spot_img
spot_img

ನಮ್ಮ ಚಿಂತನೆ, ಪ್ರವೃತ್ತಿ ಮತ್ತು ಮಾನಸಿಕತೆ ಬದಲಾಗಬೇಕು – ಅರುಣ ಶಹಾಪೂರ

Must Read

- Advertisement -

ಸಿಂದಗಿ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪದವಿಯು ಅತ್ಯಂತ ಪ್ರಮುಖ ಹಂತವಾದದ್ದು, ಮಹಾವಿದ್ಯಾಲಯಗಳು ವೃತ್ತಿಗಾಗಿ ಮಾತ್ರ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸದೇ ಅವರಲ್ಲಿ ಒಳ್ಳೆಯ ಪ್ರವೃತ್ತಿಗಳನ್ನು ಬೆಳೆಸುವ ಕೇಂದ್ರಗಳಾಗಬೇಕಲ್ಲದೆ ಕಾಲ ಬದಲಾಗಿದೆ ಎನ್ನುತ್ತೇವೆ ಆದರೆ ಬದಲಾಗಿರುವುದು ಕಾಲವಲ್ಲ ನಮ್ಮ ಚಿಂತನೆ, ಪ್ರವೃತ್ತಿ ಮತ್ತು ಮಾನಸಿಕತೆ. ಸಂಕಷ್ಟದ ಸಂದರ್ಭದಲ್ಲಿ ಆತ್ಮವಿಶ್ವಾಸದಿಂದ ಪುಟಿದೇಳಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಅಗತ್ಯವಿದೆ ಎಂದು ಮಾಜಿ ಎಂಎಲ್ಸಿ ಸದಸ್ಯ ಅರುಣ ಶಹಾಪುರ ಹೇಳಿದರು.

ಪಟ್ಟಣದ ಶ್ರೀಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡ ಪಠ್ಯಪೂರಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕಾಲೇಜುಗಳು ಸಾಧಕರ ಛಾವಣಿಗಳಾಗಬೇಕು. ಕೇವಲ ೧೧ ವರ್ಷದ ಅವಧಿಯಲ್ಲಿ ಈ ಮಹಾವಿದ್ಯಾಲಯವು ಅಗಾಧ ಸಾಧನೆ ಮಾಡುವ ಮೂಲಕ, ನುರಿತ ಉಪನ್ಯಾಸಕರನ್ನು ಹೊಂದಿರುವ ಕಾಲೇಜು ಮಕ್ಕಳ ಜ್ಞಾನದಾಹ ನೀಗಿಸುತ್ತಿರುವುದು ಶ್ಲಾಘನೀಯ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ ಮಾತನಾಡಿ, ಅಕ್ಷರ ಜ್ಞಾನದ ಜತೆಗೆ ನೀತಿಯುತ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳು ಮುಖ್ಯವಾಗಿದ್ದು. ಪ್ರತಿ ಮಗುವಿನಲ್ಲಿಯೂ ವಿಭಿನ್ನ ಪ್ರತಿಭೆಯಿರುತ್ತದೆ. ಪ್ರತಿಭೆಯನ್ನು ಗುರುತಿಸಿ ಪೋಷಿಸುವುದು ಅಗತ್ಯ. ಪರಿಶ್ರಮ, ತಾಳ್ಮೆ, ಶಿಸ್ತು ಮತ್ತು ಪಾಲಕರ ಪ್ರೋತ್ಸಾಹ ಇದ್ದರೆ ಏನು ಬೇಕಾದರೂ ಸಾಧಿಸಲು ಸಾಧ್ಯ. ಈಗಿನ ವಿದ್ಯಾರ್ಥಿಗಳು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು. ಶೈಕ್ಷಣಿವಾಗಿ ಎತ್ತರಕ್ಕೆ ಬೆಳೆದರೂ ಕೂಡ, ಸಂಸ್ಕೃತಿ, ಪರಂಪರೆ ಮರೆಯಬಾರದು ಎಂದು ಸಲಹೆ ನೀಡಿದರು.

- Advertisement -

ಸಾನ್ನಿಧ್ಯ ವಹಿಸಿದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎಸ್.ಎಮ್.ಪೂಜಾರಿ ಮಾತಗಳನ್ನಾಡಿದರು. ಕಾರ್ಯಾಧ್ಯಕ್ಷ ಸಾಹೇಬಗೌಡ ದುದ್ದಗಿ ಸ್ವಾಗತಿಸಿದರು. ಪ್ರಿಯಾಂಕ ಕಕ್ಕಳಮೇಲಿ ಚೆನ್ನಮ್ಮ ಹಿರೇಮಠ ನಿರೂಪಿಸಿದರು. ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಿನಾಜ್ ಗೋಲಗೇರಿ ವಂದಿಸಿದರು.

ಈ ವೇಳೆ ಮಹಿಳಾ ಪುಪೂ ಕಾಲೇಜಿನ ಪ್ರಾಚಾರ್ಯ ಎಮ್.ಎಸ್.ಹೈಯಾಳಕರ, ಭೀಮನಗೌಡ ಸಿಂಗನಳ್ಳಿ, ಶಿವಾನಂದ ರೋಡಗಿ, ಮಲ್ಲಿಕಾರ್ಜುನ ಅಲ್ಲಾಪೂರ, ಗವಿಸಿದ್ದಪ್ಪ ಆನೆಗುಂದಿ, ಡಾ.ಬಾಹುಬಲಿ ಒನಕುದರಿ, ಮಹಾವಿದ್ಯಾಲಯದ ಸಿಬ್ಬಂದಿಗಳಾದ ಮಹಾಂತೇಶ ನೂಲಾನವರ, ಉಮೇಶ ಪೂಜೇರಿ, ಅನಿಲಕುಮಾರ ರಜಪೂತ, ಗಿರೀಶ ಕುಲಕರ್ಣಿ, ಶೃತಿ ಹೂಗಾರ,  ಮುರ್ತುಜಾಬಿಬೇಗಂ ಬಿರಾದಾರ, ಪ್ರಿಯಾಂಕ ಬ್ಯಾಕೋಡ, ಹೇಮಾ ಹಿರೇಮಠ, ಮಂಗಳಾ ಈಳಗೇರ, ಡಿ.ಎಮ್.ಪಾಟೀಲ್, ಮಮತಾ ಹರನಾಳ, ಶಿವಶಂಕರ ಕುಂಬಾರ ಮತ್ತು ಮುದ್ದು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗುರ್ಲಾಪೂರ : ಶವ ಚಿತಾಗಾರಕ್ಕಾಗಿ ಮನವಿ

  ಮೂಡಲಗಿ: -ತಾಲೂಕಿನ ಗುರ್ಲಾಪೂರದಲ್ಲಿ ಶವಸಂಸ್ಕಾರಕ್ಕಾಗಿ ಸೂಕ್ತ ಚಿತಾಗಾರ ಇಲ್ಲದೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ  ಶಿವಾಜಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಘಟನೆಯಿಂದ ಮೂಡಲಗಿ ಪುರಸಭೆ ಮುಖ್ಯಾಧಿಕಾರಿಗಳಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group