ಕವನ

ಕವನ : ಯಾರವಳು ?

ಯಾರವಳು ? ಯಾರವಳು ಯಾರವಳು ಯಾರವಳು ಯಾರು‌ ? ಬಾಗಿಲಲಿ‌ ನಿಂದವಳು ಬಂದವಳು ಯಾರು ? ಹೊಸ್ತಿಲಲಿ ಸೇರಕ್ಕಿ ಚೆಲ್ಲಿದವಳಾರು ? ಮನೆಯಲ್ಲಿ‌ ನಗೆಬೆಳಕ ತುಂಬಿದವಳಾರು ? ಯಾರವಳು ಯಾರವಳು ಯಾರವಳು ಯಾರು‌ ? ರೂಪಲಾವಣ್ಯದಲಿ ವನಪುವಯ್ಯಾರದಲಿ ದೇವತಾಸ್ತ್ರೀಯಂತೆ ಬಳುಕಿದವಳಾರು ? ಯಾರವಳು ಯಾರವಳು ಯಾರವಳು ಯಾರು‌ ? ಮೃದುಮಧುರ ಮಾತಿನಲಿ ಮೂಲೋಕವನೆ ತೋರಿ ಮೂಕನಾಗಿಸಿ ಮನವ ತಣಿಸಿದವಳಾರು ? ಯಾರವಳು ಯಾರವಳು ಯಾರವಳು ಯಾರು‌ ? ನನ್ನೆದೆಯ ಚಪ್ಪರಕೆ ಲತೆಯಾಗಿ ಹಬ್ಬುತಲಿ ಚೆಲುವಾದ ಹೂವುಗಳ ನೀಡಿದವಳಾರು ? ಯಾರವಳು ಯಾರವಳು ಯಾರವಳು ಯಾರು‌ ? ಬೆಳ್ಳಿ ಬಟ್ಟಲು ಲೋಟ ತೂಗು ತೊಟ್ಟಿಲು ತಂದು ನನ್ನ ಮನೆಯನು ತುಂಬಿ ತುಳುಕಿದವಳಾರು...

ಹನಿಗವನಗಳು

ಹನಿಗವನಗಳು1) ಸುಳ್ಳುಗಾರರುಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು!2) ಶೀಲಾನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು3) ಟಿವಿ ಹಾವಳಿಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು.4) ವಾಸ್ತವಕಟ್ಟುವವು ನಾಡನ್ನು ಎಂದವರು ಕಟ್ಟಿಕೊಂಡರು ಸ್ವಂತಕ್ಕೆ ಗೂಡನ್ನು ---- ಗೊರೂರು ಅನಂತರಾಜು ಹಾಸನ 9449462879

ಕವನ : ಏನೆಂದು ಹೇಳಲಿ…

ಏನೆಂದು ಹೇಳಲಿ.... ಬಹಳಷ್ಟು ಸಲ ಎದುರಾದವರೆಲ್ಲ ಕೇಳುತ್ತಾರೆ ಯಾಕೆ ಬರೆಯುತ್ತಿಲ್ಲ ಈಗೀಗಅವರ ಪ್ರಶ್ನೆಗಳಿಗೆಲ್ಲ ಉತರಿಸಲು ಉತ್ತರಗಳಿಲ್ಲ ನನ್ನಲ್ಲಿಬರೆಯಲು ಭಾವನೆಗಳು ತುಂಬಿ ಬರಬೇಕು ಖಾಲಿ ಹಾಳೆಯ ಜೊತೆಗೆ ಪೆನ್ನು ಪೇಪರುಗಳಿರಬೇಕು.ಕೇಳಿದವರಿಗೆಲ್ಲ ಹೇಳುವದೇನು?? ನಿರ್ಭಾವುಕನಾಗುತ್ತಿದ್ದೇನೆ ನಾನು ಬರೆಯಲು ಪ್ರೇರೇಪಿಸಿದ್ದು ಹತ್ತು ಹಲವು ಸಂಗತಿಗಳಿರಬಹುದು ಬರೆಯದೆಯೆ ಉಳಿಯಲು ನೂರಾರು ಕಾರಣಗಳು....ವಿಫಲವಾದ ಪ್ರೇಮ, ಆದ ಅವಮಾನ ಹತಾಶೆಗಳನ್ನೆಲ್ಲ ಚುಕ್ಕು ತಟ್ಟಿ ಮಲಗಿಸುವ ಜೋಗುಳವದು...

ಕವನ : ಅವರವರ ದೇವ್ರು !

ಅವರವರ ದೇವ್ರು !ಅವರವರ ದೇವ್ರು ನನ್ನೊಳಗ ಮುಕ್ಕೋಟಿ ಅವನೊಳಗ ಅಲ್ಲಾ ಇವನೊಳಗ ಏಸು ಬುದ್ಧ , ಅವರವರ ದೇವ್ರು ! ಶಿವ ಗುಡಿಯೊಳಗ ಅಲ್ಲಾ ಮಸೀದಿಯೊಳಗ‌ ಬುದ್ಧ ಜೈನ ಬಸದಿಯೊಳಗ ಅವರವರ ಮಂದಿ ಮಾತ್ರ ಬೀದಿ ಬದಿಯೊಳಗ. ಇನ್ನು ಹುಲಗಿ ಉಚ್ಚಂಗಿ ಮನೆ ಮಕ್ಕಳು ವರ್ಷಕ್ಕೊಮ್ಮೆ ಸೀರಿ ಜೊತೆಗೊಂದು ಕುರಿ ಉಣ್ಣೋದು ಎರಡು ಹೊತ್ತು ಮುಟ್ಟಿಸಿನಿ ಕೊನೆಗೂ ಕುರಿ ಕೋಳಿ ಕತ್ತು . ಅವರವರ ದೇವ್ರು ಬಕ್ರೀದ್ ರಂಜಾನ್ ದರ್ಗಾದಾಗ ಅಲ್ಲಿ ಅಡ್ಡ ಬಿದ್ದು , ಮನ್ಯಾಗ ಎತ್ತೋ ಕುರಿನೋ...

ಡಾ.ಶಶಿಕಾಂತ ಪಟ್ಟಣ ಕವನಗಳು

ಬೇಡ ನಮಗೆಬೇಡ ನಮಗೆ ಗುರು ವಿರಕ್ತರ ಗುದ್ದಾಟ ಸಂಶೋಧಕರ ಹಗ್ಗ ಜಗ್ಗಾಟ ಸ್ವಾಮಿಗಳ ಗದ್ದೆ ಕೆಸರಾಟ ಜಾತಿವಾದಿಗಳ ಹುಚ್ಚಾಟ ವಿಧಾನಸಭೆಗೆ ಮಂತ್ರ ಮಾಟ. ಶಾಸಕರ ಕಾಮಕೇಳಿಯ ಆಟ ಹೊರಗೆ ಚಳವಳಿ ಹೋರಾಟ ಮತಗಳು ಆಗಲೆ ಮಾರಾಟ. ಬೀದಿಯಲಿ ಬೋಧೆ ಪರಿಪಾಠಸಾಕು ಅಕ್ಕ ಮಾತೆ ಶರಣರ ಸಂಗ ವಚನಗಳಲಿ ತಿದ್ದುವರು ಮನಬಂದ ಲಿಂಗ ನೋಡಿ ಕೈಮುಗಿಯುವ ನಾವುಗಳು ಮಂಗ ಧರ್ಮವು ಬಡವರ ಅಫಿಮಿನ ಗುಂಗ. ಮಕ್ಕಳಿಗಿಲ್ಲ ಹಾಕಲು ಹೊಸದೊಂದು ಲಂಗ ಮಠಗಳಲಿ ನಡೆದಿದೆ ಮಹಿಳೆಯ...

ಕವನ : ಇಂಥವರಿಗೆ ಏನು ಹೇಳಲಿ ?

ಇಂಥವರಿಗೆ ಏನು ಹೇಳಲಿ ?ಎಲ್ಲಾ ದಿನಗಳು ನಿಮ್ಮವೇ ಇವತ್ತೇನು ಬಿಡು ವಿಶೇಷ ಮಹಿಳಾ ದಿನ ಅಂತ ಮಾಡೋಕಿಲ್ಲ ಕೆಲಸ....ಮೆಸೇಜ್ ಮಾಡಿದ್ರ, ವಿಶ್ ಹೇಳಿದ್ರ ಅಷ್ಟ ಏನ ಪ್ರೀತಿ? ದಿನಾನು ಇರ್ತತಿ ಇದ ರೀತಿ...!!ವಿಶ್ ಅಂತ,ಗಿಫ್ಟ್ ಅಂತ ಮಾಡಕ್ಕೆ ಬೇರೆ ಕೆಲಸ ಇಲ್ಲ ಯಾರು ಹೇಳಿದ್ದೋ ಈ ದಿನ ಅಂತವರಿಗೆ ಬುದ್ದಿ ಇಲ್ಲ ವಟಗುಡುವ, ಗುರ್ರೆನುವ ಗಂಡನ ಪರಿ ಮರೆತೋಯ್ತು ಸೆಲೆಬ್ರೇಷನ್ ಎನ್ನುವ ಗುರಿ...ಎದ್ದು ಎಲ್ಲ ಕೆಲಸ ಮುಗಿಸಿ ಊಟದ ಡಬ್ಬಿ ಬ್ಯಾಗಲ್ಲಿ ಹಾಕಿ ಓಡುವ...

ಕವನ : ಅಮ್ಮ

ಅಮ್ಮ ಅಮ್ಮ ನೀನು ಹೆತ್ತು ಹೊತ್ತ ಕಂದಮ್ಮ ನಾನು ಇಂದೇಕೊ ನಿನ್ನ ನೆನಪು ಕಾಡುತ್ತಿದೆ ನೀನು ಲಂಗ ತೊಡಿಸಿ ಹೆರಳು ಹಾಕಿ ಮುಖಕ್ಕೆ ಪೌಡರ್ ಹಚ್ಚಿ ಕಣ್ಣಿಗೆ ಕಾಡಿಗೆ ತೀಡಿ ಹಣೆಗೆ ಮುತ್ತಿಕ್ಕಿದ ನೀನು ಒಮ್ಮೆಲೆ ಹೇಳದೆ ಕೇಳದೆ ಬಾರದ ಊರಿಗೆ ಹೋದೆ ಅವ್ವಾ ಬಿಕ್ಕಿ ಬಿಕ್ಕಿ ಅತ್ತೆ ನೀನಿಲ್ಲದ ಬದುಕು ಕಷ್ಟ ದುಃಖಗಳ ಜೀವನ ಇಂದು ಮಹಿಳೆಯರ ದಿನ ನಿನ್ನ ಪ್ರೀತಿ ಮಮತೆ ನಾನು ನಿನ್ನ ಮಗಳು ಎಂಬ ಹೆಮ್ಮೆ ಮಾತ್ರ ನನ್ನದು _________________________ ದೀಪಾ ಪೂಜಾರಿ ಕುಶಾಲನಗರ

ಕವನ : ಸಾರಿ

ಸಾರಿ ------------- ನಾರಿ ಮಹಿಳೆ ನಿನ್ನ ಅಡವಿಗೆ ಅಟ್ಟಿದ ದೇವಪುರುಷನ ಪರವಾಗಿ ಸಾರಿ ಅಂದು ಪಗಡಿಯಾಟದಲ್ಲಿ ಒತ್ತೆ ಇಟ್ಟು ಸೀರೆ ಸೆಳೆದವರ ಮಧ್ಯೆ ಸೊಲ್ಲೆತ್ತದೆ ಕುಳಿತವರ ಪರವಾಗಿ ಸಾರಿ. ಮೋಸದಿ ಮದುವೆಯಾಗಿ ಉಪಭೋಗಿಸಿ ತುಳಸಿಗೆ ನ್ಯಾಯ ಕೊಡದವರ ಪರವಾಗಿ ಸಾರಿ ಶೂರ್ಪನಖಿ ವಿರೂಪಗೊಳಿಸಿ ಮೊಲೆ ಮೂಗು ಕೊಯ್ದು ಅಟ್ಟಹಾಸ ಮೆರೆದವರ ಪರವಾಗಿ ಸಾರಿ ಶತಶತಮಾನದಿ ನಿನ್ನ ಕೊಂದವರ ಮಾನಹರಣ ಮಾಡಿ ಕೇಕೆ ಹಾಕಿದವರ ಸುಲಿಗೆ ಮಾಡಿ ಸೂಳೆ ಪಟ್ಟ ಕಟ್ಟಿದವರ ಪರವಾಗಿ ವೆರಿ ವೆರಿ ಸಾರಿ. ನಾರಿ ಗಟ್ಟಿ ಮನವ ಮಾಡು ಚೆಂಡಾಡು ನಿನ್ನ ಶೋಷಿದವರ ಹುಟ್ಟಡಗಿಸು ಮೆಟ್ಟಿ...

ಕವನ : ನಿನ್ನ ಹೆಸರು ಹೇಳಿ

ನಿನ್ನ ಹೆಸರು ಹೇಳಿಬಸವಣ್ಣ ನಿನ್ನ ಹೆಸರು ಹೇಳಿ ಮಠ ಪೀಠ ಆಶ್ರಮ ಕಟ್ಟಿಕೊಂಡರಯ್ಯ ಕಾವಿಗಳುಬಸವಣ್ಣ ನಿನ್ನ ಹೆಸರು ಹೇಳಿ ಶಾಸಕ ಮಂತ್ರಿಗಳಾಗಿ ಕೆಂಪು ಗೂಟದ ಕಾರಿನಲ್ಲಿ ಮೆರೆಯುವರಯ್ಯ ನಮ್ಮವರುಬಸವಣ್ಣ ನಿನ್ನ ಹೆಸರು ಹೇಳಿ ಪುಸ್ತಕ ರಚಿಸಿ ಭಾಷಣ ಮಾಡಿ ಪ್ರಶಸ್ತಿ ಪಡೆದರಯ್ಯ ಸಾಹಿತಿಗಳುಬಸವಣ್ಣ . ನಿನ್ನ ಹೆಸರು ಹೇಳಿ ನಿನ್ನ ಮೂರ್ತಿ ನಿಲ್ಲಿಸಿ ದುಡ್ಡು ಎತ್ತುವರಯ್ಯಾ ಬಸವ ಉದ್ಯಮಿಗಳುಬಸವಣ್ಣ ನಿನ್ನ ಹೆಸರು ಹೇಳಿ ಪ್ರಮಾಣ ವಚನ ಸ್ವೀಕರಿಸಿ ದೇಶ ನಾಡು ಕೊಳ್ಳೆ ಹೊಡೆದರಯ್ಯ ಎಲ್ಲಾ ಪಕ್ಷದ ಕ್ರಿಮಿಗಳುಬಸವಣ್ಣ ನಿನ್ನ ಹೆಸರು ಹೇಳಿ ನಿನ್ನ ಚಳುವಳಿ ಸಮಾಧಿ...

ಕವನ : ಸತ್ಯ ಹೇಳುವವ….

ಸತ್ಯ ಹೇಳುವವ.... --------------------- ಸತ್ಯ ಹೇಳುವವ ಹೆದರುವದಿಲ್ಲ . ಹೆದರುವವ ಸತ್ಯ ಹೇಳುವದಿಲ್ಲ ತಿವಿಯುತ್ತಾನೆ ಕುಟುಕುತ್ತಾನೆ,. ನೋವಾಗದಿರಲು ಜರೆಯುತ್ತಾನೆ ಜಡ ಸಮಾಜ ತಿದ್ದುತ್ತಾನೆ. ಸ್ಪಂದಿಸದಾಗ ಮರುಗುತ್ತಾನೆ ಟೀಕೆ ನೋವು ಅವಮಾನಕ್ಕೆ ಜಗ್ಗುವದಿಲ್ಲ ಬಗ್ಗುವದಿಲ್ಲ ತನ್ನ ಮನೆ ನಗೆ ಸುಖ ಬಿಟ್ಟು ಹೊರ ಜಗಕೆ ಅಳುತ್ತಾನೆ ಹಸಿವು ಶೋಷಣೆ ಅಸಮಾನತೆಗೆ ನಿತ್ಯ ನಿರಂತರ ಸಂಘರ್ಷ ಸೆಣಸಾಟ ಚಳವಳಿ ಬಂಡಾಯ ಹೋರಾಟ ನವನಿರ್ಮಾಣ ಕ್ರಾಂತಿ ಪ್ರಗತಿ ಪಥ ಜನರ ಭ್ರಾಂತಿ ಬೇರು ಸಡಿಲು ಗುಂಪು ಚದುರುತ್ತದೆ. ಮತ್ತೆ ಒಬ್ಬಂಟಿಗನ ಅಳಲು ಸತ್ಯ ಶೂಲಕ್ಕೆರುತ್ತದೆ. ಸತ್ಯ ಹೇಳುವವನಿಗೆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group