ಕವನ

ಕವನ : ವಚನಗಳೇ ಬಸವಣ್ಣನೆನಗೆ

ವಚನಗಳೆ ಬಸವಣ್ಣನೆನಗೆವಚನಗಳೆ ಬಸವಣ್ಣನೆನಗೆ ವಚನಗಳು ಬುದ್ಧ ಮಂತ್ರ ವಚನಗಳೆ ಶಾಂತಿ ಸಹನೆ ವಚನಗಳು ದಿಟ್ಟ ನುಡಿಯು ವಚನಗಳೆ ಪ್ರಮಾಣವೆನಗೆ ವಚನ ಲಿಂಗ ಜಂಗಮವು ವಚನ ಶುದ್ದ ಪ್ರಸಾದವೆನಗೆ ವಚನ ಅನುಭಾವ ಅನುಭೂತಿ ವಚನ ದಿವ್ಯ ದರ್ಶನವು ವಚನ ಆತ್ಮ ಶೋಧನವು ವಚನವೇ ಸತ್ಯ ಮಾಟವು ವಚನ ನಿತ್ಯ ಕೂಟವು ವಚನ ಹಗಲು ಇರುಳುವೆನಗೆ ವಚನ ವರುಷ ಹರುಷವು ವಚನ ನನಗೆ ಬಾಳು ಬದುಕು ವಚನ ನನ್ನ ಉಸಿರು ವಚನ ಕುರಾನ ಬೈಬಲ್ ವಚನ ಗ್ರಂಥ ಸಾಹೇಬ್ ವಚನ ಜೈನ ದೀಪ್ತಿಮಂತ್ರ ವಚನ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಹೆದ್ದೆರೆಗಳೆಬ್ಬಿಸುತ ಮೇಲೆ ತಳಮಳಿಸುತಿದೆ ಒಳಹೊಕ್ಕು‌ ನೋಡಿದರೆ ಮೌನ ಕಡಲು ತೊಳಲಾಟ ಬಳಲಾಟ ಗೋಳಾಟ ಬಾಳೆಲ್ಲ ಒಳಗಿಹುದು ನಿಶ್ಯಬ್ಧ - ಎಮ್ಮೆತಮ್ಮಶಬ್ಧಾರ್ಥ ಹೆದ್ದೆರೆ -ದೊಡ್ಡ ತೆರೆ.ತಳಮಳಿಸು - ಸಂಕಟಪಡು, ಸದ್ದುಮಾಡುತಾತ್ಪರ್ಯ ಸಮುದ್ರವು ಮೇಲೆ ದೊಡ್ಡ ದೊಡ್ಡ ತೆರೆಗಳನ್ನು ಎಬ್ಬಿಸುತ ಭೋರ್ಗೆಯುತ್ತದೆ.ಆದರೆ ಅದರ ಆಳದಲ್ಲಿ ನೀರ‌ವ ಮೌನ. ಒಳಗೆ ಶಾಂತವಾಗಿ ಇರುತ್ತದೆ. ಹಾಗೆ ಮಾನವನ‌ ಬದುಕು ಎಚ್ಚರದಲ್ಲಿ ದುಃಖದುಮ್ಮಾನಗಳು, ಚಿಂತೆವ್ಯಥೆ ಗಳು ಕಷ್ಟಕಾರ್ಪಣ್ಯಗಳು ತುಂಬಿ ಗೊಂದಲಮಯವಾಗಿದೆ. ಆದರೆ ಹೃದಯದಾಳದಲ್ಲಿ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಸಾಮ್ರಾಟನಾಗಿದ್ದು ಬೊಕ್ಕಸದ ರೊಕ್ಕವನು ವೆಚ್ಚಮಾಡದೆ ಟೋಪಿ ಹೊಲಿದು ಮಾರಿ ಬಂದ ಹಣದಲಿ ಬದುಕಿದೌರಂಗಜೇಬನೊಲು ದುಡಿದು ದುಡ್ಡನು‌ ಬಳಸು - ಎಮ್ಮೆತಮ್ಮಶಬ್ಧಾರ್ಥ ಬೊಕ್ಕಸ - ಖಜಾನೆ, ಭಂಡಾರ.ವೆಚ್ಚಮಾಡು - ಖರ್ಚುಮಾಡುತಾತ್ಪರ್ಯ ಮೊಘಲ ಸಾಮ್ರಾಜ್ಯದ ರಾಜನಾಗಿದ್ದ ಔರಂಗಜೇಬನು‌ ರಾಜ್ಯಭಂಡಾರದ ಹಣವನ್ನು ತನ್ನ ಸ್ವಂತ ಖರ್ಚಿಗಾಗಿ ಉಪಯೋಗ ಮಾಡಿತ್ತಿದ್ದಿಲ್ಲ. ದಿನನಿತ್ಯ ಟೋಪಿ ಹೊಲಿದು ಅವುಗಳನ್ನು ಮಾರಿ ಬಂದ ಹಣದಿಂದ ತನ್ನ ಉಪಜೀವನ ನಡೆಸುತ್ತಿದ್ದನು. ಆತ ಕಟ್ಟಾ ಮುಸಲ್ಮಾನನಾಗಿದ್ದರೂ ಕೂಡ ಆತನಲ್ಲಿ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

ಭೂತವನು ನೆನೆಯುತ್ತ ಭವಿತವ್ಯ ಚಿಂತಿಸುತ    ವರ್ತಮಾನದ ಬದುಕು ಮರೆಯಬೇಡ.      ಗತಿಸಿಹೋಯಿತು ನಿನ್ನೆ , ನಾಳೆ ಬರದಿರಬಹುದು    ಬಾಳಿಂದು ಸಂತಸದಿ - ಎಮ್ಮೆತಮ್ಮಶಬ್ಧಾರ್ಥ ಭೂತ - ಭೂತಕಾಲ. ಭವಿತವ್ಯ - ಭವಿಷತ್ಕಾಲ ವರ್ತಮಾನ - ಈಗಿರುವ ಕಾಲತಾತ್ಪರ್ಯ ನಡೆದು ಹೋದ ಘಟನೆಗಳನ್ನು ಮತ್ತು ಮುಂಬರುವ ಘಟನೆಗಳನ್ನು ಚಿಂತಿಸುತ್ತ ಈಗಿರುವ ಆನಂದವನ್ನು ಕಳೆದುಕೊಳ್ಳಬೇಡ. ನಿನ್ನೆಯೆಂಬುದು ಕಳೆದುಹೋಗಿದೆ.ಅದು...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಕದಡದಿದ್ದರೆ ನೀರು ತಿಳಿಯಾಗಿ ನಿಲ್ಲುವುದು ವಸ್ತುಗಳ ತಳದಲ್ಲಿ ಕಾಣಬಹುದು ಶಾಂತಿಯನು ಬಯಸುವೊಡೆ ಸುಮ್ಮನಿರುವುದೆ ಲೇಸು ನಿಶ್ಯಬ್ಧ ನಿಜಯೋಗ - ಎಮ್ಮೆತಮ್ಮಶಬ್ಧಾರ್ಥ ಲೇಸು - ಒಳ್ಳೆಯದು , ನಿಶ್ಯಬ್ಧ‌ - ನೀರವ, ಸದ್ದಿಲ್ಲದ, ಮೌನತಾತ್ಪರ್ಯ ಸರೋವರದಲ್ಲಿ ನೀರು ಬಗ್ಗಡವಿದ್ದರೆ ತಳದಲ್ಲಿದ್ದ ವಸ್ತುಗಳು ಕಾಣಿಸುವುದಿಲ್ಲ. ಸ್ವಲ್ವ ಸಮಯ ಬಿಟ್ಟರೆ ಸಾಕು ತಿಳಿಯಾಗಿ ನೀರು ಪಾರದರ್ಶಕವಾಗಿ ಕೆಳಗಿನ ವಸ್ತುಗಳು ಕಾಣಿಸುತ್ತವೆ. ಹಾಗೆ ತಲೆಯೆಂಬ ಸರೋವರದಲ್ಲಿ ಮನವೆಂಬ...

ಕವನ : ನಮಾಮಿ ನಾಗದೇವ

ನಮಾಮಿ ನಾಗದೇವಅಣ್ಣನ ಕರೆಯದು ಬಂದಿತು ಹಬ್ಬಕೆ ತಂದಿತು ಮನದಲಿ ಬಗೆಬಗೆ ಬಯಕೆ ಹೊರಡಲು ಹರುಷದಿ ತಯಾರಿ ನಡೆದಿದೆ ರಾಯರ ಮುಖವದು ಬಾಡಿಯೇ ಹೋಗಿದೆ//ತವರಿಗೆ ಹೊರಟಿಹ ಇವಳಿಗದೋ ಸಡಗರ ಅವನಲಿ ನುಡಿದಿದೆ ವಿರಹದ ಅಪಸ್ವರ ವಾಹನ ಬಂದಿತದು ಬಾಗಿಲ ಬಳಿಯಲಿ ಅವನೂ ನಡೆದನು ಮಡದಿಯ ಜೊತೆಯಲಿ//ಸಂಭ್ರಮದಿಂದ ನಡೆಯಿತು ಮನೆಯಲಿ ಹಬ್ಬ ಕ್ಷೀರಾಭಿಷೇಕವ ಮಾಡಿಸಿಕೊಂಡನು ನಾಗಪ್ಪಾ ಸರತಿಯ ಸಾಲಲಿ ಬಂದರು ಎಲ್ಲರೂ ತನಿಯನು ಎರೆದು ಪಾವನರಾದರು//ಜೋಕಾಲಿ ಜೀಕುತ ಕೊಬ್ಬರಿ ಲಾಡು...

ಕವನ : ಸುಮ್ಮನೆ ಬರೆಯುವುದಿಲ್ಲ

ಸುಮ್ಮನೆ ಬರೆಯುವುದಿಲ್ಲಬರೆಯಬೇಕೆಂದು... ಸುಮ್ಮನೆ ಬರೆಯುವದಿಲ್ಲ ತಿವಿಯುವದಿಲ್ಲ ಚುಚ್ಚುವದಿಲ್ಲ. ಹೊಗಳುವದಿಲ್ಲ ತೆಗಳುವದಿಲ್ಲ . ಕುಕ್ಕುವದಿಲ್ಲ ಮುಕ್ಕುವುದಿಲ್ಲ ಪದ ಶಬ್ದ ಜೋಡಿಸಿ ಗೆದ್ದಲಿಗೆ ಆಹಾರ ಮಾಡುವದಿಲ್ಲ. ರಾಶಿ ರಾಶಿ ಬರೆದು ರದ್ದಿಗೆ ಹಾಕುವದಿಲ್ಲ. ಬರೆಯುತ್ತೇನೆ ನನ್ನವರಿಗೆ. ಶತಮಾನದಿಂದ ಮಲಗಿದವರಿಗೆ. ಶೋಷಣೆಗೆ ಸೊಲ್ಲೆತ್ತದೆ ಸದ್ದಿಲ್ಲದೆ ಬಿದ್ದವರಿಗೆ ಸುಲಿಗೆ ವಂಚನೆಗೆ ಬಲಿಯಾಗಿ ಸತ್ತವರಿಗೆ . ಬರೆಯುತ್ತೇನೆ ಬುದ್ಧ ಬಸವರ ಬಟ್ಟೆಗೆ ಸಮತೆ ಪ್ರೀತಿ ಕಾಣುತ್ತೇನೆ. ಕಾಂತಿಯಿಲ್ಲದ ಕಣ್ಣುಗಳಲಿ ಕನಸು ತುಂಬುತ್ತೇನೆ. ಖಾದಿ ಕಾವಿಗಳ ದರ್ಪಕ್ಕೆ ಕೊನೆ ಹೇಳಬೇಕೆನ್ನುತ್ತೇನೆ. ಪುಂಡರ ರಕ್ಕಸರ ಅಟ್ಟ ಅಡಗಿಸಬೇಕೆನ್ನುತ್ತೇನೆ. ಅದಕ್ಕೆ ನಾನು ಬರೆಯಬೇಕೆನ್ನುತ್ತೇನೆ. ಬರೆಯಬೇಕೆಂದು... ಸುಮ್ಮನೆ ಬರೆಯುವದಿಲ್ಲ ಬರೆಯುತ್ತೇನೆ ....... ಕ್ರಾಂತಿಯ ಜ್ಯೋತಿ ಹಚ್ಚುತ್ತೇನೆ. ಹೊಸ ಬದುಕಿಗೆ ಮತ್ತೆ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

ಪುಸ್ತಕಂಗಳನೂರನೋದಿದರೆ ಫಲವೇನು ?            ಮಸ್ತಕದ ಪುಸ್ತಕವನೋದಬೇಕು                 ವಸ್ತುಸಾಕ್ಷಾತ್ಕಾರ ನಿನ್ನ‌‌ನೀನರಿತಂದು          ಶಾಸ್ತ್ರಂಗಳಿಂದಲ್ಲ‌- ಎಮ್ಮೆತಮ್ಮಶಬ್ಧಾರ್ಥ ಮಸ್ತಕ -ಶಿರ, ತಲೆ ಉತ್ತಮಾಂಗ, ಮಂಡೆ ವಸ್ತು ಸಾಕ್ಷಾತ್ಕಾರ‌ - ಪರವಸ್ತು /ಪರಶಿವ‌ /ಪರಬ್ರಹ್ಮ ದರ್ಶನತಾತ್ಪರ್ಯ ಓದಿ ಕೆಟ್ಟ ಕೂಚು ಭಟ್ಟ ಎಂಬ‌...

ಕವನ : ಪಂಚಮಿ ಹಬ್ಬ

ಪಂಚಮಿ ಹಬ್ಬಪಂಚಮಿ ಹಬ್ಬವು ಬಂದೈತಿ ಅಕ್ಕತಂಗೇರ ಮ್ಯಾಳದು ಕೂಡೈತಿ ಜೋಕಾಲಿ ಆಟಾ ಜೋರೈತಿ ಅತ್ತಿಂದಿತ್ತ ಇತ್ತಿಂದತ್ತ ತೂಗಾಡ್ತೈತಿ||1||ಅವ್ವಾ ಮಾಡಿದ ಉಂಡಿ ಕಡಬು ನಾಗಪ್ಪಗಿಂತ ನಮಗ ಮೊದಲು ಭಕ್ತೀಲಿ ಮಾಡ್ತೇವಿ ನಾವ್ ಪೂಜೆ ನಮ್ಮಮ್ಯಾಗ ಇರ್ಲಪ್ಪಾ ನಿನ್ ದಯೆ||2||ಗೆಳ್ತ್ಯಾರ ಗೆಳ್ತ್ಯಾರ ಸೇರೋದು ಸೀರಿಯುಟ್ಕೊಂಡ್ ಜೋಕಾಲಿ ಜೀಕೋದು ಓಣಿ ತುಂಬಾ ಓಡಾಡೋದು ಎಳ್ಳುಂಡಿ ತಿಂದ ತೇಗೋದು||3||ಬಗೆ ಬಗೆ ಉಂಡಿ ಮನಿಯಾಗ ಬೀಗರ ಉಂಡಿ ನಾಗೋನಿಮ್ಯಾಗ ದಿನಾ ಎನ್ಸಿ ಇಡೋದ ನಾವಾಗ ಕೊಟ್ಟ ಕಳಿಸೋದ ಯಾವಾಗ||4||ಎಷ್ಟಬೇಕಾದಷ್ಟ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಆಡುವರು ಮರಳಿನಲಿ ಮನೆಕಟ್ಟಿ ಬಾಲಕರು ಖುಷಿಯಿಂದ ಹೋಗುವರು ಕೆಡಿಸಿ ಕೊನೆಗೆ ಲೀಲೆಯಿಂದಾಡುವನು‌‌ ವಿಧಿ ಹೀಗೆ ಲೋಕದಲಿ ಕಟ್ಟುವನು ಕೆಡಹುವನು‌ - ಎಮ್ಮೆತಮ್ಮಶಬ್ಧಾರ್ಥ ವಿಧಿ - ಬ್ರಹ್ಮ,ಅಥವಾ ಭಗವಂತತಾತ್ಪರ್ಯ ಮಕ್ಕಳು ಉಸುಕಿನಲ್ಲಿ‌ ಖುಷಿಯಿಂದ ಉಸುಕಿನ ಗೂಡು ಕಾಲಿನಿಂದ ಕಟ್ಟಿನಿಲ್ಲಿಸಿ ಆಡುತ್ತಾರೆ. ಹಾಗೆಯೆ ಸಾಕಾಯ್ತೆಂದರೆ ಅದನ್ನು ಖುಷಿಯಿಂದಲೆ ಕೆಡಿಸಿ ಹೊರಡುವರು.ಆಡುವುದು, ನೋಡುವುದು ಮತ್ತು ಕೆಡಿಸುವುದು ಮಕ್ಕಳಿಗೆ ಸಂತೋಷಕರ ಆಟವಾಗಿದೆ.ಹಾಗೆ ಭಗವಂತ ತನ್ನ‌ ವಿನೋದಕ್ಕಾಗಿ ಜಗತ್ತು ನಿರ್ಮಾಣ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group