ಸಿಂದಗಿ: ತಾಲೂಕಿನ ಕೊಕಟನೂರದಿಂದ ಬ್ಯಾಕೋಡ ಗ್ರಾಮಕ್ಕೆ ಹೋಗುವ ರಸ್ತೆ ಡಾಂಬರೀಕರಣ ಮಾಡಿಯೇ ತಿರುಗುತ್ತೇನೆ ಎಂದು ಶಾಸಕ ರಮೇಶ್ ಭೂಸನೂರ ಭರವಸೆ ನೀಡಿದರು.
ತಾಲೂಕಿನ ಕೊಕಟನೂರ ಗ್ರಾಮದ ಶ್ರೀ ಹಿರೋಡೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಉಪಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಎಲ್ಲ ಸಚಿವರು ಈ ಕ್ಷೇತ್ರದ ಎಲ್ಲ ಚಿತ್ರಣವನ್ನು ನೋಡಿದ್ದಾರೆ ಆಯಾ ಇಲಾಖಾವಾರು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಆ ಅನುದಾನದಲ್ಲಿ ಎಲ್ಲ ಕಾಮಗಾರಿಗಳಿಗೆ ಚಾಲನೆ ದೊರೆಯುತ್ತವೆ ಎಂದು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರವಿಕಾಂತ ನಾಯ್ಕೋಡಿ, ಮಲ್ಲನಗೌಡ ಡಂಬಳ, ನಾಗಪ್ಪ ಶಿವೂರ, ಮಲ್ಲು ಬಗಲಿ, ಪೈಗಂಬರ್ ಮುಲ್ಲಾ, ಬೀರು ಕನ್ನೂರ, ಜಟ್ಟೇಪ್ಪ ಹರನಾಳ, ಕಾಸಪ್ಪ ಬಡಿಗೇರ,ಮಲ್ಲು ಮಾಲಗಾರ, ನಿಂಗು ಬಡಿಗೇರ, ರೇವಣಸಿದ್ದ ಕೆರೂರಮಠ ಇನ್ನಿತರರು ಉಪಸ್ಥಿತರಿದ್ದರು.