spot_img
spot_img

ಗುರ್ಲಾಪೂರದ ಅಯ್ಯಪ್ಪನಿಗೆ  ಮಹಾಪೂಜೆ

Must Read

ಗುರ್ಲಾಪೂರ: ಬೆಳಗಾವಿ ಜಿಲ್ಲೆಯ  ಮೂಡಲಗಿ ತಾಲೂಕಿನ ಗುರ್ಲಾಪೂರವು ಭಕ್ತಿಗೆ ಹೆಸರವಾಸಿಯಾಗಿದೆ ಅಂತಹ ಗ್ರಾಮದ ಹೃದಯ ಭಾಗದಲ್ಲಿರುವ ಅಯ್ಯಪ್ಪಸ್ವಾಮಿಯ ರವಿವಾರ ದಿ.1ರಂದು ಹೊಸ ವರ್ಷಾಚರಣೆಯ ದಿನದಂದು  ಮಹಾ ಪೂಜೆಯೂ ಗುರು ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯವದು
ರವಿವಾರ ಬೆಳಿಗ್ಗೆ 6 ಗಂಟೆಗೆ ಭಕ್ತರಿಂದ ಪಂಪಾ  ಹಳ್ಳದಲ್ಲಿ ತಣ್ಣೀರ ಸ್ನಾನ ಮಾಡಿ ಸನ್ನಿಧಾನದವರೆಗೆ ದೀಡ ನಮಸ್ಕಾರ ಹಾಕಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುವರು.

ಸಂಜೆ 5 ಗಂಟೆಗೆ ಅಯ್ಯಪ್ಪನ ಕನ್ನಿಸ್ವಾಮಿಗಳು ಹಾಗು ಗುರುಸ್ವಾಮಿಗಳು ಮಕ್ಕಳು ಮುತೈದೆಯರು ಸೇರಿ ಗ್ರಾಮದಲ್ಲಿ ಪ್ರಮುಖ ರಸ್ತೆಗಳಲ್ಲಿ ಅಯ್ಯಪ್ಪನ ಭಾವಚಿತ್ರ ಹಾಗು ಅಯ್ಯಪ್ಪನ ಪಲ್ಲಕ್ಕಿ ಉತ್ಸವ ದೊಂದಿಗೆ ಸಕಲ ವಾದ್ಯವೃಂದದೊಂದಿಗೆ ಸಾಗುತ್ತಾ ಕಂಬಳಿ ಪ್ಲಾಟದ ವೀರಭದ್ರೇಶ್ವರನಿಗೆ ಮಂಗಳಾರತಿ ಮಾಡಿ ಮರಳಿ ಅಯ್ಯಪ್ಪನ ಸನ್ನಿಧಾನಕ್ಕೆ ಬಂದು ಅಗ್ನಿಗೆ ಪೂಜೆ  ಮಾಡಿ ಮಹಾಪೂಜೆಗೆ ಬಂದ ಎಲ್ಲ ಗುರುಸ್ವಾಮಿಗಳು ಹಾಗು ಕನ್ನಿಸ್ವಾಮಿಗಳು ಅಗ್ನಿಹಾದು ಹದಿನೆಂಟು ಮೆಟ್ಟಲೇರಿ ಸ್ವಾಮಿಯ ದರ್ಶನ ಪಡೆದು ಜೀವನ ಪಾವನ ಮಾಡಿಕೊಳ್ಳುವರು ನಂತರ ಮಹಾಪೂಜೆಗೆ ಬಂದ ಭಕ್ತರೆಲ್ಲರು ಅಯ್ಯಪ್ಪನ ಶರಣು ಘೋಷಣೆಯೊಂದಿಗೆ ಹಾಡು ಹಾಡುವರು.

ನಂತರ ಅಯ್ಯಪ್ಪನಿಗೆ ಹಾಗು ಗಣಪತಿಗೆ ಸಕಲ ದೇವರಿಗೆ ಮಹಾಮಂಗಳಾರತಿ ಮಾಡಿ ಎಲ್ಲ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಗುವದು ಎಂದು ಭಕ್ತ ಮಂಡಳಿ ತಿಳಿಸಿದ್ದಾರೆ.

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!