ಕೇಶವ ಚತುರ್ವೇದಿ ಅವರ ಸ್ವಭಾವ, ಕಾರ್ಯ ಪ್ರವೃತ್ತಿ ಮೆಚ್ಚುವಂತಹದು – ಡಿ ಜಿ ಎಂ ಅಮಿತ್ ತ್ರಿಪಾಠಿ

0
77

ಹಳ್ಳೂರ – ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಒಳ್ಳೆಯ ವ್ಯಕ್ತಿತ್ವ ಹೊಂದಿ 11ವರ್ಷಗಳ ಕಾಲ ಪ್ರಾಮಾಣಿಕವಾಗಿ ಜಿ ಬಿ ಎಲ್ ಕಾರ್ಖಾನೆಯಲ್ಲಿ ಸಕ್ಕರೆ ಉತ್ಪಾದನೆ ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಯಡ್ರಾoವಿ ಶಿವಶಕ್ತಿ ಶುಗರ ಕಾರ್ಖಾನೆಗೆ ಎಚ್ ಓ ಡಿ ಆಗಿ ಕೇಶವ ಚತುರ್ವೇದಿ ನೇಮಕಗೊಂಡಿದ್ದು ಸಂತೋಷದ ವಿಷಯವೆಂದು ಸಕ್ಕರೆ ವಿಭಾಗದ ಡಿ ಜಿ ಎಂ ಅಮಿತ ತ್ರಿಪಾಠಿ ಹೇಳಿದರು.

ಅವರು ಸಮೀರವಾಡಿ ಬೈಯೋರಿಫೈನರೀಜ್ ಸಕ್ಕರೆ ಕಾರ್ಖಾನೆಯ ಹೊರ ವಲಯದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ,11 ವರ್ಷ ಪ್ರಾಮಾಣಿಕ ಸೇವೆ ಸಲ್ಲಿಸಿ ಯಾರಿಗೂ ಕೇಡನ್ನು ಬಯಸದೆ ಪ್ರೀತಿ ವಿಶ್ವಾಸವನ್ನಿಟ್ಟುಕೊಂಡು ಪದೋನ್ನತಿ ಹೊಂದಿದ ಕೇಶವ ಚತುರ್ವೇದಿ ಅವರ ಮುಂದಿನ ಜೀವನ ಉಜ್ವಲವಾಗಲೆಂದು ಶುಭ ಹಾರೈಸಿದರು. ಇದೆ ಸಂದರ್ಭದಲ್ಲಿ ಸಕ್ಕರೆ ಶುಗರ ಹೌಸ್ ಸೂಪರ್ವೈಜರ್ ಹಾಗೂ ಸೆಂಟ್ರಿ ಪ್ಯೂಗಲ್ ನವರು ಜಂಟಿಯಾಗಿ ಸನ್ಮಾನ ಮಾಡಿ ಸತ್ಕರಿಸಿದರು.

ಈ ಸಮಯದಲ್ಲಿ ಆರ್ ಡಿ ಮಿಶ್ರಾ. ಮಲ್ಲಿಕಾರ್ಜುನ ಕೋಷ್ಟಿ, ಮಲ್ಲಿಕಾರ್ಜುನ ದೇವರಗುಡಿ,ಅಜಯಸಿಂಗ, ಮುರಿಗೆಪ್ಪ ಮಾಲಗಾರ, ರಮೇಶ ಪಾಟೀಲ, ಅಲ್ಲಪ್ಪ ಕಂಕಣವಾಡಿ, ಮಹಾಲಿಂಗ ಮಾಳಿ,ಸುರೇಶ ಹೊಸಕೋಟಿ, ಶಿವಬೋಧ ಹಸಬಿ, ಸಿದ್ರಾಮ ಪುರಾಣಿಕ, ಸುರೇಶ ಬಿಜಾಪುರ, ಮಂಜು ಗೌರವ್ವಗೋಳ, ಪರಮಾನoದ ಪೂಜೇರಿ, ಜಗದೀಶ ತೇರದಾಳ, ಕಿರಣ ಬಜೇಂತ್ರಿ, ಸಿದ್ದಪ್ಪ ಪಾಶ್ಚಾಪೂರ, ರಮೇಶ ಕೌಜಲಗಿ, ಬಬಲು ನದಾಫ, ಹನಮಂತ ಎಂಕನ್ನವರ, ಶಿವು ಕಂಚಗಾರ, ಸಂಜು ಗುರುಸಿದ್ದಣ್ಣವರ, ಶಿವಾನಂದ ಸಿಂದಗಿ, ಬೀರಪ್ಪ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here