ಕವನ
ಕವನ: ಕಾಡಿನಲ್ಲಿ ಬಾಳುವಾಸೆ ನನ್ನದು
ಕಾಡಿನಲ್ಲಿ ಬಾಳುವಾಸೆ ನನ್ನದು
ದಟ್ಟವಾದ ಕಾಡಿನಲ್ಲಿ
ಪುಟ್ಟದಾದ ಮನೆಯ ಕಟ್ಟಿ
ಚಂದದಿಂದ ಬಾಳಬೇಕು
ಎನುವ ಆಸೆ ನನ್ನದು.
ಗಡ್ಡೆ-ಗೆಣಸು, ಜೊತೆಗೆ ಜೇನು
ಹಣ್ಣು ಹಂಪಲವನ್ನು ಸವಿದು
ಹರಿವ ತೊರೆಯ ತಿಳಿಯನೀರು ಕುಡಿವ ಆಸೆ ನನ್ನದು.
ಪ್ರಾಣಿ-ಪಕ್ಷಿ ಜೊತೆಗೆ ಕೂಡಿ
ಸ್ನೇಹ ,ಪ್ರೀತಿ, ಮಮತೆ ತೋರಿ
ಬೆರೆತು ಕೂಡಿ ಆಡಬೇಕು
ಎಂಬ ಆಸೆ ನನ್ನದು.
ಹಚ್ಚಹಸಿರ, ಸ್ವಚ್ಛ ಉಸಿರ
ಪುಷ್ಪಗಂಧ ಸವಿದು ನಿತ್ಯ
ಋಷಿಯ ಬದುಕು ಪಡೆಯಬೇಕು
ಎನುವ ಆಸೆ ನನ್ನದು.
ಕ್ರೂರ-ಸಾಧು ಭೇದವಳಿಸಿ
ಎಲ್ಲ ಜೀವಿ ಬಳಗದಲ್ಲಿ
ಸಾಮರಸ್ಯ ಬೆಳೆಸಬೇಕು
ಎನುವ...
ಕವನ
ಮುಸ್ಸಂಜೆ ಸಮಯ.. ನದಿ ತೀರದಿ ರಾಧೆ ಎಂಬ ಹುಡುಗಿ.. ಕೃಷ್ಣಾ ಎಂಬ ತನ್ನೊಲವಿನ ಹುಡುಗನಿಗಾಗಿ ಕುಳಿತ ಸನ್ನಿವೇಶವನ್ನು ಕಲ್ಪಿಸಿಕೊಳ್ಳುತ್ತಾ.. ಈ ಕವಿತೆಯನ್ನು ಓದುತ್ತಾ ಹೋಗಿ.. ಕಡೆಗೊಮ್ಮೆ ರಾಧೆಯಲ್ಲಿ ಪರಕಾಯ ಪ್ರವೇಶ ಮಾಡಿಬಿಡಿ. ಕವಿತೆಯ ಪದ ಪದವೂ ಹೃದ್ಯವಾದೀತು. ರಾಧೆಯ ತಲ್ಲಣ, ರಿಂಗಣ ನಿಮ್ಮೊಳಗೇ ಸಾಧ್ಯವಾದೀತು..”
- ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.ಶ್ಯಾಮನಿಲ್ಲದ ಶ್ಯಾಮಲ.!
ಶ್ಯಾಮನಿಲ್ಲದ ಸಂಜೆಯಾ ಹೊತ್ತು
ಯಮುನೆದಡ ಬಿಕೋ...
ಕವನ
ಇವರೆ ಇವರೆ
ಇವರೆ ಇವರೆ ಇವರೆ
ಸಮತೆಯ ಕಿಡಿಯನು
ಹಚ್ಚಿದ ಬುದ್ದನ
ದೇಶವ ಬಿಡಿಸಿ
ಓಡಿಸಿದವರು ಇವರೆ
ಕ್ರಾಂತಿ ಪ್ರಜ್ಞೆಯ
ಬೆಳಗಿದ ಬಸವನ
ಶರಣರ ಮಾರಣ
ಮಾಡಿದವರು ಇವರೆ
ಸತ್ಯದ ಮೂರ್ತಿ ಶಾಂತಿಯ ಕೀರ್ತಿ
ಗಾಂಧಿಯನ್ನು
ಗುಂಡಿಟ್ಟು ಎದೆಗೆ
ಕೊಂದವರು ಇವರೆ
ರಕ್ಕಸರ ಹಸಿವು
ತಣಿಯಲೇ ಇಲ್ಲ
ಮತ್ತೆ ಕೊಂದರು
ದಾಭೋಲ್ಕರ್ ನು ಇವರೆ
ಸಜ್ಜನ ವ್ಯಕ್ತಿ
ಕಮ್ಯುನಿಸ್ಟ್ ಶಕ್ತಿ
ಗೋವಿಂದ ಪನ್ಸರೆ
ಕೊಂದವರು ಇವರೆ
ಕನ್ನಡ ಮಗ ಕಲಬುರ್ಗಿ
ಅವರ ಹಣೆಗೆ
ಗುಂಡಿಟ್ಟು ಕೊಂದವರು
ಇವರೆ
ಬಿಡಲೇ ಇಲ್ಲ
ಗೌರಿಯನ್ನು
ಸಂಜೆಗೆ ಮನೆಯಲಿ
ಕೊಂದವರು ಇವರೆ
ಕೊಲ್ಲುವ ನೀಚರು
ಧರ್ಮವ ಪಠಿಸುತ
ದೇಶವ ಒಡೆದ ದುಷ್ಟರು
ಇವರೆ
ಹೆಣಗಳ ಮೇಲೆ
ಕುಣಿಯುವ ಜೋಗುತಿ
ರಾಷ್ಟ್ರವ...
ಕವನ
ಸಂಕ್ರಮಣ
ನಾಡಿನೆಲ್ಲೆಡೆ ಹಬ್ಬದ ಸಡಗರ ಈ ಮಕರ
ಸಂಕ್ರಮಣ
ನದಿಯಲ್ಲಿ ಮಾಡಿ ಪ್ರಾತಃಕಾಲ
ಪುಣ್ಯ ಸ್ನಾನ
ಒಂದಾಗಿ ಬೆಸೆಯುತ್ತಿದೆ ಎಲ್ಲ ಹೃದಯಗಳ
ಮಿಲನ
ನಾಡಿನ ರೈತರಿಗೆಲ್ಲ ಸುಗ್ಗಿಯ- ಹಿಗ್ಗಿನ
ಕಣ
ಸೂರ್ಯ ತನ್ನ ಪರಿಭ್ರಮಣ ಬದಲಿಸುವ
ಕ್ಷಣ
ಸವಿಯಬೇಕು ಪ್ರತಿಯೊಬ್ಬರು
ಸಿಹಿ ಎಳ್ಳು ಬೆಲ್ಲಗಳ ಮಿಶ್ರಣ
ನಿಮ್ಮ ಕುಟುಂಬದವರ ಜೊತೆ
ಸಂಭ್ರಮಿಸಿ ಈ ದಿನ
ಅಳಿಸಿಹಾಕಿ ಹೃದಯದಲ್ಲಿರುವ
ಕಲ್ಮಶಗಳನ್ನ
ಹೊಸ ವರ್ಷಕೆ ಮಾಡಿ ಸಾಧನೆಯ
ಸಂಕಲ್ಪವನ್ನ
ನಿತ್ಯ ಕುಡಿಯಿರಿ ತಾಳ್ಮೆಯ
ಅಮೃತವನ್ನ
ಗೌರವಿಸಬೇಕು ಎಲ್ಲ ಗುರು
ಹಿರಿಯರನ್ನ
ಸಂಕ್ರಮಣ ಶುಭಾಶಯಗಳೂಂದಿಗೆ
ಈ ನಿಮ್ಮ ಕಿರಣಕಿರಣ ಯಲಿಗಾರ
ಮುನವಳ್ಳಿ-591117
ಸವದತ್ತಿ ತಾಲೂಕು ಬೆಳಗಾವಿ...
ಕವನ
ಮಕರ ಸಂಕ್ರಾಂತಿ
ಸೂರ್ಯನ ಪರಿಭ್ರಮಣದೊಳು
ಭೂತಾಯಿಯ ಮಡಿಲು
ನವಕಾಂತಿಯ ಯುಗವನು ಕಾಣುತಿರೆ
ಋತು ಚಕ್ರದೊಳು ವಸಂತನ ಆಗಮನ
ನವಕಳೆಯೊಳು ಪ್ರಕೃತಿ
ಸಂಕ್ರಾಂತಿಯ ಆಗಮನ
ಎಳ್ಳು-ಬೆಲ್ಲವ ಮೆದ್ದು
ಒಳ್ಳೆಯ ನುಡಿಗಳನಾಡುತ
ಸಕಲರೂ ಕೂಡಿ
ಸಡಗರದಿ ದಿನವನು ಕಳೆಯೋಣ
ವರ್ಷವಿಡೀ ಬದುಕಲಿ ಸುಖ-ಶಾಂತಿ
ನೆಮ್ಮದಿಯ ಬಯಸುತ
ಬದುಕಿನ ಸಂತಸ ಮೆರೆಯೋಣ
ಹೊಸದಿಗಂತದಿ ಮೂಡಲಿ ಆಶಾಭಾವ
ಹೊಸತನದಿ ಬದುಕು ಹೊರಹೊಮ್ಮಲಿ
ನವನವೋಲ್ಲಾಸ ತರಲಿ ದಿನದಿನವು
ಸಂಕ್ರಾಂತಿಯ ಸವಿಯನರಸುತ
ಮುಂಬರುವ ಹಬ್ಬಗಳ ಕರೆಯೋಣ
ವರ್ಷವಿಡೀ ಸುಖಸಮೃದ್ದಿ ಬಾಳಲಿ ತರಲಿ
ಎನುತ ದೇವರಲಿ ಪ್ರಾರ್ಥಿಸೋಣ
ಚಳಿಯ ಬಿಡಿಸುತ ಎಳೆ ಬಿಸಿಲು
ಶಿವರಾತ್ರಿಗೆ ಶಿವಶಿವ...
ಕವನ
ನಾವುಗಳು ಹಿಂಗ್ಯಾಕೆ
ಹೋಗುವ ದಾರಿಯಲಿ ಬೆಕ್ಕು ಬಂದರೆ ಅಪಶಕುನ ಅಂತೀವಿ., ರಾತ್ರಿ ವೇಳೆ
ಶಕುನದ ಹಕ್ಕಿ ಕೂಗಿದರೆ,
ಭಯಪಡುತೀವಿ
ನಾವುಗಳು ಹಿಂಗ್ಯಾಕೆ?
ಗಂಡು ಹೆಣ್ಣು ಸೇರುವ ಹೊತ್ತಲಿ ಘಳಿಗೆ ಮಹೂರ್ತ ನೋಡ್ತೀವಿ ಸೇರುವ ಸಮಯ ಸರಿಯಿರದಿರೆ, ಅಪಶಕುನ ಅಂತೀವಿ
ರಾಹುಕಾಲ,ಗುಳಿಕಕಾಲ ಅಂತಾ,ಪರದಾಡ್ತೀವಿ ನಾವುಗಳೇ ಹಿಂಗ್ಯಾಕss
ಮೂರು ದಿನದ ಬದುಕಿನಲಿ ನಾನು ನನ್ನದು ಅಂತೀವಿ
ಮರಣಿಸಿದಾಗ
ಎಲ್ಲವನೂ ಬಿಟ್ಟು ಹೋಗ್ತೀವಿ
ನೇರವಾಗಿ ನುಡಿಯುವವರೆದುರು
ಉದಾಸೀನವಾಗ್ತೀವಿ
ನಯವಂಚಕರೆದುರು
ಹಲ್ಕಿರಿದು ಸಾಗ್ತೀವಿ
ನಾವುಗಳೇ ಹಿಂಗ್ಯಾಕss
ಬೆಳ್ಳಿ ಬಂಗಾರದ
ವ್ಯಾಮೋಹದಲಿ
ಅವರಿವರಿಗೆ
ಮೋಸ ಮಾಡ್ತೀವಿ
ಹೆಣ್ಣು,ಮಣ್ಣಿಗೆ ಬಡಿದಾಡಿ...
ಕವನ
Kuvempu Poems in Kannada- ಕುವೆಂಪು ಕನ್ನಡ ಕವನಗಳು
ನಡೆ ಮುಂದೆ ನಡೆ ಮುಂದೆ
ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ !
ಜಗ್ಗದಯೆ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ !
ಭಾರತ ಖಂಡದ ಹಿತವೇ
ನನ್ನ ಹಿತ ಎಂದು
ಭಾರತ ಮಾತೆಯ ಮತವೇ
ನನ್ನ ಮತ ಎಂದು
ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ಕಿ ನನಗೆಂದು
ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ !
ಜಗ್ಗದಯೆ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆಕನ್ನಡಮ್ಮನ ಹರಕೆ
ಕನ್ನಡಕೆ ಹೋರಾಡು
ಕನ್ನಡದ ಕಂದ
ಕನ್ನಡವ ಕಾಪಾಡು
ನನ್ನ...
ಕವನ
ಹೊಸವರ್ಷದ ಕವನಗಳು: ಓ ಹೊಸ ವರ್ಷವೆ…
ಓ ಹೊಸ ವರ್ಷವೆ...
ಓ ಹೊಸ ವರ್ಷವೇ
ನೀನು ಲಂಡನ್ನಿನವನೋ,
ಪಾಶ್ಚಾತ್ಯ ಮೂಲೆಯವನೋ,
ನಿನ್ನ ಪಟಾಕಿ ಸುಟ್ಟು,
ಮೋಜು-ಮಸ್ತಿ ಮಾಡಿ
ಸ್ವಾಗತ ಮಾಡುತ್ತಾರೆಂದೋ
ಇನಿತೂ ಬೇಸರವಿಲ್ಲ,
ಜಗದ ಕೊಳೆಯ ತೊಳೆದು ಬಿಡು,
ಮಾನವ ಮನದೊಳಡಗಿರುವ
ಮೋಸ,ವಂಚನೆ,ದ್ವೇಷ,ಸ್ವಾರ್ಥ
ಮನೋಭಾವಗಳ ನೀಗಿಸಿಬಿಡು,
ಕಳೆದೆರಡು ವರ್ಷಗಳ
ಕರೋನಾ ಮರಣ ಮೃದಂಗವ ನೀಗಿಸಿಬಿಡು,
ಮಾನವ ಮಾನವನ ಕೊಲ್ಲುವ,
ಹಿಂಸೆ,ಅಮಾನವೀಯ ಪಾತಕಗಳ ನೀಗಿಸಿಬಿಡು..
ನಾವು ನಾವಾಗಿ ಬಾಳಲು,
ಸಾವಿನ ಭಯವ ತೊಳೆದುಬಿಡು,
ಇದೇ ನನ್ನ ಕೋರಿಕೆ..ಡಾ.ಭೇರ್ಯ ರಾಮಕುಮಾರ್
ಕವನ
ಸಾವಿತ್ರಿಬಾಯಿ
ಅಕ್ಷರದವ್ವ
ಸಾವಿತ್ರಿಬಾಯಿ
ಶಾಲೆಯ ತೆರೆದಾಳ
ಅಕ್ಷರದ ಅರಿವಿನ
ಬೀಜವ ಬಿತ್ತುತ
ಹೆಸರನು ಪಡೆದಾಳ
ಹೆಣ್ಣುಮಕ್ಕಳ ಸಾಕ್ಷರ ಮಾಡ್ಯಾಳ //
ಸತ್ಯಶೋಧಕ
ಸಮಾಜ ಕಟ್ಟಿದ
ಪತಿ ಸಹಕಾರ ಪಡೆದಾಳ
ಹದಿನಾರು ಕಡೆಯಲಿ
ಶಾಲೆಯ ತೆರೆದು
ಶೋಷಣೆ ತೊಡೆದಾಳ
ಜನರಿಗೆ ಅರಿವನು ನೀಡ್ಯಾಳ //
ಭಾರತ ದೇಶದ
ಪ್ರಥಮ ಶಿಕ್ಷಕಿ
ಪದವಿಯ ಪಡೆದಾಳ
ಅಕ್ಷರ ದೀವಿಗೆ
ಜ್ಯೋತಿಯ ಬೆಳಗಿ
ಬೆಳಕನು ಹರಡ್ಯಾಳ
ಹೆಣ್ಣುಮಕ್ಕಳ ಬಾಳ್ವೆಯ ಬೆಳಗ್ಯಾಳ//
ಕಷ್ಟದ ಜೊತೆಯಲಿ
ಅವಮಾನ ಅಪಮಾನ
ಮೆಟ್ಟಿ ನಿಂತಾಳ
ಸ್ವಾಭಿಮಾನದ
ಹೆಜ್ಜೆಯನಿಕ್ಕುತ
ಶ್ರಮವಹಿಸಿ ದುಡಿದಾಳ
ಜಗದಲಿ ಮೊದಲಿಗಳಾಗ್ಯಾಳ //
ಸಾತಾರ ಜಿಲ್ಲೆ
ಖಂಡಾಲ ತಾಲೂಕ
ನಯಿಗಾಂವದಿ ಹುಟ್ಯಾಳ
ಇತಿಹಾಸ ಮರೆಯದ
ಕಾರ್ಯವ ಮಾಡುತ
ಪತಿ ಜೊತೆ ನಡೆದಾಳ
ಮೌಲ್ಯದ ಜೀವನ...
ಕವನ
ದಿಕ್ಕಾರ... ಧಿಕ್ಕಾರ...
ಹಚ್ಚಬೇಡಿ ಬೆಂಕಿಯ ಮಾನವೀಯತೆಗೆ,
ಜಾತಿ,ಧರ್ಮ, ಭಾಷೆಯ ಹೆಸರಲಿ
ಹಚ್ಚಬೇಡಿ ಬೆಂಕಿಯ
ಸಹೋದರರ ನಡುವೆ,
ಒಂದೇ ದೇಶ, ಒಂದೇ ರಕ್ತ,
ಒಂದೇ ಮಾನವೀಯ ಸದ್ಗುಣ,
ಒಂದೇ ಮಾನವ ಜನ್ಮ ಇರುವ ಈ ಮಾನವ ಜನ್ಮಕೆ,
ಜಾತಿ,ಧರ್ಮ, ಭಾಷೆ,ಪ್ರಾದೇಶಿಕತೆ ಹೆಸರಲಿ
ಕೊಳ್ಳಿ ಇಡುತ್ತಿರುವ ನಿಮಗೆ
ಸಾವಿರ,ಸಾವಿರ ಧಿಕ್ಕಾರ..
ಇಟ್ಟು ಬಿಡಿ ಕೊಳ್ಳಿಯ
ನಿಮ್ಮ ಸಣ್ಣ ತನಕೆ,
ನಿಮ್ಮ ಮೃಗೀಯ ವರ್ತನೆಗೆ,
ಮಾನವ-ಮಾನವರ ನಡುವೆ
ಭಾಷೆಯ ಹೆಸರಲಿ ಬಿರುಕು ಮೂಡಿಸುವ
ನಿಮ್ಮ ರಾಕ್ಷಸ ತನಕೆ,ಮೃಗೀಯ ವರ್ತನೆಗೆ...
ನೂರು ಜಾತಿಗಳಿದ್ದರೂ,
ಹತ್ತಾರು ಧರ್ಮಗಳಿದ್ದರೂ,
ಅಸಂಖ್ಯಾತ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



