ಸಿಂದಗಿ: ಶಿಕ್ಷಕರು ಶೈಕ್ಷಣಿಕವಾಗಿ ಬೋಧನೆ ನೀಡುವುದರ ಜೊತೆಗೆ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಲು ಸ್ಕೌಟ್ ಮತ್ತು ಗೈಡ್ಸ್ ಮೂಲಕ ನಮ್ಮ ಸಂಸ್ಕೃತಿ ಆಚಾರ ವಿಚಾರ ಮನದಲ್ಲಿ ತುಂಬುವ ಕಾರ್ಯ ನಿತ್ಯ ನಿರಂತರವಾಗಿ ನಡೆಯಬೇಕು ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕೋಶಾಧ್ಯಕ್ಷ ಸಾಹಿತಿ ಬಸವರಾಜ ಅಗಸರ ಹೇಳಿದರು.
ತಾಲೂಕಿನ ಕನ್ನೊಳ್ಳಿ ಗ್ರಾಮದ ಹಿರೇಮಠದ ಶ್ರೀ ಸರಸ್ವತಿ ವಿದ್ಯಾನಿಕೇತನ ಪ್ರೌಢ ಶಾಲೆಯ ಆವರಣದಲ್ಲಿ ವಿಜಯಪುರದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸ್ಥಳೀಯ ಸಂಸ್ಥೆಯ ಅಂಗವಾಗಿ ಮಕ್ಕಳ ದಿನಾಚರಣೆ ನಿಮಿತ್ತವಾಗಿ ಒಂದು ದಿನದ ಸೋಪಾನ ಕಾರ್ಯಾಗಾರದಲ್ಲಿ ಅವರು ಭಾಗವಹಿಸಿ ಮಾತನಾಡಿ, ಸಾಮಾಜಿಕ,ಶೈಕ್ಷಣಿಕ, ಆರ್ಥಿಕವಾಗಿ, ರಾಜಕೀಯವಾಗಿ ಹೇಗೆ ಬೆರೆತು ಬದುಕು ಸಾಗಿಸಬೇಕು ಮತ್ತು ಶಿಸ್ತು-ಸಂಯಮತೆಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಕಲಿಸಿಕೊಡುತ್ತದೆ ಎಂದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಿಕ ರಾಜಶೇಖರ ಖೇಡಗಿ ಮಾತನಾಡಿ ಸೃಜನಶೀಲ ಶಿಕ್ಷಕರು ಶೈಕ್ಷಣಿಕ ದೂರದೃಷ್ಟಿ ಮತ್ತು ಮಕ್ಕಳ ಕಲಿಕಾ ಉತ್ಸವ ಪ್ರೇರಣೆ ನೀಡಲು ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ಹಾಗೂ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ತಯಾರ ಮಾಡಬೇಕು.ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕ್ರೀಡಾ ಸಾಂಸ್ಕೃತಿಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶಿಕ್ಷಕರು ಮಾರ್ಗದರ್ಶನ ನೀಡಬೇಕು ಎಂದರು.
ಹಿರೇಮಠದ ಶ್ರೀ ಸರಸ್ವತಿ ವಿದ್ಯಾನಿಕೇತನ ಪ್ರೌಢ ಶಾಲೆಯ ಮುಖ್ಯಗುರು ಸಂಗಯ್ಯ ಗಚ್ಚಿನಮಠ ಸಭೆಯ ಅಧ್ಯಕ್ಷ ಸ್ಥಾನ ವಹಿಸಿದ್ದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಾದ ಮಲ್ಲು ಪಾರಸನಳ್ಳಿ. ರೇಣುಕಾಚಾರ್ಯ ಹಿರೇಮಠ, ಅಂಬಿಕಾ ಖಜೂರಗಿ, ಜಯಶ್ರೀ ಜಾಲವಾದಿ ಕಾರ್ಯಕ್ರಮ ಉದ್ಘಾಟಿಸಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಾದ ಆರ್.ಪಿ ಕಟ್ಟಿ. ಮಲ್ಲಮ್ಮ ಬೆನ್ನೂರ, ಎಸ್. ಎಸ್.ಪಾಟೀಲ, ಶೈತಾ ಹಳ್ಳಿ, ಅಂಬ್ರೀಶ ಒಂಟೆತ್ತಿನ, ಎಂ.ಎ.ಮುಲ್ಲಾ, ಅಬ್ದುಲ್ ಯರಗಲ್ಲ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ದೈಹಿಕ ಶಿಕ್ಷಕ ಎಸ್.ಎಸ್.ಪೊಲೀಸ ಪಾಟೀಲ ಸ್ವಾಗತಿಸಿದರು. ಪೂಜಾ ಜನಗೊಂಡ ಪ್ರಾರ್ಥನೆ ಗೀತೆ ಹೇಳಿದರು. ಶಿಕ್ಷಕ ಅಬ್ದುಲ್ ಯರಗಲ್ಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.