ಉದಯರತ್ನ ಕುಮಾರಗೆ ಗೌರವ ಡಾಕ್ಟರೇಟ್

Must Read

ತಮಿಳುನಾಡು ಹೊಸೂರ್ ನ ಹೋಟೆಲ್ ಫಾಚೂರ್ನ್ ನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ವಿಶ್ವವಿದ್ಯಾಲಯ ದವರು ಬೆಂಗಳೂರು ಬಾಗಲಗುಂಟೆಯ ನಿಸರ್ಗ ವಿದ್ಯಾನಿಕೇತನದ ಅಧ್ಯಕ್ಷ ಉದಯ ರತ್ನ ಕುಮಾರ್ ರವರಿಗೆ ಶೈಕ್ಷಣಿಕ ಕ್ಷೇತ್ರದ ಅನನ್ಯ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಲಾಯಿತು.

ಶ್ರೀಯುತರು ಕಳೆದ 3 ದಶಕದಿಂದ ಶಿಕ್ಷಣ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ನಿಸರ್ಗ ವಿದ್ಯಾ ನಿಕೇತನ ಶಾಲೆ ಸ್ಥಾಪಿಸಿ ಸಮಾಜಮುಖಿ ಸೇವಾ ತತ್ಪರಾಗಿದ್ದಾರೆ.

ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿದ್ದ ಗ್ಲೋಬಲ್ ವಿಷ್ಣು ಸಹಸ್ರನಾಮ ಫೆಡರೇಶನ್ ಅಧ್ಯಕ್ಷ ಡಾ ಕೆ. ವಿ ಮಣಿ (ನಿ. ಗ್ರೂಪ್ ಕ್ಯಾಪ್ಟನ್ )ರವರಿಗೆ ‘ವಿಷ್ಣು ಸಹಸ್ರ ನಾಮ ಕೌಸ್ತುಭ ‘ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ವೇದಿಕೆಯಲ್ಲಿ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಮಾಧ್ಯಮ ಸಮನ್ವಯಕಾರ ಡಾ ಗುರುರಾಜ ಪೋಶೆಟ್ಟಿಹಳ್ಳಿ, ಡಾ ಕೃಷ್ಣಮೂರ್ತಿ ಸ್ವಾಮೀಜಿ, ನಿವೃತ್ತ ಎಸಿಪಿ ಲಯನ್ ಡಾ. ಎಸ್ ಬಿ ಛಬ್ಬಿ, ಸುಕ್ಷೇತ್ರ ಅಂಕಲಿ ಮಠದ ಬಸವರಾಜ ಸ್ವಾಮೀಜಿ, ಆಚಾರ್ಯ ಜ್ಞಾನೇಶ್ವರ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group