ಸುದ್ದಿಗಳು
ದಲಿತ ನಾಯಕರಿಗೆ ಬಿಜೆಪಿಯಲ್ಲಿ ಅವಕಾಶ ನೀಡಬೇಕು – ಯತ್ನಾಳ
ಸಿಂದಗಿ- ಡಾ. ಅಂಬೇಡ್ಕರ ಅನುಯಾಯಿಗಳು ಕಾಂಗ್ರೆಸ್‍ನಲ್ಲಿ ಇರಬಾರದು ಕಾಂಗ್ರೆಸ್ ಪಕ್ಷ ಡಾ. ಅಂಬೇಡ್ಕರರ ವಿರೋಧಿಯಾಗಿದೆ. ನೂತನ ಶಾಸಕ ರಮೇಶ ಭೂಸನೂರ ಅವರ ಗೆಲುವು ಮತದಾರರ ಗೆಲುವು ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಸಿಂದಗಿ ಬಿಜೆಪಿ ಮಂಡಲವತಿಯಿಂದ ಹಮ್ಮಿಕೊಂಡಿರುವ ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮತದಾರರಿಗೆ...
ಸುದ್ದಿಗಳು
ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಬಹುಮುಖ್ಯ – ಬಸವರಾಜ ಅಗಸರ
ಸಿಂದಗಿ: ಪ್ರತಿ ಮಕ್ಕಳು ಉತ್ತಮ ಶಿಕ್ಷಣ ಸಂಸ್ಕೃತಿ ಜ್ಞಾನವನ್ನು ಪಡೆದು ಕೊಳ್ಳುವ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯಾಗಿ ಮಾಡಿ ಅವರ ಸುಂದರ ಭವಿಷ್ಯವನ್ನು ಸುಂದರ ಕನಸುಗಳನ್ನು ಬಿತ್ತಬೇಕು ಎಂದು ಶಿಕ್ಷಕ ಸಾಹಿತಿ ಬಸವರಾಜ ಅಗಸರ ಹೇಳಿದರು.ಪಟ್ಟಣದ ವಿದ್ಯಾನಿಕೇತನ ಕನ್ನಡ ಮಾಧ್ಯಮ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸರಸ್ವತಿ ಸಾಂಸ್ಕೃತಿಕ...
ಸುದ್ದಿಗಳು
ಕತ್ತುಕೊಯ್ದು ವ್ಯಕ್ತಿಯ ಬರ್ಬರ ಕೊಲೆ
ಬೀದರ್ - ವ್ಯಕ್ತಿಯೊಬ್ಬನನ್ನು ಕೈಕಾಲು ಕಟ್ಟಿ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ನಗರದ ಹಳೆ ಸಪ್ನಾ ಥಿಯೇಟರ್ ಬಳಿ ನಡೆದಿದೆ.ಸ್ಥಳಕ್ಕೆ ಗಾಂಧಿ ಗಂಜ್ ಠಾಣೆಯ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೊಲೆಯಾದ ವ್ಯಕ್ತಿಯನ್ನು ಅಜ್ಜು ( 34 ) ಎಂದು ಗುರುತಿಸಲಾಗಿದ್ದು ಬೀದರ್ ನ ಮುಲ್ತಾನಿ ಕಾಲೋನಿಯ ವ್ಯಕ್ತಿ....
ಸುದ್ದಿಗಳು
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ
ಆಪ್ತ ಸ್ನೇಹಿತರಿಂದ ಅನಿರೀಕ್ಷಿತ ಸಮಸ್ಯೆಗಳು. ಹಣಕಾಸಿನ ಪರಿಸ್ಥಿತಿಯು ಸ್ವಲ್ಪ ನಿರಾಶಾದಾಯಕವಾಗಿರುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಅತಿಯಾದ ಕೆಲಸ ಮಾಡಬೇಕು. ವೃತ್ತಿ, ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೀರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ವರ್ತನೆಯು ಕಿರಿಕಿರಿಯನ್ನು ಉಂಟುಮಾಡಬಹುದು.
ವೃಷಭ ರಾಶಿ
ಹಠಾತ್ ಧನಲಾಭ ಮತ್ತು ಹೊಸ ಸರಕು ವಾಹನಗಳನ್ನು ಖರೀದಿಸುವಿರಿ....
ಸುದ್ದಿಗಳು
ಶಾಹೂ ನಗರದಲ್ಲಿ ಸಂಭ್ರಮದ ರಾಜ್ಯೋತ್ಸವ
ಬೆಳಗಾವಿ ; ಇಲ್ಲಿನ ಶಾಹೂ ನಗರದ ಯುವ ಕರ್ನಾಟಕ ಅಭಿವೃದ್ಧಿ ಸಂಘದಿಂದ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಿಕ್ಕಿರಿದ ಜನಸಮೂಹದ ಮಧ್ಯೆ ನಡೆದ ಕಾರ್ಯಕ್ರಮದಲ್ಲಿ ಪುನೀತ ನಮನ ಹಾಗೂ ಹೊಸ ಹಾಡುಗಾರರ ಶೋಧ ಕಾರ್ಯಕ್ರಮ "ಯುವ ಗಂಧರ್ವ" ಅತ್ಯಂತ ಹೃದಯಸ್ಪರ್ಶಿಯಾಗಿ ನಡೆಯಿತು. ನಮೃತಾ ಜಹಗೀರದಾರ, ಜೋತ್ಸ್ನಾ ರಾಕೇಶ ಹಾಗೂ ವಾಸುದೇವ ಐಕ್ರೇತ ತೀರ್ಪುಗಾರರಾಗಿ ಆಗಮಿಸಿದ್ದರು.ಹಿರಿಯರ ವಿಭಾಗದಲ್ಲಿ...
ಸುದ್ದಿಗಳು
ಮಾತು ಕೊಟ್ಟಂತೆ ಕೆಲಸ ಮಾಡುತ್ತೇನೆ – ನೂತನ ಶಾಸಕ ಭೂಸನೂರ ಭರವಸೆ
ಸಿಂದಗಿ: ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ತಮಗೆ ಕೊಟ್ಟ ಮಾತಿನಂತೆ ಕೊಕಟನೂರ ಗ್ರಾಮದಿಂದ ಬ್ಯಾಕೊಡ ಗ್ರಾಮಕ್ಕೆ ಹೋಗಲು ಸುಸಜ್ಜಿತವಾದ ರಸ್ತೆ ಡಾಂಬರಿಕರಣ ಕೆಲವೇ ದಿನಗಳಲ್ಲಿ ಮಾಡುತ್ತೇನೆ ಎಂದು ನೂತನ ಶಾಸಕ ರಮೇಶ್ ಭೂಸನೂರ ಭರವಸೆ ನೀಡಿದರು.ಸೋಮವಾರ ತಾಲೂಕಿನ ಕೊಕಟನೂರ ಗ್ರಾಮದ ಶ್ರೀ ಹಿರೋಡೇಶ್ವರ ದೇವಸ್ಥಾನ ಜಾತ್ರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನತೆ ನನ್ನ...
ಸುದ್ದಿಗಳು
ದೇಶ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಅರಿತು ಬೋಧನೆ ಮಾಡಬೇಕು – ಪತ್ರಕರ್ತ ಪಂಡಿತ್ ಯಂಪೂರೆ
ಸಿಂದಗಿ: ಮಕ್ಕಳೆಲ್ಲರೂ ನಾಳಿನ ದೇಶದ ಭವಿಷ್ಯ. ದೇಶ ನಿರ್ಮಾಣಕ್ಕೆ ಶಿಕ್ಷಣದ ಅತ್ಯವಶ್ಯಕತೆ ಮತ್ತು ಮಕ್ಕಳ ಪಾತ್ರ ಏನು ಎಂಬುದನ್ನು ಅರಿತು ಶಿಕ್ಷಕರು ಪಾಠ ಭೋಧನೆಯಲ್ಲಿ ಮನವರಿಕೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಪತ್ರಕರ್ತ ಪಂಡಿತ ಯಂಪೂರೆ ಹೇಳಿದರು.ಪಟ್ಟಣದ ಶ್ರೀ ಭುವನೇಶ್ವರಿ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಕಾವ್ಯಾ ಆಂಗ್ಲಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಂಗಮೇಶ್ವರ...
ಸುದ್ದಿಗಳು
ಹೋಬಳಿಗಳಲ್ಲಿ ಕನ್ನಡ ಭವನ ನಿರ್ಮಾಣದ ಕನಸು ಹೊತ್ತಿರುವೆ – ಮಲ್ಲಿಕಾರ್ಜುನ ಯಂಡಿಗೇರಿ
ಸಿಂದಗಿ: ವಿಜಯಪುರ ನಗರದಲ್ಲಿ ಈಗಾಗಲೇ ಖರೀದಿಸಿದ ನೀವೇಶನದಲ್ಲಿ ಅಂದಾಜು 5 ಕೋಟಿ ಹಣದಲ್ಲಿ ಕನ್ನಡಭವನವನ್ನು ನಿರ್ಮಾಣ ಅದರ ಜೊತೆಗೆ ಜಿಲ್ಲೆಯ ಅನೇಕ ತಾಲೂಕಾ ಹೋಬಳಿ ಗ್ರಾಮಗಳಲ್ಲಿ ಕನ್ನಡ ಭವನವನ್ನು ನಿರ್ಮಿಸುವ ಬಹುದೊಡ್ಡ ಕನಸನ್ನು ಹೊತ್ತು ಈ ಬಾರಿ ಜಿಲ್ಲಾ ಕಸಾಪ ಚುನಾವಣೆಯ ಕಣದಲ್ಲಿ ನಿಂತಿದ್ದೇನೆ ತಾವುಗಳು ಈ ಬಾರಿ ನನಗೆ ಮತ ನೀಡಿ ಆಶೀರ್ವಾದ...
ಸುದ್ದಿಗಳು
ಮಠಗಳಿಗೆ ಭಕ್ತರೇ ನಿಜವಾದ ಆಸ್ತಿ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಸುಣಧೋಳಿಯಲ್ಲಿ ಸ್ವಾಮೀಜಿಗಳಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪುಷ್ಪಾರ್ಚನೆ
ಮೂಡಲಗಿ: ಮಠ-ಮಾನ್ಯಗಳಿಗೆ ಭಕ್ತ ಸಮುದಾಯವೇ ನಿಜವಾದ ಆಸ್ತಿ. ಶ್ರೀ ಮಠದ ಶ್ರೇಯೋಭಿವೃದ್ಧಿಗೆ ಭಕ್ತರೂ ಸಹ ತಮ್ಮ ತನು-ಮನ-ಧನದಿಂದ ಸಹಕಾರ ನೀಡುವಂತೆ ಕೆಎಂಎಫ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ರವಿವಾರ ಸಂಜೆ ಜಡಿಸಿದ್ಧೇಶ್ವರ ಮಠದಲ್ಲಿ ಜರುಗಿದ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ...
ಸುದ್ದಿಗಳು
ಜೀವನದ ತೊಂದರೆ ನಿವಾರಿಸುವ ಶಕ್ತಿ ಸಂಗೀತಕ್ಕಿದೆ
ಸಿಂದಗಿ: ಭಾರತೀಯ ಸಂಗೀತ ಪರಂಪರೆಗೆ ಪೂಜನೀಯ ಸ್ಥಾನ ನೀಡಲಾಗಿದ್ದು, ಭಾರತೀಯ ಸಂಗೀತದಲ್ಲಿ ಭಕ್ತಿ ಮತ್ತು ಅಧ್ಯಾತ್ಮಕ್ಕೆ ವಿಶೇಷ ಸ್ಥಾನ ನೀಡಲಾಗಿದೆ ಎಂದು ಆಲಮೇಲದ ಡಾ. ಇಂದುಮತಿ ಸಂಗೀತ ಪಾಠ ಶಾಲೆ ಸಂಚಾಲಕ ವೇತಾಳ ಜೋಶಿ ಹೇಳಿದರು.ಪಟ್ಟಣದ ಸ್ವರ ಸಂಗೀತ ಪಾಠಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಳಗದ ಸಹಯೋಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಗೀತ ಗಾಯನ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



