spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಕೆಂಬಾವಿ ಭೋಗಣ್ಣ

ವಚನ ಸಾಹಿತ್ಯದ ಮಾತು ಬಂದ ತಕ್ಷಣವೇ ನಮ್ಮಲ್ಲಿ ಬಸವಾದಿ ಶರಣರ ಆಲೋಚನೆಗಳು ಸುಳಿದಾಡುತ್ತವೆ. ವಚನ ಸಾಹಿತ್ಯದ ಮೇಲೆ ಸಾಕಷ್ಟು ಸಂಶೋಧನೆಗಳು ನಡೆದಿದೆ ನಡೆಯತ್ತಲೇ ಇದೆ. ವಚನ ಸಾಹಿತ್ಯವನ್ನು ಅಧ್ಯಯನದ ದೃಷ್ಟಿಯಿಂದ ಬಸವಪೂರ್ವ ಯುಗ (11ನೇ ಶತಮಾನ), ಬಸವ ಯುಗ (12-13ನೇ ಶತಮಾನ), ಬಸವೋತ್ತರ ಯುಗ (15-19ನೇ ಶತಮಾನ) ಹಾಗೂ ಆಧುನಿಕ ಯುಗ (20ನೇ ಶತಮಾನ) ಎಂದೂ ವಿಭಾಗಿಸಿಕೊಳ್ಳಲಾಗಿದೆ. ಈ ಸಾಹಿತ್ಯ ಸೃಷ್ಟಿಯ ಪ್ರಮುಖ ಕಾರಣ ಹಾಗೂ ಪ್ರೇರಣೆಗಳೆಂದರೆ ಶರಣ ಧರ್ಮದ ತತ್ವಗಳ ಪ್ರಸಾರ ಮಾಡುವುದು ಹಾಗೂ ಅಂದಿನ ಸಮಾಜದಲ್ಲಿನ ಅಸಮಾನತೆಯನ್ನು ಹೊಡೆದೋಡಿಸುವುದು.

ಹನ್ನೊಂದನೆಯ ಶತಮಾನದಲ್ಲಿ ಈ ಕಾರ್ಯವನ್ನು ಕೈಗೊಂಡವರು ಕೊಂಡಗುಳಿ ಕೇಶಿರಾಜ, ಕೆಂಬಾವಿ ಭೋಗಣ್ಣ, ಶಂಕರದಾಸಿಮಯ್ಯ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಸಕಳೇಶ ಮಾದರಸ, ಜೇಡರದಾಸಿಮಯ್ಯ ಹಾಗೂ ಚಂದಿಮರಸ. ಇವರೆಲ್ಲ ಬಸವಣ್ಣನವರಿಗಿಂತ ವಯಸ್ಸಿನಲ್ಲಿ ಹಿರಿಯರು. ಕೆಂಬಾವಿ ಭೋಗಣ್ಣನ್ನು ಹೊರತು ಪಡಿಸಿ ಮಿಕ್ಕೆಲ್ಲರೂ ವಚನಗಳನ್ನು ರಚಿಸಿದ್ದಾರೆಂದು ಹಲವು ಸಂಶೋಧನೆಗಳಿಂದ ತಿಳಿದುಬರುತ್ತದೆ. ಕೆಂಬಾವಿ ಭೋಗಣ್ಣ ಬಸವಪೂರ್ವ ಯುಗದ ವೀರಮಾಹೇಶ್ವರನಿಷ್ಠೆ ಮತ್ತು ಜಂಗಮನಿಷ್ಠೆಯುಳ್ಳ ಶರಣ. ಈ ಯುಗದಲ್ಲಿ ಏಳು ವಚನಕಾರರು ವಚನಗಳನ್ನು ರಚಿಸಿದ್ದಾರೆಂದು ಕೆಲವು ಕೃತಿಗಳು ದಾಖಲಿಸಿವೆ. ‘ನಿಜಗುರು ಭೋಗೇಶ್ವರ’ ಎಂಬ ಅಂಕಿತದಲ್ಲಿ ಸುಮಾರು 22 ವಚನಗಳು ಉಪಲಬ್ಧವಾಗಿವೆ. ಇದರಲ್ಲಿ 5 ವಚನಗಳ ಅರ್ಥವನ್ನು ನೀಡಲಾಗಿದೆ.

- Advertisement -

ಮನವಿಕಾರದಲ್ಲಿ ತೋರುವ ಸುಳುಹು
ತನುವಿಕಾರದಲ್ಲಿ ಕಾಣಿಸಿಕೊಂಡ ಮತ್ತೆ
ಅರಿವಿನ ಭೇದ ಎಲ್ಲಿ ಅಡಗಿತ್ತು ?
ಅರಿದು ತೋರದ ಮತ್ತೆ
ನೆರೆ ಮುಟ್ಟಬಲ್ಲುದೆ ತ್ರಿವಿಧದ ಗೊತ್ತ ?
ಇಂತೀ ಭಗಧ್ಯಾನರನೊಪ್ಪ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು

ಮನಸ್ಸಿನ ವ್ಯತ್ಯಾಸಗಳಲ್ಲಿ ತೋರುವ ಸಣ್ಣ ಸೂಚನೆ
ಶರೀರದ ವ್ಯತ್ಯಾಸಗಳಲ್ಲಿ ಕಾಣಿಸಿಕೊಂಡು ಮತ್ತೆ
ಜ್ಞಾನದ ವ್ಯತ್ಯಾಸ ಎಲ್ಲಿ ಅಡಗಿತ್ತು? ಅರಿತು ತೋರದ ಮತ್ತೆ
ಹತ್ತಿರವಾದುದೆ ತ್ರಿವಿಧದ ಗೊತ್ತು? ಇಂತೀ ಭಗವಂತನ ಧ್ಯಾನಕ್ಕೆ ಸಮರ್ಪಿತ ಚನ್ನಬಸವಣ್ಣನ ಪ್ರಿಯ ಭೋಗಮಲ್ಲಿಕಾರ್ಜುನಲಿಂಗವು

ಭಕ್ತಿಯೆಂಬುದು ಬೇರು, ವಿರಕ್ತಿಯೆಂಬುದೆ ಮರ, ಫಲವೆಂಬುದೆ ಜ್ಞಾನ.
ಪಕ್ವಕ್ಕೆ ಬಂದಿತ್ತೆಂಬಾಗಲೆ ಅವಧಿಜ್ಞಾನ.
ತೊಟ್ಟು ಬಿಟ್ಟಲ್ಲಿಯೆ ಪರಮಜ್ಞಾನ.
ಸವಿದಲ್ಲಿಯೆ ಅಂತರೀಯಜ್ಞಾನ.
ಸುಖ ತನ್ಮಯವಾದಲ್ಲಿಯೆ ದಿವ್ಯಜ್ಞಾನ.
ದಿವ್ಯ ತೇಜಸ್ಸು ಹಿಂಗದಲ್ಲಿಯೆ ಪರಿಪೂರ್ಣಜ್ಞಾನ.
ಅದು ಮಹದೊಡಲೆಂಬುದಕ್ಕೆ ಎಡೆಯಿಲ್ಲ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು
ಅಪ್ರಮಾಣಾದ ಕಾರಣ

- Advertisement -

ಭಕ್ತಿಯು ಬೇರು, ವಿರಕ್ತಿಯು ಮರ, ಜ್ಞಾನವು ಫಲ.
ಪಕ್ವವಾಗಿದೆಯೆಂದರೆ ಅದು ಅವಧಿಜ್ಞಾನ.
ವಿಲಗಿದರೆ ಅದು ಪರಮಜ್ಞಾನ. ಅನುಭವಿಸಿದರೆ ಅದು ಅಂತರೀಯಜ್ಞಾನ. ಸುಖದಿಂದ ಲೀನವಾದರೆ ಅದು ದಿವ್ಯಜ್ಞಾನ. ದಿವ್ಯ ತೇಜಸ್ಸು ಹರಿದರೆ ಅದು ಪರಿಪೂರ್ಣಜ್ಞಾನ.
ಅದು ಮಹತ್ತರ ಸ್ವರೂಪಕ್ಕೆ ಅಡ್ಡಿ ಮಾಡದು.
ಚನ್ನಬಸವಣ್ಣನ ಪ್ರಿಯ ಭೋಗಮಲ್ಲಿಕಾರ್ಜುನಲಿಂಗವು
ಅಮಿತವಾದ ಕಾರಣ

ಬೀಜವ ಕಳೆದು ತರು ಬೆಳೆದಂತೆ
ತರುವ ಕಳೆದು ಬೀಜ ಆ ತರುವಿಂಗೆ ಕುರುಹಾದಂತೆ
ಪರಮ ಜೀವನ ಕಳೆದು
ಆ ಜೀವಕ್ಕೆ ತಾ ಪರಮನೆಂಬ ಪರಿಭ್ರಮಣವ ಕಳೆದು ಪರಶಕ್ತಿಸಮೇತವಾದಲ್ಲಿ
ಮರದಲ್ಲಿ ಹುಟ್ಟಿದ ಕಿಚ್ಚು, ಮರ ನಷ್ಟವಾಗಿ ತಾ ನಷ್ಟವಾದಂತೆ
ಅರಿದ ಅರಿವು ಕುರುಹಿನಲ್ಲಿ ಪರಿಹರಿಸಿದ ಮತ್ತೆ
ತೆರೆ ದರುಶನ ಉಭಯವಡಗಿತ್ತು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿದಲ್ಲಿ

ಬೀಜವು ನಾಶವಾಗಿ ತರು ಬೆಳೆಯುವಂತೆ
ತರುವು ನಾಶವಾದ ಮೇಲೆ ಆ ತರುವ ಕುರುಹು ಬೀಜವಾಗಿರುವಂತೆ ಪರಮ ಜೀವನವು ನಾಶವಾದ ಮೇಲೆ
ಆ ಜೀವಕ್ಕೆ ತಾನೇ ಪರಮನೆಂಬ ಧಾರಣೆ ನಾಶವಾಗಿ ಪರಶಕ್ತಿಯೊಂದಾದಾಗ ಮರದಲ್ಲಿ ಹುಟ್ಟಿದ ಕಿಚ್ಚು, ಮರ ನಾಶವಾದ ನಂತರ ಕಿಚ್ಚು ನಾಶವಾಗಿರುವಂತೆ
ಅರಿವಿನ ಚಿಹ್ನೆಯಲ್ಲೇ ಪರಿಹಾರ ಕಂಡು ತೆರೆಯ ಮೇಲಿನ ದೃಶ್ಯ ಎರಡೂ ಅಡಗಿರುತ್ತವೆ. ಚನ್ನಬಸವಣ್ಣನ ಪ್ರಿಯ ಭೋಗಮಲ್ಲಿಕಾರ್ಜುನಲಿಂಗವನ್ನು ಅರಿದಲ್ಲಿ.

ಪಶು ಪಾಷಂಡಿ ಚಾರ್ವಾಕ ಮಾತುಗಂಟಿ
ಎಷ್ಟನಾಡಿದಡೂ ಶಿವಯೋಗಸಂಬಂಧ ಸಂಪನ್ನನೊಪ್ಪುವನೆ ?
ರಾಜ್ಯಭ್ರಷ್ಟಂಗೆ ತ್ಯಾಗಭೋಗವುಂಟೆ ?
ನಪುಂಸಕಂಗೆ ಜಿತೇಂದ್ರಿಯತ್ವವುಂಟೆ ?
ದರಿದ್ರಂಗೆ ನಿಸ್ಪೃಹತ್ವವುಂಟೆ ?
ನಿಶ್ಚೈಸಿ ನಿಜವಸ್ತುವನರಿಯದವನು
ಕರ್ತೃಭೃತ್ಯಸಂಬಂಧವನೆತ್ತ ಬಲ್ಲನೊ ?
ಮೃತಘಟದ ವೈಭವದಂತೆ, ವಿಧವೆಯ ಗರ್ಭದಂತೆ
ನಿನ್ನಲ್ಲಿಯೆ ನೀನರಿ ದ್ವೈತಾದ್ವೈತಂಗಳೆಂಬವ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ

ಪಶು, ಪಾಷಂಡಿ, ಚಾರ್ವಾಕ ಮಾಯೆಗಳಲ್ಲಿ ಎಷ್ಟು ನಡೆದರೂ ಶಿವಯೋಗದ ಸಂಬಂಧ ಹೊಂದಲು ಸಾಧ್ಯವಿಲ್ಲ. ರಾಜ್ಯಭ್ರಷ್ಟನಿಗೆ ತ್ಯಾಗ ಮತ್ತು ಭೋಗವಿಲ್ಲ. ನಪುಂಸಕನಿಗೆ ಇಂದ್ರಿಯ ಜಯವಿಲ್ಲ. ದರಿದ್ರನಿಗೆ ನಿಸ್ಪೃಹತ್ವವಿಲ್ಲ.
ನಿಜವಾದ ವಸ್ತುವನ್ನು ಅರಿಯದವನು
ಕರ್ತೃ ಮತ್ತು ಭೃತ್ಯರ ಸಂಬಂಧವನ್ನು ಹೇಗೆ ತಿಳಿಯಬಲ್ಲನು? ಮೃತ ಘಟದ ವೈಭವದಂತೆ, ವಿಧವೆಯ ಗರ್ಭದಂತೆ ನೀನು ನಿನ್ನಲ್ಲಿಯೇ ದ್ವೈತಾದ್ವೈತಗಳನ್ನು ಅರಿಯು
ಚನ್ನಬಸವಣ್ಣನ ಪ್ರಿಯ ಭೋಗಮಲ್ಲಿಕಾರ್ಜುನ ಲಿಂಗದಲ್ಲಿ

ಲಿಂಗವೇ ಪ್ರಾಣವಾದ ಮತ್ತೆ
ಬೇರೆ ನೆನೆಯಿಸಿಕೊಂಬುದು ಇನ್ನಾವುದಯ್ಯಾ ?
ಇದಿರಿಟ್ಟು ಬಂದುದ ಮುನ್ನವೆ ಮುಟ್ಟಿ
ಅರ್ಪಿತ ಅವಧಾನಂಗಳಲ್ಲಿ ಸೋಂಕಿದ ಮತ್ತೆ
ಪುನರಪಿಯಾಗಿ ಸೋಂಕಿದಡೆ ನಿರ್ಮಾಲ್ಯ ಕಂಡಯ್ಯಾ.
ಮೊನೆಗೂಡಿ ಹಾಯ್ವ ಕಣೆಯಂತೆ ಅರ್ಪಿತಾಂಗ ಸಂಗಭೇದ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿದಲ್ಲಿ

ಲಿಂಗವೇ ಪ್ರಾಣವಾಗಿರುವಾಗ ಇನ್ನೇನನ್ನು ನೆನೆಸಬಹುದು? ಮುಂದೆ ಬರುವುದನ್ನು ಮುಂಚೆಯೇ ತಾಕಿ ಅರ್ಪಿತ ಗಮನಗಳಲ್ಲಿ ಸ್ಪರ್ಶಿಸಿದ ನಂತರ ಮತ್ತೊಮ್ಮೆ ಸ್ಪರ್ಶಿಸಿದಾಗ ಅದು ನಿರ್ಮಾಲ್ಯ. ಹಾಲಿನಲ್ಲಿ ಬೆರೆಯುವ ನೀರಿನ ಹಾಯಿಯಂತೆ ಅರ್ಪಿತ ಅಂಗಗಳಿಂದ ಸಂಗಭೇದ ಚನ್ನಬಸವಣ್ಣನ ಪ್ರಿಯ ಭೋಗಮಲ್ಲಿಕಾರ್ಜುನಲಿಂಗವನ್ನು ಅರಿದಲ್ಲಿ

ಶಂಕರ ಕುಪ್ಪಸ್ತ
ಶಿರೋಳ, ವಚನ ಅಧ್ಯಯನ ವೇದಿಕೆ
ಬಸವಾದಿ ಶರಣರ ಚಿಂತನ ಕೂಟ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group