ಕವನ

ಭಕ್ತಿ ಗೀತೆ

ವಿದ್ಯಾ ವಾರಿಧಿವೀಣಾಪಾಣಿಯೆ ಬ್ರಹ್ಮನ ವಲ್ಲಭೆ ವರವನು ಕರುಣಿಸು ವಾಗ್ದೇವಿ| ಮಾಣಿಕ್ಯದ ಸರ ಧರಿಸಿಹ ದೇವಿಯೆ ಪಾದಕೆ ನಮಿಪೆವು ಮಹದೇವಿ||ಶಾರದೆ ಮಾತೆಯೆ ಜ್ಞಾನವ ವರ್ಧಿಸು ಕಳಕಳಿಯಿಂದಲಿ ಬೇಡುವೆನು| ಭಾರತಿದೇವಿಯೆ ಕರುಣಾಶಾಲಿನಿ ನಿನ್ನಲಿ ದಯೆಯನು ಕೋರುವೆನು||ನಾರದ ಜನನಿಯೆ ಕಮಲಾಸನಸತಿ ವಿದ್ಯಾಮಾತೆಯು ನೀನಮ್ಮ| ತೋರುತ ಮಮತೆಯ ಶರಣರ ರಕ್ಷಿಸು ಪೊರೆಯುತ ಭಕ್ತರ ಸಲಹಮ್ಮ||ಸರಸತಿ ಮಂಗಳೆ ವಿದ್ಯಾವಾರಿಧಿ ಮನಸಿನ ಕತ್ತಲೆ ಅಳಿಸಮ್ಮ| ಕರವನು ಜೋಡಿಸಿ ನಾಮವ ಭಜಿಪೆವು ನಿನ್ನಯ ದೃಷ್ಟಿಯ ಬೀರಮ್ಮ||ಶುಭಕರಿ ಮಾತಾ ಮಂಗಳದಾಯಿನಿ     ...

ಕವನ

ಹನಿ ಹನಿ ಸೇರಿ ತೊರೆಅಣು ಅಣುಗಳು ಸೇರಿ ಕಣವಾಗುವದು ಕಣಕಣಗಳು ಸೇರಿ ಕಣಜವಾಹುದುಹನಿ ಹನಿಗಳು ಸೇರಿ ತೊರೆಯಾಗುವುದು ತೊರೆಗಳು ನದಿಯ ಸೇರಿ ಸಾಗರವಾಹುದು.ತೆನೆ ತೆನೆಗಳು ಸೇರಿ ಬಳ್ಳವಾಗುವದು. ಬಳ್ಳ ಬಳ್ಳಗಳು ಸೇರಿ ರಾಶಿಯಾಹುದು..ಧೂಳ ಕಣಗಳು ಸೇರಿ ಧೂಮಕೇತುವಾಗುವದು ಚುಕ್ಕಿ ಚುಕ್ಕಿ ಸೇರಿ ತಾರಾಪುಂಜವಾಗುವದುಸಣ್ಣ ಸಣ್ಣ ಸೋಲುಗಳು ಗೆಲುವಿನ ಸೋಪಾನವಾಗುವವು ಕಿರುಹಾಸಗಳು ಸೇರಿ ನಗೆಬುಗ್ಗೆಯಾಗುವದುಸ್ನೇಹಿತರ ಮನಗಳು ಸೇರಿ ಸ್ನೇಹ ಸೇತುವೆಯಾಗುವದು ಆ ಸ್ನೇಹ ಜೀವನ...

ಕವನ

ವಚನಗಳ ತಿಳಿವುಶರಣರ ಸ್ವಾನುಭಾವದ ಘನವು ಬೆರೆತು ಅರಳಿದ ಮಿತವಾದ ಭಾಷೆ ರಾಗತಾಳವಿಲ್ಲ ನಮ್ಮ ಶರಣರ ವಚನಕೆ ಅದೊಂದು ನಾದಾತೀತ ಯೋಗಅದೊಂದು ಹಾಲತೊರೆ ಭಾವಾನುಭಾವಗಳ ತೆರೆ ಅದರಲ್ಲಿಹುದು ಬೆಲ್ಲದ ಸಿಹಿಯ ಹೊನಲು ಮಧುರ ಮಧುರ ಜ್ಞಾನದ ಘಮಲುಶರಣರ ಅಂತಶ್ಚೇತನದ ಅಚ್ಚಳಿಯದ ನುಡಿಗಳೇ ವಚನದ ಕಿಡಿಗಳು ಅದನು ಅರಿತವನೇ ನಿಜವಾದ ಶರಣ ಅಕ್ಷರ ಮಾಂತ್ರಿಕದ ಮಹಾಶರಣಅದರೊಳಗಿರುವ ಸ್ವರವೆಲ್ಲ ಪರತತ್ವದ ಪರಾಕಾಷ್ಠೆ ಭಕ್ತಿರಸ ಹೊರಹೊಮ್ಮುವ ಪ್ರಸಾದಭರಿತ ಹೊನ್ನ ನುಡಿಗಳು ವಚನಗಳ ತಿಳಿವಳಿಕೆಯೇ ನಮ್ಮ ಬಾಳಿನ ಹೆಗ್ಗುರಿಸುಧಾ ಪಾಟೀಲ ಬೆಳಗಾವಿ

ಡಾ.ಫ ಗು ಹಳಕಟ್ಟಿ ಜನ್ಮ ದಿನ ; ಕವನಗಳು

ಬಸವ ಬೆಳಕುಅಂದು ಒಬ್ಬರೇ ಹೊರಟರು ಹಗಲು ಇರುಳು ಕಾಡು ಕತ್ತಲೆ ಒಂಟಿ ಸಲಗ ಬಿಡದ ಛಲ ಶರಣರ ಸೂಳ್ನುಡಿ ಅನುಭಾವ ದರ್ಶನ ಕಲ್ಯಾಣ ಕೂಡಲ ಬಯಲು ಧಾಮ ಹುಡುಕಾಟ ಅನ್ವೇಷಣೆ ಆರು ದಶಕದ ಪಯಣ ಬೇಡಿದರು ಮಠ ಮನೆಗಳಲಿ ತಾಡೋಲೆಗಳ ಸಂಗ್ರಹ ಇದ್ದುದೆಲ್ಲವ ಕೊಟ್ಟು ಪದವಿ ವಕಾಲತ್ತು ಬಿಟ್ಟು ಹಿಡಿದರು ವಚನಗಳ ಕಟ್ಟು ಅಕ್ಷರ ಶಬ್ದಗಳ ಜಾಲ ಪರಿಷ್ಕರಣೆ ಸಂಪಾದನೆ ಹರಕು ರುಮಾಲು ಕನ್ನಡಕ ಒಡೆದಿತ್ತು ಹರಿದ ಕೋಟು ಮಾಸಿದ ದೋತುರ ಹೆಂಡತಿ ಮಗ ಇಹಲೋಕ ಬಿಟ್ಟರು . ಗಟ್ಟಿ ಕುಳ ಘನ ಫಕೀರ ಡಾ.ಫ ಗು ಹಳಕಟ್ಟಿ ನಾಮಧೇಯ ವಚನ ಗುಮ್ಮಟದ ಪಿತಾಮಹ ಮರೆಯಲಾದು ನಿಮ್ಮನು ಬಸವ...

ಡಾ. ಫ ಗು ಹಳಕಟ್ಟಿ ಜನ್ಮ ದಿನ ; ಕವನಗಳು

ಬಸವ ಬೆಳಕುಅಂದು ಒಬ್ಬರೇ ಹೊರಟರು ಹಗಲು ಇರುಳು ಕಾಡು ಕತ್ತಲೆ ಒಂಟಿ ಸಲಗ ಬಿಡದ ಛಲ ಶರಣರ ಸೂಳ್ನುಡಿ ಅನುಭಾವ ದರ್ಶನ ಕಲ್ಯಾಣ ಕೂಡಲ ಬಯಲು ಧಾಮ ಹುಡುಕಾಟ ಅನ್ವೇಷಣೆ ಆರು ದಶಕದ ಪಯಣ ಬೇಡಿದರು ಮಠ ಮನೆಗಳಲಿ ತಾಡೋಲೆಗಳ ಸಂಗ್ರಹ ಇದ್ದುದೆಲ್ಲವ ಕೊಟ್ಟು ಪದವಿ ವಕಾಲತ್ತು ಬಿಟ್ಟು ಹಿಡಿದರು ವಚನಗಳ ಕಟ್ಟು ಅಕ್ಷರ ಶಬ್ದಗಳ ಜಾಲ ಪರಿಷ್ಕರಣೆ ಸಂಪಾದನೆ ಹರಕು ರುಮಾಲು ಕನ್ನಡಕ ಒಡೆದಿತ್ತು ಹರಿದ ಕೋಟು ಮಾಸಿದ ದೋತುರ ಹೆಂಡತಿ ಮಗ ಇಹಲೋಕ ಬಿಟ್ಟರು . ಗಟ್ಟಿ ಕುಳ ಘನ ಫಕೀರ ಡಾ.ಫ ಗು ಹಳಕಟ್ಟಿ ನಾಮಧೇಯ ವಚನ ಗುಮ್ಮಟದ ಪಿತಾಮಹ ಮರೆಯಲಾದು ನಿಮ್ಮನು ಬಸವ...

ಕವನ

ಸಮ್ಮಿಲನಭಾವನೆಗಳ ತಳುಕಾಟ ಸ್ನೇಹ ಪ್ರೀತಿಯ ಹುಡುಕಾಟ ಭವ ಬಂಧನ ಸೀಮೆ ದಾಟಿ ಗಟ್ಟಿಗೊಳ್ಳ ಬೇಕು ಮನಸ್ಸು ಕನಸುಗಳ ಸಮ್ಮಿಲನ ಹೃದಯ ಬೆಸುಗೆ ಯಾರೂ ಇರದ ಪುಟ್ಟ ವಿಶ್ವ ಆನಂದ ಸಂತಸ ಸಂಭ್ರಮದ ಜಪ ಯಾರ ಕಡೆಗೂ ಅತ್ತ ಇತ್ತ ನೋಡದೆ ಮುಂದೆ ಮುಂದೆ ಸಾಗಬೇಕು ದೂರ ಅನಂತಕೆ ಒಲವ ಪ್ರೇಮ ಹಂಚಿಕೊಂಡು ______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕವನ

ಜಗವೆ ಕೂಡಲ ಸಂಗಮಬಸವ ಬಳ್ಳಿ ಲಿಂಗ ಜಂಗಮ ಜಗವೆ ಕೂಡಲ ಸಂಗಮ. ಅರಿವೇ ಗುರುವು ,ನಡೆಯು ಲಿಂಗ ನುಡಿಯೇ ಅಮರ ಜಂಗಮ .ಅಂಗವಳಿದು ಲಿಂಗವಿಡಿದು ಶರಣ ಬಾಳು ಸ್ಪಂದನ . ಲಿಂಗ ಮಜ್ಜನ ಪಾದದುದಕ ಅರಿವು ಸ್ಪೂರ್ತಿಯ ಸಿಂಚನ .ಸತ್ಯವೆಂಬುದೆ ನಿತ್ಯ ಪಠಣ, ನೀತಿ ಪಾಠದ ಮಂಥನ . ನೆಲದ ಮೇಲೆ ಬೆಳಕು ಚೆಲ್ಲಿದೆ ಜಗದಿ ನಿತ್ಯ ವಚನ ಚಿಂತನ .ಒಂದು ಮಾಡಿದ ಹಿರಿದು ಕಿರಿದು ಸಮತೆವೆಂಬ ದೀಪವು...

ಕವನ

ಸತ್ಯ ಸೆರೆಯಾಗಿದೆಸತ್ಯ ಸೆರೆಯಾಗಿದೆ ಇಂದು ನರಳುತಿದೆ ನೊಂದು ಸುಳೆಂಬ ಮುಳ್ಳು ಕಂಟಿಯಾ ಬೇಲಿಯೊಳು ಸತ್ಯ ನಲುಗುತಿದೆ ಬೆಂದು ಹೆದರೆನೆನುತಲೇ ಮೋಸದ ಸರಳುಗಳ ಬಲೆಯ ಬಿಲದೊಳು //ನೋಟಿನಾ ಕಂತೆ ಕಂತೆಯೊಳು ಅಧಿಕಾರ ಅಂತಸ್ತಿನ ಸುಳಿಯೊಳಗೆ ಅಳಲಾರದೆ ನಗಲಾರದೆ ಮುಖ ತೋರಲಾಗದೆ ಹೆಡೆಮುರಿ ಕಟ್ಟಿಸಿಕೊಂಡು ರಟ್ಟೆ ಮುರಿಸಿಕೊಂಡು ಸೆರೆಯಾಗಿದೆ ಸತ್ಯ ಸೆರೆಯಾಗಿದೆ ಮಿಸುಕಾಡದೆ //ಅಬ್ಬರದ ಮಾತಿನೊಳು ಬೊಬ್ಬಿಡುವ ಸುಳ್ಳಿನೊಳು ವ್ಯಾಪಾರದ ರಂಪ ರಟ್ಟು ರಾಡಿಯೊಳು ಅಸತ್ಯದ ಗೊಬ್ಬರ ತುಂಬಿದ ಆಡಿಯೊಳು ಚಿಗುರಲಾರದೆ...

ಕವನ

ಭಯದ ನೆರಳಿನಲ್ಲಿಅವರೇನು ಅನ್ನುವರು ಇವರೇನು ಹೇಳುವರು ಎನ್ನುವ ಗೊಂದಲ -ಗಡಿಬಿಡಿಯ ಮೀರಿ ಬೆಳೆದಾಗಲೇ ಅಲ್ಲವೇ ನಿಜವಾದ ವ್ಯಕ್ತಿತ್ವದ ಅನಾವರಣಗಡಿ -ಗಡಿಗೆ ಭಯದ ನೆರಳು ಅಡಿ -ಅಡಿಗೆ ಸಂಕೋಚದ ಮುದ್ದೆ ಹೇಳಲೊಲ್ಲದು ತಿಳಿಯಲೊಲ್ಲದು ಅರಗಿಸಿಕೊಳ್ಳಲಂತೂ ದೂರದ ಮಾತುಭಯವೇ ಹಾಗೆ ಹೇಳದೆ ಕೇಳದೆ ಧುತ್ತೆಂದು ಆವರಿಸಿಕೊಂಡು ಇಲ್ಲದ ಸಲ್ಲದ ವಿಚಾರದಿಂದ ಬಳಲಿಸುತ್ತದೆ ವಿವರಿಸಲಾರದ ಸನ್ನಿವೇಶ ತಂದಿಡುತ್ತದೆನಿನ್ನ ನೀನು ಅರಿತಾಗ ನಿನ್ನದೇ ಶಕ್ತಿ ನಿನಗೆ ಗೊತ್ತಾದಾಗ ಎಲ್ಲರ ಹಂಗು ತೊರೆದು ಬದುಕಲು ಕಲಿತಾಗ ಭಯ ಅಂದ್ರೆ ಏನು ಎಂದು ಕೇಳುವಂತಾಗುತ್ತದೆ ಆಗಲೇ ಸತ್ಯದ ಅನಾವರಣ ವ್ಯಕ್ತಿತ್ವದ ನಿಜಾವರಣಸುಧಾ ಪಾಟೀಲ ಬೆಳಗಾವಿ

ಕವನ

ಜೀವನಅಪ್ಪಿಕೋ ಕನಸುಗಳ ಮುತ್ತಿಕ್ಕು ಭರವಸೆ ಕೈ ಹಿಡಿದು ನಡೆ ಬರುವ ನಾಳೆಯ ಬದುಕುನೆಡು ದೂರ ದೃಷ್ಟಿ ಕ್ರಮಿಸು ಮೈಲು ದಾರಿ ಶ್ರಮ ನಿನ್ನ ಬಂಧು ಕಾಡು ಗಿಡ ಮರ ಒಂಟಿ ಪಯಣಇಲ್ಲ ಶೋಕ ಬಿಕ್ಕಳಿಕೆ ಸುಂದರ ವನ ಶುಕ ಪಿಕಗಳ ಗಾನ ಸಾವು ನೋವು ಮರೆತು ಇರುವುದೆ ಜೀವನಡಾ. ಶಶಿಕಾಂತ ಪಟ್ಟಣ ರಾಮದುರ್ಗ
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group