ಕವನ

ಕವನ: ಪಂಚಮಿ

ಪಂಚಮಿ ಪಂಚಮಿ ಹಬ್ಬ ಬಂದೇ ಬಿಟ್ಟಿತು ಹೆಂಗಳೆಯರಿಗೆ ಸಂತಸ ತಂದಿತು| ತವರಿನ ಅಣ್ಣನ ಕರೆಯು ಬಂದಿತು ಮುತೈದೆಯರಾ ಮುಖವು ಅರಳಿತು ೧ ಸಡಗರದಿಂದ ಮಡಿಯನು ಉಟ್ಟು ಮಣ್ಣಿನ ನಾಗಗೆ ತನಿಯನು ಎರೆಯಲು ನೈವೇದ್ಯಕ್ಕೆ ಎಳ್ಳುಂಡೆ ತಂಬಿಟ್ಟಿಡಲು ಸಂತಸದಿಂದ ಕುಣಿಯುತಲಿಹರು ೨ ಸೋದರರೆಲ್ಲರ ಒಳಿತಿಗೆ ಪ್ರಾರ್ಥನೆ ಪತಿಯಾಯುಷ್ಯಕೆ ಭಜನೆ ವಂದನೆ ಹೆಣ್ಮಕ್ಕಳ ಈ ಹಬ್ಬವೇ ಪಂಚಮಿ ಸಂಭ್ರಮಿಸುವಳು ಮನೆಯಲಿ ಗೌತಮಿ ೩ ಜೋಕಾಲಿಯನು ಕಟ್ಟಿಹರಲ್ಲ ಶರತ್ತಿನೊಂದಿಗೆ ಹತ್ತುವರಲ್ಲ ಆಡಲು ವಯಸಿನ ಮಿತಿಯೇ ಇಲ್ಲ ಹಾಡುತ ಆಡುತ ಜೀಕುವರಲ್ಲ ೪ ಕಾಲದೊಂದಿಗೆ...

ಕವನ: ಓ ಕಲ್ಯಾಣಿಯೇ

ಓ ಕಲ್ಯಾಣಿಯೇ ಓ ಕಲ್ಯಾಣಿಯೇ.. ಓ ಪುಷ್ಕರಣಿಯೇ... ಧನ್ವಂತರಿಯ ಕ್ಷೇತ್ರದಲಿ ಶ್ರೀ ವೈದ್ಯನಾಥನ ಬಳಿಯಲಿ ಪಾಂಡವ ಸುತ ಭೀಮಸೇನನ ಗದೆಯ ಸ್ಪರ್ಶ ತಾಕಲು ಚಿಮ್ಮಿ ಭುವಿಯಿಂದ ಹೊರಬಂದ ಸಕಲ ರೋಗ ನಿವಾರಕ ಜೀವ ಸಂಜೀವಿನಿ. ಪುರಾತನ ಕಾಲದೊಳು ಹೊಮ್ಮಿದ ಸೆಲೆ ಭವಿಷತ್ ಕಾಲದೊಳು ರೋಗ ನಿರೋಧಕ ಶಕ್ತಿಯೊಳು ಪರಿಹರಿಸುತಲಿ ನಂಬಿ ಬರುವ ಭಕ್ತರ ಜೀವಸೆಲೆಯಾಗಿಹುದು ಇರುವುದು ನಿನ್ನೊಳು ಅಮೃತದ ದಿವ್ಯಔಷಧ ಶಕ್ತಿ ಹದಿನೆಂಟು ಬಗೆಯ ವೈದ್ಯ...

ಕವನ: ನಮ್ಮ ಹೆಮ್ಮೆಯ ಸೈನಿಕರು

ನಮ್ಮ ಹೆಮ್ಮೆಯ ಸೈನಿಕರು ತಂದೆ ತಾಯಿ ಹೆಂಡತಿ ಮಕ್ಕಳು ಅಕ್ಕ ತಂಗಿ ಅಣ್ಣ ತಮ್ಮರು ಸ್ನೇಹಿತರು ಬಂಧು ಬಾಂಧವರು ಎಲ್ಲ ಸಂಬಂಧಗಳ ತೊರೆದು ಹೋದವರು ತಾಯ್ನೆಲದ ರಕ್ಷಣೆಗೆ ಕಟಿಬದ್ದರಾದವರು //೧// ಜಾತ್ರೆ ನಿಬ್ಬಣ ಔತಣ ಕೂಟದಿ ನಾವು ಸಂಭ್ರಮ ಸಡಗರದಿರುವೆವು ನಾವು ಭಾರೀ ಭಕ್ಷ್ಯಗಳ ಸವಿವೆವು ನಾವು ಇದೆಲ್ಲ ತ್ಯಾಗವ ಮಾಡಿರುವರು ಅವರು ಅವರೇ ನಮ್ಮ ಹೆಮ್ಮೆಯ ಸೈನಿಕರು //೨// ಭಯವೆಂಬ ಪದದ ಅರ್ಥ ತಿಳಿಯದವರು ಸುಖವೆಂಬ ಪದ ತ್ಯಜಿಸಿ ನಿಂತವರು ಶರಣಾಗತರ...

ಕವನ: ಕಪಿಲೆ

ಕಪಿಲೆ ಕಲಕಲರವದೊಳು ಹರಿಯುತಿಹಳು ಕಪಿಲೆ ತನ್ನೊಡಲ ನೋವದನು ಯಾರಿಗೂ ತಿಳಿಸದೆ ತಿಳಿಮುಖದಿ ಶಾಂತರೂಪಿಣಿಯಾದರೊಮ್ಮೆ ರುದ್ರನರ್ತನ (ತಾಂಡವ)ವಾಡುತಾಳೆ ಮಗದೊಮ್ಮೆ. ನಿನ್ನೊಡಲ ಸೇರಲೆಂದೋ ಆಶಿಸಿದ್ದೆ ನಾನು ಅದರಿಂದ ಹೊರ ಬಂದೆ ಇಂದು ನಾನು ಕೈ ಬೀಸಿ ಕರೆಯುತಿದ್ದಳಂದು ನನ್ನ ಬರಬೇಡ ದೂರವಿರು ಎನ್ನುತ್ತಾಳಿಂದು. ನಿನ್ನ ಸೊಬಗದನು ನಾ ಹೇಗೆ ಬಣ್ಣಿಸಲಿ? (ನಾ ಹೇಗೆ ಬಣ್ಣಿಸಲಿ ನಿನ್ನ ಸೊಬಗನಿಂದು?) ಹಾರುತ್ತಾ ನಲಿಯುತ್ತಾ ಹರಿಯುವ ಸೊಬಗದನು ಕಪಿಲೇ...ನಿನ್ನ ಮತ್ತೆ ಮತ್ತೆ ನೋಡುವಾಸೆ ಎಂದೆಂದಿಗೂ ನನ್ನ ಗೆಳತಿಯಾಗಿರು ನೀನು. ಒಂದು ದಿನ...

ಕವನ: ಭಕ್ತಿ ಭಾವ

ಭಕ್ತಿ ಭಾವ ಭಜನೆ ಎಂದರೆ ಭಗವಂತನ ಧ್ಯಾನ ಶಿವಸ್ಮರಣೆಯ ತಪಸ್ಸು ಕಲಿಯುಗದಿ ಭಗವಂತ ಒಲಿಯುವನು ಭಜನೆಗೆ ನಾಮಸ್ಮರಣೆ ಎಂಬುದು ಭಗವಂತನ ಸ್ತುತಿ ಗೀತೆ. ಪದಗಳಲಿ ಬೆರೆತು ಭಾವಕ್ಕೆ ರಾಗ ಸೇರಲು ನಾವದರೊಳು ಸ್ಮರಿಸುತಿಹ ಭಗವಂತನ ನಾಮಸ್ಮರಣೆ. ಭಜನೆಯಿಂದಲಿ ಮೂಡಿ ಭಕ್ತಿಯ ಭಾವಪರವಶತೆಯ ತರಂಗದೊಳು ರೂಪಾತರದಿ ಭಕ್ತಿಯ ಪ್ರಕಟಣ ಭಜನೆಯಿಂದಾಗುವುದು ಭಕ್ತಿ ಭಗವಂತನ ಭಕ್ತಿ ಎಂಬುದು ಶ್ರೇಷ್ಠವಾದ ಶಕ್ತಿ. ಭಗವಂತನ ಮೇಲಿನ ನಂಬಿಕೆ. ನಮ್ಮ ಇಷ್ಟಾರ್ಥಗಳ ಸಿದ್ಧಿ. ಭಾವಪರವಶದ...

ಕವನ: ಆಷಾಢದ ಆಲಾಪ

ಆಷಾಢದ ಆಲಾಪ ಆಷಾಢದ ಆಲಾಪ ಹೊರಗೆ ಮಳೆ ಒಳಗೆ ವಿರಹ ವೇದನೆ ಇನಿಯಳಿರದ ಭಣಗುಡುವ ಮನೆ ಅತ್ತೆ ಸೊಸೆ ಮುಖ ನೋಡುವಂತಿಲ್ಲದ ಕಟ್ಟಪ್ಪಣೆ ಆಷಾಢದ ಚಿತ್ರ ಹಿಂಸೆ ನವದಂಪತಿಗೆ ದೂರವಾಗಿಹ ದೇಹ ಮತ್ತೆ ಮಿಲನದ ಧಗೆ ತವರು ಮನೆಯಲಿಹ ಇನಿಯಳ ನೆನಪು ಇನಿಯನಿಗೆ ಶೂನ್ಯ ಮಾಸವೀ ಆಷಾಢ ಅಗಲಿಕೆಯ ಕಹಿ ನೆನಪದು ಮತ್ತೆ ಮತ್ತೆ ಸಾವಿನ ನಾದ ನುಡಿಸುತಿಹ ಶಹನಾಯಿ ಕಿವಿಗಪ್ಪಳಿಸುತಿಹ ವಿರಹದ ನಾದ ಕಿಚ್ಚು ಹಚ್ಚುತಿಹ ನಲ್ಲೆಯ ನೆನಪು ನೋವು ನಲಿವುಗಳ...

ಕವನ: ದುಷ್ಟರೆ ಎಚ್ಚರ !!

ದುಷ್ಟರೆ ಎಚ್ಚರ !! ಸ್ವಂತ ನೆಮ್ಮದಿಗಾಗಿ ಸ್ವಂತ ಸ್ವಾರ್ಥಕ್ಕಾಗಿ ಸ್ವಂತ ಗೆಲ್ಲುವಿಕೆಗಾಗಿ ಸ್ವಂತ ಪ್ರತಿಷ್ಠೆಗಾಗಿ ಸ್ವಹಿತ ಸಾಧನೆಗಾಗಿ ಪವಿತ್ರ ಮನಗಳನ್ನು ಮರ್ಯಾದೆಗಂಜಿ ಬಾಳುವವರ ಮುಗ್ಧ ಹೃದಯಿಗಳ ಜೇವನವನ್ನು ದುರ್ಮಾರ್ಗದಿಂದ ದುಷ್ಟ ಶಕ್ತಿಗಳ ಪ್ರಯೋಗದಿಂದ ಗೌರವದಿಂದ ಬಾಳುವವರ ಬದುಕಿಗೆ ಬರೆ ಹಾಕಬಾರದು ಮಾತಿನಿಂದ ಇನ್ನೊಬ್ಬರ ಮನ ನೋಯಿಸಬಾರದು ಒಳ್ಳೆಯವರ ಕಣ್ಣೀರಿಗೆ ಕಾರಣವಾಗಬಾರದು ಅವರ ಪಾಲಿನ ಬದುಕು ಅವರಿಗಿರಬೇಕು. ನೀತಿವಂತರ ಉತ್ತಮ ಸುಖಜೀವನವನ್ನು ನೋಡಿ ಸಂತೋಷ ಪಡಬೇಕು ಕೆಟ್ಟದ್ದು ಮಾಡಬಾರದು. ಬೆನ್ನಿಗೆ ಚೂರಿ ಹಾಕೋ ಕೆಟ್ಟ ಕೆಲಸ ಮಾಡಬಾರದು ಹಾಗೇನಾದ್ರೂ ಮೋಸ ಮಾಡಿದ್ರೆ ಅದು ಅವರಿಗೆಸಗಿದ ಸಾವಿರ ಪಟ್ಟು ನಿಮಗೆ ಕೆಟ್ಟದ್ದಾಗುತ್ತದೆ...

ಕವನ: ಯೋಗದಿಂದ ಸಕಲವೂ ಸಶಕ್ತ

ಯೋಗದಿಂದ ಸಕಲವೂ ಸಶಕ್ತ (ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು) ಮನವ ಕೇಂದ್ರೀಕರಿಸಿ ಚಿಂತನೆಯಲ್ಲಿ ತೊಡಗಿಸಿ ಧ್ಯಾನವೆಂಬಸ್ತ್ರದಿ ತನುಮನ ಪವಿತ್ರಸ್ನಾನ ಗೈಯುತಲಿ ಚಿತ್ತವೃತ್ತಿಯ ನಾಶಗೊಳಿಸಿ ಸುಪ್ತಶಕ್ತಿಗಳ ಜಾಗೃತಗೊಳಿಸಿ ಆತ್ಮಪರಮಾತ್ಮನೊಳು ಲೀನಗೊಳಿಸಿ ಜೀವನ್ಮುಕ್ತಿಯೆಡೆಗೊಯ್ವುದೀ ಯೋಗ// ದೇಹ ಮನಸ್ಸುಗಳ ಸಾಮರಸ್ಯವನ್ನೇರ್ಪಡಿಸಿ ಚಂಚಲಮನ ನಿಯಂತ್ರಿಸಿ ವ್ಯಕ್ತಿತ್ವ ಉನ್ನತೀಕರಣಗೊಳಿಸಿ ಸಕಾರಾತ್ಮಕ ವ್ಯಕ್ತಿತ್ವ ಬಲಪಡಿಸಿ ದೈಹಿಕಮಾನಸಿಕ ಆಧ್ಯಾತ್ಮಿಕ ಶಿಸ್ತಿನ ಸಾಂಗತ್ಯವನ್ನೇಏರ್ಪಡಿಸುವುದೀ ಯೋಗ// ಆರೋಗ್ಯಭಾಗ್ಯವಿದು ಲಭಿಸುವುದು ದುರ್ಲಭವು ಯೋಗಶಕ್ತಿಯಿಂದಲೇ ರೋಗಕ್ಕೆ ಮುಕ್ತಿಯು ಪತಂಜಲಿ ಅಷ್ಟಾಂಗಯೋಗವೇ ಜ್ಞಾನದೀವಿಗೆಯು ವಿಶ್ವಯೋಗಕ್ಕಿಂದು ಹಿರಿಮೆಗರಿಮೆ ಪ್ರಧಾನಿ ಮೋದಿಯು// ಪತಂಜಲಿ...

ಕವನ: ಹುಡುಕುತಿರುವೆ ಇಲ್ಲದ ಅಪ್ಪನನು

ಹುಡುಕುತಿರುವೆ ಇಲ್ಲದ ಅಪ್ಪನನು ತಾಯಿಯ ಪ್ರೀತಿ,ಮಮತೆಯಲ್ಲಿ ಅಣ್ಣನ ತ್ಯಾಗ,ಜವಾಬ್ದಾರಿಗಳಲ್ಲಿ ಸಂಬಂಧಿಕರ ವಿಶ್ವಾಸ,ನಂಬಿಕೆಗಳಲ್ಲಿ ಹುಡುಕುತಿರುವೆ ಇಲ್ಲದ ಅಪ್ಪನನು ಹಿರಿಯರ ಬುದ್ದಿ ಮಾತುಗಳಲ್ಲಿ ಮಡದಿಯ ಪೆದ್ದು ಪ್ರೇಮದಲಿ ಮಗುವಿನ ಮುದ್ದು ಮುಖದಲ್ಲಿ ಹುಡುಕುತಿರುವೆ ಇಲ್ಲದ ಅಪ್ಪನನು ಗೊಡೆಯ ಗುಡಿ ಗುಂಡಾರದಲಿ ಜನದಟ್ಟನೆಯ ಸಂತೆ ಬಜಾರಗಳಲಿ ಜಗದ ಊರು ಕೇರಿಗಳಲಿ ಹುಡುಕುತಿರುವೆ ಇಲ್ಲದ ಅಪ್ಪನನು ಮೈ ಮನಗಳ ಮರೆಯಲ್ಲಿ ರಕ್ತದ ಪ್ರತಿ ಅಣು-ಅಣುವಿನಲಿ ಹೇಳಿಕೊಟ್ಟ ವಿಚಾರಧಾರೆಯಲಿ ಎಂದಿಗೂ ಜೊತೆಗೆ ಇರುವಾಗ ಎಲ್ಲೋ ಹುಡುಕಿದೆ ಇಲ್ಲದ ದೇವರನುಮಂಜುನಾಥ ಸಿಂಗನ್ನವರ ಪ್ರಥಮ ದರ್ಜೆ ಸಹಾಯಕ ಯರಗಟ್ಟಿ, ಆರೋಗ್ಯ...

ಕವನ: ಅಳಿಸಲಾಗದ ನೆನಪು

ಅಳಿಸಲಾಗದ ನೆನಪು ಅರಮನೆಯ ಅರಸ ನೀನಲ್ಲ ಆದರೂ ಅರಸನಂತೆ ನನ್ನ ಬೆಳೆಸಿದೆ ಮೊಮ್ಮಕ್ಕಳೊಡನೆ ಪ್ರೀತಿ ತೋರಿ ಕರಗದಷ್ಟು ನೆನಪುಳಿಸಿದ ಸಾಹುಕಾರ ಮತ್ತೆ ಮತ್ತೆ ನೆನಪಾಗುವುದು ನಿಮ್ಮ ಆ ಪ್ರೀತಿ ತೋರಿದ ದಿನಗಳು ಬೆಲೆ ಕಟ್ಟಲಾಗದ ಆಸ್ತಿ ನನ್ನ ಪಾಲಿಗೆ ನನ್ನ ನೋವಿನಲ್ಲೂ ನಗುತ್ತಿರುವೆ ನಿನ್ನ ನೆನಪಿನಾಳದಲ್ಲಿ ಹುದುಗಿ ಬರಿಯ ಕೆಮ್ಮು ಕೆಮ್ಮುತಲಿ ಸಾಗಿದೆ ಮಾತಾಡುತ ಆಸ್ಪತ್ರೆಗೆ ವೈದ್ಯರ ಬೇಗ ಕರೆ ಕೆಮ್ಮು ಜೋರಾಗುತಿಹುದು ವೈದ್ಯರು ಬರುವ ಮುಂಚೆ ನೀನಿರಲಿಲ್ಲ ದೇವರು ಒಂದೇ ಒಂದು ಅವಕಾಶ ನೀಡಲಿಲ್ಲ ಹೋಗುವಾಗ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group