spot_img
spot_img

ಸಾಂಸ್ಕೃತಿಕ ಸಿರಿ ಸಮ್ಮೇಳನ

Must Read

spot_img

ಗುರ್ಲಾಪೂರ– ಶ್ರೀ ವಿದ್ಯಾನಿಧಿ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಜನನಿ ಲಿಟಲ್ ನಿಂಜಾ ಲರ್ನಿಂಗ ಸೆಂಟರದಲ್ಲಿ ಸಾಂಸ್ಕೃತಿಕ ಸಿರಿ ಸಮ್ಮೇಳನವು ಗುರುವಾರದಂದು ಶಾಲೆಯ ಆವರಣದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಇಟನಾಳದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, “ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೊತ್ಸಾಹಿಸಬೇಕು,’’ ಮಕ್ಕಳಲ್ಲಿ ಒಳ್ಳೆಯ ಸಂಸ್ಕೃತಿ ಬೆಳಸುವಲ್ಲಿ ಪಾಲಕರ, ಶಿಕ್ಷಕರ ಮತ್ತು ಗ್ರಾಮಸ್ಥರ ಪಾತ್ರ ದೊಡ್ಡದು ಎಂದರು.

ಸಾನ್ನಿಧ್ಯವನ್ನು ಶಿವಾನಂದ ಹಿರೇಮಠ ಹಾಗೂ ಶಿವರುದ್ರಯ್ಯ ಹಿರೇಮಠ ವಹಿಸಿದರು.

ಮುಖ್ಯ ಅತಿಥಿಗಳಾಗಿ ಮೂಡಲಗಿಯ ಸಿ.ಆರ್.ಪಿ.  ಸಮೀರ ದಬಾಡಿ ಮಾತನಾಡುತ್ತಾ, ವಿದ್ಯಾರ್ಥಿಗಳ ಮನಸ್ಸು ಬಿಳಿ ಹಾಳೆ ಇದ್ದ ಹಾಗೆ, ಅದರಲ್ಲಿ ಒಳ್ಳೆಯ ಸಂಸ್ಕೃತಿ, ಕಲೆ, ಜ್ಞಾನ ಹಾಗೂ ನಾಡಿನ ಮೇಲೆ ಗೌರವವನ್ನು ತುಂಬಿ, ಮತ್ತು ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ ಎಂದು ಹೇಳಿದರು. 

ಸಭೆಯ ಅಧ್ಯಕ್ಷತೆಯನ್ನು ಮೂಡಲಗಿಯ ಜನನಿ ಸಮಗ್ರ ಅಭಿವೃದ್ದಿ ಸಂಸ್ಥೆ ಉಪಾಧ್ಯಕ್ಷರಾದ ಬಸಪ್ಪ. ಮ. ಸುಳ್ಳನವರ ವಹಿಸಿದರು.

ಈ ಸಂದರ್ಭದಲ್ಲಿ ಮೂಡಲಗಿಯ ಪುರಸಭೆ ಅಧ್ಯಕ್ಷರಾದ ಹನಮಂತ ಗುಡ್ಲಮನಿ, ಸದಸ್ಯರಾದ ಆನಂದ ಟಪಾಲ,  ಗ್ರಾಂ.ಪಂ ಸದ್ಯಸ ಈಶ್ವರ ಮುಗಳಖೋಡ, ನಿವೃತ್ತ ಶಿಕ್ಷಕರಾದ ಎ.ಜಿ.ಶರಣಾರ್ಥಿ, ವಾಯ್ ಬಿ. ಕುಲಗೋಡ ಗುರುಗಳು ಹಾಗು ಪ್ರಕಾಶ ಮುಗಳಖೋಡ, ಮಹಾಲಿಂಗ ಮುಗಳಖೋಡ, ಮಹಾದೇವ ರಂಗಾಪೂರ, ಮಲ್ಲಪ್ಪಾ ನೇಮಗೌಡರ, ಡಾ. ಜಾವೇದ ಮುಲ್ಲಾ ಡಾ.  ಪಿ.ಎಮ್.ಹಿರೇಮಠ ಆರ.ಸಿ.ಸತ್ತಿಗೇರಿ ಪ್ರಕಾಶ ಸುಳ್ಳನವರ ಪಿ.ಟಿ.ಗಾಣಿಗೇರ ವಿ.ಆರ. ನೇರ್ಲಿ, ದಯಾನಂದ ಪಾದಗಟ್ಟಿ, ಪಿ.ಸಿ.ಸುಳ್ಳನವರ ದೀಪಾ ಗುಡದನ್ನವರ, ಸಂಗೀತಾ ಮುಧೋಳ ಗಂಗಾ ಕಂಬಾರ ಸುರೇಖಾ ಸಾಲಗುಡಿ ಹಾಗು ಶಿಕ್ಷಕ ವ್ರಂದ ಪಾಲಕರು ಮುದ್ದುಮಕ್ಕಳು   ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಆನಂದ ಸುಳ್ಳನವರ ಸರ್ವರನ್ನು ಸ್ವಾಗತಿಸಿ,ಶಾಲೆ ನಡೆದ ಬಂದ ದಾರಿ ಹಾಗು ಮಕ್ಕಳು ಪಾಲಕರು ನಮ್ಮ ಸಂಸ್ಥೆಯ ಮೇಲೆ ಇಟ್ಟ ನಂಬಿಕೆಯನ್ನು ನಾವು ಉಳಿಸಿಕೂಳ್ಳುತ್ತೇವೆ ಹಾಗು ತಮ್ಮ ಸಲಹೆ ಸೂಚನೆಗಳನ್ನು ನಾವು ಮುಕ್ತಮನಸ್ಸಿನಿಂದ ತಗೆದುಕೂಂಡು ಸಂಸ್ಥೆಯು ಮುನ್ನಡೆಸಲು ಸಹಕರಿಸಬೇಕೆಂದರು ಮುಖ್ಯೋಪಾಧ್ಯಾಯರಾದ ವಿಷ್ಣು ದೊಡಮನಿ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕವೃಂದವು ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಸಿದರು ಐಶ್ವರ್ಯ ಮುಗಳಖೋಡ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!