ಕವನ

ಕವನ: ಎಂಥ ಭಾಗ್ಯವೋ ಕೃಷ್ಣ….!

ಎಂಥ ಭಾಗ್ಯವೋ ಕೃಷ್ಣ....! ಎಂಥ ಭಾಗ್ಯವೋ ಕೃಷ್ಣ ಆ ಕೊಳಲಿನದು ! ನಿನ್ನ ಮೃದು ತುಟಿಗಳ ಸ್ಪರ್ಶದ ಜೊತೆಗೆ ರಾಗವಾಗಿ ನುಲಿಯುವ ಭಾಗ್ಯ ! ನಿನ್ನುಸಿರಿನ ಜೀವಸೆಲೆಯ ಪಡೆದು ಮೃದುವಾದ ತಾಡನಕ್ಕೆ ನಲಿಯುವ ಭಾಗ್ಯ! ಎಂಥ ಭಾಗ್ಯವೋ ಕೃಷ್ಣ ಆ ನವಿಲುಗರಿಯದು ! ನಿನ್ನ ಮುಡಿಯ ಶಿಖರವೇರಿ ಜಂಭದಿಂದ ತಲೆಯೆತ್ತಿ ನಿಲ್ಲುವ ಭಾಗ್ಯ ! ಲೋಕದಲ್ಲಿ ತಾನೇ ಉನ್ನತವೆಂಬ ಭಾವ ಹೊಂದಿ ಸವರ್ಣ ಅಕ್ಷಿಗಳಿಂದ ಲೋಕ ನೋಡುವ ಭಾಗ್ಯ! ಎಂಥ ಭಾಗ್ಯವೋ ಕೃಷ್ಣ ಆ ಶ್ಯಮಂತಕ ಮಣಿಯದು...

ಇಂದು ವಿಶ್ವ ಜಲ ದಿನ

ಜೀವಜಲದ ಮಹತ್ವವನ್ನು ತಿಳಿಸುವ ಈ ಚುಟುಕಗಳು ಮುಂದಿನ ಭೀಕರ ಪರಿಸ್ಥಿತಿಯನ್ನು ವ್ಯಂಗ್ಯ ಮಾಡುವಂತಿದ್ದರೂ ವಾಸ್ತವವನ್ನು ಅರುಹುತ್ತವೆ. ನೀರು ಮುಂದೊಂದು ದಿನ ಕವಿ: ವಿಲ್ಸನ್ ಕಟೀಲ್ -1- ಹಾ! ಗಂಟಲು ಒಣಗಿದೆ!! ತಕೋ ಈ ಬಂಗಾರದ ಸರಪಳಿ ಬದಲಾಗಿ ಒಂದು ಗುಟುಕು ನೀರು ಕೊಡು!-2- ನಮ್ಮ ಹಿರಿಯರು ಹಾಲಿಗೆ ಬೆರೆಸುತ್ತಿದ್ದರಂತೆ ನೀರು ಎಷ್ಟು ಸಿರಿವಂತರಿದ್ದಿರಬಹುದು ಅವರು! -3- ರೈತನ ಬಾಯನ್ನು ತೆರೆಸಿ ನಾಲಗೆಯನ್ನು ಪರೀಕ್ಷಿಸಿದ ವೈದ್ಯರು ಮೆಡಿಕಲ್ಸ್ ಗೆ ಚೀಟಿ ಬರೆದುಕೊಟ್ಟರು- ದಿನಕ್ಕೆ ಮೂರು ಸಲ ಹತ್ತತ್ತು ಎಮ್ಮೆಲ್ ನೀರು! -4- ಕಂಬನಿಯನ್ನು...

ಕರೋನಾ ಚುಟುಕುಗಳು

ಎಲ್ಲೆಡೆ ಕರೋನ ಭೀತಿ ಬದುಕಾಗಿದೆ ಬಲು ಫಜೀತಿ ಮನಸ್ಸಿಗಿಲ್ಲ ಒಂದಷ್ಟು ಶಾಂತಿ ದಿನ ಬೆಳಗಾದ್ರ ಹಚ್ಚಿದಿ ನೀ ಚಿಂತಿ *** ಕರೋನಾ ಕರೋನಾ ಜಗದಾಗ ನಿನಗಿಲ್ಲ ಮಾನ ನಿನ್ನಿಂದ ಲೋಕಕ್ಕೆ ಅವಮಾನ ನೀ ಆಗಿದಿ ಕೊಬ್ಬಿದ ಕ್ವಾಣ॥ *** ಹಲೋ ಕರೋನ ವೈರಸ್ ನಿಂದು ಭಾರಿ ವರ್ಚಸ್ ಮಾಡಾಕ ಹತ್ತಿದಿ ಸರ್ಕಸಸ್ ಭಾರತದಲ್ಲಿ ಆಗುದಿಲ್ಲ ನೀ ಸಕ್ಸಸ್॥ ** ನಿನ್ನಿಂದ ದುಡಿಯುವ ಕೈಗೆ ಕೆಲಸವಿಲ್ಲ ಹೊಟ್ಟೆ ತುಂಬ ಅನ್ನವಿಲ್ಲ ಕಾಡು—ಮೇಡು ಅಲೆದು ಊರ ಸೇರಿರಲ್ಲ ಎಂದು ಅಡಗುವುದು ನಿನ್ನ ಸೊಲ್ಲ( ಕರೋನಾ) *** ಕಣ್ಣಿಗೆ ಕಾಣದ ಕೊರೋನಾ ಜಗತ್ ಆಗಿದೆ...

ಇಂದು ಗುಬ್ಬಿ ಸಂರಕ್ಷಣಾ ದಿನ; ಗುಬ್ಬಚ್ಚಿ ಕವಿತೆಗಳು

ಗುಬ್ಬಚ್ಚಿ ಕವಿತೆಗಳು ಕಾಣೆಯಾಗಿದೆ ಕವಿತೆಯ ಮೆರೆಸಿದ್ದ ಹಕ್ಕಿ ಕರುಣೆ ಪ್ರೀತಿಭಾವನೆಗಳ ಬೆರೆಸಿದ್ದ ಹಕ್ಕಿ ಚೀಂವ್ ಚೀಂವ್ ಗೆ ಕುಣಿದಾಡದೇ ಮನ ಚೆಲುವಿನೊಳಗೆ ಎಳೆಯುತ ತೆರೆಸಿದ್ದ ಹಕ್ಕಿ ಪುರ್ ಪುರ್ ಹಾರುವ ಸದ್ದಿಗೆಷ್ಟು ಹರುಷವು ಒಲವಿನಲಿ ಇಳಿಸಿ ನೋವನು ಒರೆಸಿದ್ದ ಹಕ್ಕಿ ಕೂಳಿಗೆ ಕಾಳುಗಳ ಹೆಕ್ಕುವ ಸೊಗಸೇ ಹಬ್ಬ ಬಾಳಿಗೆ ಪಟಹಿಂದೆ ಮನೆಮಾಡಿ ಕರೆಸಿದ್ದ ಹಕ್ಕಿ ಸಂತತಿ ಅಳಿದವೇ ಸಂಶಯವು ಪ್ರಸಾದನಿಗೆ ಗುಬ್ಬಿ ಸಂರಕ್ಷಣೆಗೆಂದೇ ಕೂಗುತ ಬರೆಸಿದ್ದ ಹಕ್ಕಿ ಗಣೇಶ ಪ್ರಸಾದ...

ಕವಿತೆ: ಓ ಮಾನವ ಇತಿಹಾಸ ಕಲಿಸಲಿಲ್ಲವೇ ಪಾಠವ ??

ಓ ಮಾನವ ಇತಿಹಾಸ ಕಲಿಸಲಿಲ್ಲವೇ ಪಾಠವ ?? ಸೀತೆಯ ಅಪಹರಿಸಿ, ವಿಭೀಷಣನ ಕಿವಿಮಾತ ಕೇಳದೆ ಲಂಕಾಧಿಪತಿ ರಾವಣ ಕೆಟ್ಟ ; ತುಂಬಿದ ರಾಜಸಭೆಯಲಿ ದ್ರೌಪದಿಯ ವಸ್ತ್ರ ಸೆಳೆದು ಕುರು ವಂಶದ ವಿನಾಶಕೆ ಕಾರಣನಾದ, ಶೌರ್ಯ-ಪರಾಕ್ರಮಕೆ ಹೆಸರಾದ ದುರ್ಯೋಧನ ; ಓ ಗಂಡುಗಲಿಯೇ.. ಈ ಕ್ರೂರ ಇತಿಹಾಸ ನೋಡಿಯೂ ನೀನೇಕೆ ಕಲಿಯಲಿಲ್ಲ ಬುದ್ದಿ !!! ಆಸ್ತಿ, ಅಂತಸ್ತು ,ಹಣಗಳ ಮದದಲಿ ಮೆರೆವ ನಿನಗಿಲ್ಲವೇ ತಾಯಿ,ಪತ್ನಿ,ಸಹೋದರಿ ; ಮರೆತು ಬಿಟ್ಟು ಎಲ್ಲ ಸಂಸ್ಕಾರ, ನೀ ತೋರುವೆ ಏಕೆ...

ಕವನ: ಶಿವರಾತ್ರಿ

ಶಿವರಾತ್ರಿ ಶಿವ ಶಿವ ಎನುತ ಪೂಜಿಸಿ ವರವ ಬೇಡುತ ರಾತ್ರಿಯಿಡಿ ಜಾಗರಣೆಯ ತ್ರಿದಳ ಬಿಲ್ವಪತ್ರೆ ಶಿವಗೇರಿಪ ಶಿವರಾತ್ರಿ ಶಿವದೇಗುಲಗಳಲಿ ಭಕ್ತಿ ಪೂಜೆ ವನಸ್ಪತಿಗಳ ಅಲಂಕಾರದಿ ಶೋಭಿತ ರಾಜಶೇಖರನ ಚೆಲುವ ವದನದಲಿ ತ್ರ್ರಿಕರಣಗಳ ಉಪವಾಸದೀ ಶಿವರಾತ್ರಿ ಶಿಖಿನೇತ್ರ ಶಿತಿಖಂಡ ಶಿರದಲಿ ಗಂಗೆಯ ಧರಿಪ ವಸುಮತಿಯ ಚಲುವಲಿ ಶೋಭಿತ ರಾಜಶೇಖರನ ಚಲುವ ವದನ ತ್ರಿಕಾಲದೊಳು ಭಕ್ತಿಯ ಸ್ಮರಣೆಯ ಶಿವರಾತ್ರಿ ಶಿವದೀಕ್ಷೆ ಪಡೆದ ಮನದಿ ವಂದಿಸುವೆ ಶಿವನೊಲುಮೆ ನಾಮವ ರಾಜಶೇಖರ ನಿನಗೆ ತ್ರಿಕರಣದಿಂದಲಿ ಶಿವರಾತ್ರಿಯ ದಿನದಿ ಶಿವ ನಿನ್ನಯ ಅನುಗ್ರಹದ ವರವಿರಲಿ ಸದಾವಕಾಲದಿ ರಾರಾಜಿಪ ಹಸನ್ಮುಖದಿ ತ್ರಿಲೋಚನ...

ಕವನ

ಕವನ ಕರುಣೆ ತೋರು ತಂದೆ ಕರುಣೆ ತೋರು ತಂದೆ ನಾ ನಿನ್ನ ಮಗಳಾಗಿ ಹುಟ್ಟಿ ಬಂದೆ ಚೊಚ್ಚಲ ಹೆರಿಗೆಯಲ್ಲಿ ಹೆಣ್ಣಾಗಿ ಹುಟ್ಟಿ ಬಂದೆ ನನ್ನನ್ನು ಕೊಲ್ಲಲು ಮುಂದಾಗದಿರು ತಂದೆ ನಿನ್ನ ಮಗಳಾಗಿ ಹುಟ್ಟಿ ನಿನ್ನ ಹೆಸರಿಗೆ ಕೀರ್ತಿ ತರುವೆ ತಂದೆ ನನಗಾಗಿ ಹಿಂಜರಿಯದಿರು ಎಂದೆ ನಾ ಹುಟ್ಟಿದ ಆ ದಿನ ಸಿಹಿ ಹಂಚಿ ಸಂಭ್ರಮಿಸಿದೆ ನಾ ಹುಟ್ಟಿದ ಖುಷಿಯಲ್ಲಿ ಬಂಧುಗಳಿಗೆ ಹೆಣ್ಣಾಯಿತೆಂದು ಹೇಳಿಕೊಂಡೆ ನೀ ಹೆಣ್ಣು ಮಗುವ...

ವೇಣು ಜಾಲಿಬೆಂಚಿ ಗಜಲ್ ಗಳು

ಗಜಲ್-೧ ಇದೇ ಕಣ್ಣುಗಳು ನೋಡು ಚೆನ್ನಾಗಿ ಅನುಮಾನ ಬೇಡ ಸಖಿ ಭರವಸೆ ಕನಸು ಕಂಡಿದ್ದು ಸುಳ್ಳಲ್ಲ ಬಿಗುಮಾನ ಬೇಡ ಸಖಿ ನೀ ಒಂದು ಚೂರು ನಸುನಕ್ಕು ಮತ್ತೆ ನಾಚಿ ನವಿಲಾಗುತಿದ್ದೆ ಆ ಸಾವಿರ ಕಣ್ಣ ಮೋಹಕೋಡಿ ಬಂದಿದ್ದೆ ಅಪಮಾನ ಬೇಡ ಸಖಿ ನಾ ನಿನ್ನ ಪ್ರೀತಿಸೆಲೆಯಲ್ಲಿ ಸದಾ ಈಜಲು ಇಷ್ಟಪಡುವ ಮೀನು ನರಕದ ದಂಡೆಗೆ ಎಸೆದು ಜೀವಹಿಂಡಬೇಡ ಅವಮಾನ ಬೇಡ ಸಖಿ ಲೋಕದ ತುಂಬ...

ಅಣಕವಾಡು

ಅಣಕವಾಡು-೧ ಹುಬ್ಬಳ್ಳಿ ಮಾವ ಏನು ಕೊಡನು ಏನು ಕೊಡ ಏನು ಕೊಡನು ಹುಬ್ಬಳ್ಳಿ ಮಾವ ಏನು ತಾನೊಂದು‌ ಕೊಡನು ದುಡಿದಿಲ್ಲ ಗಳಿಸಿಲ್ಲ ಗಳಗಳ ಅಳುತಾನ ಅಂಪ್ಪಂದೆಲ್ಲ‌ ಅಮ್ಮಂದೆಲ್ಲ ದಳದಳ ಇಳಿಸ್ತಾನ ಆರು‌ಮಂದಿ ಅಣ್ಣತಮ್ಮರ್ಗೆ ಮೂರುಕಾಸನು ಕೊಡ ಮೂರು ಮಂದಿ ಅಕ್ಕತಂಗೆರ್ಗೆ ಸೀರಿಕುಪ್ಪಸ ಕೊಡ ಕೋರ್ಟುಕಚೇರಿಗೆ ಹೋಗಿ ನ್ಯಾಯ ಹೂಡುವೆವೆಂದು ಅಣ್ಣತಮ್ಮಂದಿರು ಬಂದು ಹೇಳಿಹೋದರು ಕೊಡ ಮೂರು ಮಂದಿ ಅಕ್ಕತಂಗೇರು ಅತ್ತಿ ಮನಿಗೆ ಹೋಗಿ ಬಡತನದ ಬೆಂಕ್ಯಾಗ ನೊಂದು ಬೆಂದರು ಕೊಡ ಬುದ್ಧಿವಂತರು...

ಹಾಸ್ಯ ಕವನಗಳು

ಇಂಥ ಗಂಡನೊಲ್ಲೆ ನಾನು‌ ಒಲ್ಲೆ ಒಲ್ಲೆನವ್ವ ಇಂಥ ಗಂಡನೊಲ್ಲೆನವ್ವ ಕಾಗಿಯಂಥ ಬಣ್ಣದವನ ಗೂಗಿಯಂಥ ಮಾರಿಯವನ ಕಡ್ಡಿಯಂಥ ಕಾಲಿನವನ ಅಡ್ಡಬಡ್ಡ ನಡೆಯುವವನ ಜೋತುಬಿದ್ದ ಮೀಸೆಯವನ ಓತಿನಂಥ ಗಡ್ಡದವನ ಕುಂಬ್ಳಕಾಯಿ ಹೊಟ್ಟೆಯವನ ಸಿಂಬ್ಳ ಸುರಿವ ಸೊಳ್ಳೆಯವನ ಮೊರದಗಲ ಕರ್ಣದವನ ಊರಗಲ ಬಾಯಿಯವನ ಉಳ್ಳಗಡ್ಡಿ ಕಣ್ಣಿನವನ ಬಳ್ಳೊಳ್ಳಿ ಹಲ್ಲಿನವನ ಬದ್ನಿಕಾಯಿ ಮೂಗಿನವನ ತೊದ್ಲು ಮಾತನಾಡುವವನ ಕಳ್ಳನೋಟ ಬೀರುವವನ ಸುಳ್ಳುಚಾಡಿ ಹೇಳುವವನ ಎನ್.ಶರಣಪ್ಪ ಮೆಟ್ರಿಇಂಥ ಹೆಣ್ತಿನೊಲ್ಲೆ ನಾನು‌ ಒಲ್ಲೆ ಒಲ್ಲೆನಪ್ಪ ಇಂಥ ಹೆಣ್ತಿನೊಲ್ಲೆನಪ್ಪ ಇದ್ಲಿಯಂಥ ಬಣ್ಣದವಳ ಗುದ್ಲಿಯಂಥ ಮೂಗಿನವಳ ಕಂಭದಂಥ ಕಾಲಿನವಳ ಕುಂಭದಂಥ ಕುಚಗಳವಳ ಬೊಡ್ಡೆಗಾತ್ರ ನಡುವಿನವಳ ದೊಡ್ಡ ಆನೆಗಾತ್ರದವಳ ಮುಂದಬಂದ ಹಲ್ಲಿನವಳ ಅಂದಚಂದ ಇಲ್ಲದವಳ ಹಂಡೆದಂಥ ಹೊಟ್ಟೆಯವಳ ಗುಂಡುಕಲ್ಲು‌ಮಂಡೆಯವಳ ಸ್ವಾರಿಯಂಥ ಮಾರಿಯವಳ ಚೌರಿಕೂದ್ಲ ಹೆರಳಿನವಳ ಗೂಗಿಯಂಥ ಕಣ್ಣಿನವಳ ಕಾಗಿಯಂತೆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group