ನಮ್ಮನ್ನು ಕ್ಷಮಿಸಮ್ಮ
ಪ್ರಕೃತಿಮಾತೆ…
ಜಗತ್ತಿಗೆ ಬೆಳಕು ನೀಡುವ ಸೂರ್ಯ
ಉದಯಿಸಿದ ಕ್ಷಣದಿಂದ
ಬಗೆದಷ್ಟು ಕರುಣೆಯಿಂದ
ನೀಡುವ ಅಕ್ಷಯಪಾತ್ರೆ
ನೀನು ನಮ್ಮ ಪ್ರಕೃತಿಮಾತೆ
ಮನಸೆಳೆವ ಹಸಿರು, ಬೆಟ್ಟಗುಡ್ಡ,
ಹರಿವ ನೀರಿನ ಜುಳುಜುಳು ನಿನಾದ
ನವಿಲುಗಳ ನರ್ತನ, ದುಂಬಿಗಳ ಝೇಂಕಾರ
ಚಿತ್ತಾಕರ್ಷಕ ಪಕ್ಷಿಗಳ ಕಲರವ
ಎಲ್ಲ ನೀಡುವ ನೀನು ಮಾನವ ಕುಲಕೆ ಕಾಮಧೇನು..
ನಾವು ಮನುಜರು
ಸ್ವಾರ್ಥ ಮನದ ರಕ್ಕಸರು
ನಿನ್ನ ಮಡಿಲ ಬಗೆಬಗೆದು ದೋಚಿದ್ದೇವೆ
ದುರಾಸೆಗೆ ಸಿಲುಕಿ ನಿನಗೆ ವಂಚಿಸಿ
ಅಕ್ಷಯಪಾತ್ರೆ ಬರಿದು ಮಾಡಿದ್ದೇವೆ
ಚಿನ್ನದ ಮೊಟ್ಟೆಯ ಅತಿಯಾಸೆಗೆ
ಕೋಳಿಯನೆ ಕೊಂದ ಕತೆಯಂತಾಗಿದೆ
ನಮ್ಮ ಬದುಕು..
ಓ ನಿಸರ್ಗ ಮಾತೆ
ಮುನಿಯ ಬೇಡಮ್ಮ
ಬೇಸರಿಸಿ ಮೈ ಒದರ ಬೇಡಮ್ಮ
ನಿನ್ನನು ಹಸಿರ ಗಣಿಯಾಗಿ ಮಾಡಿದ
ನಮ್ಮ ಹಿರಿಯರಿಗೆ ಶಾಂತಿ ನೆಮ್ಮದಿಯ ಬಾಳುವೆ ಕೊಡು,
ಮುಂದೆ ಜಗತ್ತಿನ ಭವಿಷ್ಯದ ಕಣ್ಣುಗಳಾದ
ಪುಟ್ಟ ಕಂದಮ್ಮಗಳ ಬದುಕಿಸಿಕೊಡು,
ಮಕ್ಕಳು ಮಾಡಿದ ತಪ್ಪುಗಳ ಮನ್ನಿ ಸಿಬಿಡು..
ಮುಂದಾದರೂ ಪರಿಸರ ಉಳಿಸುತ್ತೇವೆ,
ಸ್ವಾರ್ಥ ಬಿಟ್ಟು ಬಾಳುತ್ತೇವೆ,
ಹೊತ್ತ ಮಕ್ಕಳ ನೀನೇ ಕ್ಷಮಿಸಿ,
ಕಾಯಬೇಕಲ್ಲವೇ ತಾಯಿ..
ಡಾ. ಭೇರ್ಯ ರಾಮಕುಮಾರ್
ಕಸಾಪ ದತ್ತಿ ಪ್ರಶಸ್ತಿ
ಪುರಸ್ಕೃತ ಸಾಹಿತಿಗಳು
ಮೈಸೂರು
ಮೊಬೈಲ್ -6363172368