spot_img
spot_img

‘ಸಂಜೀವಿನಿ ಮಾಸಿಕ ಸಂತೆ’ ಯ ಉದ್ಘಾಟನೆ

Must Read

- Advertisement -

ಮೂಡಲಗಿ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ತಾಲೂಕ ಪಂಚಾಯತ ಮೂಡಲಗಿ, ಗ್ರಾಮ ಪಂಚಾಯಿತಿ ಯಾದವಾಡ ಮತ್ತು ಸಂಜೀವಿನಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಯಾದವಾಡ ಗ್ರಾಮದ ತೇರಿನ ಆವರಣದಲ್ಲಿ ‘ಸಂಜೀವಿನಿ ಮಾಸಿಕ ಸಂತೆ’ಯ ಉದ್ಘಾಟನಾ ಸಮಾರಂಭ ಜರುಗಿತು.

ಸಮಾರಂಭ ಉದ್ಘಾಟಿಸಿದ ಮೂಡಲಗಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಾಕ ಅಧಿಕಾರಿ ಎಫ್.ಜಿ. ಚಿನ್ನಣ್ಣವರ ಮಾತನಾಡಿ, ಗ್ರಾಮೀಣ ಬಡ ಮಹಿಳೆಯರು ಸಂಜೀವಿನಿ ಯೋಜನೆಯ ಸೌಲಭ್ಯಗಳನ್ನು ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಸ್ವ ಉದ್ಯೋಗಸ್ಥರಾಗಿ ಸಬಲೀಕರಣ ಆಗಬೇಕು ಎಂದರು.

- Advertisement -

ಸಂಜೀವಿನಿ ಯೋಜನೆಯ ತಾಲೂಕಿನ ವ್ಯವಸ್ಥಾಪಕ ಹರ್ಷಾ ಶೇಳಕೆ ಮಾತನಾಡಿ, ಸಂಜೀವಿನಿ ಮಾಸಿಕ ಸಂತೆಯ ಉದ್ದೇಶಗಳು, ವಸ್ತುಗಳ ಮೌಲ್ಯವರ್ಧನೆ ಮಾಡಿ, ಉತ್ಪನ್ನಗಳನ್ನು ತಯಾರಿಸಿ , ಪ್ರದರ್ಶಿಸಿ ಮಾರಾಟ ಮಾಡಲು ಮಾಸಿಕ ಸಂತೆಯ ವೇದಿಕೆಯನ್ನು ಎಲ್ಲಾ ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಜಯಶ್ರೀ ದಾಸರ, ಉಪಾಧ್ಯಕ್ಷೆ ಪಿ. ಆರ್. ಪಾಟೀಲ ಮತ್ತು ಸದಸ್ಯ ಬಸವರಾಜ ಭೂತಾಳಿ, ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷ್ಮೀ ಅಂಬಲಿಮಠ, ಉಪಾಧ್ಯಕ್ಷೆ ಪ್ರೇಮಾ ಇಟ್ಟನ್ನವರ,ಪ್ರಗತಿ ಮಹಿಳಾ ಗ್ರಾಮಾಭಿವೃದ್ಧಿ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ ಲಕ್ಷ್ಮೀ ಮಾಳೆದ, ಸಂಜೀವಿನಿ ಯೋಜನೆಯ ಎಂಬಿಕೆಗಳಾದ ಲಕ್ಷ್ಮೀ, ಮಂಜುಳಾ ಮತ್ತು ಎಲ್ ಸಿ ಆರ್ ಪಿ ಗಳಾದ ಸಂಜೀವಿನಿ, ಚಿನ್ನವ್ವ, ಸಾವಿತ್ರಿ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಾಕ ಅಶೋಕ್ ಪೂಜೇರ ನಿರೂಪಿಸಿದರು, ಕಾವೇರಿ ಹಂದಿಗುಂದ ವಂದಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ರೇವಣಸಿದ್ದಯ್ಯನವರ ಪುಣ್ಯಸ್ತ್ರೀ ರೇಕಮ್ಮ ಹನ್ನೆರಡನೇ ಶತಮಾನ ಎಂಬುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಬಹುಮುಖ್ಯ ಕಾಲಘಟ್ಟ. ಶರಣರು ರಚಿಸಿದ ವಚನಗಳನ್ನು ಕನ್ನಡ ಸಾಹಿತ್ಯದ ಉಪನಿಷತ್ತುಗಳು ಎಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group