ಕವನ

ಪಂಚಮುಖಿ ಗಣೇಶನಿಗಿದೋ ಕಾವ್ಯ ಪಂಚಾಮೃತ

ಒಲುಮೆಯ ಅಕ್ಷರಬಂಧುಳಿಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಇದು ನಮ್ಮೆಲ್ಲರ ಮೆಚ್ಚಿನ ಮಹಾಗಣಪತಿಗೆ ಅರ್ಪಿಸಿದ ಪಂಚಹನಿಗಳ ಪಂಚಾಮೃತ. ಇಲ್ಲಿವೆ ಹಬ್ಬದ ಹರ್ಷ, ಆದರ, ಆಸ್ಥೆಗಳ ಸಾರುವ ಐದು ಹನಿಗವಿತೆಗಳು. ನನ್ನ ನಿಮ್ಮದೇ ಎದೆಯ ಭಾವ ಭಾಷ್ಯಗಳ ಅಕ್ಷರಪ್ರಣತೆಗಳು. - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.1. ಗಜಾನನಮಾತೃಭಕ್ತಿಯ ವಿರಾಟ್ ಪ್ರದರ್ಶನ ಮೂಡಿಸುವ ಭಾವೈಕ್ಯತೆ ಸಂಚಲನ ಹರಡಿಹ ಪಂಚತತ್ವಗಳ ಸಂಕೀರ್ತನ ಯುಗಯುಗಕು ಜಗಕೆ...

ಕವನ : ಅಲ್ಲ ಅವರು ನನ್ನವರು

ಅಲ್ಲ ಅವರು ನನ್ನವರು.ಅಲ್ಲ ಅವರು ನನ್ನವರು ಸತ್ಯ ಸಮಾಧಿ ಮಾಡಿದವರು. ಜಾತಿ ದ್ವೇಷ ಬಿತ್ತುವವರು . ಮಾತು ತಪ್ಪಿ ನಡೆಯುವವರು. ಧರ್ಮ ದೇವರು ಮಾರಿದವರು. ಕಾವಿ ಹೊತ್ತು ತಿರುಗುವವರು ಹಿಂಸೆ ಸುಲಿಗೆ ಮೆರೆಸುವವರು. ಜನರ ಕೊಂದು ಬದುಕುವವರು. ಗಡಿ ಸೀಮೆಯ ಜಗಳದವರು. ನದಿ ವ್ಯರ್ಥಹರಿಸುವವರು. ಗೋಡೆ ಕೋಟೆಯ ಕದನದವರು. ಹಸಿವು ಕಂಡು ಮರುಗದವರು . ಕ್ರೂರತನಕೆ ಕುಣಿಯುವವರು. ಸಮತೆ ಹೆಜ್ಜೆ ಹಾಕದವರು ಶಾಂತಿ ಗೀತೆ ಹಾಡದವರು. ವೇಷ ಹಾಕಿ ಬದುಕಿದವರು ಬುದ್ಧ ಬಸವನ ನೆನೆಯದವರು. ಅಲ್ಲ ಅವರು ನನ್ನವರು.. ------------------------------------ ಡಾ.ಶಶಿಕಾಂತ.ಪಟ್ಟಣ...

ಗಜಲ್

ಗಜಲ್ನಿನ್ನ ಪ್ರೀತಿಯನ್ನು ಅಪ್ಪಿದಂತೆನಿನ್ನ ದ್ವೇಷವನ್ನೂ ಅಪ್ಪಿಕೊಳ್ಳುವೆ ನಿನ್ನ ಸ್ನೇಹವನ್ನು ಒಪ್ಪಿದಂತೆ ನಿನ್ನ ರೋಷವನ್ನೂ ಅಪ್ಪಿಕೊಳ್ಳುವೆನಿನ್ನ ಸವಿ ಮಾತುಗಳ ತಬ್ಬಿದಂತೆ ನಿನ್ನ ಕಟುನುಡಿಗಳನ್ನೂ ಅಪ್ಪಿಕೊಳ್ಳುವೆ ನಿನ್ನ ಜೊತೆ ನಡೆದ ಹೆಜ್ಜೆಗಳ ನೆನೆದಂತೆ ನಿನ್ನ ದೂರ ಮಾಡಿದ ಕರಗಳನ್ನೂ ಅಪ್ಪಿಕೊಳ್ಳುವೆನಿನ್ನ ಮನ ಮಲ್ಲಿಗೆ ಹೂವು ಮುಡಿದಂತೆ ಸುರಿದ ಮುಳ್ಳುಗಳನ್ನೂ ಅಪ್ಪಿಕೊಳ್ಳುವೆ. ನಿನ್ನ ಪಿಸು ಮಾತುಗಳ ಜೊತೆಗೆ ನೀಡಿದ ಮೌನವನ್ನೂ ಅಪ್ಪಿಕೊಳ್ಳುವೆ.ನೀಡಿದ ನಲಿವಿನ...

ಕವನ : ಗುರುವಿನ ಮಹಿಮೆ

ಗುರುವಿನ ಮಹಿಮೆ.ಗುರುವಿನ ಶಕ್ತಿ ಅರಿತವರಿಲ್ಲ ಆತನ ಮಹಿಮೆ ಬಲ್ಲವರಿಲ್ಲ ಅರಿವೇ ಗುರುವು ಗುರುವೇ ಹರಿಯುಅಕ್ಷರ ಬೀಜವ ಬಿತ್ತಿ ಅಜ್ಞಾನದ ಕಳೆಯ ಕಿತ್ತಿ ಜ್ಞಾನದ ಹಣತೆಯ ಒತ್ತಿ ಬಾಳು ಬೆಳಗಿದ ಜೀವ ಕಣೊಜ್ಞಾನದ ಹಣತೆಯ ಹಚ್ಚಿ ಅಜ್ಞಾನದ ಕೊಳೆಯ ಕೊಚ್ಚಿ ಮಕ್ಕಳ ಜ್ಞಾನ ಸುಧೆಯ ಮೆಚ್ಚಿ ಬಳಪವ ಪಿಡಿಸಿದ ದೈವ ಕಣೋತಿದ್ದಿ ತೀಡಿ ಬುದ್ಧಿ ಮಾತ ಹೇಳಿ ಕೈ ಹಿಡಿದು ಅಕ್ಷರವ ಪೇಳಿ ಮಕ್ಕಳನು ಸನ್ಮಾರ್ಗಕೆ ತಳ್ಳಿ ದಾರಿ ತೋರಿಸಿದ ಶಕ್ತಿ...

ಕವನ:  ಗುರುವೇ ದೇವರು 

ಗುರುವೇ ದೇವರುಓ ಗುರುವೇ ನಿನಗೆ ಶರಣು ಶರಣು ಬ್ರಹ್ಮ, ವಿಷ್ಣು,ಮಹೇಶ್ವರ ನಿನ್ನೊಳಗಿಹರು ಕಾಣು ಜನನಿ ಮೊದಲ ಗುರು ಆ ಗುರುವಿಗೆ ನೀನೇ ಮೊದಲ ಗುರು.ಬಾಲಕನೆಂಬ ಕಲ್ಲನ್ನು ಮೂರ್ತಿಯನ್ನಾಗಿಸಿದ ಶಿಲ್ಪಿ ನೀನು ಮಕ್ಕಳ ಜ್ಞಾನದ ಹಸಿವು ನೀಗಿಸಿದ ಜ್ಞಾನೇಶ್ವರ ನೀನು ತಿದ್ದಿ ತೀಡಿ ಬೈದು ಹೊಡೆದು ಅಕ್ಷರ ಕಲಿಸಿದೆ ವಿದ್ಯೆಯ ಪರಿಮಳವನ್ನು ಎಲ್ಲೆಡೆ ನೀ ಪಸರಿಸಿದೆ.ಬಡವನಿರಲಿ ಧನಿಕ ಇರಲಿ ಯಾರೇ ಇರಲಿ ನಿನ್ನ ಬಳಿ...

ಕವನ : ಮಧುರ ಭಾವದ ಒಡತಿ

ಮಧುರ ಭಾವದ ಒಡತಿಮಲಗು ನನ್ನಯ ಗೆಳತಿ ಮಧುರ ಭಾವದ ಒಡತಿ ಹಸಿರು ಚಿಗುರಿನ ಪ್ರೀತಿ ಸತ್ಯ ಸಮತೆ ಶಾಂತಿಬಿಳಿಯ ಮೋಡದ ಮಧ್ಯೆ ಬರುವ ಐರಾವತವು ಕನಸುಗಳ ಮೂಟೆ ಒಲವ ಸ್ನೇಹತಿಳಿಗೊಳದ ತಾವರೆ ಗಿಡ ಪೊದರ ಹಕ್ಕಿ ಭಾವ ಗೀತೆಯ ಇಂಚರ ಸುಳಿಗಾಳಿಯ ಸ್ವರವುನಗೆ ನಲುಮೆ ಸಗ್ಗ ಹೆಣೆದ ಅಕ್ಷರ ಹಗ್ಗ ದೂರ ಪಯಣದ ಕಗ್ಗ ಬಾಳ ಬಟ್ಟೆಯ ಮಗ್ಗ*ಡಾ ಶಶಿಕಾಂತ ಪಟ್ಟಣ ರಾಮದುರ್ಗ*

ಕವನ : ನಮ್ಮನ್ನು ಕ್ಷಮಿಸಮ್ಮ……

ನಮ್ಮನ್ನು ಕ್ಷಮಿಸಮ್ಮ ಪ್ರಕೃತಿಮಾತೆ...ಜಗತ್ತಿಗೆ ಬೆಳಕು ನೀಡುವ ಸೂರ್ಯ ಉದಯಿಸಿದ ಕ್ಷಣದಿಂದ ಬಗೆದಷ್ಟು ಕರುಣೆಯಿಂದ ನೀಡುವ ಅಕ್ಷಯಪಾತ್ರೆ ನೀನು ನಮ್ಮ ಪ್ರಕೃತಿಮಾತೆಮನಸೆಳೆವ ಹಸಿರು, ಬೆಟ್ಟಗುಡ್ಡ, ಹರಿವ ನೀರಿನ ಜುಳುಜುಳು ನಿನಾದ ನವಿಲುಗಳ ನರ್ತನ, ದುಂಬಿಗಳ ಝೇಂಕಾರ ಚಿತ್ತಾಕರ್ಷಕ ಪಕ್ಷಿಗಳ ಕಲರವ ಎಲ್ಲ ನೀಡುವ ನೀನು ಮಾನವ ಕುಲಕೆ ಕಾಮಧೇನು..ನಾವು ಮನುಜರು ಸ್ವಾರ್ಥ ಮನದ ರಕ್ಕಸರು ನಿನ್ನ ಮಡಿಲ ಬಗೆಬಗೆದು ದೋಚಿದ್ದೇವೆ ದುರಾಸೆಗೆ ಸಿಲುಕಿ ನಿನಗೆ ವಂಚಿಸಿ ಅಕ್ಷಯಪಾತ್ರೆ ಬರಿದು ಮಾಡಿದ್ದೇವೆ ಚಿನ್ನದ ಮೊಟ್ಟೆಯ ಅತಿಯಾಸೆಗೆ ಕೋಳಿಯನೆ ಕೊಂದ...

ಗಜಲ್ : ಗೆಳತಿ…..

ಗೆಳತಿ.......ಕಣ್ಣ ಪರದೆಯ ಮೇಲೆ ನಿನ್ನಯ ಬಣ್ಣಚೆಲ್ಲಿದೆ ಮುಚ್ಚಲಿ ಹ್ಯಾಂಗ ಗೆಳತಿ ಸುಣ್ಣದ ಹರಳ ಹೊಳಪಿನ ಕಣ್ಣಿಗೆ ರೆಪ್ಪೆಗಳು ಹೊಚ್ಚಲಿ ಹ್ಯಾಂಗ ಗೆಳತಿಬಚ್ಚಿಡುವ ಆಸೆಯಿದೆ ಬೊಗಸೆಯಲ್ಲಿ ಅದು ಸಾಧ್ಯವೇ ಹೇಳು ಪ್ರಿಯೆ ಮುಚ್ಚಿಟ್ಟ ರೂಪರಾಶಿ ಕದಿಯುವ ರೆಪ್ಪೆಯನು ನೆಚ್ಚಲಿ ಹ್ಯಾಂಗ ಗೆಳತಿಎನ್ನೆದೆ ಗೊಡೆಗೆ ತೂಗಿ ಹಾಕಿರುವೆ ನಿನ್ನ ಭಾವ ತುಂಬಿದ ಭಾವಚಿತ್ರವ ಕಣ್ಸನ್ನೆಯಲಿ ತಿವಿದು ನೋವು ನೀಡಲು ದಾರ ಬಿಚ್ಚಲಿ...

ಕವನ : ಎಲ್ಲಿ ಇರುವೆ ?

ಎಲ್ಲಿ ಇರುವೆ ?ಎಲ್ಲಿ ಇರುವೆ ? ಪಾರಿಜಾತವೇ ಗಗನ ಕುಸುಮ ಸ್ನೇಹ ಪ್ರೇಮವೇಎಲ್ಲಿ ಇದ್ದೆ ಕೊಳದ ತಾವರೆ ಮುಳ್ಳು ಮುತ್ತಿದ ಕೆಂಗುಲಾಬಿಯೇಮನದ ಬಯಕೆ ಮುರುಗ ಮಲ್ಲಿಗೆ ಪ್ರೀತಿ ಪಯಣಕೆ ಹೆಜ್ಜೆ ಮೆಲ್ಲಗೆ .ಜಾಜಿ ಕನಕ ಕಂಪು ಸಂಪಿಗೆ ಮಧುರ ಬದುಕಿನ ಸೊಂಪಿಗೆಗೆಳತಿ ನೀನು ಭಾವ ಭಾಷೆ ನನ್ನ ಕಾವ್ಯದ ಮುಗ್ಧ ಪದಗಳೇಬನ್ನಿ ಭಾವಗಳೆ ಕವನ ಲಹರಿ ಒಲವು ಕಟ್ಟುವ ಬಾಳ ಗೂಡಿಗೆ ------------------------- ಡಾ. ಶಶಿಕಾಂತ ಪಟ್ಟಣ ಪುಣೆ

ಕವನ : ಡಾ. ಕಲಬುರ್ಗಿ ಬಿದ್ದ ಮರವಲ್ಲ

ಡಾ.ಕಲ್ಬುರ್ಗಿ ಬಿದ್ದ ಮರವಲ್ಲ ಎಪ್ಪತ್ತೇಳು ವರುಷದ ಮರ ಹಣ್ಣು ಹೂವು ಕಾಯಿ ಶರಣ ಸಂಸ್ಕೃತಿಯ ನೆರಳು ಗೂಡು ಕಟ್ಟಿ ಕೊಂಡಿದ್ದವು ಕಾಗಿ ಗುಬ್ಬಿ ಪಾರಿವಾಳ ಅಂದೊಮ್ಮೆ ಕಟುಕ ಮರವ ಕಡಿದು ಉರುಳಿಸಿದ ಡಾ. ಕಲ್ಬುರ್ಗಿ ಬಿದ್ದ ಮರವಲ್ಲ ಬಿತ್ತಿದ ಬೀಜ ಬತ್ತದ ತೇಜ ಸತ್ಯ ಸಮತೆ ನೇರ ನಿಷ್ಠುರತೆ ಬರಹ ಚಿಂತನ ವೈಚಾರಿಕತೆ ಕನ್ನಡದ ಕೊಲಂಬಸ್ ಛಲದಂಕ ಮಲ್ಲ ಒಂಟಿ ಸಲಗ ಮರೆತು ಹೋಗದ ಮುಗ್ಧ ಮನ ವಚನಗಳ ರಾಶಿ ಕಲ್ಯಾಣವೇ ಕಾಶಿ ಅಪ್ಪ ಬಸವನ ಮಾತು ಹುಸಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group