ಕವನ
ಅಲ್ಲಮಪ್ರಭು ವಚನ
ರಕ್ಕಸಿಗಿಬ್ಬರು ಮಕ್ಕಳು, ತೊಟ್ಟಿಲ ಮೇಲೈವರು,
ರಕ್ಕಸಿ ಬಾಣತಿಯಾದಡೆ ಮಕ್ಕಳಿಗಿನ್ನೆಂತೊ!
ತೊಟ್ಟಿಲ ತೂಗುವೆ ಜೋಗುಳವಾಡುವೆ
ರಕ್ಕಸಿಬಾಣತಿಯ ತೊಟ್ಟಿಲು ನುಂಗಿತ್ತು.
ಇದೇನು ಹೇಳಾ ಗುಹೇಶ್ವರಾ?ಭವಕ್ಕೆ ಬಂದ ಜೀವ ಅಜ್ಞಾನವಶದಿಂದಾಗಿ ಭವಾವಳಿಯ ಚಕ್ರದಲ್ಲಿ ಸಿಲುಕಿ ಒದ್ದಾಡುತ್ತಿದೆ ತನ್ನ ಅಜ್ಞಾನವನ್ನು ಕಳೆದುಕೊಳ್ಳದ ಹೊರತು ಆ ಜೀವಕ್ಕೆ ಮುಕ್ತಿ ಇಲ್ಲವೆಂಬುದನ್ನು ಈ ಬೆಡಗಿನ ವಚನ ಧ್ವನಿಸುತ್ತದೆ.
ಎಲ್ಲವನ್ನೂ ನುಂಗಿ ನೊಣೆದು ಹಾಕುವ ಅವಿದ್ಯೆಯೆಂಬ ಮಾಯೆಯೇ...
ಕವನ
ವಚನ ಸಾರ
ಅಲ್ಲಮ ಪ್ರಭುದೇವರ ವಚನ
ಈಶ್ವರನ ದ್ರೋಣವ ಮಾಡಿ,
ಪದ್ಮನಾಭನ ನಾರಿಯ ಮಾಡಿ,
ಕಮಲಜನೆಂಬ ಬಾಣವ ತೊಟ್ಟು,
ತ್ರಿಭುವನವನೆಚ್ಚವರಾರೊ?
ಚಂದ್ರಸೂರ್ಯರ ಬೆನ್ನ ಮೆಟ್ಟಿ,
ಸುವರ್ಣದ ಮಳೆಯ ಕರಸಿದವರಾರೊ?
ದೇವದಾನವ ಮಾನವರೆಲ್ಲ,
ಈ ಬಾಣಕ್ಕೆ ಗುರಿಯಾಗಿ ಬಿದ್ದರು.
ಗುಹೇಶ್ವರ ಶೂನ್ಯ ನಿಶ್ಶೂನ್ಯದೊಳಗೆ!
ರುದ್ರ ತಮೋಗುಣವನ್ನು, ವಿಷ್ಣು ರಜೋಗುಣವನ್ನು, ಬ್ರಹ್ಮ ಸಾತ್ವಿಕಗುಣವನ್ನು ಪ್ರತಿನಿಧಿಸುತ್ತಾರೆ. ಹೀಗಾಗಿ ಇಲ್ಲಿ ತಮೋಗುಣವನ್ನೇ ಬಿಲ್ಲಾಗಿಸಿ, ರಜೋಗುಣವನ್ನು ಬಾಣವಾಗಿಸಿಕೊಂಡು, ಸಾತ್ವಿಕ ಗುಣದ ಹೆದೆಯೇರಿಸಿಕೊಂಡು ಮೂರು ಲೋಕವನ್ನು...
ಕವನ
ಚನ್ನಬಸವಣ್ಣನವರ ವಚನ
ಆರಂಬವ ಮಾಡಿ ಸಂಸಾರಸ್ಥಿತಿ
ಕಳೆಯದಿದ್ದರೆ ಆ ಆರಂಬವೆ ಕೇಡು.
ವ್ಯವಹಾರವ ಮಾಡಿ ಸಂಸಾರಸ್ಥಿತಿ
ಕಳೆಯದಿದ್ದರೆ ಆ ವ್ಯವಹಾರವೆ ಕೇಡು.
ಓಲಗವ ಮಾಡಿ ಸಂಸಾರಸ್ಥಿತಿ
ಕಳೆಯದಿದ್ದರೆ ಆ ಓಲಗವೆ ಕೇಡು.
ಭಕ್ತಿಯ ಮಾಡಿ ಜನನ ಮರಣ
ವಿರಹಿತನಾಗದಿದ್ದರೆ, ಆ ಭಕ್ತಿಯ ಕೇಡು.
ಕೂಡಲಚೆನ್ನಸಂಗಮದೇವಾ.
ಕೃಷಿಕನಾಗಿ ಕೃಷಿ ಕಾಯಕವನ್ನು ಮಾಡಿಯೂ ಸಾಂಸಾರಿಕವಾದ ಕಷ್ಟಕಾರ್ಪಣ್ಯಗಳನ್ನು ನೀಗಿಸಿಕೊಳ್ಳದಿದ್ದರೆ ಅಂತ ವ್ಯವಸಾಯವೇ ಬೇಡ. ವ್ಯಾಪಾರಸ್ಥನಾಗಿ ವ್ಯವಹಾರ ಮಾರ್ಗವನ್ನು ಅನುಸರಿಸಿಯೂ ಸಾಂಸಾರಿಕ ತೊಂದರೆ -...
ಕವನ
ವಿವೇಕನ ನೋಟ
ಭಾರತ ಮಾತೆಯ ಹೆಮ್ಮೆಯ ಸಿಂಹಗಳೇ
ಏಳಿ ಎದ್ದೇಳಿ ಎಂದು ಕರೆಕೊಟ್ಟು
ಹೋದ ನನಗೆ ನಿದ್ದೆಯೇ ಇಲ್ಲ
ಮಲಗಿದವರನ್ನು ಎಚ್ಚರಿಸಬಹುದು
ಮಲಗಿದಂತೆ ನಾಟಕ ಮಾಡುವವರನ್ನು ನಾ ಹೇಗೆ ಎಚ್ಚರಿಸಲಿ
ಭರತ ಭೂಮಿಯ ಪುಣ್ಯ ಸಿಂಹಗಳೇ
ಭಾರತಮಾತೆ ಭರತಭೂಮಿಯ
ಚರಿತೆ ಮರೆತು ಹೋಯಿತೇ?
ಯುವಕರ ಐಕಾನ್ ಆಗಿದ್ದ ನನ್ನನ್ನು
ಕೇವಲ ಚಿತ್ರಪಟ ಜನ್ಮದಿನಾಚರಣೆಗೆ ಸೀಮಿತಗೊಳಿಸಿದ್ದೀರಿ
ಭಾರತ ಬದಲಾಗುವುದನ್ನು ಕಾಣಬೇಕೆಂಬ ಬಯಕೆಯಿಂದ ನನ್ನ ದೂರದೃಷ್ಟಿ ನೆಟ್ಟಿರುವೆ
ಬದಲಾಯಿಸುವಿರಾ ಭವಿಷ್ಯದ ಭಾರತವ?
ಸಹೋದರ ಸಹೋದರಿಯರೇ ನಿಮ್ಮೊಡಲಿನಿಂದ...
ಕವನ
ಕರ್ಮದ ಧರ್ಮ
(ಹನುಮನಿಗೆ ಒಂದು ದಿನ ಬಹಳ ಹೊಟ್ಟೆ ಹಸಿದಿತ್ತು.ಗವಿಯಲ್ಲಿ ತಿನ್ನಲು ಏನೂ ಇದ್ದಿರಲಿಲ್ಲ.ಆತ ಹೊರಗೆ ಬಂದು ಅತ್ತ ಇತ್ತ ನೋಡಿದ.ಅಲ್ಲೂ ಏನೂ ಸಿಗಲಿಲ್ಲ.ಮೂಡಣದತ್ತ ಮುಖ ಮಾಡಿದಾಗ ಉದಯಿಸುತ್ತಿರುವ ಸೂರ್ಯ ಹಣ್ಣಿನಂತೆ ಕಂಡನು.ಹಸಿದ ಹನುಮನು ಸಂತಸಗೊಂಡು ಬಾನಿಗೆ ನೆಗೆದನು. ಸೂರ್ಯನನ್ನು ತಿನ್ನಲು ಹೋದ ಹನುಮ ಇಂದ್ರನ ವಜ್ರಾಯುಧಕ್ಕೆ ಮೂಗು ಘಾಸಿಸಿಕೊಂಡು ಬಂದನು. ಹನುಮ ದೇವ ಶೌರ್ಯ ವರ್ಮನ...
ಕವನ
ಗಾಂಧಿ ಸ್ಮರಣೆ
ಗಾಂಧಿ ತಾತಾ ನೀವೊಬ್ಬ
ನನ್ನ ಕಣ್ಣಿನ ಮಾಯಪ್ರಪಂಚ ಇದ್ದಂಗ
ನಿನ್ನ ನೋಡಿದ್ರ ಸಾಕ
ನನ್ನ ಎದ್ಯಾಗಿನ ನೋವು ಎಲ್ಲಾ ಮರಿತೀನಿ
ನಮ್ಮ ದೇಶಾದಾಗ ಹುಟ್ಟಿ
ಪರದೇಶದ ಮಂದಿ ಕಷ್ಟಾನ ನನ್ನ ಕಷ್ಟಾ ಅಂತ ಹೇಳಿ ಅವರ ಬದುಕು ಹಸನು ಮಾಡಿಯಲ್ಲೋ ತಾತ
ನಿನ್ನ ಬದುಕಾರ ಹೆಂಗೈತಿ ಅಂತಾ ನೋಡಿದ್ರ
ತೆರೆದಿಟ್ಟ ಪುಸ್ತಕ
ಬಿತ್ತಿ ನಿಂತ ಹೊಲ
ಒಳಗಿರೋದೆಲ್ಲಾ ಕಾಣೋ ಗಾಜಿದ್ದಂಗ
ಹೀಂಗ ಇರಾಕ ಸಾಧ್ಯಾನಾ ಅಂತನಸತೈತಿ
ಊರ ಉಸಾಬರಿ...
ಕವನ
ಮರೆಯಲಾಗದ ಮಹಾನುಭಾವರು
ಬದುಕಿನ ಭವಣೆಯ ಮೀರಿ ನಿಂತ
ಮಹಾನುಭಾವ ತಲ್ಲೂರ ರಾಯನಗೌಡರು
ನೆನಪು ಮತ್ತೆ ಮತ್ತೆ ಬರುತಿದೆ
ಸ್ವಾತಂತ್ರ್ಯ ಸಮಾಜವಾದಿಗಳ ನೆನಪಿನೊಳಗೆ
ಚಿತ್ತಿ ನಕ್ಷತ್ರ ನಾಲ್ಕನೆಯ ಚರಣ
ಪೆಬ್ರುವರಿ ೨೮. ೧೯೧೦
ಧರೆಯೊಳು ತಲ್ಲೂರ ಗ್ರಾಮದ
ಶರಣ ದಂಪತಿ ಲಿಂಗನಗೌಡ-ಬಸಮ್ಮ
ಉದರದೊಳು ಮೂಡಿದ ನಕ್ಷತ್ರವಿದು
ಬಾಲ್ಯದೊಳು ತಾಯಿಯ ಅಗಲಿಕೆಯ
ನೋವು ಉಂಡು ಅಜ್ಜಿಯ ಆಶ್ರಯದಿ
ಬೆಳೆಯುತಲಿ ಶಿಕ್ಷಣ ಪಡೆಯಿತು
ಸ್ವಾತಂತ್ರ್ಯದ ದಿನಗಳಲಿ
ಮಹಾತ್ಮಾ ಗಾಂಧೀಜಿಯವರ ಪ್ರಭಾವ ವಲಯದಿ
ಉಕ್ಕುತ ಸ್ವಾತಂತ್ರ್ಯ ಹೋರಾಟದ ಕಿಚ್ಚು
ಎಲ್.ಎಲ್.ಬಿ.ಕಲಿಕೆಯ ತಿಲಾಂಜಲಿ
ದುಮ್ಮಿಕ್ಕಿ ಸ್ವಾತಂತ್ರ್ಯ...
ಕವನ
ಶರಣು ಗುರುವೆ ಶರಣು
ಕರುಣಾಮಯಿ ತಂದೆ ಗುರುವೆ
ಕರಮುಗಿಯುವೆ ಶರಣು ಗುರುವೆ ಶರಣು
ಕಾನನದಿ ಅಲೆವಂಗೆ
ಕಾಣದೇ ಗುರುವಾದವಗೆ ಶರಣು
ಕಿನ್ನರರ ಕಿತಾಪತಿಗಳ ಸಹಿಸಿ ದಹಿಸಿದ
ಕಿರಣ ಸ್ವರೂಪಿ ಗುರುವೆ ಶರಣು
ಕೀಟಲೆಗಳ ಬದಿಗೊತ್ತಿ
ಕೀರ್ತಿ ತರುವಂತೆ ಬೆಳಸಿದ ತಮಗೆ ಶರಣು
ಕುಣಿಸಿ ನಲಿಸಿ ಕಲಿಸುತ
ಕುಶಲಮತಿಗಳಾಗಿಸಿದಾತಗೆ ಶರಣು
ಕೂಡಿ ಬಾಳುವ ನೀತಿ
ಕೂಡಿ ನಲಿಯುವ ರೀತಿ ಕಲಿಸಿದಾತಗೆ ಶರಣು
ಕೆಸರಿನಲ್ಲಿರುವ ಕಮಲದಂತೆ
ಕೆಸರಿನಲ್ಲಿರುವ ಎರೆಹುಳುವಿನಂತೆ ಬಾಳೆಂದಾತಗೆ ಶರಣು
ಕೇದಿಗೆಯ ಘಮಲು ಹೊತ್ತ
ಕೇವಿಗೆಯ ಹೊಳಪುಳ್ಳವಗೆ ಶರಣು
ಕೈ...
ಕವನ
ಮೆಲುಕು
ಬೆಳ್ಳಂ ಬೆಳ್ಗೆ ಅವ್ವನ ಕೂಗು
ಕೇಳಿದ್ರೂ ಕೇಳದಂತೆ ಮಲ್ಗೋದು
ಇತ್ತ ನಾನುನೂ ಕಿರುಚಿದೆ
ಅವ್ವ ಕರಿತೈತೆ ಎದ್ದೇಳಣ್ಣಯ್ಯ
ಜಳಕಾ ಮಾಡಿ ಮಡಿಉಟ್ಕೊ
ರಾಕಿ ಕಟ್ಟಸ್ಕೊ ಹಬ್ಬಾ ಐತಿ
ಸೋಂಬೇರಿ ಸೋಮಾರಿ ನೀ
ಹೊರ್ಗ ಹೋಗಬ್ಯಾಡಾ ಅಣ್ಣಯ್ಯ
ಮತ್ತದೇ ಜಗಳಾ ಜಡೆ ಎಳೆದು
ರಿಬ್ಬನ್ ಜಗ್ಗಿ ನೂಕಿ ಓಡೋದು
ಅವ್ವನ ದನಿಗೆ ಮುದುಡಿಕೊಳ್ಳುವ
ಮುದ್ದು ಪೆದ್ದು ಅಣ್ಣಯ್ಯ
ರಾಕಿ ಕಟ್ಟಿ ಸಕ್ಕರೆ ಬದಲು
ಉಪ್ಪು ತಿನಿಸಿ ಗೋಳಾಡಿಸಿ
ತಲೆಗೂದಲ ಜಗ್ಗಿ ತಿವಿದು
ಓಡಿದ ನೆನಪು ಮಾಸಿಲ್ಲ ಅಣ್ಣಯ್ಯ
ಅಪ್ಪಂಗೆ...
ಕವನ
ಭಾರತೀಯರ ಹಬ್ಬ
ಮರೆಯದಿರಿ ಭಾರತದ, ಪ್ರಜೆಗಳೇ
ಸ್ವಾತಂತ್ರ್ಯವ, ತಂದಕೊಟ್ಟವರ ಕಹಳೆ
ತ್ಯಾಗ ಬಲಿದಾನದ ವೀರರವರು
ಅಮರರಾಗಿ ಕೈಗಿತ್ತರು ದೇಶದ ತೇರು
ವ್ಯರ್ಥವಾಗದಿರಲಿ, ವೀರರ ಹನಿಹನಿ ರಕ್ತ
ಸಂಕೋಲೆಯಿಂದ ನಮ್ಮ, ದೇಶವಾದ ಮುಕ್ತ
ಸ್ವಾತಂತ್ರ್ಯಕೆ ಹೋರಾಡಿದ ದೇಶ ಭಕ್ತರವರು
ಅವರ ದಿಟ್ಟ ಹೆಜ್ಜೆಯೇ ನಮಗಾದ ಉಸಿರು
ಶಾಂತಿ ಅಹಿಂಸೆಯವ ಅವರೇರಿದ ಮೆಟ್ಟಿಲು
ಈ ದಿನತೂಗುತಿವೆ, ಭಾರತದ ಮನೆತೊಟ್ಟಿಲು
೧೫ ಅಗಷ್ಟ ನಮ್ಮೆಲ್ಲರ, ಹರ್ಷತುಂಬಿದ ಹಬ್ಬ
ಭಾರತೀಯರ ಸಹನೆಗೆ ಬ್ರಿಟಿಷರಾದರು ಸ್ತಬ್ಧ
ಅಖಂಡ ಭಾರತಕೆ ಪಣತೊಟ್ಟ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



