ಕ್ರೈಸ್ತರು ಶಾಂತಿ ಪ್ರಿಯರು – ರಮೇಶ ಜಾರಕಿಹೊಳಿ

Must Read

ಮೂಡಲಗಿ: ಕ್ರೈಸ್ತರು ಶಾಂತಿ ಪ್ರಿಯರು ಸೇವಾ ಮನೋಭಾವವುಳ್ಳವರು, ದೇಶಕ್ಕೆ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಹಿಂದುಳಿದ ಜನರನ್ನು ಮುಖ್ಯವಾಹಿನಿಗೆ ತಂದಿದ್ದಾರೆ. ಯೇಸುಸ್ವಾಮಿಯ ಸಂದೇಶದಂತೆ ಒಗ್ಗಟ್ಟಾಗಿ ಬಾಳಿ ಬದುಕಿ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಅವರು ಶನಿವಾರ ಸಂಜೆ ಪಟ್ಟಣದ ಮೆಥೋಡಿಸ್ಟ್ ಚರ್ಚ ಆಶ್ರಯದಲ್ಲಿ ಭಕ್ತಿ ಸಂಜೀವನ ಕೂಟಗಳು ಎರಡನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಭಾರತ ದೇಶದಲ್ಲಿ ಎಲ್ಲ ಧರ್ಮಗಳು ಶ್ರೇಷ್ಠ ಧರ್ಮಗಳಾಗಿದ್ದು, ಬೈಬಲ್‍ನಲ್ಲಿರುವ ಸಂದೇಶ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕ್ರೈಸ್ತರು ಜಾರಕಿಹೊಳಿ ಕುಟುಂಬದ ಮೇಲಿಟ್ಟಿರುವ ಪ್ರೀತಿಗೆ ನಾವುಗಳು ಚಿರಋಣಿ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಮೆಥೋಡಿಸ್ಟ್ ಚರ್ಚ ಸಭಾ ಪಾಲಕ ರೇ. ವಿಜಯಕುಮಾರ ಮೂಡಲಗಿ ವಹಿಸಿದ್ದರು. ದೈವ ಸಂದೇಶಕರಾಗಿದ್ದ ಬೆಂಗಳೂರು ನ್ಯೂ ಹಾರ್ವೆಸ್ಟ್ ಚರ್ಚನ ರೇ. ಪಿ.ಎಸ್. ಮಾಚಯ್ಯಾ ಮ್ಯಾಥ್ಯೂ ಅವರು ದೈವ ಸಂದೇಶ ನೀಡಿದರು.

ವೇದಿಕೆಯಲ್ಲಿ ಮರೆಪ್ಪ ಮರೆಪ್ಪಗೋಳ, ಡಾ. ಅನೀಲ ಪಾಟೀಲ, ಟಿ ಆರ್ ಕಾಗಲ್, ಮಡ್ಡೆಪ್ಪ ತೋಳನವರ, ರವೀಂದ್ರ ಸೋನವಾಲ್ಕರ, ರವೀಂದ್ರ ಸಣ್ಣಕ್ಕಿ, ರಮೇಶ ಸಣ್ಣಕ್ಕಿ, ಸುಭಾಸ ಸಣ್ಣಕ್ಕಿ, ಯಶ್ವಂತ ಮರೆನ್ನವರ, ಪ್ರಭಾಕರ ಬಂಗೆನ್ನವರ, ಹಣಮಂತ ಹವಳೇವ್ವಗೋಳ ಮತ್ತಿತರರು ಇದ್ದರು. 

ಶಿಕ್ಷಕ ಎ.ಪಿ. ಪರಸನ್ನವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಪಟ್ಟಣದ ಕಲ್ಮೇಶ್ವರ ವೃತ್ತದಿಂದ ಕಾರ್ಯಕ್ರಮದ ವೇದಿಕೆಯವರೆಗೆ ಪುಷ್ಪಾರ್ಪಣೆ ಮಾಡುತ್ತ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group