ಕವನ

ಕವನ: ಸತ್ತು ಹೋದಮೇಲೆ…

ಸತ್ತು ಹೋದಮೇಲೆ... ಸತ್ತು ಹೋದಮೇಲೆ ಪಿಂಡ ಇಡುವ ಬದಲಿಗೆ ಬದುಕಿದ್ದಾಗ ಒಂದು ತುತ್ತು ಅನ್ನ ನೀಡ್ರಪ್ಪ.. ಸತ್ತು ಹೋದಮೇಲೆ ಹಾಲು ತುಪ್ಪ ಎರೆಯುವ ಬದಲಿಗೆ ಬದುಕಿದ್ದಾಗ ಒಂದು ಹನಿ ನೀರು ಕೊಡ್ರಪ್ಪ.. ಸತ್ತು ಹೋದ ಮೇಲೆ ಹಿಂದೆ ದಾಪುಗಾಲು ಹಾಕುವುದಕ್ಕಿಂತ ಬದುಕ್ಕಿದ್ದಾಗ ಜೊತೆಯಲ್ಲಿ ನಡಿರಪ್ಪ.. ಸತ್ತು ಹೋದ ಮೇಲೆ ಗೋರಿ ಕಟ್ಟಿಸುವುದಕ್ಕಿಂತ ಬದುಕ್ಕಿದ್ದಾಗ ಆಶ್ರಯಕ್ಕೆ ಕುಟೀರ ನೀಡ್ರಪ್ಪ.. ಸತ್ತು ಹೋದ ಮೇಲೆ...

ಕವನ: ಸ್ತ್ರೀ ಸಹೃದಯಿ

ಸ್ತ್ರೀ ಸಹೃದಯಿ ಮನೆಯ ಬೆಳಕಲ್ಲ ಅವಳು ಜಗದ ಬೆಳಕು ತೊಟ್ಟಿಲಲಿ ತೂಗಿದಳು ತ್ರೀ ಮೂರ್ತಿಗಳನ್ನು ದೇವಾನುದೇವತೆಗಳು ಶಿರಬಾಗಿದರು ಅವಳಿಗೆ ಸರಿ ಸಮನಾರಿಲ್ಲವೆಂದರು|| ಎಲ್ಲಕ್ಕಿಂತ ಶ್ರೇಷ್ಠಳು ತಾಯಿ ಜಗದಿ ಕಷ್ಟಗಳ ಬಚ್ಚಿಡುವಳು ಮನದಿ ಸಂಸಾರವನು ಸರಿದೂಗಿಸುವ ಸುಮತಿ ಸಂತಸವನು ಸುರಿಯುವ ಸಹೃದಯಿ|| ಆಕಾಶದೆತ್ತರಕೆ ಹರಡಿಹುದು ಕೀರ್ತಿ ಇತಿಹಾಸದ ಪುಟಗಳಲಿ ಅವಳದೇ ಛಾತಿ ಸೋಲೆಂಬುದಿಲ್ಲ ಇವಳ ಕಾಯಕದಲಿ ಪ್ರೀತಿಗೆ ಕೊನೆ ಇಲ್ಲ ಇವಳ ಮಡಿಲಲಿ||ಮಗಳಾಗಿ ಅಕ್ಕರೆಯ ಸಿಹಿ ತರುವಳು ಸಹೋದರಿಯಾಗಿ ಸವಿ ಪ್ರೀತಿ ಎರೆವಳು ಸಂಗಾತಿಯಾಗಿ ಬಾಳಿಗೊಲವ...

ಕವನ: ಹೆಣ್ಣು ಪ್ರಪಂಚದ ಕಣ್ಣು

ಹೆಣ್ಣು ಪ್ರಪಂಚದ ಕಣ್ಣು ಹೆಣ್ಣು..ಹೆಣ್ಣೆಂದೇಕೆ ಮುಖ ಮುರಿಯುವಿರಿ.. ತಾಳ್ಮೆಯ ಮತ್ತೊಂದು ಹೆಸರೇ ಹೆಣ್ಣು.. ಅಡುಗೆ ಮನೆಯಲಿ ರುಚಿಯಾದ ಸ್ವಾದ ಮಾಡುವ ಊಟ-ತಿಂಡಿಗಳಲೇ ಆಯುರ್ವೇದ , ಎಲ್ಲ ಗತ ನೆನಪುಗಳ ಕ್ಯಾಲೆಂಡರ್ !! ಇನ್ನೊಬ್ಬರ ಕಷ್ಟಕೆ ಮರುಗುವಾ ; ಪತಿ, ಮಕ್ಕಳು, ಮೊಮ್ಮಕ್ಕಳ ಪ್ರೀತಿಗೆ ಕರಗುವಾ , ಹೆಣ್ಣು ಈ ಜಗದ ಕಣ್ಣು.. ಆದಿಕಾಲದಿಂದಲೂ ಯಾರದೋ ಸ್ವಾರ್ಥಕೆ , ಮಾತೃವಾಕ್ಯ ಪರಿಪಾಲನೆಗೆ ಐವರ ಪತ್ನಿಯಾದಳು, ಯಾರದೋ ಜೂಜಿಗೆ ಪಣವಾದಳು , ಪತಿಯ ಅನುಮಾನ ಪರಿಹಾರಕೆ...

ಕವನ: ಅಪೇಕ್ಷೆ

ಅಪೇಕ್ಷೆ ಬೆಳ್ಳಿ ಬಂಗಾರದ ಆಸೆಯಿಲ್ಲ ಕೊಟ್ಟಿದ್ದೀಯ ನೀ ನನಗೆಲ್ಲ. ರೊಕ್ಕ ರೂಪಾಯಿಯ ನಸೆಯಿಲ್ಲ ಕರುಣಿಸಿದಿಯಾ ನೀನಿವಾಗಲೇ. ಆಸ್ತಿ, ಅಂತಸ್ತಿನ, ಮಕ್ಕಳ, ಸಂಬಂಧಿಕರ ಕೊರತೆಯಿಲ್ಲ ಜಾಮಯಿಸಿದಿಯ ಆಗಲೆ. ಜ್ಞಾನ, ಸ್ಥಾನದ ಹಪಹಪಿಯಿಲ್ಲ ತುಂಬಿದಿಯ ನನಗೆ ಬೇಕಾದಷ್ಟು ಆವಾಗಲೆ. ನಾನು ನನ್ನದೇಎಂಬ ಭಾವವಿಲ್ಲ. ನಿನ್ನದೆಲ್ಲವೂ ನನ್ನದೇಎಂಬ ಅಹಂ ನನಗೆ ಮೊದಲೇ ಇಲ್ಲ. ನೀ ಕರುಣಿಸಿದ್ದೆಲ್ಲವನ್ನು ನಿನ್ನ ಆನತಿಯಂತೆ ನಡೆದುಕೊಳ್ಳುತ್ತಿರುವೇನಲ್ಲ ದುಷ್ಟ, ದುರುಳರು ಆಡುವ ಚಿಲ್ಲರೆ ಮಾತುಗಳಿಗೆ ಗಮನ ಕೊಡುವ ಪ್ರಮೇಯವೇ ನನಗಿಲ್ಲ. ನಿನ್ನೊಂದಿಗೆ...

ಕವನ: ಭಕ್ತಿ

ಓಂ ನಮ ಶಿವಾಯ. ಸರಳ ಪೂಜಾ ಪ್ರಿಯ. ನಿನ್ನ ಅಲಂಕಾರಕ್ಕೆ ಬೇಕು ನಂದಾ, ಭದ್ರಾ, ಸುಮನಾ, ಸುಶೀಲಾ ಎಂಬ ಗೋವುಗಳ ಗೋಮಯದಿಂದ ತಯಾರಿಸಿದ ಭಸ್ಮ. ಆ ವಿಭೂತಿ ಧರಿಸಿದ ಭಕ್ತನಾಗಲಾರ ದರಿದ್ರ. ಪಂಚಾಕ್ಷರಿ ಮಂತ್ರ ಜಪಿಸಿದರೆ ಇಲ್ಲ ಕಷ್ಟ. ಶುದ್ಧ ಜಲ, ಬಿಲ್ವ ಪತ್ರೆ, ಶುದ್ಧ ಭಕ್ತಿ ಸಾಕು ನಿನ್ನೊಲಿಸಿಕೊಳ್ಳಲು. ನಿನ್ನನ್ನು ಪ್ರತಿಕ್ಷಣ ಸ್ಮರಿಸಿದವರಿಗಿಲ್ಲ ಕಷ್ಟ ನಷ್ಟ. ಕರುಣಿಸೆಲ್ಲರಿಗೂ ಒಳ್ಳೆಯ ಮನಸ್ಥಿತಿ. ಮಾಡು ಭೂಲೋಕವನ್ನು ಕೆಟ್ಟ ಕೃತ್ಯಗಳಿಂದ ವಿಮುಕ್ತಿ. ಅರ್ಪಿಸುವೆ ನಿನಗೆ ನನ್ನೀ...

ಕವನ: ಶಂಭೋ ಶಂಕರ

ಶಂಭೋ ಶಂಕರ ದಯಾಮಯಿ ಪರಮೇಶ ನಿನ್ನ ನಂಬಿಹೆವಯ್ಯ ಅನುದಿನದಿ ನಿನ್ನ ಸ್ಮರಣೆ ಶಿಶಿರ ಋತುವು ಕೃಷ್ಣ ಪಕ್ಷ ಬಹುಳ ಚತುರ್ದಶಿಯ ಶಿವರಾತ್ರಿ ಶಿವ ಸ್ಮರಣೆಯ ಜಾಗರಣೆಯ ಶುಭರಾತ್ರಿ ಅಗ್ನಿ ಕಂಭದ ಶಿರದಿ ಇಳಿಯುವ ಕೇತಕಿ ಪುಷ್ಪದಿ ಬ್ರಹ್ಮ ವಿಷ್ಣುವಿನ ಅಗ್ನಿ ಕಂಬದ ಶಿರ ಭಾಗದ ಹುಡುಕಾಟದಿ ಮಾಘ ಮಾಸದಿ ಲಿಂಗ ರೂಪವ ತಾಳಿದ ಪರಶಿವನ ಶಿವರಾತ್ರಿ ಹಗಲುಗಳಲಿ ಜರಗುವವು ಎಲ್ಲ ಪೂಜೆಗಳು ಜಾಗರಣೆಯ ಪೂಜೆಯ ವಿಶೇಷ ಶಿವರಾತ್ರಿ ಓಂ ನಮಃ ಶಿವಾಯ ಪಠಣದೊಳು ಪರಶಿವನ ಸ್ಮರಿಸುತಲಿ ಜಗದ ಒಳಿತನು...

ಕವನ: ಹೆಣ್ಣು

ಹೆಣ್ಣು ಹೆಣ್ಣು ಹೆಣ್ಣು ಎಂದು ಏಕೆ ತೆಗಳುವಿರಿ ಹೆಣ್ಣಲ್ಲವೇ ನಿಮ್ಮನ್ನು ಹೊತ್ತು ಹೆತ್ತು ಬೆಳೆಸಿದವಳು.. ಹೆಣ್ಣು ತಾಯಿಯಾಗಬೇಕು ಹೆಣ್ಣು ಸೋದರಿಯಾಗಬೇಕು ಹೆಣ್ಣು ಪತ್ನಿಯಾಗಬೇಕು ಹೆಣ್ಣು ಮಗಳಾಗಿ ಯಾಕಿರಬಾರದು.. ನಮ್ಮ ದೇಶವನ್ನಾಳಿದ ಇಂದಿರಾಗಾಂಧಿ ಹೆಣ್ಣಲ್ಲವೇ ಅಂತರಿಕ್ಷಕೆ ಹೋಗಿಬರಲಿಲ್ಲವೇ ಕಲ್ಪನಾ ಚಾವ್ಲಾ.. ಸಂಗೀತಕೆ ಹೊಸ ಇತಿಹಾಸ ಬರೆದ ಎಂ.ಎಸ್.ಸುಬ್ಬಲಕ್ಷ್ಮಿ ಹೆಣ್ಣಲ್ಲವೇ.. ದೇಶಕಾಗಿ ಹೋರಾಡಿದ ಝಾನ್ಸಿ ಲಕ್ಷ್ಮಿಬಾಯಿ ,ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಶತ್ರುಗಳ ಹಿಮ್ಮೆಟ್ಟಿಸಲಿಲ್ಲವೆ.. ರಾಷ್ಟ್ರವನು ರಕ್ಷಿಸಲಿಲ್ಲವೇ.. ತ್ರಿವೇಣಿ,ಅನುಪಮಾ ನಿರಂಜ‌ನ ಲೇಖನಿಯ ಮೂಲಕ ತಿಳುವಳಿಕೆ ನೀಡಲಿಲ್ಲವೇ. ಸಮಾಜದಿ...

ಮಿನಿಕವನ

ಇತ್ತೀಚೆಗೆ ತಿಳಿದು ಬಂದ ವಿಶೇಷವಾದ ಮಾಹಿತಿ ಏನೆಂದರೆ , " ಕ್ವಾರಂಟೈನ್ " ಮತ್ತು " ವ್ಹ್ಯಾಲೆಂಟೈನ್ " ಇಬ್ಬರೂ ಅವಳಿ ಸಹೋದರರು ಎಂಬುದು. " ಕ್ವಾರಂಟೈನ್ " ಹದಿನಾಲ್ಕು ದಿನ ಇರುತ್ತದೆ ಮತ್ತು " ವ್ಹ್ಯಾಲೆಂಟೈನ್ " ಹದಿನಾಲ್ಕು ತಾರೀಖಿನಂದು ಇರುತ್ತದೆ ! *********** ಒಂದು ಕಾಲ ಇತ್ತು. ಯಾರನ್ನಾದರೂ ನೀವು ಊರಿಗೆ ಕಳಿಸಲು ಬಸ್ ನಿಲ್ದಾಣಕ್ಕೊ ಅಥವಾ ರೈಲು ನಿಲ್ದಾಣಕ್ಕೋ ಹೋದಾಗ, ಎಲ್ಲರ ಕಣ್ಣುಗಳಲ್ಲಿ ನೀರಾಡುತ್ತಿದ್ದವು. ಆದರೆ, ಇಂದು ಸ್ಮಶಾನದಲ್ಲಿ ಕೂಡ ಜನರು ಅಳುವುದಿಲ್ಲ ! ಸದ್ಯದ ಪರಿಸ್ಥಿತಿಯಲ್ಲಿ ಜನನ ಮತ್ತು ಮರಣ ಕೂಡ ಬಲು ತುಟ್ಟಿಯಾಗಿವೆ. ಸಿಝೇರಿಯನ್ ಇಲ್ಲದೆ ಜನನವಿಲ್ಲ ವ್ಹೆಂಟಿಲೇಟರ್ ಇಲ್ಲದೆ ಸಾವು ಇಲ್ಲ ! ಅಳು ಮತ್ತು ನಗು ಕೂಡ ಇಂದು ನಕಲಿ ಆಗುತ್ತಿವೆ!- ನೀಲಕಂಠ...

ಕವನ: ಸುಸಂಸ್ಕೃತಿಯ ದೇಶ ನಮ್ಮ ಭಾರತ

ಸುಸಂಸ್ಕೃತಿಯ ದೇಶ ನಮ್ಮ ಭಾರತ ನಮ್ಮ ಭಾರತದ ಸಂಸ್ಕೃತಿ ಇತಿಹಾಸ ಪುಟದಲ್ಲಿ ಕೀರ್ತಿ ಶಿಲಾಶಾಸನಗಳೇ ಸಂಕೇತ. ಭಾಷೆಗಳು ಅನೇಕಾನೇಕ ವೇಷಭೂಷಣಗಳು ಆಕರ್ಷಕ ವಿವಿಧತೆಯಲ್ಲಿ ಏಕತೆ ಮನಮೋಹಕ ಸಾಹಿತ್ಯ ಲೋಕದ ಸಾಗರ ವಚನಗಳೇ ಸುವರ್ಣಭಂಡಾರ ಕನ್ನಡ ಜ್ಞಾನಪೀಠವು ಭರಪೂರ ಕ್ರೀಡಾಂಗಣದೊಳು ಸಾಧನೆ ಭಾರತ ಪಡೆದಿದೆ ಮುಂಚೂಣಿ ಕನಕ,ಕಂಚು ರಜತ ಪದಕವನ್ನೇ ವಿಜ್ಞಾನಿ ಡಾ. ಅಬ್ದುಲ್ ಕಲಾಂ ಜ್ಞಾನಿ ಸುಧಾಮೂರ್ತಿ ಮೇಡಂ ವಿದ್ವತ್,ದೇಶ ಒಂದೇ ಮಾತರಂ ದೇಶದ ಬೆನ್ನೆಲುಬು ರೈತ ಸೈನಿಕ ದೇಶದ ಕಣ್ ಆತ ವೀರ,ಧೀರರ ದೇಶ ಭಾರತ ನಿಸರ್ಗ ಸಂಪನ್ಮೂಲದ ಗುಡಿ ಹೊನ್ನು...

ಭಾರತೀಯ ಸೇನೆಯ ಕಾರ್ಯಾಚರಣೆ ಸಿಯಾಚಿನ್ ನಲ್ಲಿ…

ನಮ್ಮ ಉಸಿರು ಉಳಿಸಿದೆ ಸೇನೆ ಹಿಮದ ನಡುಗಡ್ಡೆಯಲ್ಲಿ ಕೊರೆಯುವ ಚಳಿಯಲ್ಲಿ ಭಾರತಾಂಬೆಯ ಮಕ್ಕಳು ಶತ್ರುಗಳ ಸದೆ ಬಡಿಯುತ್ತಾ ಪ್ರಾಣ ಲೆಕ್ಕಿಸದೆ ನಿಂತಿಹರು ತಾಯ್ನಾಡಿನ ವೀರಯೋಧರು ಒಂದೇ ಬಾರಿಗೆ ಮೈಮೇಲೆ ಬಂದೆರೆಗುವ ರಕ್ಕಸ ಹಿಮದ ರಾಶಿ ಅಂಜದೇ - ಕುಗ್ಗದೆ ಎದೆಯೊಬ್ಬಿಸಿ ನಿಂತಿಹರು ತಾಯ್ನಾಡಿನ ವೀರಯೋಧರು ಕ್ಷಣ ಕ್ಷಣವೂ ಬದಲಾಗುವ ಸಿಯಾಚಿನ್ ಪ್ರಕೃತಿಯ ಮಡಿಲಲ್ಲಿ ಜೀವದ ಹಂಗು ತೊರೆದು ನಮ್ಮೆಲ್ಲರಿಗೂ ಉಸಿರು ನೀಡಿ ನಿಂತಿಹರು ತಾಯ್ನಾಡಿನ ವೀರಯೋಧರು ದೇಶದ ಗಡಿಯಲ್ಲಿ ಅವರ ಉಸಿರನು ಲೆಕ್ಕಿಸದೆ ವೀರ ಮರಣವನ್ನು ಎದೆಗಪ್ಪಿ ಭಾರತಾಂಬೆಯ ಸೇವೆ ಸಲ್ಲಿಸುತ್ತಾ ನಿಂತಿಹರು ತಾಯ್ನಾಡಿನ ವೀರಯೋಧರು ನಮ್ಮ ಹೆಮ್ಮೆಯ ಯೋಧರಿಗೆ ಒಂದು...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group