spot_img
spot_img

ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಬಹುಮುಖ್ಯ – ಬಸವರಾಜ ಅಗಸರ

Must Read

- Advertisement -

ಸಿಂದಗಿ: ಪ್ರತಿ ಮಕ್ಕಳು ಉತ್ತಮ ಶಿಕ್ಷಣ ಸಂಸ್ಕೃತಿ ಜ್ಞಾನವನ್ನು ಪಡೆದು ಕೊಳ್ಳುವ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯಾಗಿ ಮಾಡಿ ಅವರ ಸುಂದರ ಭವಿಷ್ಯವನ್ನು ಸುಂದರ ಕನಸುಗಳನ್ನು ಬಿತ್ತಬೇಕು ಎಂದು ಶಿಕ್ಷಕ ಸಾಹಿತಿ ಬಸವರಾಜ ಅಗಸರ ಹೇಳಿದರು.

ಪಟ್ಟಣದ ವಿದ್ಯಾನಿಕೇತನ ಕನ್ನಡ ಮಾಧ್ಯಮ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸರಸ್ವತಿ ಸಾಂಸ್ಕೃತಿಕ ಭವನದಲ್ಲಿ “ಮಕ್ಕಳ ದಿನಾಚರಣೆ ” ಹಾಗೂ ಪಠ್ಯ ಮತ್ತು ಪಠ್ಯೇತರ ಚಟುವಟಿಕಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿ, ರಾಷ್ಟ್ರ ನಿರ್ಮಾಣಕ್ಕೆ ಮಕ್ಕಳ ಪಾತ್ರ ಬಹುಮುಖ್ಯವಾಗಿದ್ದು ರಾಷ್ಟ್ರ ನಾಯಕರ ತತ್ವ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸುವುದರಿಂದ ಉತ್ತಮ ಮಹತ್ವ ನೀಡುತ್ತದೆ ಮಕ್ಕಳು ಆಟ ಪಾಠದೊಂದಿಗೆ ಕಥೆ ಕವನ ಕಾದಂಬರಿ ಪ್ರಬಂಧ ಬರೆಯುವ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳು ತಮ್ಮ ಮನೆಯಲ್ಲಿ ಇರುವ ಅಜ್ಜ ಅಜ್ಜಿಯರನ್ನು ಗೌರವದಿಂದ ಕಾಣಬೇಕು. ತಮ್ಮ ಶಿಕ್ಷಕರನ್ನು ಬಿಟ್ಟು ಯಾವ ದೇವರು ಇಲ್ಲ.ಗುರುವನ್ನು ಬಿಟ್ಟು ಬೇರೆ ದೈವವಿಲ್ಲವೆಂದು ತಿಳಿದ್ದಾಗ ತಮ್ಮ ಪ್ರಗತಿ ಎತ್ತರಕ್ಕೆ ಬೆಳೆಯುತ್ತದೆ ಎಂದರು.

- Advertisement -

ಅಧ್ಯಕ್ಷತೆ ವಹಿಸಿದ ಶ್ರೀ ಸಮರ್ಥ ವಿದ್ಯಾವಿಕಾಸ ಸಂಸ್ಥೆಯ ಅಧ್ಯಕ್ಷ ಆರ್ ಡಿ ಕುಲಕರ್ಣಿ ಮಾತನಾಡಿ, ಮಕ್ಕಳ ಕ್ರಿಯಾತ್ಮಕ ಬೆಳೆವಣಿಗೆಗೆ ಪಂಡಿತ ಜವಾಹರಲಾಲ ನೆಹರು ರಾಷ್ಟ್ರದ ಯುವ ಶಕ್ತಿಗಳಿಗೆ ಸ್ವೂರ್ತಿಯಾಗಿದ್ದು .ತಾವು ಉತ್ತಮ ಶಿಕ್ಷಣ ಪಡೆಯುವ ಮೂಲಕ ಮುಂದಿನ ದೇಶದ ಭವಿಷ್ಯದ ನಿರ್ಮಾಣ ಮಾಡುವ ವ್ಯಕ್ತಿಗಳು ಆಗಬೇಕು ಎಂದು ಶುಭ ಹಾರೈಸಿದರು.

ವಿದ್ಯಾ ನಿಕೇತನ ಕನ್ನಡ ಮಾಧ್ಯಮ ಹಾಗೂ ಪ್ರೇರಣ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾಯ ವಿದ್ಯಾರ್ಥಿಗಳಾದ ಕುಮಾರ ಶಿವಾನಂದ ಹಿರೇಮಠ. ಕುಮಾರಿ ನಿಖಿತಾ ಬಿರಾದಾರ. ಕುಮಾರ ಮುಕ್ರಮ್ ಪಟೇಲ್ ಬಾವುರ. ಕುಮಾರ ಸಮೃದ್ಧ ಜಮಖಂಡಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು.

ಒಂದನೆಯ ತರಗತಿಯ ಮಗು ಪ್ರದೀಪ ನೀರಾವರಿ ಕೋವಿಡ್ 19ರ ಕುರಿತು ಸುಂದರವಾಗಿ ಹಾಡನ್ನು ಹಾಡಿದನು. ಸಂಜನಾ ಬೀರಗೊಂಡ, ಕಿಸೂರ ಸಾಲಿ, ಸಮೃದ್ದಿ ಇಂಗಳೆ, ಸಮೃದ್ದಿ ಜಮಖಂಡಿ, ಮಹಾಂತೇಶ ಮನಗೂಳಿ, ಸಿಂಚನ ರಾಠೋಡ, ಧರಣಿ ಭಾಸಗಿ, ವಿಶ್ವನಾಥ ಉಪ್ಪಿನ, ಆದಿತ್ಯ ಬಿರಾದಾರ, ಅನನ್ಯ ಕುಲಕರ್ಣಿ, ಗುರುರಾಜ ಬಮ್ಮಣಿ, ಭವಾನಿ,ಪ್ರಭುಲ್ ಪಾಟೀಲ, ಆಯಿಶಾ ಎಲ್ಲಾ ವಿದ್ಯಾರ್ಥಿಗಳು ಕಥೆ, ಕವನ,ಹಾಡು, ಭಾಷಣ ಮಾಡಿದರು.

- Advertisement -

ಮುಖ್ಯೋಪಾಧ್ಯಾಯನಿ ಎಂ.ಪಿ.ಬುಕ್ಕ ಹಾಗೂ ಶಿಕ್ಷಕಿ ಮಂಜುಳಾ ದಾಮಗೊಂಡ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಶೋಭಾ ಬಿರಾದಾರ ಸ್ವಾಗತಿಸಿದರು. ಶಿಕ್ಷಕಿ ನಾಯ್ಕ ವಂದಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group