spot_img
spot_img

ಮಕ್ಕಳ ಕತೆ ; ಹಸಿವು ಮತ್ತು ಪ್ರಾಣ

Must Read

- Advertisement -

ಒಂದು ಅಡವಿಯಲ್ಲಿ ಮೂರು ಮಂಗಗಳು ವಾಸವಾಗಿದ್ದವು. ತಂದೆ ಮಂಗ , ಮಗ ಮಂಗ , ಮತ್ತು ಮರಿ ಮಗಳು ಮಂಗಗಳು. ಅವು ತುಂಬಾ ಪ್ರೀತಿಯಿಂದ ಜೀವಿಸುತ್ತಿದ್ದವು. ಅಷ್ಟೇ ಕೀಟಲೆಯನ್ನು ಮಾಡುತ್ತಿದ್ದವು. ಮಗ ಮಂಗ ತಂಗಿಯನ್ನು ಗೋಳೋ ಎಂದು ಹೊಯ್ಯುತ್ತಿತ್ತು. ತಲೆ ಕೂದಲ ಜಗ್ಗುವುದು, ಬಾಲ ಎಳೆಯುವುದು ಓಡುತ್ತಾ ಹೋಗಿ ಅದರ ಕೈಯೊಳಗಿನ ರೊಟ್ಟಿಯ ತುಂಡನ್ನು ಕಸಿಯುವುದು ಎಂದರೆ ಅಣ್ಣ ಮಂಗನಿಗೆ ಬಲು ಇಷ್ಟ. ಮರಿ ಮಂಗ ಸಹಿಸಿಕೊಳ್ಳುತ್ತಿತ್ತು.

ತಂದೆ ಮಂಗ ” ಹುಚ್ಚಾ….ಅದನ್ನೆಲ್ಲಾ ಬಿಟ್ಟ ಮೊದಲ ಅಣ್ಣಹುಡುಕಾಕ ಕಲಿ ಏನರ ಆದೀತ…ಈ ಹುಚ್ಚಾಟ ಬಿಡು ” ಎಂದು ಗದರುತ್ತಿತ್ತು.ಮಗ ಗೋಣುಹಾಕುತ್ತಾ ಲುಟುಲುಟು ಮರವೇರುತ್ತಿತ್ತು.ತಂದೆಯ ಮಾತು ತನಗೆ ಅರ್ಥವಾಯಿತೋ ಏನೋ ಎಂಬಂತೆ ತೋಟದ ಕಡೆ ಮಗ ಹೆಜ್ಜೆಹಾಕತೊಡಗಿತು . ತಂಗಿ ಅಣ್ಣನನ್ನು ಅನುಸರಿಸಿತು.ತಂದೆ ಮಕ್ಕಳ ಜತೆಗೂಡಿ ಊರಿನ ಕರಿಗೌಡನ ಬಾಳೆ ತೋಟವನ್ನು ಹೊಕ್ಕವು. ತೋಟವನ್ನು ಮಾಲೀಕ ಕಾವಲು ಮಾಡುತ್ತಿದ್ದನು.

ಮೂರು ಮಂಗಗಳು ಮಾಲಕನನ್ನು ನೋಡುತ್ತಾ ನೋಡುತ್ತಾ ಕಳ್ಳ ಹೆಜ್ಜೆ ಹಾಕುತ್ತಾ ತೋಟದೊಳಗೆ ಹೆಜ್ಜೆ ಹಾಕಿದವು. ತೋಟದಲ್ಲಿ ಬಾಳೆಗೊನೆಗಳು ಬಾಗಿ ತೂಗುತ್ತಿದ್ದವು ತಿಳಿಹಳದಿ ಮಿಶ್ರಿತ ಹಸಿರು ಬಣ್ಣದ ಕಾಯಿಗಳು ಬಲಿತು ಬಲಿತು ಬಾಗಿ ತೊನೆಯುತ್ತಿದ್ದವು. ಮಾಲಕ ಸದ್ದಿಲ್ಲದೆ ಬಂದ. ಅವನ ಆಳೂ ಅವನನ್ನು ಹಿಂಬಾಲಿಸಿದ್ದನು.

- Advertisement -

ಅಪ್ಪಾರ,
ಆ ಮರಿ ಮಂಗ ನೋಡ್ರಿ ಆ ಎಳೆ ಗೊನಿ ಮುರದ ಹಾಕೇದರಿ
ಅದನ್ನ ನೋಡ್ರಿ ಆ ಇನ್ನೊಂದ ಮಂಗ್ಯಾ ಅದೇನ ಅದರ ಅಣ್ಣ ಐತೋ ಏನೋರಿ ಬಾಳಿ ಎಲಿ ಕಿತ್ತ ಕಿತ್ತ ಒಗದೈತ್ರಿ….!!??
ಎಂದನು.
ಒಂದ ಬಾಳಿ ಮರಿಗೆ ಅದೂ ಈ ರೀತಿ ಬೆಳೆದ ಈ ಮಟ್ಟಕ್ಕ ಏನ ಮುಟೈತಲೆ…..
ಅದೇನ ಹುಡುಗಾಟಿಕಿ ಅಂತ ತಿಳಿದಾವೇನ ಇವ ಮಂಗ್ಯಾಗೋಳ ಮತ್ತೇನೈತಿ ಇವ್ನ ಕೇಳೂದು…..!
ಏನ ನೋಡಕೋತ ನಿಂತಿಯೋ ಮಾರಾಯಾ….ಅಟ್ಟಿ ಬಿಡಲೇ ಹೋಗ್ಲಿ ಅತ್ಲಾಗ…
ಅತ್ಲಾಗ ಅಂದ್ರ ಎತ್ತಗ್ರಿ ಎಪ್ಪಾ……?
ಅವ್ರು ಹಿಂಗ ಮಾಡಿದರ ಅವು ಏನ ತಿನಬೇಕ್ರಿ ……ಮಣ್ಣ….!
ಪಾಪ ಬಾಯಿ ಇಲ್ಲದ ಮೂಕ ಪ್ರಾಣಿ ರೀ
ಲೇ ….ಮೂಕ ಪ್ರಾಣಿ ಅಂತ ದಯಾ ಗಿಯಾ ತೋರ್ಸಿದ್ರ…..ಮುಗಿತಲೇ ನನ್ನ ಕತಿ…….ಹಾಕಿದ ಗಂಟ ಬರುದಿಲ್ಲ.
ಇರ್ಲಿ …..ಇರ್ಲಿ…..ಸಲ್ಪ ಕರುಣೆ…….
ಏ…….ಕರಿಯಾ……ಮಗನ…… ನಿನ್ನ ಎದಕ ಇಟಗೊಂಡೆನಲೇ….ಎಂದು ಮಾಲಕ ರೋಷಾವೇಷದಲಿ
ಕರಿಯನತ್ತ ಮುನ್ನುಗ್ಗಲು…ಮಂಗಗಳು…..ಬಾಯಿ ಕೆರೆಯುತ್ತಾ ಕಾಯಿ ಚೆಲ್ಲುತ್ತಾ….ಬಾಳೆ ಗಿಡ ಏರುತ್ತಾ ಇಳಿಯುತ್ತಾ ಓಡತೊಡಗಿದವು.

ಊರಿಗೆ ಸಾವುಕಾರನೆಂದ್ರ ಈ ಬಾಳಿತ್ವಾಟದ ಮಾಲೀಕನ.ಅಂತನ ಹೊಲಕ ಲೈಟ್ ಕಂಬ ಹಾಕಿಸಿ ಪಂಪಸೆಟ್ಟ ತಗೊಂಡು ಕರಿಯನ ತಿಂಗಳ ಪಗಾರದಂಗ ಇಟಗೊಂಡಿದ್ದ. ಕರಿಯ ಅವನ ಹೊಲದಲ್ಲಿ ಬಹು ನಿಯತ್ತಿನಿಂದ ದುಡಿಯುತ್ತಿದ್ದ. ಹೊಳಿ ದಂಡಿಗೆ ಪಂಪಸೆಟ್ಟ ಕುಂದ್ರಸಿ ದೊಡ್ಡ ಒಡ್ಡಿನ ಮ್ಯಾಲ ಕಾವಲಿ ಮಾಡಿ ಬಾಳಿ ತ್ವಾಟಕ ದಿನಾಲೂ ನೀರ ಬಿಡತ್ತಿದ್ದ. ಈ ಮಂಗಗಳೂ ಅತ್ತಲೇ ಓಡಿದವು.

ಒಮ್ಮಿಂದೊಮ್ಮೆಲೇ ಏನಾಯಿತೇನೋ ಅವಕ್ಕೆ……ಕೀಂ…….ಕೀಂ…… ಕೀಂ…….ಎಂದು ಛೀರತೊಡಗಿದವು. ಕರಿಯ ಗೌಡ ಅತ್ತ ಗಡಬಡಿಸಿ ನೋಡಲು…..ದೊಡ್ಡ ಮಂಗ ಲೈಟಿನ ಕಂಬದ ತಂತಿಗೆ ಜೋತಾಡುತ್ತಿತ್ತ್ತು.ಗೌಡ ಓಡಿ ಹೋದವನೇ ಕರೆಂಟ ಬಟನ್ ಆಫ್ ಮಾಡಿ ಬಿಟ್ಟ ….ಮಂಗಗಳು ದಿಕ್ಕಾ ಪಾಲಾಗಿ ಓಡಿಹೋದವು.
****
ಅಂದು ಒಂದು ಮಧ್ತಾಹ್ನ ಹೊತ್ತು. ಗಿಡದಲ್ಲಿ ತಂದೆ ಮಂಗ ಕೊಂಬೆಗೆ ಒರಗಿ ನರಳುತ್ತಿತ್ತು. ಮಗ ಮಂಗ ಓಡಿ ಬಂದು ಅದರ ಬೆನ್ನು ನೀವತೊಡಗಿತು. ಅಪ್ಪಾ,…..ಬಾಳ ನೋವ ಆಗೇತಾ……! ಕೈ….?” ಕೇಳಿತು.
“ಹೂನಪ್ಪಾ…..! ತಂದೆಯಿಂದ ಉತ್ತರ.
“ಅಯ್ಯೋ….ಆ ತ್ವಾಟ ಏನು ಕೆಟ್ಟ ಆ ಮಾಲಕ , ಆಳು ಅವರು ಕೆಟ್ಟ…” ಎಂದು ಮಗಳು ಮಂಗ ತೋಟದ ಒಡೆಯನನ್ನು ದೂಷಿಸತೊಡಗಿತು.
“ಹೌದಪ್ಪ…‌ಇನ್ನು ಮ್ಯಾಲ ನಾವು ಆ ತ್ವಾಟದ ಕಡೆ ಹೊಳ್ಳಿ ನೋಡುದ ಬ್ಯಾಡ ” ಎಂದಿತು ಮಗ ಮಂಗ.
“ಟೈಮ ಕೆಟ್ಟ ಇದ್ದರ ಹಿಂಗ ಅಪಾ..”ಎನ್ನುತ್ತಾ ಮಗ್ಗುಲು ಬದಲಿಸಿತು.
“ಏನ ಟೈಮ ಕೆಟ್ಟ… ಮನುಷ್ಯಾರು ಕೆಟ್ಟ ಅನ್ನು ಇನ್ನು ಸರಿ.” ಎಂದು ವಿಚಾರ ಸರಿಪಡಿಸಲು ಪ್ರಯತ್ನಿಸಿತು.
ಅವ್ರು ಮೊದಲ ಕೆಟ್ಟ ಅದಾರ ….
ಇನ್ನ ಸಲ್ಪ ಹೊತ್ತ ತಡ ಆಗಿದ್ರ ಇವತ್ತ ನೀನೆಲ್ಲಿ ಇರತ್ತಿದ್ದೆಪಾ…….ಮಗ ಮಂಗ ಕಣ್ಣೀರು ಸುರಿಸಿತು.
ನೀವೆಲ್ಲಾರು ಯಾಕ ಅಳತೀರಿ
ನಾವು ಅವ್ರ ಹೊಲದ ಕಡೆ ಹೋಗುದು ಬ್ಯಾಡ…..” ಮಗಳು ಮಂಗ ಸಮಸ್ಯೆಗೆ ತೆರೆಯಲು ನುಡಿಯಿತು.
ಬ್ಯಾಡ ಅಂದ್ರ ಹೊಟ್ಟಿ ಕೇಳತೈತೇನ್ರೋ…….
ಅಂದ್ರ ಮತ್ತೂ ಅತ್ಲಾಗ ಹೋಗುನು ಅಂತಿರೇನ್….ಮಗ ಮಂಗ ಪ್ರಶ್ನೆ.
ನೀವು ಆ ತ್ವಾಟಕ ಹೋದ್ರ ನಾ ಬರುದಿಲ್ಲ….ಎಂದು ಟೊಂಗೆ ಹಿಡಿದು ಜೋತಾಡುತ್ತಾ ಹಠಮಾಡಿತು ಮಗ.
ಈಗ ಹೊತ್ತ ಭಾಳ ಆಗೇತಿ ನೋಡು ಗಿಡದ ನೆಳ್ಳ ಹೊಳ್ಳಾಕ ಹತ್ತೇತಿ ನಿನ್ನ ತಂಗಿ ಹಸಿವಿ ತಡಕೊಳ್ಳುದಿಲ್ಲ ನಡಿರಿ ಏನರ ಹುಡುಕುನು ” ಎಂದು ತಂದೆ ಮಂಗ ಈ ಸಾರೆ ಮಕ್ಕಳನ್ನು ತೆಂಗಿನ ತೋಟದತ್ತ ಕರೆದು ಬಂದಿತು.
ಅಪ್ಪಾ ಈ ಸಾರಿ ಬ್ಯಾರೆ ಕಡೆ ಹೊಂಟೆವಲ್ಲಾ ನಾವು ಮಗಳು ತಂದೆಯನ್ನು ಲಲ್ಲೆಗರೆಯುತ್ತಾ ದಾರಿಯುದ್ದಕ್ಕೂ ನಡೆಯುತ್ತಿತ್ತು. “ಹೌದು ಎತ್ತ ಹೇಳು…” ತಂದೆ ಮಗಳನ್ನು ಫುಸಲಾಯಿಸಿತು.
ಅಪ್ಪಾ ನಾ …. ಹೇಳತೇನಿ…..ತೆಂಗಿನ ತ್ವಾಟ ಆ. ಶೆಟ್ಟಿದು……ಹೌದು ಹೌದು …” ತಂದೆ ಹಲ್ಲು ಕಿರಿಯಿತು.
ಅಪ್ಪಾ ಆ ಶೆಟ್ಟಿ ಎಷ್ಟ ಚಲೋ ಅದಾನ ….ನಾನು ಮೊನ್ನೆ ನನ್ನ ಗೆಳತಿ ಜೊತೆ ಹೋದಾಗ
ನಮಗ ಕರದ ‌…..ಕರದ ….ಎಳೆ ನೀರು ಕೊಟ್ಟರು ರೊಟ್ಟಿನ ಕಾವಲಿ ದಂಡಿ ಮ್ಯಾಗ ಇಟ್ಟ ಬಾ….ಬಾ….ಎಂದ ಕರೆದ ತಾವು….ದೂರ ಹೋಗಿ ನಿಂತರೇನಪಾ
ಹೌದಪ್ಪ ಭಾಳ ಒಳ್ಳೆಯವರು. ಅದಾರ ಅವ್ರು…..ನನ್ನ ಇನ್ನೊಬ್ಬ ಗೆಳತಿ ಹೇಳತ್ತಿದ್ದಳು ಅವ್ರು ಮೊನ್ನೆ ಫ್ಯಾಮಲೀ ಸಮೇತ ಹೋದಾಗ..‌ ಅವ್ರಿಗೆ ಹೋಳಿಗಿ ಕೊಟ್ರಂತ
ಅಬ್ಭಾ….! ಎಂತ ದಾನದ ಕೈ ….ಎಂದು ತೆಂಗಿನ ತೋಟದ ಶೆಟ್ಟಿಯನ್ನು ಹೊಗಳುತ್ತಾ…..ಜಿಗಿಯುತ್ತಾ ಮತ್ತೆ ಕೆಲವು ಸಾರೆ ನಡೆಯುತ್ತಾ ಹೋದವು.

- Advertisement -

ತೋಟ ಹೊಕ್ಕು ಬುಬು ಬುದನೆ ಮರವೇರತೊಡಗಿದವು. ತೋಟದ ಮಾಲೀಕ ಶೆಡ್ಡಿನಲ್ಲಿ ಅದೇನನ್ನೊ ಮಾಡಿತಲಿದ್ದ. ಆತನಿಗೆ ಸಳ್ ಸಳ್. ಪಳ್ ಪಳಾ ಸದ್ದು ಕೇಳಿ ಬಂತು ಶೆಡ್ಡಿನಿಂದಲೇ‌….ಬಾಗಿ ತೋಟದಲ್ಲಿ ಕಣ್ಣಹಾಯ್ದಿಸಿದ.ಮಂಗಗಳು ಮರ ಏರಿ ಎಳೆ ನೀರು ಹರಿದು ಗುಟು ಗುಟು ಕುಡಿಯುತ್ತಿದ್ದವು.
ಕುಡಿರಿ ಕುಡಿರಿ ……ಇದು ಎಷ್ಟ ದಿನದ್ದು………!!
ಎಂದು ಸುಮ್ಮನೆ ಅಲ್ಲಿಯೇ ಕುಳಿತ.
ಮಂಗಗಳು ಕುಡಿದು ಕುಡಿದು….‌ಹೊಟ್ಟಿ ತುಂಬಿ ಅಬ…..ಎಂದವು.ಆ ಗಿಡದಿಂದ ಈ ಗಿಡಕ್ಕೆ ಜಿಗಿದಾಡಿದವು.
ಕಾಯಿ ಹರಿದವು ಕೆಳಗೆ ಒಗೆದವು ಮಾಲಕ ಬರ್ತಾನೇನು ನೋಡಿದವು ಊಹುಂ…..ಇಲ್ಲ ಬರಲಿಲ್ಲ…..ತಂದೆ ಮಂಗ ….ಅದೂ ಎಳೆ ನೀರು ಕಿತ್ತು ಒಗೆಯಿತು..ಈಗಲೂ ಬರಲಿಲ್ಲ.
ಮಗ ಮಂಗ ಹೇಳಿತು ಅಪ್ಪಾ ಈ ಮಾಲೀಕ ನಿಜವಾಗಿಯೂ ಎಷ್ಟ ಒಳ್ಳೆಯವ ಅದಾನ ಎಂದಿತು
ನನ್ನ ಹೊಟ್ಟೆ ತುಂಬಿತು ಮರಿ ಮಂಗ ಗಿಡಕ್ಕೆ ಟನ್ನ ಎಂದು ಜಿಗಿದು ಹೇಳಿತು.
ಮಂಗಗಳು ಅಲ್ಲಿ ಮನಸಾ ಆಡಿ ಮಾಲೀಕನನ್ನು ಹೊಗಳಿ ಕೊಂಡಾಡಿ ಹಸಿವು ಹಿಂಗೇತಿ ನಡಿರಿ ಇನ್ನ ಮನಿಗೆ
ಇನ್ನಾದರೂ ಮಾಲೀಕ ಬರಲೇ ಇಲ್ಲ ಇದ್ದರ ಇರಬೇಕ ಹಿಂತವರು ಎನ್ನುತ್ತಾ ಗಿಡದಿಂದ ಇಳುದು ಒಂದರ ಹಿಂದೊಂದು ನಡೆಯುತ್ತಾ…..ಗೇಟಿನತ್ತ ಬಂದವು. ತಂದೆ ಮಂಗ ಮೊದಲು ತಂತಿಯ ಬೇಲಿಗೆ ಕೈ ಹಾಕಿತು. ಕೂಡಲೇ….ಅದು ಕೀಂ…….ಕೀಂ……
ಕೀಂ……ಎಂದು ಚೀರಿತು. ಚೀರಿತು. ಮರು ಕ್ಷಣದಲ್ಲಿ ನೆಲದ ಮೇಲೆ ಉರುಳಿತು. ಕೊನೆಯ ಕ್ಷಣವೆಂಬಂತೆ….ತಂದೆ ಮಂಗ….ಮಕ್ಕಳನ್ನು ನೋಡಿ ಇಹ ಲೋಕ ತ್ಯಜಿಸಿತು.
ಹಾದಿಹೋಕರು ಮಂಗಗಳತ್ತ ಬಂದು ಜಿಪುಣ ಶೆಟ್ಟಿಯ ಕಿತಾಪತಿಗೆ ಒಂದಿಷ್ಟು ಛೀಮಾರಿ ಹಾಕಿ ಶೆಡ್ಡುಗೋಗಿ ಕರೆಂಟ ಆಪ್ಪ್ ಮಾಡಿ ಬಂದರು ಶೆಟ್ಟಿ ವಿಕೃತ ನಗೆಯಲ್ಲಿದ್ದನು.

ಮರುದಿನ ಮಂಗಗಳು ತಂದೆ ಕಳೆದುಕೊಂಡ ಸುದ್ದಿ ಕಾಳ್ಗಿಚ್ಚಿನಂತೆ ಅಡವಿಯಲೆಲ್ಲಾ ಹಬ್ಬಿತು. ಅಡವಿಯ ಮಂಗಗಳ ರಾಜ ಎಲ್ಲ ಮಂಗಗಳನ್ನು ಕೂಡುವಂತೆ ಆಜ್ಞೆ ಹೊರಡಿಸಿದ. ಸಾಯಂಕಾಲದ ಹೊತ್ತಿಗೆ ಮಂಗಳೆಲ್ಲಾ ಒಂದುಗೂಡಿದವು. ಮಂಗಗಳ ರಾಜ ವೇದಿಕೆಯ ಮೇಲೆ ” ಛೀ ಹುಚ್ಚಗೋಳ…..ಎಲ್ಲಿ ಹೋಗಬೇಕು ಎಲ್ಲಿ ಗೆಳತನ ಇಡಬೇಕು ಅನ್ನುದು ಗೊತ್ತಿಲ್ಲ. ಅನ್ನಕೊಟ್ಟೊರೆಲ್ಲಾ ಒಳ್ಳೆವ್ರಾ….ಅನ್ನಾ ಕೊಡದವರೆಲ್ಲಾ ಕೆಟ್ಟವ್ರಾ…..ಬೆನ್ನ ಹಿಂದಿನ ಬಾತ್ಮಿ ತಿಳಿಬೇಕ ನಿನ್ನೆ ಏನಾತ ನೋಡ್ರಿ….ಬಾಳಿತ್ವಾಟ ಬೇಕಾತ….ತೆಂಗಿನ ತ್ವಾಟ ಬ್ಯಾಡಾತ. ಬಾಳಿತ್ವಾಟದವರು ಬೇದಿರಬೇಕ ನಿಮ್ಮ ಆಟ ನೋಡಿ ತ್ವಾಟದಿಂದ ಓಡಿಸಿರಬೇಕ ಆದ್ರ ಅವ್ರು ಜಲ್ಮಾ ಕಾಪಾಡಿದ್ರ. ಆದ್ರ ತೆಂಗಿನ ತ್ವಾಟದವ್ರು ಏನ ಮಾಡಿದ್ರಪಾ…….ಅನ್ನ ಹಾಕಿ ಜೀವಾ ತಗದ್ರ.

ಯಾರ ಚಲೋ ಸೋಸಿನೋಡ್ರೊ ಹುಚ್ಚಗೋಳ ಜಲ್ಮ ಇದ್ರ ಹಸಿವು ಅನ್ನ ನೀರು ಎಲ್ಲಾ ಆ ಜಲ್ಮಾನ ಇರದಿದ್ರ ಏನ ತಗೊಂಡ ಏನ ಮಾಡತೀರಿ……!!
ಅನ್ನಕ್ಕಿಂತ ಪ್ರಾಣ ಮುಖ್ಯ .ಜೀವ ಇದ್ರ ಎಲ್ಲ್ಯಾರ ಕಲ್ಲಾಗ ಕೈಯಿಟ್ಟ ತಿಂತೇವಿ‌ ಅನ್ನರ್ರಿ….ಜಲ್ಮಾ ಇಲ್ಲದ್ದ ತಗೊಂಡ ಏನ ಮಾಡಿದು ” ಎಂದು ವಿವರವಾಗಿ ಬಿಡಿಸಿ ಬಿಡಿಸಿ ಜೀವದ ಪ್ರಾಮುಖ್ಯತೆ ವಿವರಿಸಿತು.ಮಂಗಗಳು ಬಾಯ್ದೆರೆದು ಕೇಳುತ್ತಿದ್ದವು. ನಿಮ್ಮ “ಮಾತು ಮತ ಪ್ರಾಣಕ್ಕೆ ಕೊಡಬೇಕು ಪ್ರಾಣ ರಕ್ಷಕರಿಗೆ ಕೊಡಬೇಕು” ಎಂದು ಬುದ್ದಿವಾದ ಹೇಳಿತು. ಮಂಗಗಳು ತಲೆದೂಗುತ್ತಿದ್ದವು.

ಶೆಟ್ಟಿಯಂತಹ ಪ್ರಾಣ ಭಕ್ಷನಿಂದ ದೂರವಿರಲು ಮತ್ತು ಎಚ್ಚರದಿಂದ ಇರಲು ಕಟ್ಟಪ್ಪಣೆ ಹೊರಡಿಸಿತು.
ಅಂದಿನಿಂದ ಮಂಗಗಳು ತೆಂಗಿನ ತೋಟದ ಉಸಾಬರಿಬಿಟ್ಟು ಬದುಕತೊಡಗಿದವು.

ಯಮುನಾ.ಕಂಬಾರ
ಹುಬ್ಬಳ್ಳಿ
ಮೊ:7975715102

- Advertisement -
- Advertisement -

Latest News

ಕವನಗಳು : ಶಶಿಕಾಂತ ಪಟ್ಟಣ

ನೀನು ನಾನು _________________ ನೀನು ನಾನು ನಾನು ನೀನು ದೈವ ಬೆಸೆದ ಜಾಲವು ಹೃದಯ ಭಾಷೆ ಅರಿವ ಮನಕೆ ಪ್ರೀತಿ ಬೆರಸಿದ ಭಾವವು ನೋವು ಮರೆತು ನಗುವ ಕಲೆಗೆ ಕಣ್ಣು ಬೆರೆತ ನೋಟವು ದೂರ ಗುರಿಯ ಹೆಜ್ಜೆ ಪಯಣದಿ ಕೂಡಿ ಹಾಡುವ ರಾಗವು ಕಷ್ಟ ಸುಖಕೆ ದಾರಿ ಹುಡುಕುವ ನಮ್ಮ ಬಾಳ ಬಟ್ಟೆಯು ಯಾರಿರದ ಹಾದಿಯಲಿ _____________________ ನಿನ್ನ ಮುಗುಳು...
- Advertisement -

More Articles Like This

- Advertisement -
close
error: Content is protected !!
Join WhatsApp Group