spot_img
spot_img

ಡಾ. ಕೆ.ಜಿ.ಲಕ್ಷ್ಮೀನಾರಾಯಣಪ್ಪರವರ ಕೃತಿ ‘ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳು’ ಲೋಕಾರ್ಪಣೆ

Must Read

- Advertisement -

ಬೆಂಗಳೂರು: ಭಾರತ ಸರ್ಕಾರದ ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆಯ ನಿವೃತ್ತ ಅಧೀಕ್ಷಕರು, ಸಾಹಿತ್ಯಾಸಕ್ತರು ಆದ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪನವರು 2019ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಪಡೆದುಕೊಂಡ ಮಹಾಪ್ರಬಂಧ ‘ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳು’ ಸಂಶೋಧನ ಗ್ರಂಥವು ಇದೀಗ ಉದಯ ಪ್ರಕಾಶನದ ಮೂಲಕ ಪ್ರಕಟವಾಗುತ್ತಿದೆ.

ಸದರಿ ಪುಸ್ತಕದ ಲೋಕಾರ್ಪಣೆಯನ್ನು ಪ್ರೊ.ಮಲ್ಲೇಪುರಂ 70 ಅಭಿನಂದನಾ ಸಮಿತಿ ಮತ್ತು ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಸಹಯೋಗದಲ್ಲಿ  ಇದೇ ಜನವರಿ 13, 2023 ಶುಕ್ರವಾರ ಸಂಜೆ 4.30 ಘಂಟೆಗೆ ಬೆಂಗಳೂರು ಕೆ.ಆರ್.ರಸ್ತೆಯ ಬೆಂಗಳೂರು ಗಾಯನ ಸಮಾಜ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪನವರು ತಮ್ಮ ಗುರುಸ್ವರೂಪರೂ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಶಾಸ್ತ್ರಚೂಡಾಮಣಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶರವರಿಗೆ 400 ಪುಟಗಳ ಈ ಬೃಹತ್ ಗ್ರಂಥವನ್ನು ಸಮರ್ಪಿಸಿದ್ದಾರೆ.

- Advertisement -

ಈ ಕಾರ್ಯಕ್ರಮದಲ್ಲಿ ತುಮಕೂರು ಸಿದ್ಧಗಂಗಾ ಮಠದ  ಪೂಜ್ಯ ಸಿದ್ಧಲಿಂಗಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುತ್ತಾರೆ. ಭಾರತದ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲರವರು ಗ್ರಂಥ ಲೋಕಾರ್ಪಣೆ ಮಾಡವರು. ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನ್ಯಾ. ಎನ್.ಕುಮಾರ್ ಅಧ್ಯಕ್ಷತೆ ವಹಿಸುವರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೋ.ಮಲ್ಲೇಪುರಂ ಜಿ. ವೆಂಕಟೇಶ, ಅಂತಾರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ರಾಷ್ಟ್ರೀಯ ಸೀಮಾ ಶುಲ್ಕ, ಪರೋಕ್ಷ ತೆರಿಗೆ, ಹೆಚ್ಚುವರಿ ಮಹಾನಿರ್ದೇಶಕರು ನಾರಾಯಣಸ್ವಾಮಿ ,ಶ್ರೀ ಮಾರ್ಕಂಡೇಯ ಮಹರ್ಷಿ ಪದ್ಮಶಾಲಿ ಗುರುಪೀಠ ಮಹಾಸಂಸ್ಥಾನ ಅಧ್ಯಕ್ಷ ಕೆ.ಸಿ. ಕೊಂಡಯ್ಯ ತುಮಕೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮುಂತಾದ ನಾಡಿನ ಸಾಹಿತ್ಯಿಕ-ಸಾಂಸ್ಕೃತಿಕ ಕ್ಷೇತ್ರದ ಗಣ್ಯಮಾನ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಕೃತಿ ಕುರಿತು:

ಪ್ರತಿಯೊಂದು ದೇವಾಲಯವೂ ಆಯಾ ಪ್ರದೇಶದ ಇತಿಹಾಸವನ್ನು ಸಾರುತ್ತದೆ.  ಈ ದೇವಾಲಯಗಳ ಸೂಕ್ಷ್ಮ ಅವಲೋಕನದಿಂದ ಆಯಾ ಕಾಲಘಟ್ಟಗಳ ಶಿಕ್ಷಣ, ಸಾಮಾಜಿಕ ಹಾಗೂ ಆಡಳಿತ ವ್ಯವಸ್ಥೆ, ಜೀವನ ಕ್ರಮ, ಕಲೆ, ಸಾಹಿತ್ಯ ಮುಂತಾದ ಅನೇಕ ವಿಷಯ ತಿಳಿಯಬಹುದು. ಕನ್ನಡಿಗರ ಸ್ವಾಭಿಮಾನವನ್ನು ಜಾಗೃತಗೊಳಿಸಲು ಈ ರೀತಿಯ ಜ್ಞಾನ ಮತ್ತು ಇತಿಹಾಸ ಪ್ರಜ್ಞೆ ಅತ್ಯವಶ್ಯ. ಈ ನಿಟ್ಟಿನಲ್ಲಿ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಬರೆದಿರುವ ‘ತುಮಕೂರು ಜಿಲ್ಲೆಯ ಪ್ರಮುಖ ದೇವಾಲಯಗಳು’ ಬಹು ಉಪಯುಕ್ತವಾಗಿದೆ.

ಅಪರಿಮಿತ ಅಧ್ಯಯನದ ಸಾರಸ್ವತ ಸಾಹಸದಲ್ಲಿ ಕೆ.ಗು.ಲ.ರವರು ಸಫಲರಾಗಿದ್ದಾರೆ ಅದರ ಪ್ರತೀಕವೇ ಈ ಸತ್ಕೃತಿ! ಬಹುತೇಕ ಅಪರಿಚಿತ ದೇವಾಲಯಗಳ ಇತಿಹಾಸ, ಶಾಸನ ವಿವರಗಳು, ಶಿಲ್ಪಕಲೆಯ ವಿಶೇಷತೆ, ಐತಿಹ್ಯ ಮುಂತಾದ ಹಲವು ವಿವರಗಳನ್ನು ಈ ಪುಸ್ತಕ ಒಳಗೊಂಡಿದೆ. ಲವಲವಿಕೆಯ ಸರಳವಾದ ಭಾಷೆ, ಸುಂದರ ನಿರೂಪಣೆಯೊಂದಿಗೆ ಗಮನ ಸೆಳೆಯುತ್ತದೆ. ರಾಜ್ಯ ಸರಕಾರವು ಧಾರ್ಮಿಕ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲು ಚಿಂತಿಸುತ್ತಿರುವ ಕಾಲದಲ್ಲಿ ಆಸಕ್ತರಿಗೆ ಇದು ಉತ್ತಮ ಕೈಪಿಡಿಯಂತಿದೆ.

- Advertisement -

ವಿವರಗಳಿಗೆ : 90356 18076 ಸಂಪರ್ಕಿಸಲು ಶೈಲಜಾ ಹೆಗಡೆ, ಪ್ರಕಾಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group