spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಮಾದಾರ ಚೆನ್ನಯ್ಯ

ಮಾದರ ಚನ್ನಯ್ಯ ದಲಿತ ಸಮುದಾಯ ಎಂದೂ ಮರೆಯದ ಶೇಷ್ಠ ಶರಣ. ಮೆಟ್ಟು ಹೊಲಿಯೋದು ಕೀಳು ಅಲ್ಲ… ಬಿಟ್ಟಿ ಕೂಳು ತಿನ್ನೋದು ಕೀಳು… ಮತ್ತೊಬ್ಬರ ಮನೆ ಮುರಿಯೋದು ಕೀಳು…’ ಎನ್ನುವ ಚಾಟಿ ಏಟು ಕೊಟ್ಟವನು ಶರಣ ಚೆನ್ನಯ್ಯ.

ತನ್ನ ಬದುಕನ್ನೇ ಸಂದೇಶವಾಗಿಸಿದ ಚೆನ್ನಯ್ಯ ಶರಣ ಬಳಗದಲ್ಲಿ ತನ್ನದೇ ಛಾಪು ಮೂಡಿಸಿದ ಅವಿಸ್ಮರಣೀಯ ವಚನಗಾರ. ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ? ಎಂಬಂತೆ ಆವ ಜಾತಿಯವರಾದರೇನು ಮನ ಶುದ್ಧ ಇದ್ದರೆ ಸಾಕು ಆತನೆ ನಿಜವಾದ ಕುಲಜ ಎಂದು ಸಾರಿದ ಶರಣರ ಬಳಗದಲ್ಲಿ ಸೇರಿದ ಮತ್ತೊಂದು ಮಹತ್ವದ ವ್ಯಕ್ತಿತ್ವ ಅಂದರೆ ಅದು ಮಾದರ ಚೆನ್ನಯ್ಯನವರು ಎಂದರೆ ತಪ್ಪಾಗಲಾರದು.

- Advertisement -

ಕರ್ನಾಟಕದ ಇತಿಹಾಸದಲ್ಲಿ, ವಚನಗಳ ಮಹತ್ವವು ಅಪಾರವಾಗಿದೆ, 12 ನೇ ಶತಮಾನದ ಅವಧಿಯನ್ನು ‘ ವಚನಗಳ ಯುಗ’ ಎಂದು ಉಲ್ಲೇಖಿಸಲಾಗಿದೆ ಈ ಹಿನ್ನೆಲೆಯಲ್ಲಿ ನಾವು ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದ ಬರಹಗಾರರು ಮತ್ತು ಕವಿಗಳ ಉದಯವನ್ನು ನೋಡುತ್ತೇವೆ.

‘ನಿಜಾತ್ಮ ರಾಮ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಚೆನ್ನಯ್ಯ, ಶರಣ ಚಳವಳಿಯ ಕಾಲದ ಪ್ರಮುಖ ಕವಿಗಳಲ್ಲಿ ಒಬ್ಬರು. ವೃತ್ತಿಯಲ್ಲಿ ಅಸ್ಪೃಶ್ಯ ಜಾತಿ ಚಮ್ಮಾರರಾದ ಚೆನ್ನಯ್ಯ ಅವರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ತಮ್ಮ ವಚನಗಳು ಮತ್ತು ಚರ್ಚೆಯೊಂದಿಗೆ ಮೊದಲು ಪ್ರಾಮುಖ್ಯತೆಯನ್ನು ಪಡೆದರು. ಚೆನ್ನಯ್ಯನ ಮೊದಲ ವಚನ ಕವಿಗಿಂತ ಕಡಿಮೆಯಿಲ್ಲ ಎಂದು ಎತ್ತಿ ಹಿಡಿದಿದ್ದಾರೆ . ಚೆನ್ನಯ್ಯನವರು ತಮ್ಮ ವಚನಗಳಲ್ಲಿ ಜಾತಿ, ದುಡಿಮೆಯ ಘನತೆ, ನೀತಿವಂತ ನಡತೆ ಮತ್ತು ಇತರ ಅನೇಕ ಸಾಮಾಜಿಕ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ

ರಗಳೆ ಕವಿ ಹರಿಹರ ಮೂಲಭೂತವಾಗಿ ಶಿವ ಮತ್ತು ಶಿವಭಕ್ತರನ್ನೇ ಮೂಲ ಕೇಂದ್ರವಾಗಿಟ್ಟುಕೊಂಡು ರಗಳೆಗಳನ್ನು ರಚಿಸಿದ್ದು, ಮಾದರ ಚೆನ್ನಯ್ಯನ ಶಿವಭಕ್ತಿಯನ್ನು ಅನಾವರಣ ಮಾಡಿದ್ದು ಹೀಗಿದೆ, ಚೋಳದೇಶದ ಸುಂದರವಾದ ರಾಜಧಾನಿಯಲ್ಲಿ ಶಬ್ದದಿಂದ ವರ್ಣಿಸಲು ಅಸಾಧ್ಯವೆಂಬಂತೆ ಮಾದರ ಜಾತಿಯ ಚೆನ್ನನೆಂಬ ಶಂಕರನ ಭಕ್ತನೊಬ್ಬನು, ಹೆಸರಿಗೆ ಅನ್ವರ್ಥವಾಗಿ ಬದುಕುತ್ತಿದ್ದನಲ್ಲದೆ ಪರಮಭಕ್ತಿಯಿಂದ ಶಿವನನ್ನು ಗುಪ್ತವಾಗಿ ಆರಾಧಿಸುತ್ತಿದ್ದನು. ಅದರ ಜೊತೆಯಲ್ಲಿ ಹೊಟ್ಟೆಪಾಡಿಗಾಗಿ ಅರಸನಾದ ಕರಿಕಾಲ ಚೋಳನ ಕುದುರೆಗೆ ಅನುದಿನವೂ ಮೇವನ್ನು ತಂದು ಹಾಕುತ್ತಿದ್ದನು. ಜೊತೆಜೊತೆಗೆ ತಪ್ಪದೆ ಶಿವಾರ್ಚನೆಯನ್ನು ಅತಿ ಶ್ರದ್ಧೆಯಿಂದ ಮಾಡುತ್ತಿದ್ದನು. ಎಂಬ ವಿವರಣೆ ನಿಜಕ್ಕೂ ಚೆನ್ನಯ್ಯನವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಮುಂದುವರೆದು ಅಂತರಂಗದಲ್ಲಿ ಹಿತಕರವಾದ ಭಕ್ತಿಯನ್ನಿರಿಸಿ, ವ್ಯವಹಾರದಲ್ಲಿ ಕುಲದ ಕಸುಬನ್ನು ಶ್ರದ್ಧೆಯಿಂದ ‌ಮಾಡಿಕೊಂಡಿದ್ದವರು, ಅಂತರಂಗದಲ್ಲಿ ಎಲ್ಲ ಬಂಧನಗಳಿಂದ ಕಳಚಿಕೊಂಡು ಹೊರಗಡೆಯಿಂದ ಜಾತಿಯ ಸೊಗಸನ್ನು ಹೊಂದಿ, ಎಳ್ಳಿನಲ್ಲಿ ಸೇರಿಕೊಂಡಿರುವ ಎಣ್ಣೆಯಂತೆ, ಕಟ್ಟಿಗೆಯೊಳಗೆ ಮರೆಯಾಗಿರುವ ಬೆಂಕಿಯಂತೆ, ನೆಲದೊಳಗೆ ಗುಪ್ತವಾಗಿರುವ ನಿಧಿಯಂತೆ ಹೊರಪ್ರಪಂಚ ತಿಳಿಯದ ಹಾಗೆ ಚೆನ್ನನು ಲಿಂಗಾರ್ಚನೆಯಲ್ಲಿ ತೊಡಗಿಕೊಂಡಿದ್ದ ಶರಣ ಚೆನ್ನಯ್ಯನ ಕಾಯಕ ನಿಷ್ಠೆ ಮತ್ತು ಶಿವಭಕ್ತಿಯನ್ನೂ ತೋರಿಸುತ್ತದೆ.

- Advertisement -

ಮಾದಾರ ಚೆನ್ನಯನ ವಚನಗಳಲ್ಲಿ `ಕುಲ’ ಕೇಂದ್ರವಾಗಿದೆ. ಆಚಾರವೆಕುಲ ಅನಾಚಾರವೆ ಹೊಲೆ, ಆವ ಕುಲವಾದರೂ ಅರಿದಲ್ಲಿಯೆ ಪರತತ್ವಭಾವಿ ಮರೆದಲ್ಲಿಯೆ ಮಲಮ ಬಂಧ ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ, ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ, ಕಶ್ಯಪ ಕಮ್ಮಾರ, ರೋಮಜ ಕಂಚುಗಾರ, ಕೌಂಡಿಲ್ಯ ನಾವಿದ ನೆಂಬುದನರಿದು ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ? ಎಂಬ ಇವರ ವಿಚಾರಧಾರೆಗಳು ಬಸವಾದಿ ಶರಣರ ಕ್ರಾಂತಿಗೆ ಮೂಲಬೀಜಗಳಾಗಿದ್ದು ಇದೆ.
ನಡೆನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ ನುಡಿ ಲೇಸು ನಡೆಯಧರ್ಮ ಅದು ಬಿಡುಗದೆಯಿಲ್ಲದ ಹೊಲೆ ಕಳವು ಪಾರದ್ವಾರಗಳಲ್ಲಿ ಹೊಲಬನರಿಯದೆ ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ? ಆಚಾರವೇ ಕುಲ, ಅನಾಚಾರವೆ ಹೊಲೆ, ಇಂತೀ ಉಭಯವ ತಿಳಿದರಿಯಬೇಕು ಕೈಯುಳಿಗತ್ತಿ, ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮರಾಮ ರಾಮನಾ.

ಮೇಲಿನ ಈ ವಚನದ ಸಾರಾಂಶ ಇಂತಿದೆ ನುಡಿದಂತೆ ನಡೆಯಬೇಕು ಅದುವೆ ನಮ್ಮ ಜೀವನದ ಸಿದ್ದಂತವಾಗಬೇಕು. ಆಚಾರ ಅಂದರೆ ಒಳ್ಳೆಯದು ಹೀಗಾಗಿ ಒಳ್ಳೆಯದು ಯಾವುದೇ ಇದ್ದರೂ ಅದುವೇ ಕುಲ, ಅನಾಚಾರ ಅಂದರೆ ಕೆಟ್ಟದ್ದು, ಕೆಟ್ಟದ್ದು ಯಾವುದೋ ಅದುವೇ ಹೊಲೆ.ನೀತಿವಂತನಿಗೆ ಜಾತಿ ಸೂತಕ ಇಲ್ಲ ಎಂಬ ಈ ಮರ್ಮವ ಅರಿಯಬೇಕು ಎಂಬುವುದು ಮಾದರ ಚೆನ್ನಯ್ಯನವರ ಅಬಿಮತವಾಗಿತ್ತು.
ಅಪ್ಪನು ನಮ್ಮ ಮಾದಾರ ಚೆನ್ನಯ್ಯಾ ಎಂಬ ವಚನದಲ್ಲಿ ಬಸವಣ್ಣನವರ ಮನದಲ್ಲಿ ಚೆನ್ನಯ್ಯನವರಿಗೆ ಇರುವ ಅಗಾಧವಾದ ಭಾವನೆ ಹೇಗಿತ್ತು ಎಂಬುವುದು ಪ್ರತಿಬಿಂಬಿತವಾಗಿದೆ.

ಮಾದರ ಚೆನ್ನಯ್ಯನವರು ಗುಪ್ತಭಕ್ತರಾಗಿದ್ದುದರಿಂದ ಇವರು ತಮ್ಮ ವಚನಗಳಲ್ಲಿ ಅಂಕಿತವನ್ನು ಬಳಸಿಲ್ಲ. ಕೆಲವು ವಚನಗಳಲ್ಲಿ “ಕೈಯುಳಿಗತ್ತಿ, ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮ ರಾಮ ರಾಮನ” ಎಂಬ ಅಂಕಿತವಿದೆ. ಗುರು-ಲಿಂಗ-ಜಂಗಮರ ಪಾದೋದಕಕ್ಕಾಗಿ ಮಾಡಿದ ಸಜ್ಜೆಯ ಲಿಂಗಕ್ಕೂ ಮಜ್ಜನ ಮಾಡಿಸುತ್ತಿದ್ದರು. ಇದು ಯಾರಿಗೂ ಕಾಣದಂತೆ ನಡೆಯುತ್ತಿತ್ತು. ಮನೆಗೆ ಬಂದ ಮೇಲೆ ಆತ್ಮಲಿಂಗಕ್ಕೆ ಅಂಬಲಿಯ ನೈವೇದ್ಯ ಅರ್ಪಿಸುತ್ತಿದ್ದರು. ಕಾಯಕ ದೇವರ ಸಾಕ್ಷಾತ್ಕಾರಕ್ಕೆ ಪೂರಕವಾಗಿರಬೇಕೆಂಬುದು ಮಾದರ ಚೆನ್ನಯ್ಯನವರ ಅಭಿಮತವಾಗಿದೆ. ಶರಣ ಸಮೂಹದಲ್ಲಿ ಚೆನ್ನಯ್ಯವರ ಅಂಬಲಿ ಪ್ರಸಿದ್ಧವಾಗಿದೆ. ಶಿವನಿಗೆ ಅಂಬಲಿ ಉಣ್ಣಿಸಿದಾತನೆಂಬ ಖ್ಯಾತಿ ಇವರಿಗಿದೆ. ಮಾದಾರ ಚೆನ್ನಯ್ಯನವರು ವಚನಗಳು ಮತ್ತು ಕಾಯಕದ ಮೂಲಕ ಆದರ್ಶರಾಗಿದ್ದರು. ಅವರ ಜೀವನಶೈಲಿ, ಬದುಕು ಪ್ರತಿಯೊಬ್ಬರು ಅನುಸರಿಸುವ ಮೂಲಕ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕೆಂದು ನನ್ನ ಅಭಿಮತ.

ನಾಗರಾಜ ಕೋಟಗಾರ,                                 ಸಹಾಯಕ ಪ್ರಾದ್ಯಾಪಕರು ಸಮಾಜಶಾಸ್ತ್ರ ವಿಭಾಗ ಕೆಎಲ್ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಧಾರವಾಡ

- Advertisement -
- Advertisement -

Latest News

ಸಾವಯವ ಕೃಷಿ ಶಬ್ದದ ಬದಲು “ನಂದಿ ಕೃಷಿ” ಎಂಬ ಶಬ್ದದ ಬಳಕೆ ಮಾಡುವ ಅವಶ್ಯಕತೆ ಏಕೆ ಬಂದೊದಗಿದೆ?

ಕಳೆದ ಇಪ್ಪತ್ತು ವರ್ಷಗಳಿಂದ ಸಾವಯವ ಕೃಷಿ ಎಂಬ ಶಬ್ದದ ಅಡಿಯಲ್ಲಿ ಕೃಷಿಯಲ್ಲಿ ಬದಲಾವಣೆ ತರಲು ಹಲವು ರೀತಿಯ ಪ್ರಯತ್ನಗಳು ನಡೆದಿವೆ. ಆದರೂ ಸಹ ಇಂದು ಪ್ರತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group