spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಮಹಾಜ್ನಾನಿ ಚಂದಿಮರಸ

12ನೇ ಶತಮಾನದ ಶರಣ ಯುಗ ನಾನಾ ಕಾರಣಗಳಿಂದ ವಿಶಿಷ್ಟವಾದುದ್ದು. ಜಾತಿ, ಮತ ವರ್ಗ, ವರ್ಣ ಗಳನ್ನು ಮೀರಿದ ಮಾನವ ಸಮಾಜವನ್ನು ಕಟ್ಟಿದ ಮಾನವೀಯತೆಯ ಸುವರ್ಣಯುಗ. ತಾವು ಮಾಡುವ ಕಾಯಕದ ಮೂಲಕ ತಮ್ಮನ್ನು ಗುರುತಿಸಿಕೊಂಡು ಕಾಯಕದಲ್ಲಿ ಅರಿವು ,ಅಜ್ಞಾನ ಗುರು ಶಿಷ್ಯರ ಸಂಬಂಧ ಹಾಗೂ ಆತ್ಮ ಜ್ಞಾನವನ್ನು ಕಂಡವರು ಹಲವರು, ಅವರಲ್ಲಿ ಬಸವಣ್ಣನವರ ಹಿರಿಯ ಸಮಕಾಲಿನ ಚಂದಿಮರಸರು ಒಬ್ಬರು. ಚಂದಿ ಮರಸರನ್ನು ಅರಿಯಬೇಕಾದರೆ ಅವರ ವಚನಗಳ ಮೂಲಕವೇ ನಾವು ತಿಳಿದುಕೊಳ್ಳಬಹುದಾಗಿದೆ.

ಜನನ-ಕೃಷ್ಣಾ ನದಿ ತೀರದ ಚಿಮ್ಮಲಗಿ
ಕಾಲ-12 ನೇ ಶತಮಾನ
ಮೂಲತಃ- ಬ್ರಾಹ್ಮಣ
ಗುರು-ನಿಜಗುಣ ಯೋಗಿಗಳು
ಅಂಕಿತನಾಮ-ಸಿಮ್ಮಲಿಗೆಯ ಚೆನ್ನರಾಮ
ವಚನಗಳು-160

- Advertisement -

ಇವರ ವಚನಗಳು ಸರಳ ಹಾಗೂ ಪರಿಣಾಮಕಾರಿ. ಸಂಸಾರದಲ್ಲಿದ್ದುಕೊಂಡೆ ಶರಣರಾಗಬಹುದು ಎಂಬುವುದನ್ನು ವಾಸ್ತವಾವಾದಿಯಾಗಿ ಬದುಕನ್ನು ಪ್ರೀತಿಸಿ , ತಮ್ಮ ಅರಿವೇ ತಮಗೆ ಗುರು, ಮನುಷ್ಯರಲ್ಲಿಯೆ ದೇವರಿದ್ದಾನೆ ಎಂಬ ಅರಿವನ್ನು, ಆತ್ಮಜ್ಞಾನವನ್ನು ತಮ್ಮ ವಚನದಲ್ಲಿ ತಿಳಿಸಿದ್ದಾರೆ

ಇಹಪರವೆಂಬ ಇದ್ದೆಸೆಯಾಗಿರ್ದನ ಪರಿ ಹೊಸತು
ನೆಯಿ ಹತ್ತದ ನಾಲಗೆಯಂತೆ
ಹುಡಿ ಹತ್ತದ ಗಾಳಿಯಂತೆ
ಕಾಡಿಗೆ ಹತ್ತದ ಆಲಿಯಂತೆ ಇರ್ದೆನಯ್ಯಾ
ಸಿಮ್ಮಲಿಗೆಯ ಚೆನ್ನ ರಾಮನೆಂಬ ಲಿಂಗದಲ್ಲಿ
ಆಚರಿಸುತ್ತ ಆಚರಿಸುತ್ತ ಆಚರಿಸದಂತಿರ್ದೆನೋಡಯ್ಯ.

ಸೋಜಿಗದ ರೀತಿಯಲ್ಲಿ ವರ್ಣನೆ ಮಾಡ್ತಾರೆ ಶರಣ, ರಾಜ ಚಂದಿಮರಸ ಇಹಪರವೆಂಬ ಇದ್ದ ದೆಸೆಯಾಗಿರ್ದನ ಹೊಸತು ಇದು ಸಂಸಾರ.ಇದು ಭೂಲೋಕ ಅದು ಸ್ವರ್ಗಲೋಕ ಎನ್ನುತ್ತಾ ಎರಡರಲ್ಲಿಯೂ ಇದ್ದಂತಹ ನಿನ್ನ ಪರಿ ಏನ್ ಅದಲಾ ಅದು ಹೊಸದು. ಸಂಸಾರದಲ್ಲಿಯೂ ಇರುವೆ ,ಸಂಸಾರದಾಚೆಗೂ ಇರುವೆ ಯಾಕೋ ಇದು ನನಗೆ ಹೊಸತು ಅನಿಸುತ್ತಿದೆ.

- Advertisement -

ಇಹ ಪರವೆಂಬ ಈ ದಿಕ್ಕಿನಲ್ಲಿಯೂ ಇರುವೆ, ಇಹದಲ್ಲಿಯೂ ಇದ್ದು ಪರದಿಕ್ಕಿನಲ್ಲಿಯೂ ಇರುವೆ ಈ ಎರಡರಲ್ಲಿಯೂ ಇರುವುದು ಹೇಗೆ? ನಿನಗೆ ಆಕಾರವೂ ಇಲ್ಲ ಆದರೆ ಆಕಾರದಲ್ಲಿಯೂ ನಿನ್ನನ್ನು ಕಾಣುತ್ತೇವೆ ಅದು ಹೇಗೆ? ಎಂಬುವುದೇ ನನಗೆ ಹೊಸತು ಎಂದಾಗ ಈ ಕೆಳಗಿನಂತೆ ವಿವರಿಸುತ್ತಾರೆ

ನೆಯ ಹತ್ತದ ನಾಲಿಗೆಯಂತೆ -ನಾಲಿಗೆಗೆ ಎಣ್ಣೆಯ ರುಚಿಯನ್ನು ತೋರಿಸದಂತೆ
ಹುಡಿ ಇಲ್ಲದ ಗಾಳಿಯಂತೆ -ಗಾಳಿಯೊಳಗೆ ಧೂಳ್ ಇಲ್ಲದಂತೆ
ಕಾಡಿಗೆ ಹತ್ತದ ಆಲಿಯಂತೆ -ಕಾಡಿನೊಳಗೆ ಕೂಗಿದರೂ ಧ್ವನಿ ಕೇಳದಂತೆ ಇರ್ದೆನಯ್ಯ.

ನಾಲಿಗೆಯು ಪಂಚೇಂದ್ರಿಯಗಳ ರುಚಿಯನ್ನು ಕಳೆದುಕೊಂಡಿದೆ. ನನ್ನ ಪ್ರಾಣಕ್ಕೆ, ಜೀವಕ್ಕೆ ಈಗ ಯಾವ ಆಸೆ ಆಕಾಂಕ್ಷೆಗಳು ಇಲ್ಲ ಹಾಗಾಗಿ ಯಾವ ಧೂಳು ನನಗೆ ಸೋಂಕುವದಿಲ್ಲ, ಕಾಡಿನಲ್ಲಿ ಎಷ್ಟೇ ಅರಚಿದರೂ ಕೂಡ ಅದು ಪ್ರತಿಧನಿಸುವುದಿಲ್ಲ ಹಾಗೆ ನಾನು ನನ್ನೊಳಗೆ ಇದ್ದೇನೆ ನನ್ನ ಮನಸ್ಸನ್ನು ತಿರುಗಿಸುವಂತಹ ವಸ್ತು ವಿಷಯ ಭೋಗಂಗಗಳು ನನ್ನ ಸುತ್ತಲೂ ತಿರುಗಾಡಿದರೂ ಕೂಡ ನಾನು ಅವುಗಳ ವಾಸನೆಯನ್ನು ಕೂಡ ಆಸ್ವಾದಿಸುವುದಿಲ್ಲ, ಬೇಕಾದಷ್ಟು ನನ್ನ ಕಣ್ಣ ಮುಂದೆ ಸುರಿಮಳೆಗೈದರು ಹೊರಳಿ ನೋಡುವುದಿಲ್ಲ ಹುಡಿ ಹತ್ತದ ಗಾಳಿಯಂತೆ ನಾನಿದ್ದೇನೆ ಯಾವಾಗ ನನ್ನ ಅಂತರಂಗದಲ್ಲಿ ಶ್ರೇಷ್ಠವಾದ ಅನುಭವವಾಯಿತೋ ನಾನು ಮೌನದ ಸ್ಥಿತಿಯಲ್ಲಿ ಅನುಭವಿಸುತ್ತಾ ಇದ್ದೂ ಇಲ್ಲದಂತೆ ನಾನಿದ್ದೇನೆ ಅಂದರೆ ಕಾಡಿನ ಬಂಡೆಗಲ್ಲಿನಂತಿರುವೆ ಗುಡ್ಡಕ್ಕೆ ಕಲ್ಲು ಹೊರುವ ಹಾಗೆ

ಈ ಸಿಮ್ಮಲಿಗೆಯ ಚನ್ನ ರಾಮನನ್ನು ಆಚರಿಸುತ್ತ ಆಚರಿಸುತ್ತ ಬಸವಣ್ಣನವರ ಕಳಬೇಡ ಕೊಲಬೇಡ ಎನ್ನುವ ಸಾಧನೆಯನ್ನು ಆಚರಿಸುತ್ತಾ ಆಚರಿಸುತ್ತಾ ಬಂದು ಕೊನೆಗೆ ನಾನು ಏನೂ ಮಾಡದೆ ,ಆಚರಿಸದೆ ಸುಮ್ಮನೆ ಮೌನವಾಗಿ ಕುಳಿತುಬಿಟ್ಟೆ. ಉದಾಹರಣೆಗಾಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳಂತೆ.

ಎಲ್ಲವನ್ನು ಕೇವಲ ನುಡಿಯಲಿಲ್ಲ, ಉಪದೇಶ ಮಾಡಲಿಲ್ಲ, ಅವರು ನಡೆಯಲ್ಲಿ ತರುವುದರ ಮೂಲಕ ಆಚರಿಸುವುದರ ಮೂಲಕ ತಂದರು ,ಎನ್ನಲು ಅವರ ಅಂಗಿಗೆ ಕಿಸೆ ಇರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು ಜೀವಂತ ಉದಾಹರಣೆ ಅವರ ಬದುಕು. ಅವರು ಜೀವನದ ಶ್ರೇಷ್ಠತೆಯನ್ನು ಕಂಡುಕೊಂಡಿದ್ದರ ಪರಿಣಾಮವಾಗಿ ಅವರು ಹಾಗೆ ಹೋದರು ಹೇಗೆ? ಹುಡಿ ಹತ್ತದ ಗಾಳಿಯಂತೆ, ಕಾಡಿಗೆ ಹತ್ತದ ಆಲಿಯಂತೆ ಇದ್ದು ಎದ್ದು ಹೋದಂತೆ ಹೋದರು.
ನಾವು ಸಾಧನೆ ಮಾಡುವುದಿಲ್ಲ ಹಾಗಾಗಿ ನಮಗೆ ಶ್ರೇಷ್ಠತೆ ಸಿಗುವುದಿಲ್ಲ ಕೇವಲ ನಮ್ಮದು ಡಾಂಬಿಕ ಭಕ್ತಿಯೆ ಹೊರತು ಅಂತರ್ ಭಾವ ಶೂನ್ಯ.

ನೀನು ನಿರಾಕಾರನೂ ಹೌದು ಸಾಕಾರನೂ ಹೌದು ಎಲ್ಲದರಲ್ಲಿಯೂ ಇರುವನು ಆದರೆ ಕಾಮ, ಕ್ರೋಧ ,ಮದ,ಮತ್ಸರ ಅಲ್ಲ ಪಂಚೇಂದ್ರಿಯಗಳಲ್ಲ. ಇವೆಲ್ಲವುಗಳು ಆಗಲು ಕಾರಣಿ ಕರ್ತೃ ನೀನು ಎಂಬುದನ್ನು ಇಲ್ಲಿ ಇಹಪರವೆಂಬ ಇದ್ದು ದೆಸೆಯಾಗಿರ್ದ ಪರಿ, ಎರಡರಲ್ಲಿಯೂ ಇರುವ ನಿನ್ನ ಪರಿ ಸೋಜಿಗವಲ್ಲವೇ?
ಉದಾಹರಣೆಗೆ_H2o ನೀರಿನ ಸೂತ್ರ ಇದರಲ್ಲಿಯೂ ಕೂಡ ಇರುವನು.H2 ದಲ್ಲಿಯೂ ಇದ್ದಾನೆ ಹಾಗೆ o ದಲ್ಲಿಯೂ ಇದ್ದಾನೆ. ನೀರಿನಲ್ಲಿಯೂ ಇದ್ದಾನೆ ನೀರನ್ನು ತೀರ್ಥ ಮಾಡಿದರೆ ಅದರಲ್ಲಿಯೂ ಇದ್ದಾನೆ ನಾವು ತೀರ್ಥದಲ್ಲಿ ಮಾತ್ರ ದೇವರಿದ್ದಾನೆ ಅಂತ ಹೇಳ್ತೀವಿ.
ಕೊನೆಯದಾಗಿ ವಾಸ್ತವಿಕ ಸತ್ಯಾಂಶವನ್ನು ಶರಣ ಈ ರೀತಿ ತಿಳಿಸುತ್ತಾನೆ.

ಈ H2O ವಿಭಜಿಸಿದಾಗ ನೀರು ಎರಡು ಘಟಕಗಳಿಂದ ಕೂಡಿದ್ದು H2+O ಇವೆರಡರಲ್ಲಿಯೂ ಭಗವಂತನಿದ್ದಾನೆ H2 ನೆe ಬೇರೆ O ನೆe ಬೇರೆ ಆದರೆ ಹೈಡ್ರೋಜನ್ + ಆಮ್ಲಜನಕ ಇವೆರಡೂ ಕೂಡಿದಾಗ ನೀರು ಆಗುತ್ತದೆ ಹಾಗೆ ನಾನು ನೀರೊಳಗೆ ಇದ್ದೇನೆ ನೀರನ್ನು ಬೇರ್ಪಡಿಸಿದರೆ ಅದರಲ್ಲಿ ಇದ್ದೇನೆ ಬಯಲಲ್ಲಿ ಇರುವೆ ಬಯಲಲ್ಲಿ ಕಟ್ಟಿದ ಗುಡಿಯಲ್ಲಿಯೂ ಇರುವೆ ಇದು ಎಷ್ಟು ವಿಚಿತ್ರಲಾ ಅಂತ ಸೋಜಿಗದ ರೀತಿಯಲ್ಲಿ ಚಂದಿಮರಸ ನೋಡುತ್ತಾನೆ.

ಇವರ ಸ್ಮರಣೆಗಾಗಿ ಪ್ರಾರ್ಥನಾ ಮಂದಿರವನ್ನು ಚಿಮ್ಮಲಿಗಿಯಲ್ಲಿ ಕಾಣಬಹುದಾಗಿದೆ .ಇವರ 160 ವಚನಗಳು ಅಂದಿಗೂ ಇಂದಿಗೂ ನಮ್ಮ ಬದುಕಿಗೆ ಅಮೂಲ್ಯವಾದ ಅನರ್ಘ್ಯ ರತ್ನಗಳಾಗಿವೆ .ಅವುಗಳನ್ನು ಅಳವಡಿಸಿಕೊಳ್ಳುವದು ಮಾನವನ ಸಹಜ ಧರ್ಮವಾಗಿದೆ. ನಮ್ಮ ಅರಿವೇ ನಮಗೆ ಗುರು ಎಂಬುದನ್ನು ಜಾಗೃತಗೊಳಿಸಿಕೊಂಡು ನಮ್ಮ ಜೀವನದ ನಡೆ ನುಡಿ ಹಾಗೂ ನಾವು ಮಾಡುವ ಆ ಕಾಯಕದ ಮೂಲಕ ಆ ಚೈತ್ಯ ಪುರುಷನಾದ ಸಿಮ್ಮಲಿಗೆಯ ಚೆನ್ನರಾಮರ ಮೂಲಕ ಶ್ರೇಷ್ಠವಾದ ಲೋಕದಲ್ಲಿ ಜೀವನ ನಡೆಸಬಹುದೆಂಬ ಮಾಹಿತಿ ದೊರಕುತ್ತದೆ

ದೀಪಾ ರಾಜಶೇಖರ ಜಿಗಬಡ್ಡಿ
ಬಾದಾಮಿ                                                                ಅಕ್ಕನ ಅರಿವು ಬಸವಾದಿ ಶರಣರ ಚಿಂತನ ವೇದಿಕೆ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಹೊಡೆದವರ ಬಡಿದವರ ಗುರುಹಿರಿಯರೆಂದೆನ್ನು ಬೈದವರ ಬಂಧುಗಳು ಬಳಗವೆನ್ನು ಹಿಂದೆ ನಿಂದಿಸಿದವರ ಮಿತ್ರಮಂಡಲಿಯೆನ್ನು ಸೈರಣೆಗೆ ಸಮವಿಲ್ಲ -- ಎಮ್ಮೆತಮ್ಮ ಶಬ್ಧಾರ್ಥ ಸೈರಣೆ = ತಾಳ್ಮೆ ಗುರುಗಳು ತಂದೆತಾಯಿಗಳು‌ ಹೊಡೆದು ಬಡಿದು ಬುದ್ಧಿ ಕಲಿಸುತ್ತಾರೆ. ಹಾಗೆ ಯಾರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group