ಸುದ್ದಿಗಳು

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು ವರ್ಷ ಕಳೆದರೂ ರಾಜ್ಯ ಸರ್ಕಾರ ಇನ್ನೂ ತೆರವುಗೊಳಿಸಿಲ್ಲ.ಈ ಸರ್ಕಾರ ಕನ್ನಡಿಗರ ಪರವಾಗಿ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ ಎಂಬುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ...

ರೊಟ್ಟಿ ಬುತ್ತಿ ಕಟ್ಟಿಕೊಂಡು ಹೋರಾಟಕ್ಕೆ ಇಳಿಯಲಿರುವ ಪಂಚಮಸಾಲಿಗಳು

ದಿ. ೧೯ರಂದು ಘೋಷಣೆಯಾದರೆ ಸತ್ಕಾರ ಇಲ್ಲದಿದ್ದರೆ ಮುತ್ತಿಗೆ. ಮೂಡಲಗಿ: ಇದೇ ದಿ. ೧೯ ರೊಳಗೆ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡದಿದ್ದರೆ ದಿ. ೨೨ ರಂದು ಬೆಳಗಾವಿಯ ಸುವರ್ಣ ಸೌಧಕ್ಕೆ ೨೫ ಲಕ್ಷದಷ್ಟು ಜನರಿಂದ ಮುತ್ತಿಗೆ ಹಾಕಲಾಗುವುದು ಎಂದು ಪಂಚಮಸಾಲಿ ಬೆಳಗಾವಿ ಜಿಲ್ಲಾಧ್ಯಕ್ಷ ನಿಂಗಪ್ಪ ಫಿರೋಜಿ ಹೇಳಿದರು.ಈ ಸಂದರ್ಭದಲ್ಲಿ ಯಾರಿಗೂ ಆಹಾರದ ತೊಂದರೆಯಾಗದಂತೆ ಸಮಾಜದ ಎಲ್ಲಾ ಬಾಂಧವರು...

ಕನ್ನಡ ಜ್ಯೋತಿಗೆ ಸಿಂದಗಿಯಲ್ಲಿ ಭವ್ಯ ಸ್ವಾಗತ

ಸಿಂದಗಿ: ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಸಿಂದಗಿ ಪಟ್ಟಣಕ್ಕೆ ಆಗಮಿಸಿದ್ದು ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು.ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಕನ್ನಡಪರ ಸಂಘಟನೆಗಳೊಂದಿಗೆ ಕನ್ನಡಾಂಭೆ ವೃತ್ತದಲ್ಲಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಆಲಮೇಲ ವಿರಕ್ತ ಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು,...

30ಕೋಟಿ ವೆಚ್ಚದಲ್ಲಿ ಘಟಪ್ರಭಾದಲ್ಲಿ ರೈಲ್ವೆ ಮೆಲ್ಸೇತುವೆ

ಘಟಪ್ರಭಾ: ಸಾರ್ವಜನಿಕ ಹಾಗೂ ರೈತರ ಅನುಕೂಲಕ್ಕಾಗಿ ಇಲ್ಲಿನ ರೈಲ್ವೆ ನಿಲ್ದಾಣದ ಹತ್ತಿರ 30ಕೋಟಿ ವೆಚ್ಚದಲ್ಲಿ ರೈಲ್ವೆ ಮೆಲ್ಸೇತುವೆಯನ್ನು ನಿರ್ಮಾಣ ಮಾಡುವುದಾಗಿ ರಾಜ್ಯಸಭಾ ಸದಸ್ಯ ಹಾಗೂ ನೈರುತ್ಯ ಸಲಹಾ ಸಮಿತಿಯ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.ಅವರು ಇಂದು ರೈಲ್ವೆ ಅಧಿಕಾರಿಗಳೊಂದಿಗೆ ಘಟಪ್ರಭಾ ರೈಲ್ವೆ ನಿಲ್ದಾಣದ ಹತ್ತಿರ ರೈಲ್ವೆ ಮೆಲ್ಸೇತುವೆ ನಿರ್ಮಾಣದ ಸ್ಥಳ ಪರಿಶೀಲನೆ ಮಾಡಿದ ನಂತರ...

ರಾಷ್ಟಮಟ್ಟದ ಮಲ್ಲಕಂಬ ಕ್ರೀಡಾಕೂಟಕ್ಕೆ ಆಯ್ಕೆ

ಮೂಡಲಗಿ: ಪಟ್ಟಣದ ಚೈತನ್ಯ ಆಶ್ರಮ ವಸತಿ ಶಾಲೆಯ ವಿದ್ಯಾರ್ಥಿ ಶಿವಪ್ರಸಾದ.ಪ್ರ.ಕಡಾಡಿ, ಡಿ.3ರಂದು ಗದಗ ಜಿಲ್ಲೆಯ ನೀಲಗುಂದ ದಲ್ಲಿ ನಡೆದ 20ನೇ ರಾಜ್ಯಮಟ್ಟದ ಮಲ್ಲಕಂಬ ಕ್ರೀಡಾಕೂಟದ 12 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 3ನೇ ಸ್ಥಾನ ಪಡೆದು, ಇದೇ ತಿಂಗಳು ಆಂದ್ರಪದೇಶದ ವಿಜಯವಾಡದಲ್ಲಿ ನಡೆಯುವ ರಾಷ್ಟಮಟ್ಟದ ಮಲ್ಲಕಂಬ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾನೆ.ವಿದ್ಯಾರ್ಥಿಗೆ ಶಾಲೆಯ ಆಡಳಿತ...

ಮಾನವೀಯತೆ ಮೆರೆವ ಸಾಹಿತ್ಯ ಮೂಡಿಬರಲಿ- ಡಾ.ಸಂಗಮನಾಥ ಲೋಕಾಪೂರ

ಮೂಡಲಗಿ: ಇಂದಿನ ಜನಾಂಗ ತಂತ್ರಜ್ಞಾನದ ಜೊತೆಗೆ ಓದಿನತ್ತ ಬರಬೇಕು, ಬರಹಗಾರರು ಮಾನವೀಯತೆ ಮೆರೆವ ಸಾಹಿತ್ಯವನ್ನು ನಾಡಿಗೆ ನೀಡಬೇಕಿದೆ ಎಂದು ಧಾರವಾಡದ ಹಿರಿಯ ಕಥೆಗಾರ ಹಾಗೂ ಚಿಂತಕ ಡಾ.ಸಂಗಮನಾಥ ಲೋಕಾಪೂರ ಹೇಳಿದರು.ಪಟ್ಟಣದ ಚೈತನ್ಯ ಗ್ರೂಪ್ ಹಾಗೂ ಗೋಕಾವಿ ಗೆಳೆಯರ ಬಳಗ ಸಂಯುಕ್ತಾಶ್ರಯದಲ್ಲಿ  ಚೈತನ್ಯ ಆಶ್ರಮ ವಸತಿ ಶಾಲಾ ಸಭಾಂಗಣದಲ್ಲಿ ಸಾಹಿತಿ ಹಾಗೂ ಕಲಾವಿದ ಜಯಾನಂದ ಮಾದರ...

ಮೂಡಲಗಿ ತಾಲೂಕಾ ಕಚೇರಿಗಳು ಬೇಗ ಆಗಬೇಕು – ಲಕ್ಕಣ್ಣ ಸವಸುದ್ದಿ

ಮೂಡಲಗಿ: ಗೋಕಾಕ ಪಟ್ಟಣದ ಹೊರ ವಲಯದಲ್ಲಿ ಖಾಸಗಿ ಕಟ್ಟಡ ಬಾಡಿಗೆ ರೂಪದಲ್ಲಿ ನಡೆಸುತ್ತಿರುವ ರಸ್ತೆ ಸಾರಿಗೆ ಇಲಾಖೆಯ ಕಚೇರಿಯನ್ನು ಸಂಗನಕೇರಿ ಹತ್ತಿರ ಇರುವ ಸರಕಾರಿ ನೀರಾವರಿ ಇಲಾಖೆಯ ಜಾಗೆಯಲ್ಲಿ  ಸ್ಥಳಾಂತರಿಸಿ ಸರಕಾರದ ಖರ್ಚು ಉಳಿಸಬೇಕೆಂದು ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಆಗ್ರಹಿಸಿದರು.ಸೊಮವಾರ ಮೂಡಲಗಿಯ ಪತ್ರಿಕಾ ಕಾರ್ಯಾಲಯದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕಾಕದಲ್ಲಿ ರಸ್ತೆ...

ಕನ್ನಡ ರಥಕ್ಕೆ ಬೈಲಹೊಂಗಲದಲ್ಲಿ ಭವ್ಯ ಸ್ವಾಗತ

ಬೈಲಹೊಂಗಲ: ಹಾವೇರಿಯಲ್ಲಿ ಜನವರಿಯಲ್ಲಿ ನಡೆಯಲಿರುವ ೮೬ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಆಯೋಜಿಸಿರುವ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥವನ್ನು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.ನಗರದ ಮೂರು ಸಾವಿರ ಮಠದ ಪ್ರಭು ನೀಲಕಂಠ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ...

‘ವಚನ- ದಾಸ -ಸಂಭ್ರಮ’ ಪುಸ್ತಕ ಬಿಡುಗಡೆ ಹಾಗೂ ದಾಸಸಾಹಿತ್ಯ ವಿಚಾರಗೋಷ್ಠಿ

ಬೆಂಗಳೂರು - ನಗರದ ಸಾಹಿತ್ಯ ವಿಚಾರ ವೇದಿಕೆ ಮತ್ತು ವಿಜಯ ಸಂಜೆ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪ್ರಾಧ್ಯಾಪಕ ಸಂಶೋಧಕ ಡಾ. ಆರ್. ವಾದಿರಾಜು ಸಂಪಾದಿಸಿರುವ 'ವಚನ -ದಾಸ -ಸಂಭ್ರಮ' ಕೃತಿ ಲೋಕಾರ್ಪಣೆ ಹಾಗೂ ದಾಸ ಸಾಹಿತ್ಯ ವಿಚಾರಗೋಷ್ಠಿಯನ್ನು ಬೆಂಗಳೂರಿನ ಜಯನಗರ 4ನೇ ಬ್ಲಾಕ್ ವಿಜಯ ಸಂಜೆ...

ಸ್ವಚ್ಚತೆ ಮತ್ತು ಸುರಕ್ಷತೆಯತ್ತ ಗಮನ ಕೊಡಬೇಕು – ಲಕ್ಷ್ಮಣರಾವ್ ಯಕ್ಕುಂಡಿ

ಸವದತ್ತಿಃ ಸರಕಾರ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಜೊತೆಗೆ ಅವರ ಕಲಿಕೆಗೆ ಗಮನ ಕೇಂದ್ರೀಕರಿಸುವ ಹಾಗೂ ಮಕ್ಕಳ ಹಾಜರಾತಿ ಹೆಚ್ಚಿಸಲು ಜಾರಿಗೆ ತಂದಿರುವ ಅಕ್ಷರದಾಸೋಹ ಯೋಜನೆಯಲ್ಲಿ ಎಲ್ಲ ಅಡುಗೆಯವರು ಶಾಲೆಯ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣುವ ಜೊತೆಗೆ ಸ್ವಚ್ಚತೆ ಮತ್ತು ಸುರಕ್ಷತೆಯತ್ತ ಗಮನ ಕೊಡಬೇಕು ಎಂದು ಜಿಲ್ಲಾ ಅಕ್ಷರ ದಾಸೋಹ ವಿಭಾಗದ ಶಿಕ್ಷಣಾಧಿಕಾರಿ ಲಕ್ಷ್ಮಣ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group