ಕವನ
ಕೊರಡು ಕೊನರಲುನೀನೊಲಿದಾಗಲೇ ನಾ ಬೀಜ ಮೊಳೆತು ನವಿರಾಗಿ ಚಿಗುರಿದ್ದು ಹಚ್ಚ ಹಸಿರಿನ ವೈಶಾಲ್ಯತೆಯಲಿ
ಬೆಳೆದು ಮರವಾಗಿ ನೆರಳು
ಹೂ ಹಣ್ಣು ಕಾಯಿ ನೀಡಿದ್ದು//ನೀನೊಲಿದಾಗಲೇ ನಾ ಸಸಿ
ಬಲಿತು ಹೆಮ್ಮರವಾಗಿದ್ದು
ಅಂಗಳದ ತುಂಬೆಲ್ಲಾ ಟೊಂಗೆ
ಪಂಗ ಪಂಗಳವಾಗಿ ಹರಡಿ
ಬಿಸಿಲ ಝಳಕೆ ತಂಪಾಗಿದ್ದು//ನಿನ್ನೊಲುಮೆಯ ಮರೆತ
ಧೂರ್ತ ಹುಲು ಮಾನವನೀಗ
ನನ್ನಿರವ ಬುಡ ಕಡಿದಾಗ ನಾ
ಬರೀ ಒಣಗಿದ ಕೊರಡಾಗಲು
ಮಾಡುವದು ಇನ್ನೇನು?//ಸುತ್ತ ಚೆಲ್ಲಿದ ಹಸಿ ಮಣ್ಣಿನ
ಪಸೆಯ ಹೀರುತ ಬದುಕಲು
ಬೇರುಗಳ ಹರಡಿ...
ಕವನ
ಯುಗದ ಪುರುಷ ಟಾಟಾಕರೆಯಿತು ಕಾಲನ ಕರೆ
ಹೋದರು ಟಾಟಾ
ದೇಶದ ನೈಜ ರತ್ನ
ಪದ್ಮವಿಭೂಷಣ
ಸಾಟಿ ಇಲ್ಲದ ಸಾಧಕ
ಕರೆದ ಕಾಲನ ಕರೆ
ಹೋದರು ಟಾಟಾ
ಮದುವೆ.. ಮಕ್ಕಳು..ಇಲ್ಲ
ದೇಶದ ಹಿತಕೆ ಅವನದೆಲ್ಲಅವನನಂಥ ಸೇವೆಯ ಧಣಿ
ಹೋಲುವರಾರಿಲ್ಲ
ಜನ್ಮಭೂಮಿಯ ಋಣಕೆ
ಬದುಕ ದಾನ ನೀಡಿದ. ...
ಕವನ
ದಸರಾ ವೈಭವಬಂತು ಬಂತು ನಾಡಹಬ್ಬ
ಮೈಸೂರು ದಸರಾ ಹಬ್ಬ
ಚಾಮುಂಡೇಶ್ವರಿ ಆರಾಧಿಸುವ ಹಬ್ಬ
ಕರುನಾಡಿನ ವೈಭವದ ಹಬ್ಬ.....ಬ್ರಾಹ್ಮಿಶುಭ ಮುಹೂರ್ತದಿ
ಬನ್ನಿವೃಕ್ಷ ಪೂಜಿಸುವ ಹಬ್ಬ
ಆಯುಧ ಪೂಜೆ ಮಾಡಿ
ಭಜಿಸುವ ವಿಜಯ ದಶಮಿ ಹಬ್ಬ....ಚಿನ್ನದ ಅಂಬಾರಿಯಲಿ
ದೇವಿಯ ಸುಂದರ ಮೆರವಣಿಗೆ
ಅಂಬಾರಿ ಧರ್ಮ ದೀಕ್ಷೆ ತೊಡುವ
ಉತ್ಸವದ ಕನ್ನಡ ನಾಡ ಹಬ್ಬ....ಜನಪದ ಕಲೆ ನರ್ತನ ಸ್ಥಬ್ದ ಚಿತ್ರ
ಸಂಸ್ಕೃತಿ ಕಲೆಗಳ ಪ್ರದರ್ಶನದ ಹಬ್ಬ
ಪುಣ್ಯ ಭೂಮಿ ಮೈಸೂರಿನ
ಚಾಮುಂಡಿಯ ದಸರಾ ಹಬ್ಬ.....ದ್ವೇಷ ಅಸೂಯೆ...
ಕವನ
ಅಲ್ಲ ನಾವು ವೀರಶೈವರು
--------------------------
ಅಲ್ಲ ನಾವು ವೀರಶೈವರು
ನಾವು ಲಿಂಗವಂತರು
ಅಪ್ಪ ಬಸವನ ಧರ್ಮದಲ್ಲಿ
ಸತ್ಯ ಸಮತೆ ಕಾಣುವವರು
ನ್ಯಾಯ ನಿಷ್ಟುರಿ,ನಿತ್ಯ ಕಾಯಕ
ಹಸಿದ ಜೀವವ ಸಲುಹುವವರು
ಅಗಸ ಅರಸ ಕೂಡಿ ಭೋಜನ
ಕರುಣೆ ಪ್ರೀತಿಯ ಕಾನನ
ಅರಿವೇ ಗುರುವು ನುಡಿಯು ಲಿಂಗ
ನಡೆಯು ಜಂಗಮ ಪಾವನ
ವಚನ ಗ್ರಂಥ ನಮ್ಮ ಉಸಿರು.
ಮರ್ತ್ಯ ಲೋಕಕೆ ಅಚ್ಚ ಹಸಿರು
ದೀನ ದಲಿತ ಬೇಧವಳಿದು
ಶರಣ ರಾಜ್ಯ ಕಟ್ಟುವವರು.
ಇಲ್ಲ ಲಿಂಗಕೆ ಹಾಲು ತುಪ್ಪ,
ಪುರೋಹಿತರ ಕೈಗೆ ಕಪ್ಪ.
ಕರಣ...
ಕವನ
ಅನಾಥರ ನಾಥಅಬಲ ಅಶಕ್ತ
ಅಸ್ಪ್ರಶ್ಯ ಅನಾಥ
ಅನಾಥರ ನಾಥ
ಸಂಗಮನಾಥ
ಹೇ ಬಸವೇಶ್ವರ
ಒಳಗೊಳಗೆ ಬೆಂದ
ಶತಮಾನದ ಅಸಮತೆ
ಜಾತಿ ವರ್ಗ ವರ್ಣ
ಕಿತ್ತೆಸೆದೆ ವೀರ
ಶಾಂತಿ ಪ್ರೀತಿಗೆ
ಜೀವ ತೇಯ್ದ ಯೋಧ
ಕೊನೆಗೊಳಿಸಿದೆ
ಸನಾತನಿಗಳ ವಾದ
ಇಲ್ಲವಾದವು
ವೇದ ಆಗಮ ಪುರಾಣ
ಶಾಸ್ತ್ರ ಶಕುನ ಮುಹೂರ್ತವು
ಅಕ್ಷರ ಕಲಿಸಿ
ವಚನ ರಚಿಸಿ
ಬಟ್ಟೆಯಾದಿ ದೇವಲೋಕಕೆ
ಶ್ರಮದ ಬೆವರೆ
ಪುಣ್ಯ ತೀರ್ಥ
ಹಂಚಿ ತಿಂದರೆ ಸ್ವರ್ಗವು
ಕಟ್ಟಿಕೊಟ್ಟೆ ಮುಕ್ತ ಸಮಾಜವ
ನಾವು ಬದುಕಲಾರದ ಹೇಡಿಯು
ನಿನ್ನ ಸ್ಮರಣೆ ನಿತ್ಯ ಮಂತ್ರ
ಲಿಂಗವಂತ ಸ್ವತಂತ್ರರು..
ಸತ್ಯ ಹಾದಿ ಹುಡಕಲಿರುವ
ಬಸವ ಭಕ್ತರು ಶ್ರೇಷ್ಠರು.
--------------------------------------
ಡಾ.ಶಶಿಕಾಂತ.ಪಟ್ಟಣ. ರಾಮದುರ್ಗ
ಕವನ
ಕನಸುಗಳು ಗುರಿಯಾಗಿವೆಮೆಲ್ಲನೆ ಹೃದಯ ಸ್ಪರ್ಶಿಸಿ,
ಕಣ್ಣಿಂದ ಗಮನಿಸಿ,
ಮನದಲ್ಲಿ ಹುಟ್ಟಿ,
ಈ ಕನಸುಗಳು ಗುರಿಯಾಗಿ ನಿಂತಿವೆ.ಸತತ ಪ್ರಯತ್ನ,
ಆತ್ಮ ಬಲ ದೊಂದಿಗೆ
ಜ್ಞಾನದ ಬೆಳಕು,
ಮನದ ಅಂಗಳದ ದೀಪವಾಗಿದೆ.ಈ ಗುರಿ ಬೆಂಕಿಯಂತೆ ಉಜ್ವಲಿಸಿ,
ಗುರಿ ತಲುಪಿದ ಮೇಲೆ,
ದೀಪದಂತೆ ಈ ಜಗತ್ತಿಗೆ ಬೆಳಕಾಗಲಿ.ಇದು ನನ್ನ ಕನಸು,
ಇದು ನನ್ನ ಗುರಿಯಾಗಿದೆ.ಕುಮಾರಿ ಸೃಷ್ಟಿ ಅಶೋಕ ಎಲಿಗಾರ
ಕವನ
ಮೌನರಾಗ ಹೊಸದಾಗಿದೆ.....ಮನದಾಳದಲಿ ಮೂಡಿಬಂದಿದೆ ಹೊಸರಾಗ
ಪಿಸುಗುಟ್ಟುತಲಿ ಉಲಿಯುತಲಿದೆ ಮೌನರಾಗಬಾಳಿನಾ ತೋಟದಲಿ ಅರಳಿದ ಹೂವು
ಘಮ್ಮೆಂದು ಸೂಸುತಿದೆ ತನದೆ ಸುವಾಸನೆ
ಬಾಡುವೆನೆಂದು ಹೇಳುವುದಿಲ್ಲ ಎಂದೂ
ಇರುವಷ್ಟು ಸಮಯ ಖುಷಿ ನೀಡುವುದು ಕಾಣಾಕಳೆದಾ ಸಮಯ ಕಂಡಾ ಕನಸು
ಮರೀಚಿಕೆಯಾಗಿ ನಿಂತಿದೆಯಲ್ಲಾ
ಮನದಾಳದ ಮಾತು ಹೃದಯದಾ ತುಡಿತ
ಮೌನವಾಗಿ ಬಿಕ್ಕಳಿಸುತಿದೆಯಲ್ಲಾ..ನಾನು ನೀನು ಕಳೆದಾ ಕ್ಷಣಗಳಲಿ
ಪಿಸುಮಾತು ಮೌನರಾಗವೇ ಜಾಸ್ತಿ
ಅದರಲೂ ತುಡಿತಗಳೇ ನಮ್ಮ ಆಸ್ತಿ
ಹೇಗೆ ಕಳೆದು ಹೋಯ್ತು ಹಗಲು ಹೊತ್ತು.ಕತ್ತಲಾವರಿಸಿದ ಮನಕೆ...
ಕವನ
ಹುಟ್ಟಿ ಬನ್ನಿಹುಟ್ಟಿ ಬನ್ನಿ
ವೀರ ಯೋಧರೇ
ಕನ್ನಡವ ಕಟ್ಟಿ
ಸತ್ಯ ಸಮತೆ
ಶಾಂತಿ ಪ್ರೀತಿ
ಜಗಕೆ ಭಾಷೆ
ಬರೆಯ ಬನ್ನಿ
ಗಡಿಯಲ್ಲಿ ತಂಟೆ
ಜಗಳ ಕದನಕೆ
ದಿಟ್ಟ ಉತ್ತರ
ನೀಡ ಬನ್ನಿ
ಹೆಸರಾದ ಕನ್ನಡಕೆ
ಗುಡಿ ಕಳಶ
ಕಟ್ಟ ಬನ್ನಿ
ಅಕ್ಕರೆಯ ಅಕ್ಷರಗಳ
ನಿತ್ಯ ನೀವು
ಕಲಿಸ ಬನ್ನಿ
ಮರೆತು ಹೋಗುವ
ಕನ್ನಡಕೆ ಅಗ್ರ
ಪಟ್ಟ ಕಟ್ಟ ಬನ್ನಿ
ಕಾವೇರಿ ಗೋದಾವರಿ
ಕೃಷ್ಣೆ ತುಂಗೆ
ಮಲಪ್ರಭೆ ಮರಳಿ ಹರಿಸಿ
ಕನ್ನಡವ ಗೆಲಿಸ ಬನ್ನಿ
ಬನ್ನಿ ಬನ್ನಿ
ವೀರ ಯೋಧರೇ
ಕನ್ನಡವ ಕಟ್ಟ ಬನ್ನಿ
--------------------------------------
ಪ್ರೀತಿಯೆಂದರೆಪ್ರೀತಿಯೆಂದರೆ
ಅದು ಬರಿ ಶಬ್ದವಲ್ಲ
ಭಾವ ಹಸುರಿನ ತೋರಣ
ನೊಂದ ಮನಕೆ
ಮುದವ ನೀಡುವ
ಸ್ನೇಹ...
ಕವನ
ಕನ್ನಡವೇ ಧರ್ಮಕನ್ನಡವೇ ಧರ್ಮ
ಕನ್ನಡದ ವರ್ಮ
ಕನ್ನಡದ ಕರ್ಮ
ಕಾಯಕದ ಮರ್ಮ
ಶರಣರ ವಚನಗಳು
ಜೈನರ ಚಂಪೂ
ಆಚಾರ್ಯರ ಬೋಧೆ
ಮುಕ್ತಿ ಮಣಿಯು
ದೇಸಿ ನಾಣ್ನುಡಿ
ಜಾನಪದದ ಮುನ್ನುಡಿ
ಹರಿವಿಕೊಂಡಿದೆ ನೋಡು
ತಿರುಳು ಕನ್ನಡವು
ಕನ್ನಡ ಕಾವ್ಯದ ಕಂಪು
ಗಿಳಿ ಕೋಗಿಲೆಯ ಇಂಪು
ಹುಲುಸಾಗಿ ಬೆಳೆಯಿತು
ಅಚ್ಚ ಹಸುರಿನ ಸಂಪು
ಏಳು ಕನ್ನಡ ಕಂದ
ನಾಡ ಹಬ್ಬದ ಚಂದ
ಭುವನೇಶ್ವರಿ ಬರುತಿಹಳು
ಸಜ್ಜಾಗು ಸಡಗರದಿ
ಕನ್ನಡವು ಉಳಿದರೆ
ಕನ್ನಡಿಗರು ಉಳಿದಾರುಡಾ. ವೀಣಾ ಯಲಿಗಾರ
ಕನ್ನಡ ಪ್ರಾಧ್ಯಾಪಕರು
ಮುಖ್ಯಸ್ಥರು ಕೆ ಎಲ್ ಈ
ಮೃತ್ಯುಂಜಯ ಕಲಾ ವಾಣಿಜ್ಯ ಮಹಾವಿದ್ಯಾಲಯ
ಧಾರವಾಡ
ಕವನ
ಬಸವಣ್ಣ ಬಿಟ್ಟು ಹೋಗಲಿಲ್ಲಅಗಲಲಿಲ್ಲ ಬಯಲಾಗಲಿಲ್ಲ
ಲೀನವಾಗಲಿಲ್ಲ ಬಸವಣ್ಣ ,
ನಮ್ಮನು ಬಿಟ್ಟು ಹೋಗಲಿಲ್ಲ.
ಇದ್ದಾನೆ ಬಸವಣ್ಣ ನನ್ನೊಳಗೆ
ನಿಮ್ಮೊಳಗೆ ನಮ್ಮೊಳಗೆ .
ಶತಮಾನದಿಂದ ಮೌನ ಹೊತ್ತು
ಉಸಿರುತ್ತಿದ್ದಾನೆ ವಚನವ ಜಪಿಸುತ್ತ
ಗುರು ವಿರಕ್ತರ ಗುದ್ದಾಟ
ಕಾವಿಗಳ ಕಾದಾಟ
ಭಕ್ತರ ಹುಚ್ಚಾಟಕ್ಕೆ ಮರುಗಿದ್ದಾನೆ
ಜಗದ್ಗುರುಗಳ ಅಡ್ಡ ಪಲ್ಲಕ್ಕಿಗೆ
ಹೆಗಲು ಕೊಟ್ಟಿದ್ದಾನೆ.
ಯಜ್ಞ ಹವನ ಹೋಮಕ್ಕೆ
ಎಣ್ಣೆ ತುಪ್ಪ ಹಾಕುತ್ತಿದ್ದಾನೆ .
ಮುಗಿಲೆತ್ತರದ ಬಸವ ಮೂರ್ತಿಗೆ
ಕಲ್ಲು ಮರಳು ಹೊರುತ್ತಿದ್ದಾನೆ.
ಜಂಗಮರ ಪಾದಪೂಜೆಗೆ ಸಿದ್ಧ
ಪುರಾಣ ಪ್ರವಚನದ ಶಬ್ದ ಮಾಲಿನ್ಯ
ತುಲಾಭಾರ ವರ್ಧಂತಿ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



