ಮೂಡಲಗಿ - ಪ್ರಧಾನಮಂತ್ರಿ ಗ್ರಾಮಸಡಕ ಯೋಜನೆ ಅಡಿಯಲ್ಲಿ ಬೆಳಗಾವಿ ಜಿಲ್ಲೆಗೆ ೧೩೦೬ ಕಿ ಮೀ ಉದ್ದದ ರಸ್ತೆಯನ್ನು ಮಂಜೂರು ಮಾಡಲಾಗಿತ್ತು ಅದರಲ್ಲಿ ೧೨೮೨ ಕಿ ಮೀ ರಸ್ತೆ ಕಾಮಗಾರಿಯನ್ನು ಪೂರ್ಣಗಿಳಿಸಲಾಗಿದೆ ಎಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ರಾಜ್ಯ ಸಚಿವರು ಲಿಖಿತವಾಗಿ ತಿಳಿಸಿದ್ದಾರೆಂಬುದಾಗಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.
ನಾವು ನೋಡಿದಂತೆ ರಾಜ್ಯದ ಗ್ರಾಮೀಣ...
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೊಯ್ನಾ ಡ್ಯಾಮ್ ನಿಂದ 32100 ಕ್ಯೂಸೆಕ್ ರಾಜಾಪುರ್ ಬ್ಯಾರೇಜ್ ನಿಂದ ಎರಡು ಲಕ್ಷ 6375, ದೂಧಗಂಗಾ ನದಿಯಿಂದ 44,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಒಟ್ಟು ಚಿಕ್ಕೋಡಿಯ ಕಲ್ಲೋಳ ಬ್ಯಾರೇಜ್ ಹತ್ತಿರ ಎರಡು ಲಕ್ಷ 50 ಸಾವಿರ 375 ಕ್ಯೂಸೆಕ್ ಹರಿವಿನ ಪ್ರಮಾಣ ದಾಖಲಾಗಿದೆ.
ಹಿಪ್ಪರಗಿ ಬ್ಯಾರೇಜ್ ನಿಂದ...
ಬೆಳಗಾವಿ - ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಟರ್ಮಿನಲ್ ಹೊರಗೆ ಪ್ರಯಾಣಿಕರನ್ನು ಕಳಿಸಲು, ಸ್ವಾಗತಿಸಲು ಬರುವವರಿಗೆ ಶೌಚಾಲಯವಿಲ್ಲದೆ ಪರದಾಡುವಂತಾಯಿತು. ಅಲ್ಲಿ ಇದ್ದ ಅಂಗಡಿಯವರನ್ನು ಕೇಳಿದರೆ ಸರಿಯಾದ ಉತ್ತರ ಕೂಡ ಬರಲಿಲ್ಲ.
ಬೆಳಗಾವಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ, ತಂಪಾದ ಗಾಳಿ ಬೀಸುತ್ತಿದೆ ಇದರಿಂದಾಗಿ ಮೂತ್ರಕ್ಕೆ ಕರೆ ಬರುವುದು ಸ್ವಾಭಾವಿಕವಾಗಿದೆ. ವಿಮಾನದಲ್ಲಿ ಪ್ರಯಾಣ ಮಾಡುವವರು ಟರ್ಮಿನಲ್ ಒಳಗೆ ಹೋದರೆ...
ವೈದ್ಯರ ದಿನಾಚರಣೆಯ ಸಂದರ್ಭದಲ್ಲಿಯೇ ವೈದ್ಯರಿಂದ ಅಮಾನವೀಯ ಕೃತ್ಯ
ಭ್ರೂಣ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಲಿ
ಮೂಡಲಗಿ - ಕಳೆದ ವರ್ಷ ಮೂಡಲಗಿಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ನಡೆದಿದೆಯೆಂದು ಆರೋಪಿಸಲಾಗಿದ್ದ ಭ್ರೂಣ ಹತ್ಯಾ ಪ್ರಕರಣದ ನೆನಪು ಮಾಸುವ ಮುನ್ನವೇ ಇದೀಗ ಮತ್ತೊಂದು ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯಾ ಪ್ರಕರಣವೊಂದರಲ್ಲಿ ಮೂಡಲಗಿಯ ವೈದ್ಯರೊಬ್ಬರು ಭಾಗಿಯಾಗಿದ್ದು ಮತ್ತೊಂದು ಕಳಂಕ ಮೂಡಲಗಿಗೆ ತಟ್ಟಿದೆ.
ಇದೀಗ...
ಹಿಂದಿನ ಸರಕಾರ ಇದ್ದ ಸಮಯದಲ್ಲಿ ಜಿಲ್ಲೆಗೊಂದು ವಿಶ್ವ ವಿದ್ಯಾಲಯ ರೀತಿಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಶ್ವ ವಿದ್ಯಾಲಯ ಸ್ಥಾಪಿಸಿ ಯಾವುದೇ ಮೂಲಭೂತ ಸವಲತ್ತು ಸೌಕರ್ಯ ಇಲ್ಲದ ಅತ್ಯಂತ ಕಳಪೆ ಗುಣಮಟ್ಟದ ಕಟ್ಟಡದಲ್ಲಿ ವಿಶ್ವ ವಿದ್ಯಾಲಯಗಳನ್ನು ತರಾತುರಿಯಲ್ಲಿ ಸ್ಥಾಪಿಸಿ ಅನೇಕ ಕುಲ ಸಚಿವರನ್ನು ಶೈಕ್ಷಣಿಕ ಹಾಗೂ ಸೇವಾ ಜೇಷ್ಠತೆ ಅರ್ಹತೆಯನ್ನು ನೋಡದೆ ನೇಮಕಾತಿ ಮಾಡಿ ಸ್ನಾತಕೊತ್ತರ...
ಜಲಪಾತ ವೀಕ್ಷಿಸಲು ಹೋಗಿದ್ದ ಮುಂಬೈ ಮೂಲದ ಕುಟುಂಬವೊಂದು ಪ್ರವಾಹದಲ್ಲಿ ಕೊಚ್ಚಿ ಹೋದ ದಾರುಣ ಘಟನೆಯ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗುತ್ತಿದ್ದು ಪ್ರಕೃತಿಯ ಜೊತೆ ಚೆಲ್ಲಾಟವಾಡುವವರಿಗೆ ಯಾವಾಗ ಎಚ್ಚರಿಕೆ ಮೂಡುವುದೋ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಮಹಾರಾಷ್ಟ್ರದ ಪುಣೆ ಸಮೀಪದ ಲೋನಾವಾಲಾದ ಪ್ರಕೃತಿ ಸೌಂದರ್ಯ ಸವಿಯಲು ಬಂದಿದ್ದ ಕುಟುಂಬವೊಂದು ಜಲಪಾತದ ವೀಕ್ಷಣೆಗೆ ಹೋಗಿದ್ದು ನದಿಯ ತೀರದಲ್ಲಿ...
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂಸದರಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಕಾಂಗ್ರೆಸ್ ನ ರಾಹುಲ್ ಗಾಂಧಿ ಹಾಗೂ ಇತರರು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟನೆ ನಡೆಸುತ್ತಿದ್ದುದು ತೀರಾ ನಾಟಕೀಯ ಹಾಗೂ ನಾಚಿಕೆಗೇಡಿನ ಸಂಗತಿ. ಅದೂ ರಾಹುಲ್ ಗಾಂಧಿಯ ಅಜ್ಜಿ ಸಂವಿಧಾನವನ್ನು ಎಲ್ಲಾ ರೀತಿಯಲ್ಲೂ ಮಗ್ಗುಲು ಮುರಿದು ತುರ್ತು ಪರಿಸ್ಥಿತಿ ಹೇರಿ...
ಬೆಳಗಾವಿ ಜಿಲ್ಲೆಯ ವಾಣಿಜ್ಯ ನಗರವಾದ ಮೂಡಲಗಿ ತಾಲೂಕಾ ಪ್ರದೇಶವಾಗಿ ಐದಾರು ವರ್ಷಗಳೇ ಕಳೆದರೂ ನಗರದಲ್ಲಿ ಯಾವುದೇ ಅಭಿವೃದ್ಧಿ ಇಲ್ಲದೆ, ನಗರದಲ್ಲಿ ಸ್ವಚ್ಛತೆ ಶಿಸ್ತು ಯಾವುದೂ ಇಲ್ಲದೆ ಅತ್ಯಂತ ಬೇಕಾಬಿಟ್ಟಿಯಾಗಿ ಬೆಳೆದು ನಿಂತಿದ್ದು ಶಾಸಕರು, ಪುರಸಭೆಯವರು, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ.....ಹೀಗೆ ಎಲ್ಲಾ ಇಲಾಖೆಗಳಿಂದಲೂ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ಮೂಡಲಗಿ ಪುರವೆಂಬುದು ಇತ್ತ ನಗರವೂ ಅಲ್ಲದೆ...
ಕಾಂಗ್ರೆಸ್ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು
'ನುಡಿದಂತೆ ನಡೆದಿದ್ದೇವೆ, ಖಜಾನೆ ಭರ್ತಿಯಾಗಿದೆ' ಎಂಬ ಮುಖ್ಯ ಸುದ್ದಿಯ ತಲೆಬರಹ ನೋಡಿ ನನ್ನಲ್ಲಿ ರೋಷವುಕ್ಕಿತು. ಈ ಕಾಂಗ್ರೆಸ್ ನವರು ಅಧಿಕಾರಕ್ಕೆ ಬರಲು ಕೆಲವು ಗ್ಯಾರಂಟಿಗಳನ್ನೇನೋ ಕೊಟ್ಟಿದ್ದಾರೆ ಆದರೆ ಅದಕ್ಕೆ ಬದಲಾಗಿ 'ನುಡಿದಂತೆ ನಡೆದಿದ್ದೇವೆ' ಎಂದು ಲಜ್ಜಾಹೀನರಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ಕೊಡುವುದನ್ನು...
ಚುನಾವಣೆಗಳಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವುದು ಒಂದು ಸಹಜ ಪ್ರಕ್ರಿಯೆ ಎಂಬಂತಾಗಿದೆ. ಇತ್ತೀಚೆಗಂತೂ ಈ ಪ್ರಕ್ರಿಯೆ ನೇರವಾಗಿ ವೈಯಕ್ತಿಕ ಮಟ್ಟಕ್ಕೆ ಇಳಿದು ತನ್ನ ನೈತಿಕತೆ ಕಳೆದುಕೊಂಡಿದೆಯೆನ್ನಬಹುದು. ಇದಕ್ಕೆ ಉದಾಹರಣೆಗಳನ್ನು ಸಾಕಷ್ಟು ಕೊಡಬಹುದು. ಮುಖ್ಯವಾಗಿ ನೋಡುವುದಾದರೆ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಹಾಗೂ ಬಿಜೆಪಿಯ ನರೇಂದ್ರ ಮೋದಿ ಯವರು ಪರಸ್ಪರ...