ಕವನ

ಮಕ್ಕಳ ಕವಿತೆ

ಮಕ್ಕಳ ಕವಿತೆ ಒಂದು ಎರಡು ತಿನ್ನಲು ಬೇಕು ಲಡ್ಡು ಮೂರು ನಾಲ್ಕು ಇಡ್ಲಿ ಚಟ್ನಿ ಸಾಕು ಐದು ಆರು ತಿಳಿ ಬದುಕಿನ ಸಾರ ಏಳು ಎಂಟು ಶ್ರಮದೊಂದಿಗೆ ನಂಟು ಒಂಬತ್ತು ಹತ್ತು ಯಶದ ಮೆಟ್ಟಿಲು ಹತ್ತು ಲೀಲಾ ರಜಪೂತ ಹುಕ್ಕೇರಿ

ಕವನ: ಪ್ರೇಮಾಂತರಂಗ

ಪ್ರೇಮಾಂತರಂಗ ನಿನ್ನ ಸೆಳೆತ ಕಲಾತ್ಮಕ ಸಂವೇದನೆ ಬಯಸಬಹುದು ಎನಿಸಿರಲಿಲ್ಲ ನಿನ್ನ ನಾ ಅಂದು ಆದರೂ ನಿನ್ನ ನುಡಿಗಳಲ್ಲೇನೋ ಸೆಳೆತ ಸೌಂದರ್ಯ ಕಪ್ಪು ಬಿಳುಪಿನಲ್ಲಿಲ್ಲ ಸುಂದರವಾದ ಆಲೋಚನೆ, ಸುಂದರವಾದ ಕ್ರಿಯೆ,  ಭೌತಿಕವು ದೈವಿಕತೆಯ ಕುರುಹು ಬರೀ ಭ್ರಾಂತಿ ಇರದ ಲೋಕ ಬೇಕುಬೇಡಗಳ ಪೂರೈಸುವ ಬಂಧನ ಹೃದಯಾಂತರದ ಮಿಡಿತ ಬಾಹ್ಯ ಕಣ್ಣು ನೋಡದ ಆಂತರಿಕ ಸ್ಪಂದನೆ ಬರೀ ಮಾತುಗಳು ಮನೆ ಕಟ್ಟಲಾಗದ ಸ್ಥಿತಿ ಆತ್ಮ ಮತ್ತು ಆತ್ಮಗಳ ಮಿಲನ ಸ್ಥಿತಿ ಮೇಲ್ಮೈ ದೃಷ್ಟಿಗೆ ಗೋಚರಿಸದ ಆಂತರ್ಯ ಎರಡು ಜೀವಗಳ ಮನದಾಳದ...

ಕವನ: ನಾ ನಿನಗೆ- ನೀ ನನಗೆ

ನಾ ನಿನಗೆ- ನೀ  ನನಗೆ ಎಲ್ಲೋ ಹುಟ್ಟಿ ಎಲ್ಲಿಯೋ ಹರಿದು ನದಿ ಸಾಗರವ ಸೇರುವ ಹಾಗೆ ಎಲ್ಲಿಯೋ ಇರುವ ನಾವು ಪ್ರೀತಿಯ ಅಲೆಯಲ್ಲಿ ಸೇರಿ ಭಾವನಾತ್ಮಕ ಬಂಧದಲ್ಲಿ ಜೀವನ ಕಳೆಯುತಿರುವೆವು ನಿನಗೆ ಅಲ್ಲಿ ನೋವಾದರೆ ನನಗೆ ಇಲ್ಲಿ ವ್ಯಥೆ ಹೇಗೆ ನಿನ್ನ ಸಲುಹಲಿ  ಚಿಂತೆ ಕಾಡುತಲಿ ನೋವ ಅನುಭವಿಸುತಿರುವೆ ಹೃದಯವು ಅಷ್ಟು ಹಚ್ಚಿಕೊಂಡಿದೆ ನಿನ್ನ ನಾನು ನನ್ನದೆಂಬ ಭಾವಗಳ ಸೆಳೆತ ಬಂಧಿಸಿಹುದು ಪ್ರೀತಿಯಲಿ ನಮ್ಮನು ಬಿಟ್ಟೆನೆಂದರೂ ಬಿಡದೀ ಬೇಗುದಿಯ ಛಾಯೆ. ಪ್ರೀತಿ ಯೆಂದರೆ ಹೀಗೇನೇ ಬಿಡದ ನಂಟನು ಮೂಡಿಸಿಹುದು ಪ್ರೀತಿ ಪ್ರೇಮಕೆ...

ಕವನ: ತುಂತುರು ಮಳೆ

  ತುಂತುರು ಮಳೆ ವರುಣನಾಗಮನದಿ ಭುವಿಗೆ ಕಳೆ ಬಾಣಂಚಿನ ಮಡಿಲಿನಿಂದ  ಜಾರಿ  ಭೂಮಾತೆಯ ಒಡಲ ಸೇರಿ  ತಂಪೆರಗಿತು ಸುತ್ತಲೂ ಹರಡಿ ಮೈ ಜಾಡಿಸುವ ಗುಬ್ಬಚ್ಚಿಗಳು ಗರಿಗೆದರುವ ಸುಂದರ ನವಿಲುಗಳು  ಎಲೆಗಳಿಂದ ಜಾರುವ ನೀರ ಬಿಂದುಗಳು  ಆ ಬಿಂದುಗಳ ಹೊತ್ತು ನಿಂತ ಸುಮಗಳು ತಂಪಾದ ಗಾಳಿಯ ಇಂಪಿನ ಒಡನಾಟ  ಗಾಳಿಯಲ್ಲಿ ತುಂತುರು ಹನಿಗಳ ಚೆಲ್ಲಾಟ  ರೋಮಾಂಚನಗೊಳಿಸುವ ವಾತಾವರಣ  ಮುಂಗಾರಿನ ಮಳೆಯ ಈ ಸಂಚಲನ ಸದ್ದು ಗದ್ದಲಗಳಿಗೆ ಕೊಂಚ ವಿರಾಮ  ಸಂಚಾರ ವಿಹಾರಕ್ಕೆ ಹಾಕುವ ಕಡಿವಾಣ ತುಂತುರು ಮಳೆಯ ಆಸ್ವಾದಿಸೋಣ ಮಳೆ...

Poems: ಇವು ಸ್ಪೆಶಲ್ ನಗೆ-ಹನಿಗವಿತೆಗಳು

ವರ್ತಮಾನದ ವಿದ್ಯಮಾನಗಳತ್ತ ಹಾಸ್ಯದ ಹೊಂಬೆಳಕು ಚೆಲ್ಲುವ ಅಕ್ಷರಪ್ರಣತೆಗಳು. ಇಲ್ಲಿ ವಿನೋದವಿದೆ, ವಾಸ್ತವವಿದೆ, ಜೊತೆಗೆ ಸಣ್ಣದೊಂದು ವಿಷಾದವೂ ಇದೆ. ಸೌಲಭ್ಯಗಳಿರಲಿ, ಅವಕಾಶಗಳಿರಲಿ ಅದನ್ನು ಎಷ್ಟು ಸೂಕ್ತವಾಗಿ, ಸಮಯೋಚಿತವಾಗಿ, ಸಮರ್ಪಕವಾಗಿ, ಯಾರಿಗೂ ಹೊರೆಯಾಗದಂತೆ, ಎಲ್ಲೂ ಕೊರೆಯಾಗದಂತೆ ನಿಭಾಯಿಸುವ ಜವಾಬ್ಧಾರಿ, ಕೊಡುವವರ ಮೇಲಷ್ಟೇ ಅಲ್ಲ, ಬಳಸಿಕೊಳ್ಳುವವರ ಮೇಲೂ ಇರುತ್ತದೆ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.1. ಸಾರಿಗೆ..! ತೀರ್ಥಕ್ಷೇತ್ರಗಳಲ್ಲಿ  ಸಿಕ್ಕಾಪಟ್ಟೆ ಬೇಡಿಕೆ  ಅನ್ನ...

ಕವನ: ಹೇ ಗುರುವರ್ಯ…

ಹೇ  ಗುರುವರ್ಯ… ಅಜ್ಞಾನ ಕಳೆದು ಜ್ಞಾನ ನೀಡಿ ಜನತಾ ಗುರುಕುಲ ವಿದ್ಯಾ ಆಲಯದೊಳ್ ಮನುಜನ್ಮ ಜ್ಞಾನಜ್ಯೋತಿಯೊಳ್… ವಿದ್ಯೆ ನೀಡಿದ ಗುರುವರ್ಯ ನಿಮಗೆ ನನ್ನ ನಮನ ಬೆಳಕು ಕಾಣುತಿಹೆ ಮನದಾಕಾಂಕ್ಷೆಯೊಳು ನೂರಾರು ವಿದ್ಯಾರ್ಥಿಗಳು ವಿದ್ಯೆಯಂಚಿನ ಬುದ್ಧಿ ರತ್ನ ರಾಶಿಯ ಹೊನ್ನು ಉತ್ಸಾಹ ಉಲ್ಲಾಸದಾ ಬುಗ್ಗೆಯೊಳ್ ನೀನ್ ಮರೆಯಲಾಗದ ಗುರುವರ್ಯ… ಮಕ್ಕಳ ತಪ್ಪು ಹೆಜ್ಜೆಯ ಬಲೆ ಬಿಡಿಸಿ ತಪ್ಪುದಾರಿಯ ತಡೆದು ಸರಿದಾರಿಯೊಳ್ ನಡೆಯ ಕಲಿಸಿ ಮರೆಯಲಾಗದ ನೆನಪಾಗಿ ಹೇ ಗುರುವರ್ಯ….. ಆತ್ಮವಿಶ್ವಾಸ, ಶಿಸ್ತಿನಾ ಬೆಳೆ ಬಿತ್ತಿ ವಿದ್ಯಾರ್ಥಿಗಳ...

ಕವನ: ಪರಿಸರ ನೀ ಉಳಿಸು ಸರಸರ

ಪರಿಸರ ನೀ ಉಳಿಸು ಸರಸರ ನಿನ್ನ ಪಾಪಗಳೆಲ್ಲವ ಕ್ಷಮಿಸಿ ಮಾತೃ ಹೃದಯದಿ ಹರಸುತಿಹಳು ಭೂ ಮಾತೆ ಸ್ವಾರ್ಥಕಾಗಿ ಆಕೆಯ ಒಡಲ ಬಗೆಯುವೆ ಏಕೆ..ಓ ಮೂಢಾ !! ನಗರೀಕರಣದ ನೆಪದಲಿ ವೃಕ್ಷಗಳ ಕಡಿದೆ, ಬೆಟ್ಟಗುಡ್ಡಗಳ ಆಪೋಶನ ಮಾಡಿದೆ, ಸುಂದರ ಪ್ರಕೃತಿಯ  ಕೊಂದು, ಬಾರ್,ರೆಸಾರ್ಟಗಳ ಮಾಡಿ ನೀ ಉದ್ಧಾರವಾದೆ.. ಆಧುನೀಕರಣದ  ನೆಪದಲಿ ಭೂತಾಯಿಯ ಉಸಿರಾದ ಬೆಟ್ಟಗುಡ್ಡಗಳ ಬಗೆದೆ, ಹಸಿರು ಮರಗಳ ಜೀವಂತ ಕೊಂದೆ, ಎಲ್ಲಕೂ ಸಮಾಜದ ಪ್ರಗತಿಯ ನೆಪ ಹೇಳಿದೆ.. ಮಲೆನಾಡು ಹಸಿರು, ಗುಡ್ಡಬೆಟ್ಟಗಳು   ಕರಗಿ ಬಯಲಾಯಿತು,ಮಳೆ...

ಕವನ: ಹೆಮ್ಮೆ ಪಡು ಭಾರತೀಯ ಮನವೆ

  ಹೆಮ್ಮೆ ಪಡು ಭಾರತೀಯ ಮನವೆ ಹೆಮ್ಮೆ ಪಡು ಭಾರತೀಯ ಮನವೆ ಸ್ವಾಭಿಮಾನದ ಸೌಧ  ತಲೆಯೆತ್ತಿದೆಯೆಂದು ! ಕರ್ತವ್ಯ ಪಥದಲ್ಲಿಂದು ಭಾರತ ಮುನ್ನಡೆಯುತ್ತಿದೆಯೆಂದು ! ತಳ್ಳಿ ಬಿಡು  ಒಣ ಪೂರ್ವಗ್ರಹವ ಜೋತು ಬಿದ್ದ ಆ 'ಮನು' ಮನದ ಬಿಳಲಿನಿಂದ ಕೆಳಗಿಳಿ ಹೆಮ್ಮೆ ಪಡು ಇಂದಾದರೂ ಭಾರತ ವಿಶ್ವಗುರುವಾಗಿದೆಯೆಂದು ! ಬಿಟ್ಟು ಬಿಡು ಜಾತ್ಯತೀತತೆಯೆಂಬ  ನಾಟಕವ ಕಣ್ದೆರೆ, ಎದೆ ಮುಟ್ಟಿಕೋ ತಟ್ಟಿ ಕೋ ಸ್ವ- ಹೃದಯವ ಆತ್ಮ ವಂಚನೆಯನ್ನು ಬಿಸುಟು ಪ್ರಶ್ನಿಸಿಕೋ ನಿನ್ನ ನೀನು ನಿಜವಾಗಲೂ ನೀ ಜಾತ್ಯತೀತನೆ....ಎಂದು ! ಈ ಸೌಧವಿದು...

ಸ್ವರಗಳಲ್ಲಿ ಅಮ್ಮ

ಅ. ಅಮ್ಮ ನಿನ್ನ ಒಡಲಿನ          ಈ ಕರುಳ ಬಳ್ಳಿ ಕುಡಿಗೆಆ. ಆನಂದ ನೀಡಿಹುದು          ನಿನ್ನ ಗರ್ಭವೆಂಬ ಸ್ವರ್ಗ.ಇ. ಇಳೆಯ ಗುಣ ಹೊತ್ತು           ಸಲುಹಿದೆ ಜಗದಲ್ಲಿ ನನ್ನ.ಈ. ಈಜಿ ಜಯಿಸಿ ಕಷ್ಟದಿ          ನೀ...

ಕವನ: ಜ್ಞಾನದ ಬೆಳಕು

ಜ್ಞಾನದ ಬೆಳಕು ಬುದ್ಧ ಪೂರ್ಣಿಮೆ ಬುದ್ಧ ಪೂರ್ಣಿಮೆ ನಮ್ಮ ಜೀವನದ ಜ್ಞಾನ ಬೆಳಕು ಬುದ್ಧ ಪೂರ್ಣಿಮೆ ಮಾನವೀಯತೆ ಶಾಂತಿ ಸಂದೇಶದ ಬುದ್ಧ ಪೂರ್ಣಿಮೆ ಮಂದಸ್ಮಿತ ವದನ ಸಾಕಾರ ಮೂರ್ತಿ ಕರುಣಾಮಯಿ ಸತ್ಯ ಬೋಧಕ ಶಾಂತಿ ಸ್ಥಾಪಕ ಬುದ್ಧ ಅರಸೊತ್ತಿಗೆಯ ತ್ಯಜಿಸಿ ಬದುಕಿನ ಶಾಂತಿ ನೆಮ್ಮದಿ ಅರಸಿ ಬುದ್ಧನಾದ ಜಗಕೆ ದಾರಿದೀಪವಾದ ಮಹಾನ್ ಚೇತನ ಆಧ್ಯಾತ್ಮಿಕ ಪುರುಷ ಅಹಿಂಸಾ ತತ್ವ ಬೋಧಕ ಮುದುಕ ಶವ ಕಂಡ ಕ್ಷಣ ಮರುಕ ಜೀವನ ನಶ್ವರ ತತ್ವ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group