ಕವನ
ಕವನ : ಸದ್ದಿಲ್ಲದೆ ಎದ್ದು ಹೋಗುವುದಿಲ್ಲ
ಸದ್ದಿಲ್ಲದೆ ಎದ್ದು ಹೋಗುವುದಿಲ್ಲ.
-----------------------------------
ಇಲ್ಲವಾಗಬಹುದು ಒಂದು ದಿನ.
ಎಲ್ಲವೂ ನಶ್ವರ ಮಾಯಾ ಮನ
ಸಂಘರ್ಷ ಹಸಿವು ಸ್ತಬ್ದವಾಗುತ್ತವೆ.
ಒಳಗಿನ ಬಡಿತ ನಿಲ್ಲಬಹುದು .
ಮಾತು ಮೌನವಾಗಬಹುದು.
ಕಣ್ಣೊಳಗಿನ ಬೆಳಕು ಆರಬಹುದು.
ಉಸಿರು ಬಯಲ ಕೂಡುವುದು
ಆದರೆ ನಾನು...........
ಸದ್ದಿಲ್ಲದೆ ಎದ್ದು ಹೋಗುವುದಿಲ್ಲ.
ಸುದ್ಧಿಯಾಗುತ್ತೇನೆ ನಿಮಗೆ.
ಮುದ್ದು ಮಾತಾಗುತ್ತೇನೆ ನಿನಗೆ .
ನನ್ನ ಭಾವ ಬುತ್ತಿ ಬಿಚ್ಚಿ
ತಿನಿಸುವೆ ಗೆಳತಿ ನಾನಿರುವವರೆಗೆ.
ನಿನ್ನ ಬಣ್ಣದ ಕನಸಿನ ಪತಂಗಗಳ
ಹಾರಿ ಬಿಡುವೆ ಪ್ರೀತಿಯ ಗಾಳಿಯಲಿ.
ಮುಗಿಲೆತ್ತರೆ ಮಿಗಿಲೆತ್ತರೆ ಹಾರಲಿ.
ಮೋಡದಾಚೆಯ ರವಿ...
ಕವನ
ಕ್ಷುಧೆಯಾಗ್ನಿ ತೃಷೆಯಾಗ್ನಿ ನಿದ್ರಾಗ್ನಿ ಶೋಕಾಗ್ನಿ
ಕಾಮಾಗ್ನಿ ಕ್ರೋಧಾಗ್ನಿ ಮತ್ಸರಾಗ್ನಿ
ಹೀಗೆ ಸಪ್ತಾಗ್ನಿಗಳು ದಹಿಸುತಿವೆ ದೇಹವನು
ಶಾಂತಿಜಲ ಸಿಂಪಡಿಸು - ಎಮ್ಮೆತಮ್ಮಶಬ್ಧಾರ್ಥ
ಕ್ಷುದೆ - ಹಸಿವು. ತೃಷೆ - ದಾಹ, ನೀರಡಿಕೆ. ಶೋಕ - ದುಃಖ
ಕ್ರೋಧ - ಕೋಪ. ಮತ್ಸರ - ಹೊಟ್ಟೆಕಿಚ್ಚು.ದಹಿಸು - ಸುಡುತಾತ್ಪರ್ಯ
ಮನುಷ್ಯನ ದೇಹದಲ್ಲಿ ಹಲವಾರು ಅಗ್ನಿಗಳಿವೆ. ಹಸಿವು, ತೃಷೆನಿದ್ದೆ, ಶೋಕ, ಕಾಮ,ಕ್ರೋಧ ಮತ್ತು ಮತ್ಸರವೆಂಬ ಏಳುಅಗ್ನಿಗಳಿವೆ. ಅವುಗಳು...
ಕವನ
ಮೆಲುಕುಬೆಳ್ಳಂ ಬೆಳ್ಗೆ ಅವ್ವನ ಕೂಗು
ಕೇಳಿದ್ರೂ ಕೇಳದಂತೆ ಮಲ್ಗೋದು
ಇತ್ತ ನಾನುನೂ ಕಿರುಚಿದೆ
ಅವ್ವ ಕರಿತೈತೆ ಎದ್ದೇಳಣ್ಣಯ್ಯಜಳಕಾ ಮಾಡಿ ಮಡಿಉಟ್ಕೊ
ರಾಕಿ ಕಟ್ಟಸ್ಕೊ ಹಬ್ಬಾ ಐತಿ
ಸೋಂಬೇರಿ ಸೋಮಾರಿ ನೀ
ಹೊರ್ಗ ಹೋಗಬ್ಯಾಡಾ ಅಣ್ಣಯ್ಯಮತ್ತದೇ ಜಗಳಾ ಜಡೆ ಎಳೆದು
ರಿಬ್ಬನ್ ಜಗ್ಗಿ ನೂಕಿ ಓಡೋದು
ಅವ್ವನ ದನಿಗೆ ಮುದುಡಿಕೊಳ್ಳುವ
ಮುದ್ದು ಪೆದ್ದು ಅಣ್ಣಯ್ಯರಾಕಿ ಕಟ್ಟಿ ಸಕ್ಕರೆ ಬದಲು
ಉಪ್ಪು ತಿನಿಸಿ ಗೋಳಾಡಿಸಿ
ತಲೆಗೂದಲ ಜಗ್ಗಿ ತಿವಿದು
ಓಡಿದ ನೆನಪು ಮಾಸಿಲ್ಲ ಅಣ್ಣಯ್ಯಅಪ್ಪಂಗೆ...
ಕವನ
ಹಸುಗೂಸು ಯಾರನ್ನು ದ್ವೇಷಿಸದು ದೂಷಿಸದು
ನಸುನಗುತಲೆಲ್ಲರನು ನೋಡುತಿಹುದು
ಇಂಥ ಮಗುವನು ಕಂಡು ದೇವರೆಂದೆನ್ನುವರು
ಶಿಶುವಂತೆ ಋಷಿಯಾಗು- ಎಮ್ಮೆತಮ್ಮ ಶಬ್ಧಾರ್ಥ
ಹಸುಗೂಸು = ಎಳೆಯ ಮಗು. ದೂಷಿಸು = ನಿಂದಿಸು.
ನಸುನಗು = ತಿಳಿನಗು. ಶಿಶು= ಕೂಸು, ಮಗು. ಋಷಿ = ತಪಸ್ವಿತಾತ್ಪರ್ಯ
ಎಳೆಯ ಕೂಸು ಯಾರನ್ನು ದ್ವೇಷ ಮಾಡುವುದಿಲ್ಲ ಮತ್ತು
ನಿಂದೆ ಮಾಡುವುದಿಲ್ಲ. ಎಲ್ಲರನ್ನು ಸಮಾನವಾಗಿ ಕಂಡು
ಮುದ್ದಾದ ಬೊಚ್ಚು ಬಾಯಿಂದ ನಗುತ್ತದೆ. ಹೀಗೆ ಇರುವ
ಮಗು ದೇವರ...
ಕವನ
ಧರೆಯೆಲ್ಲ ಕತ್ತಲಾವರಿಸಿದ್ದರೇನಾಯ್ತು ?
ಮುಖವೆತ್ತಿ ತಾರೆಗಳ ನೋಡಿ ನಲಿಯೊ
ಬಾಳಿನಲಿ ಬವಣೆಗಳು ತುಂಬಿದ್ದರೇನಾಯ್ತು ?
ನಸುನಗುತ ಬಾಳೆಲವೊ - ಎಮ್ಮೆತಮ್ಮಶಬ್ಧಾರ್ಥ
ಧರೆ = ಭೂಮಿ. ತಾರೆ= ನಕ್ಷತ್ರ. ಬವಣೆ= ಕಷ್ಟತಾತ್ಪರ್ಯ
ರಾತ್ರಿ ಹೊತ್ತಿನಲ್ಲಿ ಭೂಮಿಯ ಮೇಲೆ ಕಗ್ಗತ್ತಲು
ತುಂಬಿದರೇನಾಯ್ತು. ಕೆಳಗೆ ನೋಡುವ ಬದಲು ಕತ್ತೆತ್ತಿ
ಮೇಲೆ ನೋಡಿದರೆ ಶುಭ್ರ ಆಕಾಶದಲ್ಲಿ ಮಿಣಮಿಣನೆ
ಮಿಂಚುವ ನಕ್ಷತ್ರಗಳ ಗುಂಪು ಗೋಚರಿಸುತ್ತದೆ.ಅವುಗಳನ್ನು
ನೋಡಿ ಸಂತೋಷಪಡಬೇಕು. ಹಾಗೆ ಜೀವನದಲ್ಲಿ
ಅಜ್ಞಾನದಿಂದ ಅನೇಕ ಕಷ್ಟಗಳು ಬಂದರು...
ಕವನ
ಇಂದು ನಾಳೆಗೆಯೆಂದು ತಂದು ಕೂಡಿಡಬೇಡ
ತಂದಿಡುವ ಶಿವನೆಂದು ಬಡವನಲ್ಲ
ಹೊಂದಿಸುವನವನೆಲ್ಲ ಜೀವಿಗಳಿಗಾಹಾರ
ಸಂದೇಹಬಿಡು ನೀನು - ಎಮ್ಮೆತಮ್ಮತಾತ್ಪರ್ಯ
ಈ ಕಗ್ಗ ಸಂಗ್ರಹ ಗುಣವನ್ನು ಅನುಮೋದಿಸುವುದಿಲ್ಲ. ಇದು
ಶರಣರ ದಾಸೋಹ ಕಲ್ಪನೆಯನ್ನು ಎತ್ತಿ ಹಿಡಿಯುತ್ತದೆ. ಈಗ
ಎಲ್ಲಿ ನೋಡಿದರಲ್ಲಿ ಕೊಳ್ಳುಬಾಕತನ ಹೆಚ್ಚಾಗಿದೆ.ಅಂದರೆ
ಬೇಕಾದುದಕ್ಕಿಂತ ಹೆಚ್ಚು ಹೆಚ್ಚು ಕೊಂಡುತರುವ ಅಭ್ಯಾಸ.
ಇದರಿಂದ ದೇಶದಲ್ಲಿ ಬಡತನದ ಪರಿಧಿ ಹೆಚ್ಚಾಗುತ್ತದೆ.ಹಂಚಿ
ತಿನ್ನುವ ಗುಣವನ್ನು ನಾವು ಬೆಳಸಿಕೊಳ್ಳಬೇಕು. ಮುಂದೆ
ತನಗೆ ತನ್ನ ಮಕ್ಕಳು ಮೊಮ್ಮಕ್ಕಳು ಮರಿಮೊಮ್ಮಕ್ಕಳಿಗೆ
ಇರಲೆಂದು...
ಕವನ
ಕೊರಳ ಕೊಟ್ಟರು ಕುಣಿಕೆಗೆತಾಯ ಕೊರಳ ಮುರಿಯ
ಬಂದ ಅರಿಯ ಕಂಡು
ರುಧಿರ ಕುದಿದು
ಕರುಳ ತರಿದು
ಸಿಡಿಲ ಮರಿಗಳು
ಕೊಟ್ಟರವರು ಕೊರಳ ಕುಣಿಕೆಗೆ...ದಾಸ್ಯ ಶೃಂಖಲೆ ಬಿಡಿಸಿ
ಭಾರತಿಯ ಮಡಿಲ
ಪುತ್ರರು ವೀರ ಶೂರರು
ಎದೆಯ ಗುಂಡಿಗೆಯ
ಗುಂಡಿಗೊಡ್ಡಿ ಅಮರರಾಗಿ
ಕೊಟ್ಟರವರು ಕೊರಳ ಕುಣಿಕೆಗೆ...ನೆಲದ ಮಣ್ಣು ಕಣ್ಣು ತೆರೆದು
ಕೈ ಬೀಸಿ ಕರೆಯಲು
ಗಡಿಯ ಮೆಟ್ಟಿ ಒಡಲ
ಬಗೆಯ ಬಂದವರ
ಎದೆಯ ಸೀಳುತ
ಕೊಟ್ಟರವರು ಕೊರಳ ಕುಣಿಕೆಗೆ...ಅವ್ವನ ಕಾಲಿಗೆ ಬೇಡಿ ತೊಡಿಸಿ
ಆಳ ಬಂದವರ ತಡೆದು
ಒಡೆದು ಆಳುವ ನೀತಿ...
ಕವನ
ತಪ್ಪಿಸಿಕೊಂಡಿದೆತಪ್ಪಿಸಿಕೊಂಡಿದೆ ಸ್ವಾಮಿ
ತಪ್ಪಿಸಿಕೊಂಡಿದೆ
ಬಹಳ ದಿನಗಳಾದವು
ಇದು ದೂರ ಹಾರಿ.ಅಂದು ನಮ್ಮೊಡನೆ
ಬಾಳಿತ್ತು,ಕುಣಿದಿತ್ತು
ಕುಣಿಸಿತ್ತು,
ನಮ್ಮನ್ನು ನೂರು
ಕನಸುಗಳಾಗಿ ಕಾಡಿತ್ತು,
ಲಕ್ಷ ಲಕ್ಷ ಜನರ
ಮನದ ಉಸಿರಾಗಿ
ಹಗಲಿರುಳೂ ಹಾಡಿತ್ತು,
ಜಾತಿ ಭೇದಗಳ ಕಿತ್ತು
ವಂದೇ ಮಾತರಂ
ಹಾಡಿಸಿತ್ತು..
ಎಲ್ಲಿ ಹೋಯಿತೋ
ನಮ್ಮೆಲ್ಲರ ಎದೆಗೆ ಕೊಳ್ಳಿಯಿಟ್ಟು..ನಮ್ಮನ್ನು ಒಂದುಗೂಡಿಸಿದ
ನಮ್ಮ ರಾಷ್ಟ್ರಪ್ರೇಮ
ಎಲ್ಲೋ ತಪ್ಪಿಸಿಕೊಂಡಿದೆ ,
ನಿಮಗೇನಾದರೂ ಸಿಕ್ಕರೆ
ಮರೆಯದೇ ತಿಳಿಸಿ..
ಸ್ವಾಮಿ,,
ಪುಣ್ಯ ಕಟ್ಟಿಕೊಳ್ಳಿ..ಡಿಕ್ಕಿ..ಅದೊಂದು ದಿನ
ಆ ಊರಿನ ರಾಜಕೀಯ
ಸಮುದ್ರದ ಹಡಗಿನಂತೆ
ತೇಲುತ್ತಾ ಹೋಗಿ,
ಬ್ರಷ್ಟಾಚಾರವೆಂಬ
ಬೃಹತ್ ಬಂಡೆಗೆ
ಡಿಕ್ಕಿ ಹೊಡೆದಾಗ
ಊರಿನ ನೂರಾರು
ಅಭಿವೃದ್ಧಿ ಕಾರ್ಯಗಳು
ಒಡೆದು, ಸಿಡಿದು
ನುಚ್ಚು
ನೂರಾದವು..ಇದೂ ಎಲೆಕ್ಷನ್..ನೋಡಿ ಗುರು,
ನಮಗೇ ನಿಮ್ಮ ಮತ...
ಕವನ
ಬಿಸಿಲು ಚಳಿ ಮಳೆ ಗಾಳಿ ಯಾವುದಕು ಜಗ್ಗದೆಯೆ ಮೌನದಲಿ ಕಷ್ಟಗಳನೆಲ್ಲ ಸಹಿಸಿನೆರಳಂಟು ಹೂಹಣ್ಣು ಸೌಧೆಯನು ಕೊಡುವಂಥತರುತಪಸಿ ನೋಡಿ ಕಲಿ - ಎಮ್ಮೆತಮ್ಮಶಬ್ಧಾರ್ಥ
ಜಗ್ಗದೆ - ಕುಗ್ಗದೆ .ಸೌಧೆ - ಉರುವಲು ಕಟ್ಟಿಗೆ
ತರು - ಗಿಡ , ವೃಕ್ಷ , ಮರ. ತಪಸಿ - ತಪಸ್ವಿ, ಯೋಗಿ,ತಾತ್ಪರ್ಯ
ಬಿರುಬಿಸುಲು ಹೊಡೆದರು, ಕೆಟ್ಟಚಳಿಯಾದರು, ಜೋರು
ಮಳೆ ಬಿದ್ದರು, ಬಿರುಗಾಳಿ ಬೀಸಿದರು ಯಾವುದಕ್ಕು...
ಕವನ
ಬೀಳದೇಳದೆ ಕೂಸು ನಡಿಗೆ ಕಲಿಯುವುದೇನು ?
ಇಕ್ಕುವುದು ಮೊದಮೊದಲು ತಪ್ಪುಹೆಜ್ಜೆ
ಹಿಡಿದ ಗುರಿಯನು ಬಿಡದೆ ಸಾಧಿಸುವ ಛಲಬೇಕು
ಸೋಲು ಗೆಲುವಿನ ಮೂಲ - ಎಮ್ಮೆತಮ್ಮಶಬ್ಧಾರ್ಥ
ಕೂಸು - ಮಗುತಾತ್ಪರ್ಯ
ಪುಟ್ಟ ಮಗು ಮೊದಲು ಅಂಬೆಗಾಲಿಟ್ಟು ನಡೆಯುತ್ತ ನಿಧಾನವಾಗಿ ಎರಡು ಕಾಲುಗಳ ಮೇಲೆ ಎದ್ದುನಿಲ್ಲುತ್ತದೆ.
ನಂತರ ಜೋಲಿಹೊಡೆಯುತ್ತ ತಪ್ಪು ಹೆಜ್ಜೆ ಹಾಕುತ್ತ ನಡೆಯುತ್ತದೆ. ಒಮ್ಮೆ ನಿಂತು ಬೀಳುತ್ತದೆ ಮತ್ತೊಮ್ಮೆ ಬಿದ್ದು ಮೇಲೇಳುತ್ತದೆ. ಬಿದ್ದು ಎದ್ದು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



