ದೀನ ದಯಾಳ್ ಉಪಾಧ್ಯಾಯರ ಚಿಂತನೆಗಳು ಸಾರ್ವಕಾಲಿಕ- ಸತೀಶ ಕಡಾಡಿ

Must Read

ಮೂಡಲಗಿ: ಹಿಂದುತ್ವದ ಪುನರುತ್ಥಾನಕ್ಕಾಗಿ ಮತ್ತು ಭಾರತದ ಅಖಂಡತೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟು, ದೇಶ ಕಟ್ಟುವ ಮತ್ತು ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅಪ್ಪಟ ದೇಶಪ್ರೇಮಿ, ಧೀಮಂತನಾಯಕ ಪಂಡಿತ್ ದೀನ ದಯಾಳ್ ಉಪಾಧ್ಯಾಯರು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಅಭಿಪ್ರಾಯಪಟ್ಟರು.

ಶನಿವಾರ ಸೆ. 25 ರಂದು ಕಲ್ಲೋಳಿ ಪಟ್ಟಣದ ಈರಣ್ಣ ಕಡಾಡಿ ಸಂಸದರ ಜನಸಂಪರ್ಕ ಕಚೇರಿಯಲ್ಲಿ ಜನಸಂಘದ ಸ್ಥಾಪಕ ಹಾಗೂ ಮಹಾನ್ ಚಿಂತಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ 105ನೇ ಜನ್ಮದಿನದ ನಿಮಿತ್ತ ಅವರ ಭಾವಚಿತ್ರಕ್ಕೆ ಅವರು ಪುಷ್ಪಾರ್ಚನೆ ನೆರವೇರಿಸಿ, ಮಾತನಾಡಿದ ಅವರು, ದೀನ್ ದಯಾಳ್ ಉಪಾಧ್ಯಾಯರ ಚಿಂತನೆ ಹಾಗೂ ವಿಚಾರಧಾರೆಗಳು ನಮ್ಮ ಸಮಾಜಕ್ಕೆ ಅತ್ಯಗತ್ಯ ಹಾಗೂ ಅನುಷ್ಠಾನಕ್ಕೆ ಯೋಗ್ಯವಾಗಿವೆ, ಅವರ ತತ್ವ ಸಿದ್ದಾಂತವನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಂಡು ನವಭಾರತ ನಿರ್ಮಾಣದ ಕಾರ್ಯದಲ್ಲಿ ತೊಡಗಬೇಕೆಂದರು.

ಇಂದು ಸಬ್‍ಕಾ ಸಾಥ್ ಸಬ್ ಕಾ ವಿಕಾಸ, ಸಬ್ ಕಾ ವಿಶ್ವಾಸ ಸಬ್ ಕಾ ಪ್ರಯಾಸ್, ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರ ಈ ಕರೆಗೆ ಪ್ರೇರಣೆ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಏಕಾತ್ಮ ಮಾನವತೆಯ ಸಂದೇಶ ಎಂದರಲ್ಲದೇ ದೀನ್ ದಯಾಳ್ ಅವರ ಆಚಾರ ವಿಚಾರಗಳಿಂದ ಲಕ್ಷಾಂತರ ಮಂದಿ ಪ್ರಭಾವಿತರಾಗಿದ್ದಾರೆ. ದೀನ್ ದಯಾಳ್‍ಜಿಯವರು ಕೈಗೊಂಡ ಕಾರ್ಯ ವ್ಯಕ್ತಿ ನಿಷ್ಠವಾಗಿರಲಿಲ್ಲ, ತತ್ವನಿಷ್ಠವಾಗಿತ್ತು, ಆದರ್ಶಗಳಿಗೆ ಪ್ರಾಮುಖ್ಯತೆ ಕೊಟ್ಟು ತಾವೂ ಆ ಆದರ್ಶಗಳಿಗೆ ತಕ್ಕಂತೆ ಜೀವಿಸಿ, ತತ್ವ ಸಿದ್ದಾಂತಗಳಿಗಾಗಿ ಜೀವಿಸುವುದನ್ನು ಕಲಿಸಿಕೊಟ್ಟ ಮಹಾನ ನಾಯಕ ದೀನ ದಯಾಳ್ ಉಪಾಧ್ಯಾಯರು, ಅಖಂಡ ಭಾರತ ನಿರ್ಮಿಸುವ ಅವರ ಕನಸನ್ನು ನನಸಾಗಿಸಲು ದುಡಿಯುವುದೇ ಪ್ರತಿಯೊಬ್ಬ ಭಾರತೀಯ ಅವರಿಗೆ ನೀಡುವ ಅತಿ ದೊಡ್ಡ ಗೌರವವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಹಕಾರಿಯ ಪ್ರಮುಖರಾದ ಶ್ರೀಶೈಲ ತುಪ್ಪದ, ಪರಪ್ಪ ಮಳವಾಡ, ಬಾಳಪ್ಪ ಸಂಗಟಿ, ಬಿಜೆಪಿ ಅರಭಾವಿ ಮಂಡಲ ಕಾರ್ಯದರ್ಶಿ ಮಹಾದೇವ ಮದಭಾಂವಿ, ಜಿಲ್ಲಾ ಬಿಜೆಪಿ ಮಾಜಿ ಕೋಶ್ಯಾಧ್ಯಕ್ಷ ಪರಪ್ಪ ಗಿರೆಣ್ಣವರ, ಈರಣ್ಣ ಮುನ್ನೋಳಿಮಠ, ಸೋಮನಿಂಗ ಹಡಗಿನಾಳ, ಪ್ರಶಾಂತ ಪಟ್ಟಣಶೆಟ್ಟಿ, ಸಿದ್ದು ಬೆಳವಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group