spot_img
spot_img

ದಲಿತ ನಾಯಕರಿಗೆ ಬಿಜೆಪಿಯಲ್ಲಿ ಅವಕಾಶ ನೀಡಬೇಕು – ಯತ್ನಾಳ

Must Read

- Advertisement -

ಸಿಂದಗಿ– ಡಾ. ಅಂಬೇಡ್ಕರ ಅನುಯಾಯಿಗಳು ಕಾಂಗ್ರೆಸ್‍ನಲ್ಲಿ ಇರಬಾರದು ಕಾಂಗ್ರೆಸ್ ಪಕ್ಷ ಡಾ. ಅಂಬೇಡ್ಕರರ ವಿರೋಧಿಯಾಗಿದೆ. ನೂತನ ಶಾಸಕ ರಮೇಶ ಭೂಸನೂರ ಅವರ ಗೆಲುವು ಮತದಾರರ ಗೆಲುವು ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಸಿಂದಗಿ ಬಿಜೆಪಿ ಮಂಡಲವತಿಯಿಂದ ಹಮ್ಮಿಕೊಂಡಿರುವ ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಬಿಜೆಪಿ ಗೆ ಸೇರುತ್ತಿರುವ ದಲಿತ ನಾಯಕರನ್ನು ಬಿಜೆಪಿಯಲ್ಲಿ ಅಸ್ಪೃಶ್ಯತೆ ಯಿಂದ ಕಾಣದೆ ಅವರಿಗೆ ಅನೇಕ ಅವಕಾಶಗಳನ್ನು ನೀಡಬೇಕು ಎಂದರು.

ಶಾಸಕ ಎನ್.ಮಹೇಶ ಮಾತನಾಡಿ, ಬಿಜೆಪಿ ಡಾ. ಅಂಬೇಡ್ಕರ ವಿರೋಧಿ ಎಂದು ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಡಾ. ಅಂಬೇಡ್ಕರ ಅವರನ್ನು ಹೇಗೆ ಬಳಸಿಕೊಂಡಿದೆ ಎಂಬುದು ಈ ದೇಶದ ಜನತೆಗೆ ಗೊತ್ತಿದೆ. ಪ್ರತಿ ಹೆಜ್ಜೆ ಹೆಜ್ಜೆಗೂ ಅವರನ್ನು ವಿರೋಧಿಸುತ್ತಲೆ ಬಂದವರು ಅವರು ಡಾ. ಅಂಬೇಡ್ಕರರು ನಿಧನರಾದಾಗ ಅವರ ಶವಸಂಸ್ಕರಕ್ಕೆ ಜಾಗೆ ನೀಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯನವರು ಇತ್ತೀಚೆಗೆ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಿಎಂಗೆ ಟಾಂಗ್ ನೀಡಿದರು.

- Advertisement -

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಸಿಂದಗಿ ಮತದಾರರಿಗೆ ಅಭಿನಂದಿಸಿದ ಅವರು ಕೊಟ್ಟ ಮಾತಿನಂತೆ ಅತಿ ಹೆಚ್ಚು ಅಂತರದಿಂದ ಬಿಜೆಪಿ ಗೆಲುವನ್ನು ಸಾಧಿಸಿದೆ ಎಂದರು. ಪ್ರಧಾನಿ ಮೋದಿ ಅವರು ಒಬ್ಬ ಕನಸುಗಾರ ಮುಂದಿನ 2023 ರ ಚುನಾವಣೆಯಲ್ಲಿ ಮತ್ತೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಪಿ.ರಾಜು, ಅರುಣ ಶಹಾಪೂರ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ, ಶ್ರೀಕಾಂತ ಕುಲಕರ್ಣಿ, ಕೆ.ಶಿವರಾಂ ಹಾಗೂ ಇತರರು ಮಾತನಾಡಿ, ಮಾಜಿ ಸಿದ್ದರಾಮಯ್ಯ ದಲಿತ ಮುಖಂಡರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಮಾತನಾಡಿರುವುದು ಖಂಡನಾರ್ಹ ಇದಕ್ಕೆ ಅವರು ದಲಿತರ ಕ್ಷಮೆ ಯಾಚಿಸಬೇಕು. ಕಾಂಗ್ರೆಸ್ ಗೆ ಬಿಟ್ ಕ್ವಾಯಿನ್ ಚಿಂತೆಯಾಗಿದೆ ಹೊರತು ಜನಸಾಮಾನ್ಯರ ಬದುಕಿನ ಚಿಂತೆಯಲ್ಲಿ ಅವರಿಲ್ಲ ಎಂದು ಚಾಟಿ ಬೀಸಿದರು.

ನೂತನ ಶಾಸಕ ರಮೇಶ ಭೂಸನೂರ ಮಾತನಾಡಿ, ಕ್ಷೇತ್ರದ ಜನತೆಯ ಆಶೀರ್ವಾದದಿಂದ ನಾನು ಮತ್ತೊಮ್ಮೆ ಶಾಸಕನಾಗಿದ್ದೇನೆ ತಮಗೆಲ್ಲ ಅಭಿನಂದನೆಗಳು ಎಂದ ಅವರು ಈ ಕ್ಷೇತ್ರದಲ್ಲಿ ಬಾಕಿ ಇರುವ ಆಲಮೇಲ ತೋಟಗಾರಿಕಾ ಕಾಲೇಜು, ಕಡಣಿ ಬ್ರಿಜ್ಡ್ ಕಾಮಗಾರಿ, ಗುತ್ತಿಬಸವಣ್ಣ ಏತ ನೀರಾವರಿ ಯೋಜನೆಯಲ್ಲಿನ ಹೊಸ ಪಂಪಸೆಟ್ ಅಳವಡಿಕೆ, ತಾಲೂಕಿನ ತುಂಬಾ ರಸ್ತೆಕ್ರಾಂತಿ ಹಾಗೂ ಆಲಮೇಲ ತಾಲೂಕಿನಲ್ಲಿ ನೂತನ ಕಛೇರಿ ಪ್ರಾರಂಭಕ್ಕೆ ಶೀಘ್ರದಲ್ಲಿಯೆ ಚಾಲನೆ ನೀಡಲಾಗುವುದು ಎಂದು ಆಶಯ ವ್ಯಕ್ತಪಡಿಸಿದರು.

- Advertisement -

ಕಾರ್ಯಕ್ರಮದಲ್ಲಿ ಶಾಸಕ ಸೋಮನಗೌಡ ಪಾಟೀಲ, ಮಾಜಿ ಶಾಸಕ ಎಸ್.ಕೆ.ಬೆಳ್ಳುಬ್ಬಿ, ಬಸವರಾಜ ಮುತ್ತಿಮಡು, ಅಪ್ಪು ಪಟ್ಟಣಶೆಟ್ಟಿ, ದೊಡ್ಡಪ್ಪಗೌಡ ಪಾಟೀಲ ನರಬೋಳಿ, ಲಿಂಬೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಅಲ್ಲಾಪೂರ, ಸಾವಯವ ಕೃಷಿ ಅಧ್ಯಕ್ಷ ವಿಜುಗೌಡ ಪಾಟೀಲ, ಉಪ್ಪಾರ ಅಭಿವೃದ್ಧಿ ನಿಗಮದ ಅದ್ಯಕ್ಷ ಗಿರೀಶ ಉಪ್ಪಾರ, ಹೈಕೋರ್ಟ ನ್ಯಾಯವಾದಿ ಎನ್.ಎಸ್.ಹಿರೇಮಠ, ಭಾಜಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ, ಜಿಲ್ಲಾ ವಕ್ತಾರ ರಾಜಶೇಖರ ಪೂಜಾರಿ, ಶಿವರುದ್ರ ಬಾಗಲಕೋಟ, ಬಸವರಾಜ ಬಿರಾದಾರ, ಪ್ರಕಾಶ ಅಕ್ಕಲಕೋಟ, ಶರಣಪ್ಪ ಕಣಮೇಶ್ವರ, ಡಾ. ಗೌತಮ ಚೌಧರಿ, ಶಿವರಾಜ ಪಾಟೀಲ, ಶರಣಪ್ಪ ತಳವಾರ, ಅಪ್ಪುಗೌಡ ಪಾಟೀಲ ಮನಗೂಳಿ, ಬಸವಂತ್ರಾಯ ಮನ್ನಾಪೂರ, ಸುದರ್ಶನ ಜಿಂಗಾಣಿ, ಶಿವುಕುಮಾರ ಬಿರಾದಾರ, ನಿಂಗಣ್ಣ ಬಗಲಿ ಸೇರಿದಂತೆ ಅನೇಕರು ಇದ್ದರು.

- Advertisement -
- Advertisement -

Latest News

ಅಂಕೋಲೆಯ ಉಪ್ಪಿನ ಸತ್ಯಾಗ್ರಹಕ್ಕೆ ತೊಂಬತ್ನಾಲ್ಕು ವರ್ಷ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಬಹು ವರ್ಣರಂಜಿತ. ಈ ಬೃಹತ್ ಚರಿತ್ರೆಯಲ್ಲಿ ಅಂಕೋಲೆಗೆ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಈ ಅಧ್ಯಾಯ ಒದಗಿ ಬಂದದ್ದು ಇಡೀ...
- Advertisement -

More Articles Like This

- Advertisement -
close
error: Content is protected !!
Join WhatsApp Group