಟವರು
ಬದುಕುಳಿದು ಬಂದವನ ನಿಲ್ಲಿಸಿ
ಅಲ್ಲಿನ ಅನುಭವ ಕೇಳಿದರೆ ಏನೆಂದು ಹೇಳಲಿ?ನನ್ನದೇ ಸೋದರಿಯೊಬ್ಬಳು ನೆಲಕ್ಕುರುಳಿದ
ಗಂಡನ ಉಸಿರುನಿಂತ ದೇಹದ ಎದುರು
ತನ್ನ ಹೃದಯ ಒಡೆದು ಬಿಕ್ಕಿ ರೋಧಿಸುವಾಗ
ದೇಶದ ಮುಕುಟದಲ್ಲಿ ಹಾರಿದ ಗುಂಡಿನ...
ಕವನ
ಸಾಧಿಸಿದ್ದೇನು ?
ಮರೆತು ಬಿಟ್ಟೇವಾ ಮಾನವೀಯತೆ
ಎತ್ತ ನೋಡಿದರೂ ರಕ್ತ ಕಣಗಳು
ಬಿತ್ತಲಾರೆವಾ ಕರುಣೆ ವಾತ್ಸಲ್ಯ
ಮನುಜನೆಂಬುದಕೆ ಧಿಕ್ಕಾರದ್ವೇಷದ ಕಿಚ್ಚು ಹಚ್ಚಿ
ಮೋಹದ ಮದ ಏರಿ
ದಾಹದ ನರ್ತನಕೆ
ಕಿತ್ತು ತಿಂದಿರಪ್ರೇಮದ ಶಿಖರಕೆ
ಸೂತಕದ ಛಾಯೆ ಮೂಡಿಸಿ
ಧರ್ಮದ ಸೋಗಲಿ
ಆತ್ಮದ ಮರ್ಮ ತಿಳಿಯಲಿಲ್ಲವೇಎಲ್ಲಿಹುದು ಹಿಂಸೆಯ ಧರ್ಮ
ಗಾಂಪರರೊಡೆಯನ ನೀತಿಯಂತೆ
ಭೀತಿ ಹುಟ್ಟಿಸುವಿರೇಕೆ
ನೀತಿ ನಿಯಮ ಗಾಳಿಗೆ ತೂರಿಅದೆಷ್ಟೊ ಕನಸುಗಳು ಕಮರಿ ಹೋಗಿವೆ
ಮನಸುಗಳ ಛಿದ್ರ ಮಾಡಿವೆ
ಮುನಿಸುಗಳ ಬಿರುಕು ಬಿಟ್ಟಿದೆ
ಸಾಧಿಸಿದ್ದಾದರೂ ಏನು ?ರೇಷ್ಮಾ ಕಂದಕೂರ,...
ಕವನ
ಸೈತಾನನ ಸಂತತಿ!!
ಬಟ್ಟೆಯ ಬಿಚ್ಚಿಸಿ ನೋಡಿದರೆ
ಧರ್ಮವು ಕಾಣುವುದೇ...!ನಡೆ ನುಡಿ ಸಹೃದಯಗಳಲಿ
ಅಡಗಿದೆ ಮಾನವ ಧರ್ಮ...ಧರ್ಮದ ಅಮಲು ನೆತ್ತಿಗೇರಿಸಿ
ನರ್ತನ ಮಾಡುವ ಅಧಮರೇಕ್ರೂರ ಮನದ ಕೊಲೆಗಡುಕ
ಸೈತಾನನ ಸಂತತಿಯವರೇ...ಅರ್ಥವಾಗದು ದುರುಳ ಜನಕೆ
ಕರುಳ ಸಂಬಂಧಗಳ ನೋವುಕಲಿಸುವುದು ಕಾಲವೇ ನಿಮಗೆ
ಕೊಳಕು ಮನದ ಕ್ರಿಮಿಗಳೇ...ಪಹಲ್ಗಮ್ ನಲ್ಲಿ ನೆತ್ತರು ಸುರಿಸಿ
ಬಲಿದಾನವಾದ ಸಹೋದರರೇಭಗವಂತ ಚಿರಶಾಂತಿ ನೀಡಲಿ
ನಿಮಗಿದೋ ಸಾವಿರ ನಮನ...ಎ.ಎಸ್.ಗಡದವರ(ಅಡವೀಶ)
ಹಿ.ಪ್ರಾ.ಕ.ಹೆ.ಮ.ಆಶ್ರಮ ಶಾಲೆ
ದೇಶನೂರ - 591147
ತಾ:ಬೈಲಹೊಂಗಲ ಜಿ:ಬೆಳಗಾವಿ.
ಕವನ
ಒಡನಾಟ
ಈಗೀಗ ಏಕೋ ಬೇಡವಾಗಿದೆ
ಒಡನಾಟದ ಸವಿ
ಕಾಲ ಒಂದಿತ್ತು
ನನ್ನವರೆಂಬ ಭಾವ ಭಂಗಿ
ಮರೆಯಾಯಿತು ನಡೆ ನುಡಿಯ ಬದಲಾವಣೆಗೆ.
ಗೂಡಿನ ಹಕ್ಕಿಯ ಗರಿ ಬಲಿತಿದೆ
ಹೊರಟಿದೆ ದಾಹ ತಣಿಸಲು
ಮೋಹದ ಬಲೆ ಕಟ್ಟಿ ಕೊಂಡು
ಜಗ ಜಟ್ಟಿಯಂತೆ ಅಖಾಡಕ್ಕಿಳಿದು
ತನ್ನತನವ ಸಾಬೀತು ಪಡಿಸಲು.
ಅನುಬಂಧದ ಗುಟುಕು ಹೀರಿದ್ದು
ಸಂಬಂಧದ ಸವಿ ಉಂಡಿದ್ದು
ಜೀವ ರಕ್ಷಕರಂತೆ ನಿಂತಿದ್ದು
ಎಲ್ಲವೂ ಮುಸುಕಿನ ಗುಡ್ಡಾಟದಿ
ಒದ್ದಾಡಿ ಒದ್ದಾಡಿ ನಲುಗಿದೆ.
ಬಂಧ ಅನುರಾಗದ ಮುಸುಕಿನಲಿ
ಬೆಳೆಸಿದ್ದು ಹೌದಾದರೂ
ಕರ್ತವ್ಯ ನಿರ್ವಹಣೆ ಎಂದು
ಕೈ ಚೆಲ್ಲಿ ಕುಳಿತು
ಮುಂದೊಂದು...
ಕವನ
ಕವನ : ಲಿಂಗಾಯತ ಸಾಫ್ಟವೇರ್ ಕರಪ್ಟಾಗಿದೆ
ಲಿಂಗಾಯತ ಸಾಫ್ಟ್‌ವೇರ್ ಕರಪ್ಟಾಗಿದೆ...
ಕ್ಷಮಿಸಿ
ವಚನ ಶಾಸ್ತ್ರ ಲಿಂಗಾಯತ
ಸಾಫ್ಟ್‌ವೇರುಗಳೆಲ್ಲಾ ಕರಪ್ಟಾಗಿವೆಮೊನ್ನೆಮೊನ್ನೆ ಹಾಕಿಸಿದ
ಶರಣರ ಮದರಬೋಡಿಗೆ
ಮೆಮೊರಿ ಆಪ್ಷನ್ನೇ
ತೆಗೆದುಹಾಕಲಾಗಿದೆಯಂತೆಈಗ ಅನುಭವ
ಸಾಫ್ಟ್‌ವೇರೂ
ಬರುವುದೇ ಹೀಗಂತೆ!ಬಸವ ಧರ್ಮ
ಹೊಸ ಲ್ಯಾಪ್‌ಟಾಪಿಗೆ
ಬ್ಯಾಟರಿ ಡ್ರೈವೇ ಇಲ್ಲಬಸವ ಭಕ್ತರ
ಮೇನ್‌ಸ್ವಿಚ್ಚಿನೊಂದಿಗೆ
ಕನೆಕ್ಷನ್ನೂ ಇಲ್ಲಅಲ್ಲದೆ
ಯಾವ ನೆನಪೂ ಇಲ್ಲ
ಮೆಮೋರಿ ಲಾಸಾಗಿದೆ,
ಎಲ್ಲವೂ ಮರೆತಿದೆ...ಅರಿವಳಿಕೆ ತಿನ್ನುತ್ತ
ಆಪರೇಷನ್ ಟೇಬಲ್ಲಿನ ಮೇಲೆ
ಒಂಬತ್ತು ಶತಮಾನ
ಕಳೆದದ್ದೂ ನೆನಪೇ ಇಲ್ಲಇದೀಗ
ವಚನ ದರ್ಶನ ವೈರಸ್
ಒಳಗೆ ನುಸುಳಿದೆ.
ಸಿಸ್ಟಮ್ ಕೆಟ್ಟು ಹೋಗಿದೆಮಠ ಸ್ವಾಮಿಗಳ
ಫೈಲುಗಳಲ್ಲೂ,
ಅಗ್ರಹಾರದ ಮುದ್ರೆ ಬಿದ್ದಿದೆ
ಫೋಲ್ಡರುಗಳಲ್ಲೂ
ಶರಣರು ವಿಂಡೋ
ಬಂದಾಗಿದೆ..ಇನ್ನು
ವೈರಸ್ ಗಾರ್ಡ್‌ಗಳಾಕಿ
ಉಪಯೋಗವಿಲ್ಲ..ಮೆಮೋರಿ ಮರೆತ
ನಿವೃತ್ತಿ ಅಧಿಕಾರಿಗಳ
ಮೊದಲು...
ಕವನ
ಬೆಲೆಯಿಲ್ಲ ಭಾವನೆಗೆ
ಭಾವನೆಗಳಿಗೆ ಬೆಲೆ ಇಲ್ಲ ಮನುಜ
ಮೋಹದ ಬಲೆ ಸಹಜ
ಕೊಟ್ಟು ತೆಗೆದು ಕೊಳ್ಳುವ ಇರಾದೆಯಲಿ
ಒಗ್ಗಟ್ಟು ಬರೀ ನೆಪದ ತೆರದಲಿ.ನಾನೆಂಬ ಗರಿ ಮೂಡಿ
ನೀನೆಂಬ ಭೇದ ಹರಡಿ
ಬೆನ್ನಿಗೆ ಚೂರಿ ಹಾಕುವ ಹುನ್ನಾರ
ಚೆನ್ನಿಗನ ಮಾತಂತೆ ಬಿಡಾರ.ಹೊದಿಕೆಗೆ ಹೂಡಿಕೆ ಮಾಡಿ
ಒಳ ಮರ್ಮ ತಿಳಿಯದೆ ತಡಕಾಡಿ
ಗಾಳಕ್ಕೆ ಸಿಕ್ಕ ಮೀನು
ಕಲಿಗಾಲದ ಬಳುವಳಿ ನೀನು.ಸಂಪತ್ತಿನ ನಶೆಗೆ
ವಿಪತ್ತು ಆಹ್ವಾನಿಸಿದ ಬಗೆಗೆ
ವಿಷಪ್ರಾಶನವಾದ ಆಹಾರ
ಮೋಸದ ಜಾಲಕೆ ಆಕರ.ಡಂಭಾಚಾರದ ಬದುಕಿಗೆ
ಮಾನವೀಯತೆ ತೆರೆ...
ಕವನ
ಮೋಹಕ ಚೆಲುವೆ
ಬಾಂದಳದಿ ಹೊಳೆಯುವ ತಿಂಗಳ ಬೆಳಕಿನ
ಶ್ವೇತವರ್ಣೆ ನನ್ನ ಚೆಲುವೆ
ಬೆಳಗುವ ನಿನ್ನ ಕಣ್ಣುಗಳಲಿ
ಈ ಚೆಲುವನ ರೂಪವೇ ಅಡಗಿಕೊಂಡಿರುವುದ
ನಾ ಬಲ್ಲೆ
ನಾಚಿ ನೀರಾದ ಮೊಗ್ಗಿನ ಮುಡಿಯಂತಿರುವ
ನಿನ್ನ ಚೆಂದುಟಿ
ರುಧಿರ ವರ‍್ಣದ ಚೆಂಗುಲಾಬಿಯಲ್ಲವೇ ಚೆಲುವೆ ?ನಾಟ್ಯ ಮಯೂರಿಯ ಕುಣಿತ
ನಾಚಿಸುವ ನಿನ್ನ ಹೆಜ್ಜೆಯ ನಾದಗಳು
ಎದೆ ಝಲ್ಲೆನಿಸಿ ತುಂತುರು ಮಳೆಯ
ಸಿಂಚನದಂತೆ ನಾಟ್ಯವಾಡಿ
ಮನವ ತಣಿಸುತಿವೆ
ಆಗಸದಿ ಹೊಳೆಯುವ
ಚೆಲುವಿನ ಮೋಹಕ ತಾರೆ
ನೀನಲ್ಲದೆ ಮತ್ತಾರು ಹೇಳು ಚೆಲುವೆ ?ನನ್ನ ಮನದ...
ಕವನ
ಕೆಂಪು ಸೂರ್ಯಕಪ್ಪು ಮಣ್ಣಿನ
ದಲಿತ ಕೇರಿಯ
ಮಹಾರಾಷ್ಟ್ರದ
ಕೆಂಪು ಸೂರ್ಯ.
ಬುದ್ಧ ಬಸವ ಮಾರ್ಕ್ಸ್
ಪುಲೆ ಶಾಹು ಚಿಂತನ
ಬರಿಗಾಲಿನ ಪಯಣ
ಕಿತ್ತು ತಿನ್ನುವ ಬಡತನ
ಶೃದ್ಧೆ ಶ್ರಮದ ಗೆಳೆತನ
ಕೊಲಂಬಿಯಾ ಶಿಕ್ಷಣ
ನೂರು ಪದವಿಯ ಜಾಣ
ಸತ್ಯ ಸಮತೆಯ ಬಾಣ
ಹಗಲಿರುಳು ಕಠಿಣ ಕಾರ್ಯ
ಬರೆದಿಟ್ಟರು ಲಿಖಿತ ಘಟನಾ
ಭಾರತ ದೇಶದ ಮಾನ ಸಮ್ಮಾನ
ಡಾ ಅಂಬೇಡ್ಕರರ ದಿವ್ಯ ಜ್ಞಾನ
ನ್ಯಾಯಕ್ಕಾಗಿ ಘೋಷಣಾ
ಇಲ್ಲವಾಯಿತು ಶೋಷಣಾ
ಬನ್ನಿ ಭಾರತೀಯರೇ
ಉಳಿಸುವ ನಮ್ಮ ಸಂವಿಧಾನ.
ಕೆಂಪು ಸೂರ್ಯ ಮುಳಗಲಾರ
ಸಮಾನತೆಯ ಹರಿಕಾರ
ಬಾಬಾ ಸಾಹೇಬ ಅಮರ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



