ಬೀದರ – ನಮ್ಮ ಶಾಸಕರ ನಾಲಿಗೆ ಕಟ್ ಮಾಡುತ್ತೇನೆ ಎಂಬುದಾಗಿ ಹೇಳಿದ್ದ ಕಾಂಗ್ರೆಸ್ ಎಮ್ ಎಲ್ ಸಿ ವಿರುದ್ಧ ಒಂದು ವಾರದಲ್ಲಿ ಪ್ರಕರಣ ದಾಖಲು ಮಾಡದಿದ್ದರೆ ನಾವೂ ಕೂಡ ಸಿಎಂ ನಾಲಿಗೆ ಕಟ್ ಎಂಬ ಪೋಸ್ಟರ್ ಅಭಿಯಾನ ಮಾಡುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಗುಡುಗಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಒಂದು ಕಾನೂನು, ಬಿಜೆಪಿಗೆ ಒಂದು ಕಾನೂನು ಅಂತ ಇದೆಯಾ….ಎಲ್ಲರಿಗೂ ಒಂದೇ ಕಾನೂನು ಇರಬೇಕು. ನಾವು ಹೋರಾಟ ಮಾಡುತ್ತೇವೆ. ಒಂದು ವಾರದಲ್ಲಿ ಚಂದ್ರಶೇಖರ ಪಾಟೀಲ ವಿರುದ್ಧ ಕ್ರಮ ಜರುಗಿಸದಿದ್ದರೆ ನಾವೂ ಕೂಡ ಸಿಎಂ ನಾಲಿಗೆ ಕಟ್ ಎಂಬ ಪೋಸ್ಟರ್ ಅಭಿಯಾನ ಮಾಡುವುದಾಗಿ ಹೇಳಿದರು.
ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ ಮುಂದೆ ಕಾನೂನು ಸುವ್ಯವಸ್ಥೆ ಹಾಳಾಗಲು ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಸಿದ ಸೋಮನಾಥ ಪಾಟೀಲ, ನಾವು ರಾಜ್ಯ ಸರ್ಕಾರದ ವಿರುದ್ಧ ಇನ್ನೂ ಉಗ್ರ ಹೋರಾಟ ಮಾಡಲಿದ್ದೇವೆ ಎಂದರು.
ವರದಿ : ನಂದಕುಮಾರ ಕರಂಜೆ, ಬೀದರ